खानापूर–चोर्ला विशेष बससेवा अखेर सुरू. इरफान तालीकोटी यांच्या पाठपुराव्याला यश;चोर्ला ग्रामस्थांची अनेक दिवसांची मागणी पूर्ण.
खानापूर : खानापूर तालुक्यातील जांबोटी पश्चिम भागातील चोर्ला गावासाठी बहुप्रतीक्षित खानापूर–चोर्ला विशेष बससेवेला आजपासून सुरुवात झाली. सामाजिक कार्यकर्ते तथा अंजुमन-ए-इस्लामचे अध्यक्ष इरफान तालीकोटी यांच्या सातत्यपूर्ण पाठपुराव्यामुळे ही बससेवा सुरू झाली असून, बस चोर्ला गावात पोहोचताच ग्रामस्थांनी उत्स्फूर्त स्वागत केले.
चोर्ला गावात बस पोहोचल्यानंतर इरफान तालीकोटी यांच्या हस्ते फित कापून बससेवेचा शुभारंभ करण्यात आला. गेल्या अनेक दिवसांपासून चोर्ला परिसरातील नागरिकांकडून खानापूरशी थेट बससेवा सुरू करण्याची मागणी केली जात होती. बससेवा उपलब्ध झाल्याने दैनंदिन कामकाजासाठी खानापूरला येणाऱ्या नागरिकांसह विद्यार्थी, महिला, ज्येष्ठ नागरिक आणि इतर प्रवाशांची मोठी सोय होणार आहे.
अशी असेल बसची वेळ…
नवीन बससेवेनुसार खानापूर येथून सकाळी 7.30 वाजता बस सुटेल आणि सकाळी 8.30 वाजता चोर्ला येथे पोहोचेल. त्यानंतर सायंकाळच्या फेरीत खानापूरहून ३.४५ वाजता बस सुटून सायंकाळी 5 वाजता चोर्ला येथे पोहोचणार आहे.
या बससेवेमुळे चोर्ला व परिसरातील नागरिकांना खानापूरशी प्रवासाची थेट सुविधा मिळणार असून, खासगी वाहनांवर अवलंबून राहण्याची गरज काही प्रमाणात कमी होणार आहे.
तीन महिन्यांपासून सातत्याने पाठपुरावा…
बससेवा सुरू करण्यासाठी केलेल्या प्रयत्नांची माहिती देताना इरफान तालीकोटी म्हणाले, “सुमारे तीन महिन्यांपूर्वी चोर्ला गावाला भेट दिली असता ग्रामस्थांनी बससेवेची मागणी माझ्याकडे केली. नागरिकांची अडचण लक्षात घेऊन विधान परिषद सदस्य चन्नराज हट्टीहोळी यांची भेट घेतली. त्यांच्या शिफारस पत्रासह बस विभागाच्या अधिकाऱ्यांकडे मागणी मांडली. मात्र, त्यानंतरही बससेवा सुरू होण्यास विलंब झाला.”
“यानंतर पुन्हा पालकमंत्री सतीश जारकीहोळी यांचे पत्र घेऊन हुबळी येथे संबंधित परिवहन अधिकाऱ्यांची भेट घेतली. सातत्याने पाठपुरावा केल्यानंतर अखेर चोर्ला गावासाठी बससेवा मंजूर होऊन आजपासून प्रत्यक्षात सुरू झाली. ग्रामस्थांनी माझ्यावर टाकलेला विश्वास सार्थ ठरला याचे समाधान आहे,” असेही तालीकोटी यांनी सांगितले.
पद नसतानाही जनतेच्या प्रश्नांसाठी धावून जाणारे व्यक्तिमत्त्व…
कोणतेही राजकीय पद नसतानाही खानापूर तालुक्यातील त्याचबरोबर विशेष करून जांबोटी पश्चिम भागातील नागरिकांच्या विविध प्रश्नांसाठी सातत्याने पुढाकार घेणारे सामाजिक कार्यकर्ते म्हणून इरफान तालीकोटी यांची ओळख निर्माण झाली आहे. ग्रामस्थांकडून एखादी समस्या मांडण्यात आल्यानंतर संबंधित विभागातील अधिकारी व लोकप्रतिनिधींशी संपर्क साधून त्याचा पाठपुरावा करण्याची भूमिका ते घेत असल्याचे ग्रामस्थांनी सांगितले.
चोर्ला बससेवेप्रमाणेच जांबोटी येथील श्रीराम मंदिरासाठी निधी मिळवून देण्यासाठीही त्यांचे प्रयत्न सुरू आहेत. पश्चिम भागातील रस्ते, वाहतूक, मोबाईल नेटवर्क तसेच इतर मूलभूत सुविधांबाबतही नागरिकांच्या समस्या प्रशासनापर्यंत पोहोचविण्याचे काम सुरू असल्याचे यावेळी सांगण्यात आले.
