जोयडा-कॅसल रॉक भागातील प्रवाशांना दिलासा; लोंडा-कॅसल रॉक रेल्वे सेवा 15 ऑगस्टपासून पुन्हा सुरू ; विश्वेश्वर हेगडे-कागेरी.
कारवार : जोयडा व कॅसल रॉक परिसरातील नागरिक आणि प्रवाशांची गेल्या अनेक दिवसांपासूनची मागणी अखेर पूर्ण झाली आहे. दुहेरी रेल्वे मार्गाच्या कामामुळे अनेक दिवसापासून अंशतः बंद असलेली लोंढा-कॅसल रॉक (LD-CLR) रेल्वे सेवा 15 ऑगस्ट 2026 पासून पुन्हा सुरू करण्याचा अधिकृत आदेश दक्षिण पश्चिम रेल्वे विभागाने जारी केला आहे.
कॅसल रॉक तसेच जोयडा परिसरातील नागरिक व प्रवाशांना रेल्वे सेवा बंद असल्यामुळे मोठ्या अडचणींचा सामना करावा लागत होता. ही बाब लक्षात घेऊन खासदार विश्वेश्वर हेगडे-कागेरी यांच्यावतीने रेल्वे सेवा पूर्ववत सुरू करण्याची मागणी केंद्रीय रेल्वे राज्यमंत्री व्ही. सोमण्णा यांच्याकडे करण्यात आली होती. सार्वजनिक हिताचा विचार करून या मागणीची दखल घेत रेल्वे मंत्रालयाने रेल्वे सेवा पुन्हा सुरू करण्यास मंजुरी दिली आहे.
त्यानुसार, 15 ऑगस्ट 2026 पासून रेल्वे क्रमांक 17333 (मिरज-कॅसल रॉक एक्स्प्रेस) ही गाडी लोंढा येथे आपला प्रवास समाप्त न करता थेट कॅसल रॉक (CLR) पर्यंत धावणार आहे. तसेच रेल्वे क्रमांक 17334 (कॅसल रॉक-मिरज एक्स्प्रेस) ही गाडीही 15 ऑगस्टपासून कॅसल रॉक येथूनच आपला प्रवास सुरू करणार आहे.
या निर्णयामुळे जोयडा, कॅसल रॉक आणि परिसरातील प्रवाशांना मोठा दिलासा मिळणार असून, दैनंदिन प्रवासासह विविध कामांसाठी रेल्वेवर अवलंबून असलेल्या नागरिकांची गैरसोय दूर होणार आहे.
मतदारसंघातील जनतेची अनेक दिवसांची मागणी पूर्ण करून रेल्वे सेवा पुन्हा सुरू करण्यासाठी पुढाकार घेतल्याबद्दल केंद्रीय रेल्वे राज्यमंत्री व्ही. सोमण्णा तसेच केंद्रीय रेल्वेमंत्री अश्विनी वैष्णव यांचे उत्तर कन्नडचे खासदार विश्वेश्वर हेगडे- कागेरी यांनी मतदारसंघातील जनतेच्या वतीने मनःपूर्वक आभार मानले आहेत.
पुनरुज्जीवित करण्यात आलेल्या या रेल्वे सेवेचा परिसरातील प्रवाशांनी व नागरिकांनी पूर्ण लाभ घ्यावा, असे आवाहन खासदार विश्वेश्वर हेगडे-कागेरी यांनी केले आहे.
ಜೋಯಿಡಾ–ಕ್ಯಾಸಲ್ ರಾಕ್ ಭಾಗದ ಪ್ರಯಾಣಿಕರಿಗೆ ನೆಮ್ಮದಿ; ಆಗಸ್ಟ್ 15ರಿಂದ ಲೊಂಡಾ–ಕ್ಯಾಸಲ್ ರಾಕ್ ರೈಲು ಸೇವೆ ಪುನರಾರಂಭ; ವಿಶ್ವೇಶ್ವರ ಹೆಗಡೆ-ಕಾಗೇರಿ.
