
विजेचा खांब पडून, विजेच्याधक्क्याने तेरा गुरांचा मृत्यू.
यमकनमर्डी ; हुक्केरी तालुक्यातील इस्लामपुर ग्रामपंचायत अंतर्गत येणाऱ्या, जुनी वंटमुरी गावात विद्युत खांब पडल्याने, 13 गुरांचा, मृत्यू झाल्याची घटना, मंगळवार दिनांक 20 ऑगस्ट 2024 रोजी, सायंकाळी 5.30 वाजता घडली आहे.
गावातील तीन लोक एकत्र येऊन गुरे चारायला घेऊन गेले होते. सायंकाळी पाऊस येत असल्याने ते आपली गुरे आपापल्या घरी घेऊन जात होते. करीकट्टी हाळेवंटमुरी रस्त्याच्या मधोमध असलेला, विजेचा वीद्युत खांब तुटून पडल्याने 13 गुरे जागीच ठार झाली. मुट्टाप्पा हुच्यल्लाप्पा बसरगी, यांच्या 4 गायी, 2 बैल, लक्षकिन अप्पया किलारगी, 1 गाय, 1 म्हैस आणि यल्लवा निंगाप्पा मस्ती, यांच्या 5 गायी जागीच ठार झाल्या. गावचे तलाठी विठल बुकनट्टी, महसूल निरीक्षक सी के कलकंबकर, पीएसआय एस.के. मन्निकेरी, पशुवैद्यकीय अधिकारी सिद्धार्थ मोकाशी, तसेच पालकमंत्री सतीश जारकीहोळी यांचे निकटवर्तीय मारुती गुटगुड्डी यांनी भेट दिली.
ವಿದ್ಯುತ ತಗುಲಿ ಹದಿಮೂರು ದನಗಳ ಸಾವು.
ಯಮಕನಮರಡಿ : ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಹಳೆ ವಂಟಮೂರಿ ಗ್ರಾಮದಲ್ಲಿ ವಿದ್ಯುತ ತಗುಲಿ ೧೩ ದನಗಳು ಮೃತಪಟ್ಟ ಘಟನೆಯು ಮಂಗಳವಾರ ಸಾಯಂಕಾಲ ೫.೩೦ ಗಂಟೆಗೆ ಜರುಗಿದೆ. ಗ್ರಾಮದ ಮೂರು ಜನರು ಸೇರಿಕೊಂಡು ದನಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ವೇಳೆ ಮಳೆ ಬಂದಾಗ ದನಗಳನ್ನು ಕರೆದುಕೊಂಡು ತಮ್ಮ ತಮ್ಮ ಮನೆಗೆ ಹೋಗುತ್ತಿದ್ದಾಗ ಕರಿಕಟ್ಟಿ ಹಳೆವಂಟಮೂರಿ ಕೂಡುವ ರಸ್ತೆ ಮಧ್ಯದಲ್ಲಿರುವ ವಿದ್ಯುತ ಕಂಬದಿAದ ವಿದ್ಯುತ ನೆಲದಲ್ಲಿ ಹರಿದಾಗ ವಿಧ್ಯುತ ತಗುಲಿ ೧೩ ದನಗಳು ಸ್ಥಳದಲ್ಲಿ ಮೃತಪಟ್ಟಿವೆ. ಮುತ್ತಪ್ಪಾ ಹುಚ್ಚಯಲ್ಲಪ್ಪಾ ಬಸರಗಿ ಇವರ ೪ ಆಕಳುಗಳು ೨ ಹೋರಿಗಳು, ಲಕ್ಷಕಿಣ ಅಪ್ಪಯ್ಯಾ ಕಿಲಾರಗಿ ಇವರ ೧ ಆಕಳು ೧ ಎಮ್ಮೆ ಮತ್ತು ಯಲ್ಲವ್ವಾ ನಿಂಗಪ್ಪ ಮಸ್ತಿ ಇವರ ೫ ಆಕಳುಗಳು ಸ್ಥಳದಲ್ಲಿ ಮೃತಪಟ್ಟಿವೆ ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ವಿಠಲ ಬುಕನಟ್ಟಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಪಿಎಸ್ಐ ಎಸ್.ಕೆ. ಮನ್ನಿಕೇರಿ, ಪಶುವೈಧ್ಯಾಧಿಕಾರಿ ಸಿದ್ದಾರ್ಥ ಮೊಕಾಶಿ, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ಮಾರುತಿ ಗುಟಗುದ್ದಿ ಬೇಟಿ ನೀಡಿದರು.