मोबाईल टॉवरचीही मागणी…
बससेवेच्या शुभारंभप्रसंगी चोर्ला परिसरातील ग्रामस्थांनी मोबाईल नेटवर्कची समस्या सोडवून मोबाईल टॉवरची सुविधा उपलब्ध करून द्यावी, अशी मागणी इरफान तालीकोटी यांच्याकडे केली. यावर तालीकोटी यांनी, “चोर्ला परिसरातील मोबाईल नेटवर्कचा प्रश्न सोडविण्यासाठीही संबंधितांकडे पाठपुरावा करू. जनतेच्या प्रश्नांसाठी मी यापुढेही सदैव प्रयत्नशील राहीन,” अशी ग्वाही दिली.
बससेवा सुरू झाल्याने चोर्ला ग्रामस्थांमध्ये समाधानाचे वातावरण निर्माण झाले असून, दीर्घकाळ प्रलंबित असलेली मागणी प्रत्यक्षात आल्याबद्दल ग्रामस्थांनी इरफान तालीकोटी यांचे आभार मानले.
उपस्थित ग्रामस्थ…
बससेवा शुभारंभ कार्यक्रमास अर्जुन गावकर, कृष्णा गावकर, संजय पाटील, नामदेव गावकर, फट्टू गावकर, नवनाथ गावकर, रवी म्हाजिक, उमेश महाजीक, नकुल गावकर, धोंडू गावडे, सुरेखा गावकर, पार्वती गावकर, जानकी गावकर, विमल महाजीक, साई गावकर, नमिशा गावकर, अर्चना गावकर, राजाराम डांगे, प्रकाश ओऊळकर, सुरेश केरकर, अनंत गावडे, विठ्ठल गावस यांच्यासह चोर्ला परिसरातील ग्रामस्थ मोठ्या संख्येने उपस्थित होते.
ಖಾನಾಪುರ–ಚೋರ್ಲಾ ವಿಶೇಷ ಬಸ್ ಸೇವೆ ಕೊನೆಗೂ ಆರಂಭ; ಇರ್ಫಾನ್ ತಾಲಿಕೋಟಿ ಅವರ ನಿರಂತರ ಪ್ರಯತ್ನಕ್ಕೆ ಯಶಸ್ಸು ; ಚೋರ್ಲಾ ಗ್ರಾಮಸ್ಥರ ಹಲವು ದಿನಗಳ ಬೇಡಿಕೆ ಈಡೇರಿಕೆ.
ಖಾನಾಪುರ : ಖಾನಾಪುರ ತಾಲೂಕಿನ ಜಾಂಬೋಟಿ ಪಶ್ಚಿಮ ಭಾಗದಲ್ಲಿರುವ ಚೋರ್ಲಾ ಗ್ರಾಮದ ಬಹುನಿರೀಕ್ಷಿತ ಖಾನಾಪುರ–ಚೋರ್ಲಾ ವಿಶೇಷ ಬಸ್ ಸೇವೆ ಇಂದಿನಿಂದ ಆರಂಭಗೊಂಡಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ ಅಂಜುಮನ್-ಎ-ಇಸ್ಲಾಂ ಅಧ್ಯಕ್ಷ ಇರ್ಫಾನ್ ತಾಲಿಕೋಟಿ ಅವರ ನಿರಂತರ ಪ್ರಯತ್ನ ಹಾಗೂ ಪಠಪುರಾವೆಯಿಂದ ಈ ಬಸ್ ಸೇವೆ ಆರಂಭಗೊಂಡಿದ್ದು, ಬಸ್ ಚೋರ್ಲಾ ಗ್ರಾಮಕ್ಕೆ ತಲುಪುತ್ತಿದ್ದಂತೆಯೇ ಗ್ರಾಮಸ್ಥರು ಉತ್ಸಾಹದಿಂದ ಸ್ವಾಗತಿಸಿದರು.
