कुपटगिरी येथील पडझड झालेला कालवा बंद करण्याच्या हालचाली; तहसीलदारांकडून सिंचन विभागाला तातडीचे निर्देश-तालिकोटी यांच्या प्रयत्नांना यश.
खानापूर : प्रतिनिधी
खानापूर तालुक्यातील कुपटगिरी गावातील पडझड झालेला व अनुपयोगी ठरलेला कालवा तातडीने बंद करण्याबाबत तहसीलदार कार्यालयाने लघु सिंचन व भूजल विकास विभागाला निर्देश दिले आहेत. या संदर्भात तहसीलदार कार्यालयाकडून दि. 22 मे 2026 रोजी अधिकृत पत्र जारी करण्यात आले असून, सामाजिक कार्यकर्ते तथा अंजुमन-ए-इस्लामचे तालुका अध्यक्ष इरफान तालिकोटी यांच्या प्रयत्नांना अखेर यश आले आहे.

गावातील नागरिकांनी अनेक वर्षांपासून या कालव्यामुळे निर्माण होणाऱ्या समस्यांकडे विविध लोकप्रतिनिधी व अधिकाऱ्यांचे लक्ष वेधले होते. मात्र, त्याकडे दुर्लक्ष झाल्याची भावना ग्रामस्थांनी व्यक्त केली होती. अखेर इरफान तालीकोटी यांनी पुढाकार घेत प्रशासनाकडे सातत्याने पाठपुरावा केल्याने या प्रश्नाला गती मिळाली आहे. त्यामुळे ग्रामस्थांनी त्यांचे आभार मानले आहेत.
याबाबत सविस्तर माहिती अशी की, काही दिवसांपूर्वी इरफान तालीकोटी हे कुपटगिरी गावात विठ्ठल रखुमाई पारायण सोहळा कार्यक्रमासाठी गेले असता ग्रामस्थांनी त्यांच्यासमोर गावातून गेलेल्या जुन्या कालव्याची समस्या मांडली होती. अनेक वर्षांपासून हा कालवा उपयोगात नसून त्यामध्ये पावसाचे तसेच सांडपाणी साचून मोठी डबकी निर्माण होत असल्याचे व आरोग्याचा प्रश्न निर्माण झाला असल्याचे ग्रामस्थांनी सांगितले. त्यामुळे परिसरात डासांचा प्रादुर्भाव वाढून रोगराई पसरण्याची भीती निर्माण झाली असल्याची तक्रार त्यांनी केली होती.
यानंतर इरफान तालीकोटी यांनी दि. 15 एप्रिल 2026 रोजी खानापूरच्या तहसीलदारांना निवेदन सादर केले. तसेच जिल्हाधिकारी मोहम्मद रोशन यांची भेट घेऊनही त्यांनी या प्रश्नाची माहिती दिली होती. त्यानंतर जिल्हाधिकाऱ्यांनी तहसीलदारांना प्रत्यक्ष पाहणी करून अहवाल सादर करण्याचे निर्देश दिले.
त्यानुसार महसूल निरीक्षक व तलाठी यांनी इरफान तालीकोटी यांच्या उपस्थितीत कुपटगिरी येथे प्रत्यक्ष पाहणी केली. पाहणीदरम्यान संबंधित कालव्यात पाईपलाईन जोडण्यात आलेली असून कालवा उघडा असल्यामुळे त्यामध्ये पाणी साचत असल्याचे निदर्शनास आले. त्यामुळे डास व रोगराई पसरण्याची शक्यता असल्याचे अहवालात नमूद करण्यात आले आहे.
या अहवालाच्या आधारे तहसीलदारांनी लघु सिंचन व भूजल विकास विभागाला संबंधित पडझड झालेला व अनुपयोगी कालवा तातडीने बंद करून आवश्यक कार्यवाही करण्याचे आदेश दिले आहेत. तसेच करण्यात आलेल्या कार्यवाहीचा सविस्तर अहवाल तहसीलदार कार्यालयात सादर करण्याच्या सूचनाही देण्यात आल्या आहेत.
या प्रकरणाची माहिती पुढील कार्यवाहीसाठी खानापूर नगरपंचायतीचे मुख्याधिकारी, बरगाव ग्रामपंचायतीचे विकास अधिकारी तसेच अंजुमन-ए-इस्लाम, खानापूरचे तालुका अध्यक्ष इरफान तालीकोटी यांनाही पाठविण्यात आली आहे.
ಕುಪ್ಪಟಗಿರಿ ಗ್ರಾಮದ ಕುಸಿದ ಕಾಲುವೆ ಮುಚ್ಚಲು ಕ್ರಮ; ತಹಶೀಲ್ದಾರರಿಂದ ನೀರಾವರಿ ಇಲಾಖೆಗೆ ತುರ್ತು ಸೂಚನೆ – ತಾಲಿಕೋಟಿ ಅವರ ಪ್ರಯತ್ನಕ್ಕೆ ಯಶಸ್ಸು.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಕುಪ್ಪಟಗಿರಿ ಗ್ರಾಮದಲ್ಲಿರುವ ಕುಸಿದು ಬಳಕೆಗೆ ಬಾರದಿರುವ ಹಳೆಯ ಕಾಲುವೆಯನ್ನು ತಕ್ಷಣ ಮುಚ್ಚುವಂತೆ ತಹಶೀಲ್ದಾರ ಕಚೇರಿಯಿಂದ ಸಣ್ಣ ನೀರಾವರಿ ಮತ್ತು ಭೂಗರ್ಭ ಜಲ ಅಭಿವೃದ್ಧಿ ಇಲಾಖೆಗೆ ನಿರ್ದೇಶನ ನೀಡಿದೆ. ಈ ಕುರಿತು ತಹಶೀಲ್ದಾರ ಕಚೇರಿಯಿಂದ ಮೇ 22, 2026ರಂದು ಅಧಿಕೃತ ಪತ್ರ ಹೊರಡಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಹಾಗೂ ಅಂಜುಮನ್-ಎ-ಇಸ್ಲಾಂ ತಾಲ್ಲೂಕು ಅಧ್ಯಕ್ಷ ಇರ್ಫಾನ್ ತಾಲಿಕೋಟಿ ಅವರ ನಿರಂತರ ಪ್ರಯತ್ನಗಳಿಗೆ ಕೊನೆಗೂ ಫಲ ಸಿಕ್ಕಿದೆ.
