नीट परीक्षा घोटाळ्याच्या निषेधार्थ बेळगावात एल्गार; विद्यार्थ्यांच्या न्यायासाठी राणी चन्नम्मा चौकात जोरदार आंदोलन.
बेळगाव (प्रतिनिधी) : नीट (NEET) परीक्षा घोटाळ्याच्या निषेधार्थ गुरुवारी बेळगावातील राणी चन्नम्मा चौकात युवा काँग्रेस आणि शेकडो विद्यार्थ्यांनी जोरदार आंदोलन करत केंद्र सरकार आणि राष्ट्रीय परीक्षा संस्था (NTA) विरोधात तीव्र संताप व्यक्त केला. दिल्लीतील जंतर-मंतर येथे सुरू असलेल्या देशव्यापी आंदोलनाला पाठिंबा दर्शवत युवा नेते अमान सेठ यांच्या नेतृत्वाखाली हे निदर्शन पार पडले.
आंदोलनादरम्यान विद्यार्थी आणि कार्यकर्त्यांनी “पेपरफुटी बंद करा”, “विद्यार्थ्यांना न्याय द्या”, “एनटीएचा निषेध असो” अशा घोषणांनी परिसर दणाणून सोडला. आंदोलकांनी केंद्रीय शिक्षणमंत्री धर्मेंद्र प्रधान यांनी नैतिक जबाबदारी स्वीकारून तात्काळ राजीनामा द्यावा, तसेच नीट परीक्षा घोटाळ्याची उच्चस्तरीय व निष्पक्ष चौकशी करून दोषींवर कठोर कारवाई करावी, अशी ठाम मागणी केली.
यावेळी बोलताना युवा नेते अमान सेठ म्हणाले, “आजचा लढा कोणत्याही पक्षासाठी नाही, तर देशातील लाखो विद्यार्थ्यांच्या भविष्याच्या रक्षणासाठी आहे. हा केवळ पेपरफुटीचा प्रश्न नसून विद्यार्थ्यांच्या मेहनतीचा, विश्वासाचा आणि त्यांच्या आयुष्याचा प्रश्न आहे. वारंवार होणाऱ्या परीक्षा घोटाळ्यांमुळे विद्यार्थ्यांचा परीक्षा व्यवस्थेवरील विश्वास उडत आहे.”
ते पुढे म्हणाले की, गेल्या काही वर्षांत विविध स्पर्धा परीक्षा आणि भरती प्रक्रियेत पेपरफुटीच्या अनेक घटना घडल्या असूनही दोषींवर प्रभावी कारवाई झालेली नाही. यूजी नीटसारख्या देशातील सर्वात मोठ्या प्रवेश परीक्षेला २० लाखांहून अधिक विद्यार्थी बसतात. अशा महत्त्वाच्या परीक्षेचे व्यवस्थापन करणाऱ्या संस्थेकडे आवश्यक मनुष्यबळ आणि सक्षम यंत्रणा नसल्याने अशा गंभीर त्रुटी घडत असल्याचा आरोपही त्यांनी केला.
आर्थिकदृष्ट्या दुर्बल कुटुंबातील विद्यार्थी अनेक वर्षे अथक परिश्रम करून डॉक्टर, अभियंता किंवा इतर व्यावसायिक अभ्यासक्रमांमध्ये प्रवेश मिळविण्याचे स्वप्न पाहतात. मात्र परीक्षा प्रक्रियेत गैरव्यवहार झाल्यास त्यांना पुन्हा परीक्षा देण्याची वेळ येते. त्यामुळे विद्यार्थ्यांवर प्रचंड मानसिक ताण निर्माण होतो आणि त्यांच्या करिअरवरही विपरीत परिणाम होतो, अशी भावना आंदोलनकर्त्यांनी व्यक्त केली.
आंदोलनकर्त्यांनी नीट परीक्षा घोटाळ्याची सखोल चौकशी करून दोषींना कठोर शिक्षा देण्याची, परीक्षा प्रक्रिया पूर्णपणे पारदर्शक करण्याची, भविष्यात अशा घटना टाळण्यासाठी सक्षम यंत्रणा उभारण्याची आणि विद्यार्थ्यांचा परीक्षा व्यवस्थेवरील विश्वास पुन्हा निर्माण करण्यासाठी केंद्र सरकारने तातडीने ठोस उपाययोजना करण्याची मागणी केली.
यावेळी शेकडो विद्यार्थी, युवा काँग्रेसचे पदाधिकारी, कार्यकर्ते आणि नागरिक मोठ्या संख्येने उपस्थित होते. आंदोलन शांततेत पार पडले असून विद्यार्थ्यांच्या न्यायाच्या मागणीला उपस्थितांनी जोरदार पाठिंबा दिला.
ನೀಟ್ ಪರೀಕ್ಷಾ ಹಗರಣ ಖಂಡಿಸಿ ಬೆಳಗಾವಿಯಲ್ಲಿ ಭಾರೀ ಪ್ರತಿಭಟನೆ; ವಿದ್ಯಾರ್ಥಿಗಳ ನ್ಯಾಯಕ್ಕಾಗಿ ರಾಣಿ ಚನ್ನಮ್ಮ ವೃತ್ತದಲ್ಲಿ ತೀವ್ರ ಆಕ್ರೋಶ.