ಚೋರ್ಲಾ ಗ್ರಾಮಕ್ಕೆ ಬಸ್ ತಲುಪಿದ ಬಳಿಕ ಇರ್ಫಾನ್ ತಾಲಿಕೋಟಿ ಅವರ ಹಸ್ತದಿಂದ ರಿಬ್ಬನ್ ಕತ್ತರಿಸುವ ಮೂಲಕ ಬಸ್ ಸೇವೆಗೆ ಚಾಲನೆ ನೀಡಲಾಯಿತು. ಕಳೆದ ಹಲವು ದಿನಗಳಿಂದ ಚೋರ್ಲಾ ಭಾಗದ ನಾಗರಿಕರು ಖಾನಾಪುರಕ್ಕೆ ನೇರ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಇದೀಗ ಬಸ್ ಸೇವೆ ಲಭ್ಯವಾಗಿರುವುದರಿಂದ ದೈನಂದಿನ ಕೆಲಸಗಳಿಗಾಗಿ ಖಾನಾಪುರಕ್ಕೆ ಆಗಮಿಸುವ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಇತರ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಹೀಗಿರಲಿದೆ ಬಸ್ ಸಂಚಾರದ ಸಮಯ…
ಹೊಸ ಬಸ್ ಸೇವೆಯ ವೇಳಾಪಟ್ಟಿಯಂತೆ ಖಾನಾಪುರದಿಂದ ಬೆಳಗ್ಗೆ 7.30ಕ್ಕೆ ಬಸ್ ಹೊರಟು ಬೆಳಗ್ಗೆ 8.30ಕ್ಕೆ ಚೋರ್ಲಾ ತಲುಪಲಿದೆ. ನಂತರ ಸಂಜೆ ವೇಳೆಯ ಸಂಚಾರದಲ್ಲಿ ಖಾನಾಪುರದಿಂದ ಮಧ್ಯಾಹ್ನ 3.45ಕ್ಕೆ ಬಸ್ ಹೊರಟು ಸಂಜೆ 5 ಗಂಟೆಗೆ ಚೋರ್ಲಾ ತಲುಪಲಿದೆ.
ಈ ಬಸ್ ಸೇವೆಯಿಂದ ಚೋರ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರಿಗೆ ಖಾನಾಪುರದೊಂದಿಗೆ ನೇರ ಪ್ರಯಾಣದ ಸೌಲಭ್ಯ ದೊರೆಯಲಿದ್ದು, ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗುವ ಅಗತ್ಯವೂ ಕೆಲಮಟ್ಟಿಗೆ ಕಡಿಮೆಯಾಗಲಿದೆ.
ಮೂರು ತಿಂಗಳಿಂದ ನಿರಂತರ ಪಠಪುರಾವೆ…
ಬಸ್ ಸೇವೆ ಆರಂಭಿಸಲು ನಡೆಸಿದ ಪ್ರಯತ್ನಗಳ ಕುರಿತು ಮಾತನಾಡಿದ ಇರ್ಫಾನ್ ತಾಲಿಕೋಟಿ ಅವರು,
“ಸುಮಾರು ಮೂರು ತಿಂಗಳ ಹಿಂದೆ ಚೋರ್ಲಾ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ನನ್ನ ಬಳಿ ಬಸ್ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು. ನಾಗರಿಕರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಭೇಟಿ ಮಾಡಿದೆ. ಅವರ ಶಿಫಾರಸು ಪತ್ರದೊಂದಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಬಳಿ ಈ ಬೇಡಿಕೆಯನ್ನು ಮಂಡಿಸಿದೆ. ಆದರೆ, ಅದರ ನಂತರವೂ ಬಸ್ ಸೇವೆ ಆರಂಭವಾಗಲು ವಿಳಂಬವಾಯಿತು,” ಎಂದು ಹೇಳಿದರು.
“ನಂತರ ಮತ್ತೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪತ್ರವನ್ನು ಪಡೆದುಕೊಂಡು ಹುಬ್ಬಳ್ಳಿಗೆ ತೆರಳಿ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದೆ. ನಿರಂತರವಾಗಿ ಪಠಪುರಾವೆ ನಡೆಸಿದ ಬಳಿಕ ಕೊನೆಗೂ ಚೋರ್ಲಾ ಗ್ರಾಮಕ್ಕೆ ಬಸ್ ಸೇವೆ ಮಂಜೂರಾಗಿ, ಇಂದಿನಿಂದ ಅದು ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಗ್ರಾಮಸ್ಥರು ನನ್ನ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಸಾರ್ಥಕಗೊಳಿಸಲು ಸಾಧ್ಯವಾಗಿರುವುದು ಸಂತೋಷ ತಂದಿದೆ,” ಎಂದು ತಾಲಿಕೋಟಿ ಹೇಳಿದರು.
ಯಾವುದೇ ಹುದ್ದೆಯಿಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿತ್ವ…
ಯಾವುದೇ ರಾಜಕೀಯ ಹುದ್ದೆ ಹೊಂದಿರದಿದ್ದರೂ ಖಾನಾಪುರ ತಾಲೂಕಿನ, ವಿಶೇಷವಾಗಿ ಜಾಂಬೋಟಿ ಪಶ್ಚಿಮ ಭಾಗದ ನಾಗರಿಕರ ವಿವಿಧ ಸಮಸ್ಯೆಗಳಿಗಾಗಿ ನಿರಂತರವಾಗಿ ಮುಂದಾಗುತ್ತಿರುವ ಸಾಮಾಜಿಕ ಕಾರ್ಯಕರ್ತರಾಗಿ ಇರ್ಫಾನ್ ತಾಲಿಕೋಟಿ ಅವರು ಗುರುತಿಸಿಕೊಂಡಿದ್ದಾರೆ.
