तोपिनकट्टी रस्त्यावर भीषण अपघात; 23 वर्षीय युवकाचा जागीच मृत्यू, वडील गंभीर.
खानापूर प्रतिनिधी : खानापूर तालुक्यातील लोकोळी क्रॉस–तोपिनकट्टी मार्गावर सोमवारी सकाळी झालेल्या भीषण अपघातात 23 वर्षीय युवकाचा जागीच मृत्यू झाला, तर त्याचे 60 वर्षीय वडील गंभीर जखमी झाले. अज्ञात वाहनाने दुचाकीला धडक दिल्यानंतर वाहनचालक घटनास्थळावरून पसार झाल्याची प्राथमिक माहिती आहे.
मृत युवकाचे नाव पुंडलिक अशोक नांदुरकर (वय 23, रा. लक्केबैल) असे असून, त्यांचे वडील अशोक नांदुरकर (वय 60) हे या अपघातात गंभीर जखमी झाले आहेत. त्यांच्यावर बेळगाव येथील खासगी रुग्णालयात उपचार सुरू आहेत.
मिळालेल्या माहितीनुसार, पुंडलिक आणि त्यांचे वडील अशोक हे दोघे सोमवारी सकाळी दुचाकीवरून काही कामानिमित्त बेळगावच्या दिशेने निघाले होते. सकाळी सुमारे सात वाजण्याच्या सुमारास लोकोळी क्रॉस ते तोपिनकट्टी मार्गावरील एका वळणावर त्यांच्या दुचाकीला समोरून आलेल्या अज्ञात टेम्पोने जोरदार धडक दिली. धडक एवढी भीषण होती की, पुंडलिक यांच्या डोक्याला गंभीर दुखापत होऊन त्यांचा घटनास्थळीच मृत्यू झाला.
अपघातानंतर अशोक नांदुरकर हे गंभीर जखमी अवस्थेत रस्त्यावर पडले होते. या मार्गावरून जाणाऱ्या नागरिकांच्या निदर्शनास घटना आल्यानंतर त्यांनी तातडीने मदत करत जखमी अशोक यांना उपचारासाठी रुग्णालयात दाखल केले.
दरम्यान, अपघातास कारणीभूत ठरलेला अज्ञात टेम्पोचालक वाहनासह घटनास्थळावरून पसार झाला. त्यामुळे पोलिसांसमोर आता संबंधित वाहन आणि चालकाचा शोध घेण्याचे आव्हान आहे.
पुंडलिक नांदुरकर हे उद्यमबाग परिसरात नियमितपणे कामासाठी जात होते, तर त्यांचे वडील अशोक हे गवंडी काम करून कुटुंबाचा उदरनिर्वाह करीत असल्याची माहिती मिळाली आहे.
घटनेची माहिती मिळताच खानापूर पोलीस ठाण्याचे पोलीस निरीक्षक लालसाब गोवंडी यांनी घटनास्थळी भेट देऊन पंचनामा केला. अज्ञात वाहनाचा शोध घेण्यासाठी पोलिसांकडून तपास सुरू असून, अपघात नेमका कोणत्या वाहनामुळे झाला याचा शोध घेतला जात आहे.
दरम्यान, तरुण मुलाच्या दुर्दैवी मृत्यूमुळे लक्केबैल तसेच लोकोळी परिसरावर शोककळा पसरली असून, नांदुरकर कुटुंबीयांवर दुःखाचा डोंगर कोसळला आहे.
ಖಾನಾಪುರ ತೋಪಿನಕಟ್ಟಿ ರಸ್ತೆಯಲ್ಲಿ ಭೀಕರ ಅಪಘಾತ; 23 ವರ್ಷದ ಯುವಕ ಸ್ಥಳದಲ್ಲೇ ಸಾವು, ತಂದೆ ಗಂಭೀರ.
ಖಾನಾಪುರ ಪ್ರತಿನಿಧಿ : ಖಾನಾಪುರ ತಾಲೂಕಿನ ಲೋಕೋಳಿ ಕ್ರಾಸ್–ತೋಪಿನಕಟ್ಟಿ ಮಾರ್ಗದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 23 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ 60 ವರ್ಷದ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪರಿಚಿತ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮೃತ ಯುವಕನನ್ನು ಪುಂಡಲಿಕ ಅಶೋಕ ನಾಂದುರಕರ (ವಯಸ್ಸು 23, ಲಕ್ಕೇಬೈಲ್ ನಿವಾಸಿ) ಎಂದು ಗುರುತಿಸಲಾಗಿದ್ದು, ಅವರ ತಂದೆ ಅಶೋಕ ನಾಂದುರಕರ (ವಯಸ್ಸು 60) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಪುಂಡಲಿಕ ಮತ್ತು ಅವರ ತಂದೆ ಅಶೋಕ ಅವರು ಸೋಮವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಬೆಳಗಾವಿ ಕಡೆಗೆ ತೆರಳುತ್ತಿದ್ದರು. ಸುಮಾರು ಬೆಳಗ್ಗೆ 7 ಗಂಟೆಯ ವೇಳೆಗೆ ಲೋಕೋಳಿ ಕ್ರಾಸ್–ತೋಪಿನಕಟ್ಟಿ ಮಾರ್ಗದ ಒಂದು ತಿರುವಿನಲ್ಲಿ ಎದುರಿನಿಂದ ಬಂದ ಅಪರಿಚಿತ ಟೆಂಪೋವು ಅವರ ದ್ವಿಚಕ್ರ ವಾಹನಕ್ಕೆ ಭಾರೀ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪುಂಡಲಿಕ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಅಶೋಕ ನಾಂದುರಕರ ಅವರು ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಈ ಮಾರ್ಗವಾಗಿ ಸಂಚರಿಸುತ್ತಿದ್ದ ನಾಗರಿಕರ ಗಮನಕ್ಕೆ ಘಟನೆ ಬಂದ ತಕ್ಷಣ ಅವರು ಗಾಯಾಳುವಿಗೆ ನೆರವು ನೀಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಅಪಘಾತಕ್ಕೆ ಕಾರಣವಾದ ಅಪರಿಚಿತ ಟೆಂಪೋ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು. ಹೀಗಾಗಿ ಸಂಬಂಧಿಸಿದ ವಾಹನ ಮತ್ತು ಚಾಲಕನನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿದೆ.
ಪುಂಡಲಿಕ ನಾಂದುರಕರ ಅವರು ಉದ್ಯಮಬಾಗದಲ್ಲಿ ನಿಯಮಿತವಾಗಿ ಕೆಲಸಕ್ಕೆ ತೆರಳುತ್ತಿದ್ದರು. ಅವರ ತಂದೆ ಅಶೋಕ ಅವರು ಗಾರೆ ಕೆಲಸ ಮಾಡಿಕೊಂಡು ಕುಟುಂಬದ ಜೀವನ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಲಾಲಸಾಬ್ ಗೋವಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಅಪರಿಚಿತ ವಾಹನದ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಯಾವುದು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಈ ದುರ್ಘಟನೆಯಲ್ಲಿ ಯುವಕನನ್ನು ಕಳೆದುಕೊಂಡಿರುವುದರಿಂದ ಲಕ್ಕೇಬೈಲ್ ಹಾಗೂ ಲೋಕೋಳಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ನಾಂದುರಕರ ಕುಟುಂಬದ ಮೇಲೆ ದುಃಖದ ಛಾಯೆ ಆವರಿಸಿದೆ.

