अळनावरमध्ये स्वातंत्र्यदिन उत्साहात; हक्क व कर्तव्यांचे पालन करण्याचे तहसीलदारांचे आवाहन.
अळनावर : अळनावर शहरासह संपूर्ण तालुक्यात स्वातंत्र्यदिनाचा उत्सव शनिवारी उत्साहात आणि विविध कार्यक्रमांनी साजरा करण्यात आला. शहरातील शासकीय शाळेच्या मैदानावर आयोजित मुख्य कार्यक्रमात तहसीलदार डॉ. डी. एच. हूगार यांच्या हस्ते ध्वजारोहण करण्यात आले.
यावेळी बोलताना तहसीलदार डॉ. हूगार म्हणाले की, देशातील प्रत्येक नागरिक आज शांततेत व सुरक्षितपणे जीवन जगत आहे, त्यामागे अनेक महान व्यक्तींचे योगदान आहे. त्यामुळे त्यांच्या कार्याचे नित्य स्मरण करण्याबरोबरच संविधानाने दिलेले हक्क आणि कर्तव्ये प्रत्येकाने जाणून घेऊन त्यांचे पालन करणे ही सर्वांची जबाबदारी आहे.
अळनावर तालुका केंद्र झाल्यानंतर शहराचा टप्प्याटप्प्याने विकास होत आहे. काळी नदीतून शहराला पाणीपुरवठा सुरू झाल्याने पिण्याच्या पाण्याची समस्या दूर झाली आहे. शासनाच्या विविध योजना प्रत्येक पात्र लाभार्थ्यापर्यंत पोहोचविण्यासाठी सर्व विभाग प्रयत्नशील आहेत. महसूल विभागातील कागदपत्रांचे संगणकीकरण करण्यात आले असून, पहाणीला आधार सीडिंगचे कामही बहुतांश पूर्ण झाले आहे, अशी माहिती त्यांनी दिली.
पर्यावरणाचे संरक्षण करण्याबरोबरच नैसर्गिक संसाधनांचा काटकसरीने वापर करण्याची गरज आहे. अळनावर तालुक्याचा शैक्षणिक व आर्थिक विकास अधिक वेगाने होण्यासाठी सर्वांनी एकजुटीने प्रयत्न करावेत, असे आवाहनही त्यांनी केले.
यावेळी गत शैक्षणिक वर्षात एसएसएलसी परीक्षेत उत्कृष्ट कामगिरी करणाऱ्या तालुक्यातील विद्यार्थ्यांचा सत्कार करण्यात आला.
कार्यक्रमास तालुका पंचायत ईओ प्रशांत तुरकाणी, गॅरंटी योजना तालुका अध्यक्ष विनायक कुरुबर, पीएसआय बसवराज यद्दलगुड्ड, ता.पं. एडी संतोष तुरकाणी, कन्नड साहित्य परिषद अध्यक्ष गुरुराज सबनीस, भूमी न्याय मंडळाचे सदस्य परशुराम बेकेनेकर आदी उपस्थित होते.
माहंतेश बेंतूर यांनी स्वागत केले. पुंडलीक पारदी यांनी सूत्रसंचालन केले, तर प्रभय्या विरक्तमठ यांनी आभार मानले. तालुक्यातील मान्यवर, शाळा-महाविद्यालयांचे विद्यार्थी व शिक्षक मोठ्या संख्येने उपस्थित होते.
अळनावर बसस्थानकात सुरेश कल्लवड्डर, ऑटोस्थानकात रामदास कोलेकार, कडबगट्टी ग्रामपंचायतीत पीडीओ आनंद पाटील, अळनावर तालुका पंचायतमध्ये ईओ प्रशांत तुरकाणी, मिल्लत बँकेत अध्यक्ष एम. के. बागबान आणि आंबेडकर भवनात शहाजी शिंदे यांच्या हस्ते ध्वजारोहण करण्यात आले.
ಅಳ್ನಾವರದಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು; ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸುವಂತೆ ತಹಶೀಲ್ದಾರ್ ಒತ್ತಾಯಿಸಿದರು.
ಅಳ್ನಾವರ: ಪಟ್ಟಣವೂ ಸೇರಿದಂತೆ ತಾಲೂಕಿನಾಧ್ಯಂತ ಸ್ವಾತಂತ್ರೋತ್ಸವ ಶನಿವಾರ ಸಮಾರಂಭಗಳು ವಿಜೃಂಭಣೆಯಿAದ ಜರುಗಿದವು.
ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ ಧ್ವಜಾರೋಹಣ ನೇರವೇರಿಸಿ ಮಾತನಾಡಿ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನು ನೆಮ್ಮದಿಯಿಂದ ಬದುಕುತ್ತಿರುವದಕ್ಕೆ ಕಾರಣರಾದ ಮಹನೀಯರನ್ನು ನಿತ್ಯ ಸ್ಮರಿಸಿಕೊಳ್ಳುವದರ ಜೊತೆಗೆ ನಮಗೆ ಒದಗಿಸಲಾದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಪಾಲನೆ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಅಳ್ನಾವರ ತಾಲೂಕು ಕೇಂದ್ರವಾಗಿ ಬದಲಾವಣೆಯಾದ ನಂತರ ಹಂತ ಹಂತವಾಗಿ ಅಭಿವೃದ್ದಿಯತ್ತ ಸಾಗುತ್ತಿದ್ದು,ಪಟ್ಟಣಕ್ಕೆ ಕಾಳಿ ನದಿಯಿಂದ ನೀರು ಪೂರೈಕೆ ಮಾಡುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ನೀಗಿದೆ,ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಿಸಲು ಎಲ್ಲಾ ಇಲಾಖೆಗಳು ಅವಿರತವಾಗಿ ಶ್ರಮಿಸುತ್ತಿದ್ದು,ಕಂದಾಯ ದಾಖಲೆಗಳನ್ನು ಗಣಕೀರಣ ಮಾಡಲಾಗಿದ್ದು,ಪಹಣಿಗೆ ಆಧಾರ ಸೀಡಿಂಗ್ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ ಎಂದರು.
ಪರಿಸರ ರಕ್ಷಿಸುವದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವದರ ಕಡೆಗೆ ಪ್ರತಿಯೊಬ್ಬರು ಗಮನ ನೀಡುವದು ಅಗತ್ಯವಿದ್ದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತಾಲೂಕು ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದಲು ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ತಾ.ಪಂ ಇಒ ಪ್ರಶಾಂತ ತುರಕಾಣಿ,ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ವಿನಾಯಕ ಕುರುಬರ,ಪಿಎಸ್ಐ ಬಸವರಾಜ ಯದ್ದಲಗುಡ್ಡ, ತಾ.ಪಂ ಎಡಿ ಸಂತೋಷ ತುರಕಾಣಿ, ಕಸಾಪ ಅಧ್ಯಕ್ಷ ಗುರುರಾಜ ಸಬನೀಸ, ಭೂ ನ್ಯಾಯ ಮಂಡಳಿ ಸದಸ್ಯ ಪರಶುರಾಮ ಬೇಕನೇಕರ ಇದ್ದರು
ಮಾಂತೇಶ ಬೆಂತೂರ ಸ್ವಾಗತಿಸಿದರು.ಪುಂಡಲೀಕ ಪಾರ್ದಿ ನಿರೂಪಿಸಿದರು.ಪ್ರಭಯ್ಯ ವಿರಕ್ತಮಠ ವಂದಿಸಿದರು
ತಾಲೂಕಿನ ಗಣ್ಯರು,ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು,ಶಿಕ್ಷಕರು ಭಾಗವಹಿಸಿದ್ದರು.
ಅಳ್ನಾವರದ ಬಸ್ ನಿಲ್ದಾಣದಲ್ಲಿ ಸುರೇಶ ಕಲ್ಲವಡ್ಡರ,ಆಟೋ ನಿಲ್ದಾಣದಲ್ಲಿ ರಾಮಧಾಸ ಕೋಲೆಕಾರ,ಕಡಬಗಟ್ಟಿ ಗ್ರಾ.ಪಂ ದಲ್ಲಿ ಪಿಡಿಒ ಆನಂದ ಪಾಟೀಲ,ಅಳ್ನಾವರ ತಾ.ಪಂ ದಲ್ಲಿ ಇಒ ಪ್ರಶಾಂತ ತುರಕಾಣಿ,ಮಿಲ್ಲತ್ ಬ್ಯಾಂಕಿನಲ್ಲಿ ಅಧ್ಯಕ್ಷ ಎಮ್.ಕೆ.ಬಾಗಬಾನ,ಅಂಬೇಡಕರ ಭವನದಲ್ಲಿ ಶಾಹು ಶಿಂಧೆ ಧ್ವಜಾರೋಹಣ ನೇರವೇರಿಸಿದರು.



