तोपिनकट्टी रस्त्यावर भीषण अपघात; मुलाच्या मृत्यूनंतर वडिलांचाही उपचारादरम्यान दुर्दैवी मृत्यू.
खानापूर प्रतिनिधी : खानापूर तालुक्यातील लोकोळी क्रॉस–तोपिनकट्टी मार्गावर सोमवारी सकाळी झालेल्या भीषण अपघातात 23 वर्षीय युवकाचा जागीच मृत्यू झाल्यानंतर, त्याच्या गंभीर जखमी वडिलांचाही उपचारादरम्यान मृत्यू झाला आहे. या दुर्दैवी घटनेमुळे लक्केबैल तसेच लोकोळी परिसरावर शोककळा पसरली आहे.
मृत युवकाचे नाव पुंडलिक अशोक नांदुरकर (वय 23, रा. लक्केबैल) असून, त्यांचे वडील अशोक नांदुरकर (वय 60) यांचाही उपचारादरम्यान मृत्यू झाला आहे.
मिळालेल्या माहितीनुसार, पुंडलिक आणि त्यांचे वडील अशोक हे दोघे सोमवारी सकाळी दुचाकीवरून काही कामानिमित्त बेळगावच्या दिशेने निघाले होते. सकाळी सुमारे सात वाजण्याच्या सुमारास लोकोळी क्रॉस ते तोपिनकट्टी मार्गावरील एका वळणावर त्यांच्या दुचाकीला समोरून आलेल्या अज्ञात टेम्पोने जोरदार धडक दिली.
धडक एवढी भीषण होती की, पुंडलिक यांच्या डोक्याला गंभीर दुखापत होऊन त्यांचा घटनास्थळीच मृत्यू झाला. तर त्यांचे वडील अशोक नांदुरकर हे गंभीर जखमी झाले होते. नागरिकांनी त्यांना तातडीने उपचारासाठी रुग्णालयात दाखल केले. मात्र, उपचार सुरू असतानाच अशोक नांदुरकर यांचाही मृत्यू झाला.
अपघातानंतर दुचाकीला धडक देणारा अज्ञात टेम्पोचालक वाहनासह घटनास्थळावरून पसार झाला. त्यामुळे पोलिसांसमोर संबंधित वाहन आणि चालकाचा शोध घेण्याचे आव्हान आहे.
पुंडलिक नांदुरकर हे उद्यमबाग परिसरात नियमितपणे कामासाठी जात होते, तर त्यांचे वडील अशोक हे गवंडी काम करून कुटुंबाचा उदरनिर्वाह करीत असल्याची माहिती मिळाली आहे.
घटनेची माहिती मिळताच खानापूर पोलीस ठाण्याचे पोलीस निरीक्षक लालसाब गोवंडी यांनी घटनास्थळी भेट देऊन पंचनामा केला. अज्ञात वाहनाचा शोध घेण्यासाठी पोलिसांकडून तपास सुरू असून, अपघात नेमका कोणत्या वाहनामुळे झाला याचा शोध घेतला जात आहे.
दरम्यान, एकाच अपघातात बाप-लेकाचा मृत्यू झाल्याने नांदुरकर कुटुंबीयांवर दुःखाचा डोंगर कोसळला आहे. या घटनेने लक्केबैल तसेच लोकोळी परिसरात हळहळ व्यक्त होत आहे.
ತೋಪಿನಕಟ್ಟಿ ರಸ್ತೆಯಲ್ಲಿ ಭೀಕರ ಅಪಘಾತ; ಮಗನ ಸಾವಿನ ಬಳಿಕ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಖಾನಾಪುರ ಪ್ರತಿನಿಧಿ : ಖಾನಾಪುರ ತಾಲೂಕಿನ ಲೋಕೋಳ್ಳಿ ಕ್ರಾಸ್–ತೋಪಿನಕಟ್ಟಿ ಮಾರ್ಗದಲ್ಲಿ ಇಂದು ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 23 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನ ತಂದೆಯೂ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಈ ದುರಂತ ಘಟನೆಯಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಪರಿಸರದಲ್ಲಿ ಶೋಕದ ವಾತಾವರಣ ಆವರಿಸಿದೆ.
ಮೃತ ಯುವಕನನ್ನು ಪುಂಡಲಿಕ ಅಶೋಕ ನಾಂದೂರಕರ (ವಯಸ್ಸು 23, ಸಾ. ಲಕ್ಕೇಬೈಲ್) ಎಂದು ಗುರುತಿಸಲಾಗಿದ್ದು, ಅವರ ತಂದೆ ಅಶೋಕ ನಾಂದೂರಕರ (ವಯಸ್ಸು 60) ಅವರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಪುಂಡಲಿಕ ಹಾಗೂ ಅವರ ತಂದೆ ಅಶೋಕ ಅವರು ಸೋಮವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಬೆಳಗಾವಿ ಕಡೆಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು ಏಳು ಗಂಟೆಯ ವೇಳೆಗೆ ಲೋಕೋಳ್ಳಿ ಕ್ರಾಸ್ನಿಂದ ತೋಪಿನಕಟ್ಟಿ ಮಾರ್ಗದಲ್ಲಿರುವ ಒಂದು ತಿರುವಿನಲ್ಲಿ ಅವರ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಅಪರಿಚಿತ ಟೆಂಪೋವೊಂದು ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸದಿಂದ, ಪುಂಡಲಿಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅವರ ತಂದೆ ಅಶೋಕ ನಾಂದೂರಕರ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯ ನಾಗರಿಕರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಶೋಕ ನಾಂದೂರಕರ ಅವರೂ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಅಪರಿಚಿತ ಟೆಂಪೋ ಚಾಲಕ ವಾಹನ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಹೀಗಾಗಿ ಸಂಬಂಧಿಸಿದ ವಾಹನ ಹಾಗೂ ಚಾಲಕನನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಪುಂಡಲಿಕ ನಾಂದೂರಕರ ಅವರು ಉದ್ಯಮಬಾಗ್ ಪ್ರದೇಶಕ್ಕೆ ನಿಯಮಿತವಾಗಿ ಕೆಲಸಕ್ಕೆ ತೆರಳುತ್ತಿದ್ದರು. ಅವರ ತಂದೆ ಅಶೋಕ ಅವರು ಗವಂಡಿ ಕೆಲಸ ಮಾಡಿಕೊಂಡು ಕುಟುಂಬದ ಜೀವನ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲಸಾಬ ಗೋವಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಕೈಗೊಂಡರು. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಘಾತ ಯಾವ ವಾಹನದಿಂದ ಸಂಭವಿಸಿದೆ ಹಾಗೂ ಪರಾರಿಯಾಗಿರುವ ಚಾಲಕ ಯಾರು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಏತನ್ಮಧ್ಯೆ, ಒಂದೇ ಅಪಘಾತದಲ್ಲಿ ತಂದೆ-ಮಗ ಇಬ್ಬರೂ ಮೃತಪಟ್ಟಿರುವುದರಿಂದ ನಾಂದೂರಕರ ಕುಟುಂಬದ ಮೇಲೆ ದುಃಖದ ಬೆಟ್ಟವೇ ಕುಸಿದಂತಾಗಿದೆ. ಈ ಹೃದಯವಿದ್ರಾವಕ ಘಟನೆಯಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಪರಿಸರದಲ್ಲಿ ತೀವ್ರ ದುಃಖ ವ್ಯಕ್ತವಾಗಿದೆ.