ಕಾರವಾರ : ಜೋಯಿಡಾ ಹಾಗೂ ಕ್ಯಾಸಲ್ ರಾಕ್ ಪ್ರದೇಶದ ನಾಗರಿಕರು ಮತ್ತು ಪ್ರಯಾಣಿಕರ ಹಲವು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ದ್ವಿಪಥ ರೈಲು ಮಾರ್ಗದ ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಭಾಗಶಃ ಸ್ಥಗಿತಗೊಂಡಿದ್ದ ಲೊಂಡಾ–ಕ್ಯಾಸಲ್ ರಾಕ್ (LD-CLR) ರೈಲು ಸೇವೆಯನ್ನು ಆಗಸ್ಟ್ 15, 2026ರಿಂದ ಪುನರಾರಂಭಿಸಲು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗವು ಅಧಿಕೃತ ಆದೇಶ ಹೊರಡಿಸಿದೆ.
ಕ್ಯಾಸಲ್ ರಾಕ್ ಹಾಗೂ ಜೋಯಿಡಾ ಪ್ರದೇಶದ ನಾಗರಿಕರು ಮತ್ತು ಪ್ರಯಾಣಿಕರು ರೈಲು ಸೇವೆ ಸ್ಥಗಿತಗೊಂಡಿದ್ದರಿಂದ ಹಲವು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಪರವಾಗಿ ರೈಲು ಸೇವೆಯನ್ನು ಪುನಃ ಆರಂಭಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಲಾಗಿತ್ತು.
ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಈ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಸಚಿವಾಲಯವು ರೈಲು ಸೇವೆಯನ್ನು ಪುನಃ ಆರಂಭಿಸಲು ಅನುಮೋದನೆ ನೀಡಿದೆ.
ಅದರಂತೆ, ಆಗಸ್ಟ್ 15, 2026ರಿಂದ ರೈಲು ಸಂಖ್ಯೆ 17333 (ಮಿರಜ್–ಕ್ಯಾಸಲ್ ರಾಕ್ ಎಕ್ಸ್ಪ್ರೆಸ್) ರೈಲು ಲೊಂಡಾದಲ್ಲಿಯೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸದೆ ನೇರವಾಗಿ ಕ್ಯಾಸಲ್ ರಾಕ್ (CLR) ವರೆಗೆ ಸಂಚರಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 17334 (ಕ್ಯಾಸಲ್ ರಾಕ್–ಮಿರಜ್ ಎಕ್ಸ್ಪ್ರೆಸ್) ರೈಲು ಕೂಡ ಆಗಸ್ಟ್ 15ರಿಂದ ಕ್ಯಾಸಲ್ ರಾಕ್ನಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಈ ನಿರ್ಧಾರದಿಂದ ಜೋಯಿಡಾ, ಕ್ಯಾಸಲ್ ರಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಬಹುದೊಡ್ಡ ನೆಮ್ಮದಿ ದೊರೆಯಲಿದೆ. ಪ್ರತಿನಿತ್ಯದ ಪ್ರಯಾಣ ಸೇರಿದಂತೆ ವಿವಿಧ ಕೆಲಸಗಳಿಗಾಗಿ ರೈಲು ಸಾರಿಗೆಯನ್ನೇ ಅವಲಂಬಿಸಿರುವ ನಾಗರಿಕರಿಗೆ ರೈಲು ಸೇವೆ ಪುನರಾರಂಭವಾಗುವುದರಿಂದ ಉಂಟಾಗುತ್ತಿದ್ದ ಅನಾನುಕೂಲತೆ ನಿವಾರಣೆಯಾಗಲಿದೆ.
ಕ್ಷೇತ್ರದ ಜನರ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿ ರೈಲು ಸೇವೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಂಡಿರುವುದಕ್ಕಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಕ್ಷೇತ್ರದ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಪುನರಾರಂಭಗೊಳ್ಳುತ್ತಿರುವ ಈ ರೈಲು ಸೇವೆಯ ಸದುಪಯೋಗವನ್ನು ಈ ಭಾಗದ ಪ್ರಯಾಣಿಕರು ಹಾಗೂ ನಾಗರಿಕರು ಪಡೆದುಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಮನವಿ ಮಾಡಿದ್ದಾರೆ.


