मुख्यमंत्री प्रमोद सावंत यांच्या ताफ्याला धडक देण्याचा प्रयत्न टळला; कथित मद्यधुंद चालकासह चौघांना अटक. आमोणा येथे थरारक घटना; पोलिसांकडून सखोल तपास सुरू
बिचोलीम : प्रतिनिधी
गोव्याचे मुख्यमंत्री डॉ. प्रमोद सावंत यांच्या ताफ्याला आमोणा परिसरात एका कथित मद्यधुंद चालकाच्या वाहनामुळे अपघाताचा धोका निर्माण झाल्याची धक्कादायक घटना समोर आली आहे. सुदैवाने ताफ्यातील सुरक्षा कर्मचाऱ्यांच्या सतर्कतेमुळे आणि चालकांच्या वेळीच घेतलेल्या निर्णयामुळे मोठी दुर्घटना टळली.
प्राथमिक माहितीनुसार, मुख्यमंत्री डॉ. प्रमोद सावंत यांचा ताफा आमोणा मार्गे प्रवास करत असताना समोरून येणारे एक वाहन अचानक ताफ्याच्या दिशेने भरधाव वेगाने आले. या वाहनाने ताफ्याच्या अगदी जवळ येत धडक देण्याची परिस्थिती निर्माण केली होती. मात्र, ताफ्यातील वाहनचालकांनी आणि सुरक्षा कर्मचाऱ्यांनी तत्परता दाखवत परिस्थिती नियंत्रणात आणली आणि संभाव्य अपघात टाळला.
घटनेची माहिती मिळताच बिचोलीम पोलिसांनी तातडीने तपास सुरू केला. या प्रकरणात वाहनातील चार जणांना ताब्यात घेण्यात आले असून त्यांना अटक करण्यात आली आहे. संबंधित चालक मद्यधुंद अवस्थेत वाहन चालवत होता का, याचीही चौकशी सुरू आहे.
पोलिसांनी वाहनाची तपासणी करून घटनास्थळावरील परिस्थितीचा आढावा घेतला आहे. तसेच आरोपींची ओळख आणि घटनेमागील नेमके कारण अद्याप अधिकृतपणे जाहीर करण्यात आलेले नाही. घटनेच्या सर्व पैलूंचा तपास सुरू असून आवश्यक ते पुरावे गोळा केले जात आहेत.
मुख्यमंत्र्यांच्या ताफ्याशी संबंधित असल्याने या घटनेला विशेष गांभीर्याने पाहिले जात आहे. सुरक्षा यंत्रणांनीही घटनेचा स्वतंत्र अहवाल तयार करण्याची प्रक्रिया सुरू केली आहे.
दरम्यान, या घटनेमुळे आमोणा आणि परिसरात मोठी खळबळ उडाली असून मुख्यमंत्री सुरक्षित असल्याने नागरिकांनी समाधान व्यक्त केले आहे.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ರಕ್ಷಣಾ ವಾಹನಕ್ಕೆ ಡಿಕ್ಕಿ ಹೊಡೆಯುವ ಪ್ರಯತ್ನ ವಿಫಲ; ಮದ್ಯದ ಅಮಲಿನಲ್ಲಿದ್ದ ಚಾಲಕ ಸೇರಿ ನಾಲ್ವರು ಬಂಧನ, ಅಮೋಣಾ ಪ್ರದೇಶದಲ್ಲಿ ರೋಚಕ ಘಟನೆ; ಪೊಲೀಸರು ಸವಿಸ್ತಾರ ತನಿಖೆ ಆರಂಭ.
ಬಿಚೋಲಿಮ : ಪ್ರತಿನಿಧಿ
ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರ ರಕ್ಷಣಾ ವಾಹನಕ್ಕೆ ಅಮೋಣಾ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿದ್ದಾನೆ ಎನ್ನಲಾದ ಚಾಲಕನ ವಾಹನದಿಂದ ಅಪಘಾತದ ಅಪಾಯ ಉಂಟಾದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ವಾಹನ ದಳದ ಭದ್ರತಾ ಸಿಬ್ಬಂದಿಯ ಎಚ್ಚರಿಕೆ ಮತ್ತು ಚಾಲಕರ ಸಮಯೋಚಿತ ಕ್ರಮದಿಂದ ದೊಡ್ಡ ದುರಂತ ತಪ್ಪಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರ ರಕ್ಷಣಾ ವಾಹನ ದಳ ಅಮೋಣಾ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ಬಂದ ಒಂದು ವಾಹನ ಏಕಾಏಕಿ ವಾಹನ ದಳದ ಕಡೆಗೆ ಅತಿವೇಗದಲ್ಲಿ ದೌಡಾಯಿಸಿತು. ಈ ವಾಹನವು ದಳದ ವಾಹನಗಳ ಅತ್ಯಂತ ಸಮೀಪಕ್ಕೆ ಬಂದು ಡಿಕ್ಕಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ರಕ್ಷಣಾ ವಾಹಣದ ಚಾಲಕರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸಂಭವನೀಯ ಅಪಘಾತವನ್ನು ತಪ್ಪಿಸಿದರು.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಬಿಚೋಲಿಮ ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು. ಈ ಪ್ರಕರಣದಲ್ಲಿ ವಾಹನದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ. ಸಂಬಂಧಿತ ಚಾಲಕ ಮದ್ಯದ ಅಮಲಿನಲ್ಲೇ ವಾಹನ ಚಲಾಯಿಸುತ್ತಿದ್ದನಾ ಎಂಬ ಕುರಿತು ಸಹ ತನಿಖೆ ಮುಂದುವರಿದಿದೆ.
ಪೊಲೀಸರು ವಾಹನವನ್ನು ಪರಿಶೀಲಿಸಿ ಘಟನಾ ಸ್ಥಳದ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಜೊತೆಗೆ ಆರೋಪಿಗಳ ಗುರುತು ಹಾಗೂ ಘಟನೆಯ ಹಿಂದಿನ ನಿಖರ ಕಾರಣವನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.
ಮುಖ್ಯಮಂತ್ರಿಯವರ ರಕ್ಷಣಾ ವಾಹನಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಭದ್ರತಾ ಸಂಸ್ಥೆಗಳೂ ಸಹ ಈ ಘಟನೆಯ ಕುರಿತು ಸ್ವತಂತ್ರ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭಿಸಿವೆ.
ಇದರ ಮಧ್ಯೆ, ಈ ಘಟನೆಯಿಂದ ಅಮೋಣಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಆತಂಕ ಮತ್ತು ಚರ್ಚೆ ಉಂಟಾಗಿದೆ. ಮುಖ್ಯಮಂತ್ರಿ ಸುರಕ್ಷಿತರಾಗಿರುವುದರಿಂದ ನಾಗರಿಕರು ಸಮಾಧಾನ ವ್ಯಕ್ತಪಡಿಸಿದ್ದಾರೆ.