ಬೆಳಗಾವಿ (ಪ್ರತಿನಿಧಿ): ನೀಟ್ (NEET) ಪರೀಕ್ಷಾ ಹಗರಣವನ್ನು ಖಂಡಿಸಿ ಗುರುವಾರ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಯುವ ಕಾಂಗ್ರೆಸ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾರೀ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯ ಜಂತರ್-ಮಂತರ್ನಲ್ಲಿ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯುವ ನಾಯಕ ಅಮಾನ್ ಸೇಠ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು “ಪೇಪರ್ ಲೀಕ್ ನಿಲ್ಲಿಸಿ”, “ವಿದ್ಯಾರ್ಥಿಗಳಿಗೆ ನ್ಯಾಯ ನೀಡಿ”, “ಎನ್ಟಿಎ ವಿರುದ್ಧ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನಾ ಸ್ಥಳವನ್ನು ಮೊಳಗಿಸಿದರು. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆಗಾರಿಕೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ಜೊತೆಗೆ ನೀಟ್ ಪರೀಕ್ಷಾ ಹಗರಣದ ಕುರಿತು ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ನಾಯಕ ಅಮಾನ್ ಸೇಠ್ ಅವರು, “ಇಂದಿನ ನಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕಾಗಿ ಅಲ್ಲ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದಕ್ಕಾಗಿ. ಇದು ಕೇವಲ ಪೇಪರ್ ಲೀಕ್ನ ಪ್ರಶ್ನೆಯಲ್ಲ; ವಿದ್ಯಾರ್ಥಿಗಳ ಪರಿಶ್ರಮ, ಅವರ ನಂಬಿಕೆ ಮತ್ತು ಅವರ ಜೀವನದ ಪ್ರಶ್ನೆಯಾಗಿದೆ. ಪದೇಪದೇ ನಡೆಯುತ್ತಿರುವ ಪರೀಕ್ಷಾ ಹಗರಣಗಳಿಂದ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿಯುತ್ತಿದೆ,” ಎಂದು ಹೇಳಿದರು.
ಅವರು ಮುಂದುವರಿದು ಮಾತನಾಡುತ್ತಾ, ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನೇಮಕಾತಿ ಪ್ರಕ್ರಿಯೆಗಳಲ್ಲಿ ಅನೇಕ ಪೇಪರ್ ಲೀಕ್ ಘಟನೆಗಳು ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ದೇಶದ ಅತಿ ದೊಡ್ಡ ಪ್ರವೇಶ ಪರೀಕ್ಷೆಗಳಲ್ಲೊಂದಾದ ಯುಜಿ ನೀಟ್ ಪರೀಕ್ಷೆಗೆ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಇಂತಹ ಮಹತ್ವದ ಪರೀಕ್ಷೆಯನ್ನು ನಡೆಸುವ ಸಂಸ್ಥೆಯ ಬಳಿ ಅಗತ್ಯ ಮಾನವ ಸಂಪನ್ಮೂಲ ಹಾಗೂ ಸಮರ್ಥ ವ್ಯವಸ್ಥೆಯ ಕೊರತೆಯಿಂದ ಇಂತಹ ಗಂಭೀರ ದೋಷಗಳು ಸಂಭವಿಸುತ್ತಿವೆ ಎಂದು ಅವರು ಆರೋಪಿಸಿದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್ಗಳು ಅಥವಾ ಇತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಕನಸನ್ನು ಸಾಕಾರಗೊಳಿಸಲು ಹಲವು ವರ್ಷಗಳ ಕಾಲ ಕಠಿಣ ಪರಿಶ್ರಮ ಪಡುತ್ತಾರೆ. ಆದರೆ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದರೆ ಅವರಿಗೆ ಮತ್ತೆ ಪರೀಕ್ಷೆ ಬರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಭಾರೀ ಮಾನಸಿಕ ಒತ್ತಡ ಉಂಟಾಗುವುದಲ್ಲದೆ ಅವರ ವೃತ್ತಿಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ತಮ್ಮ ಆತಂಕ ವ್ಯಕ್ತಪಡಿಸಿದರು.
ನೀಟ್ ಪರೀಕ್ಷಾ ಹಗರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಬೇಕು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಮರ್ಥ ವ್ಯವಸ್ಥೆಯನ್ನು ರೂಪಿಸಬೇಕು ಹಾಗೂ ವಿದ್ಯಾರ್ಥಿಗಳ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ತುರ್ತು ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಶಾಂತಿಯುತವಾಗಿ ನಡೆದಿದ್ದು, ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಹಾಜರಿದ್ದವರು ಭಾರೀ ಬೆಂಬಲ ವ್ಯಕ್ತಪಡಿಸಿದರು.