ಗ್ರಾಮದಲ್ಲಿನ ನಾಗರಿಕರು ಹಲವು ವರ್ಷಗಳಿಂದ ಈ ಕಾಲುವೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರು. ಆದರೆ ಸಮಸ್ಯೆಯನ್ನು ನಿರ್ಲಕ್ಷಿಸಲಾಗಿದೆ ಎಂಬ ಅಸಮಾಧಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದರು. ಅಂತಿಮವಾಗಿ ಇರ್ಫಾನ್ ತಾಲಿಕೋಟಿ ಅವರ ಮುಂದಾಳತ್ವದಲ್ಲಿ, ಆಡಳಿ ಮಟ್ಟದಲ್ಲಿ ನಿರಂತರ ಹಾಗೂ ಹಂತ ಹಂತವಾಗಿ ಮನವಿ ಸಲ್ಲಿಸಿದ್ದರಿಂದ ಸಮಸ್ಯೆಗೆ ಚುರುಕು ಬಂದಿದೆ. ಇದಕ್ಕಾಗಿ ಗ್ರಾಮಸ್ಥರು ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ದೊರೆತ ಮಾಹಿತಿಯಂತೆ, ಕೆಲ ದಿನಗಳ ಹಿಂದೆ ಇರ್ಫಾನ್ ತಾಲಿಕೋಟಿ ಅವರು ಕುಪ್ಪಟಗಿರಿ ಗ್ರಾಮದಲ್ಲಿ ನಡೆದ ವಿಠ್ಠಲ ರುಕ್ಮಾಯಿ ಪಾರಾಯಣ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರು ಗ್ರಾಮದ ಮೂಲಕ ಹಾದುಹೋಗಿರುವ ಹಳೆಯ ಕಾಲುವೆಯ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಹಲವು ವರ್ಷಗಳಿಂದ ಈ ಕಾಲುವೆ ಬಳಕೆಯಲ್ಲಿಲ್ಲದೆ ಮಳೆ ನೀರು ಹಾಗೂ ಕೊಳಚೆ ನೀರು ತುಂಬಿ ದೊಡ್ಡ ಕೊಳಗಳಾಗಿ ಮಾರ್ಪಟ್ಟಿದ್ದು, ಸಾರ್ವಜನಿಕ ಆರೋಗ್ಯದ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದರು. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಅವರು ತಿಳಿಸಿದ್ದರು.
ಈ ಹಿನ್ನೆಲೆದಲ್ಲಿ ಇರ್ಫಾನ್ ತಾಲಿಕೋಟಿ ಅವರು ಏಪ್ರಿಲ್ 15, 2026ರಂದು ಖಾನಾಪುರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ್ದರು. ಬಳಿಕ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಅದರಂತೆ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇರ್ಫಾನ್ ತಾಲಿಕೋಟಿ ಅವರ ಉಪಸ್ಥಿತಿಯಲ್ಲಿ ಕುಪ್ಪಟಗಿರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಸಂಬಂಧಿತ ಕಾಲುವೆಗೆ ಪೈಪ್ಲೈನ್ ಜೋಡಣೆ ಮಾಡಲಾಗಿದ್ದು, ಕಾಲುವೆ ತೆರೆದಿರುವುದರಿಂದ ನೀರು ನಿಂತುಕೊಳ್ಳುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ರೋಗರಾಯಿಯ ಸಾಧ್ಯತೆ ಇರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿಯ ಆಧಾರದ ಮೇಲೆ ತಹಶೀಲ್ದಾರರು ಸಣ್ಣ ನೀರಾವರಿ ಮತ್ತು ಭೂಗರ್ಭ ಜಲ ಅಭಿವೃದ್ಧಿ ಇಲಾಖೆಗೆ ಕುಸಿದು ಬಳಕೆಗೆ ಬಾರದಿರುವ ಈ ಕಾಲುವೆಯನ್ನು ತಕ್ಷಣ ಮುಚ್ಚಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಜೊತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸವಿಸ್ತಾರ ವರದಿಯನ್ನು ತಹಶೀಲ್ದಾರ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಪ್ರಕರಣದ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಖಾನಾಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ, ಬರಗಾವ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಅಂಜುಮನ್-ಎ-ಇಸ್ಲಾಂ ಖಾನಾಪುರ ತಾಲ್ಲೂಕು ಅಧ್ಯಕ್ಷ ಇರ್ಫಾನ್ ತಾಲಿಕೋಟಿ ಅವರಿಗೆ ಸಹ ಕಳುಹಿಸಲಾಗಿದೆ.