ಗ್ರಾಮಸ್ಥರು ಯಾವುದೇ ಸಮಸ್ಯೆಯನ್ನು ತಮ್ಮ ಗಮನಕ್ಕೆ ತಂದಾಗ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಮಸ್ಯೆಯ ಪರಿಹಾರಕ್ಕಾಗಿ ಪಠಪುರಾವೆ ನಡೆಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಚೋರ್ಲಾ ಬಸ್ ಸೇವೆಯಂತೆಯೇ ಜಾಂಬೋಟಿಯ ಶ್ರೀರಾಮ ದೇವಸ್ಥಾನಕ್ಕೆ ಅನುದಾನ ದೊರಕಿಸಿಕೊಡಲು ಕೂಡ ಅವರ ಪ್ರಯತ್ನಗಳು ಮುಂದುವರಿದಿವೆ. ಪಶ್ಚಿಮ ಭಾಗದ ರಸ್ತೆ, ಸಾರಿಗೆ, ಮೊಬೈಲ್ ನೆಟ್ವರ್ಕ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಕೆಲಸವೂ ಮುಂದುವರಿದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಮೊಬೈಲ್ ಟವರ್ಗೂ ಬೇಡಿಕೆ…
ಬಸ್ ಸೇವೆಯ ಉದ್ಘಾಟನಾ ಸಂದರ್ಭದಲ್ಲಿ ಚೋರ್ಲಾ ಭಾಗದ ಗ್ರಾಮಸ್ಥರು ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಿ ಮೊಬೈಲ್ ಟವರ್ ಸೌಲಭ್ಯ ಕಲ್ಪಿಸಬೇಕು ಎಂದು ಇರ್ಫಾನ್ ತಾಲಿಕೋಟಿ ಅವರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲಿಕೋಟಿ ಅವರು,
“ಚೋರ್ಲಾ ಭಾಗದ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಲು ಸಂಬಂಧಪಟ್ಟವರ ಬಳಿ ಕೂಡ ಪಠಪುರಾವೆ ನಡೆಸುತ್ತೇನೆ. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದೆಯೂ ಸದಾ ಪ್ರಯತ್ನಿಸುತ್ತೇನೆ,” ಎಂದು ಭರವಸೆ ನೀಡಿದರು.
ಬಸ್ ಸೇವೆ ಆರಂಭಗೊಂಡಿರುವುದರಿಂದ ಚೋರ್ಲಾ ಗ್ರಾಮಸ್ಥರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಬಹುಕಾಲದಿಂದ ಬಾಕಿ ಉಳಿದಿದ್ದ ಬೇಡಿಕೆ ಈಡೇರಿರುವುದಕ್ಕೆ ಗ್ರಾಮಸ್ಥರು ಇರ್ಫಾನ್ ತಾಲಿಕೋಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಸ್ಥಿತರಿದ್ದ ಗ್ರಾಮಸ್ಥರು…
ಬಸ್ ಸೇವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರ್ಜುನ ಗಾವ್ಕರ್, ಕೃಷ್ಣಾ ಗಾವ್ಕರ್, ಸಂಜಯ ಪಾಟೀಲ್, ನಾಮದೇವ ಗಾವ್ಕರ್, ಫಟ್ಟು ಗಾವ್ಕರ್, ನವನಾಥ ಗಾವ್ಕರ್, ರವಿ ಮ್ಹಾಜಿಕ, ಉಮೇಶ್ ಮಹಾಜೀಕ, ನಕುಲ್ ಗಾವ್ಕರ್, ಧೊಂಡು ಗಾವಡೆ, ಸುರೇಖಾ ಗಾವ್ಕರ್, ಪಾರ್ವತಿ ಗಾವ್ಕರ್, ಜಾನಕಿ ಗಾವ್ಕರ್, ವಿಮಲ್ ಮಹಾಜೀಕ, ಸಾಯಿ ಗಾವ್ಕರ್, ನಮಿಶಾ ಗಾವ್ಕರ್, ಅರ್ಚನಾ ಗಾವ್ಕರ್, ರಾಜಾರಾಮ ಡಾಂಗೆ, ಪ್ರಕಾಶ್ ಓವೂಳ್ಕರ್, ಸುರೇಶ್ ಕೇರಕರ್, ಅನಂತ ಗಾವಡೆ, ವಿಠ್ಠಲ ಗಾವಸ್ ಸೇರಿದಂತೆ ಚೋರ್ಲಾ ಭಾಗದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

