विद्यार्थ्यांच्या शिक्षणाला हातभार; यशवंत गुंडूचे यांच्याकडून शैक्षणिक साहित्याचे वाटप.
कागाळी : खानापूर तालुक्यातील काटगाळी येथील सामाजिक कार्यकर्ते यशवंत गुंडूचे यांनी सामाजिक बांधिलकी जपत यावर्षीही शाळेतील विद्यार्थ्यांना शैक्षणिक साहित्याचे वाटप केले. त्यांच्या या उपक्रमामुळे गरजू विद्यार्थ्यांना शैक्षणिक साहित्याची मदत मिळाली असून, विद्यार्थ्यांच्या शिक्षणाला मोठा हातभार लागला आहे.
यशवंत गुंडूचे हे मागील तीन वर्षांपासून दरवर्षी शाळेतील विद्यार्थ्यांना शैक्षणिक साहित्याचे वाटप करीत आहेत. यंदाही त्यांनी विद्यार्थ्यांसाठी सुमारे 80 ते 100 वह्या, पेन तसेच इतर आवश्यक शैक्षणिक साहित्याचे वितरण केले. विद्यार्थ्यांना शिक्षणासाठी आवश्यक साहित्य उपलब्ध व्हावे आणि आर्थिक अडचणींमुळे त्यांच्या शिक्षणात अडथळा निर्माण होऊ नये, या उद्देशाने हा उपक्रम राबविण्यात आला.
यावेळी विद्यार्थ्यांना शैक्षणिक साहित्याचे वाटप करण्यात आल्यानंतर शिक्षकांनी यशवंत गुंडूचे यांच्या सामाजिक कार्याचे कौतुक केले. विद्यार्थ्यांनीही या उपक्रमाबद्दल आनंद व्यक्त केला.
या कार्यक्रमास शाळेतील शिक्षकवर्ग, विद्यार्थी तसेच ग्रामस्थ मोठ्या संख्येने उपस्थित होते. सामाजिक कार्याच्या माध्यमातून विद्यार्थ्यांना प्रोत्साहन देण्याचा यशवंत गुंडूचे यांचा हा उपक्रम परिसरात कौतुकाचा विषय ठरत आहे.
ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೆರವು ; ಯಶವಂತ ಗುಂಡೂಚೆ ಅವರಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ..
ಕಾಟಗಾಳಿ : ಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಯಶವಂತ ಗುಂಡೂಚೆ ಅವರು ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದು, ಈ ವರ್ಷವೂ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅವರ ಈ ಉಪಕ್ರಮದಿಂದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ಸಹಾಯ ದೊರೆತಿದ್ದು, ಅವರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.
ಯಶವಂತ ಗುಂಡೂಚೆ ಅವರು ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಈ ವರ್ಷವೂ ಅವರು ವಿದ್ಯಾರ್ಥಿಗಳಿಗಾಗಿ ಸುಮಾರು 80ರಿಂದ 100 ನೋಟ್ಬುಕ್ಗಳು, ಪೆನ್ನುಗಳು ಹಾಗೂ ಇತರ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಅಗತ್ಯವಿರುವ ಸಾಮಗ್ರಿಗಳು ಸುಲಭವಾಗಿ ಲಭ್ಯವಾಗಬೇಕು ಹಾಗೂ ಆರ್ಥಿಕ ತೊಂದರೆಗಳಿಂದಾಗಿ ಅವರ ಶಿಕ್ಷಣಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ಮೂಡಿಸುವುದು ಹಾಗೂ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಯಶವಂತ ಗುಂಡೂಚೆ ಅವರು ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದ ಬಳಿಕ ಶಾಲೆಯ ಶಿಕ್ಷಕರು ಯಶವಂತ ಗುಂಡೂಚೆ ಅವರ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಕೂಡ ಈ ಉಪಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯದ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಯಶವಂತ ಗುಂಡೂಚೆ ಅವರ ಈ ಉಪಕ್ರಮವು ಕಾಟಗಾಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.



