खानापूरच्या हेब्बाळमधील दाम्पत्यावर सांगलीत जीवघेणा हल्ला; पत्नीचा मृत्यू, पती गंभीर.
खानापूर : खानापूर तालुक्यातील हेब्बाळ येथील मूळ रहिवासी असलेल्या दाम्पत्यावर सांगली जिल्ह्यातील कुपवाड एमआयडीसी परिसरातील विघ्नहर्ता शांती कॉलनी येथे हातोडी व चाकूने जीवघेणा हल्ला करण्यात आला. या हल्ल्यात पत्नी मनीषा मोहन केसरेकर (वय 37) यांचा मृत्यू झाला असून त्यांचे पती मोहन नागाप्पा केसरेकर हे गंभीर जखमी झाले आहेत. त्यांच्यावर रुग्णालयातील अतिदक्षता विभागात उपचार सुरू असून त्यांची प्रकृती चिंताजनक असल्याची माहिती मिळाली आहे.
या प्रकरणातील संशयित आरोपी फरीद अब्दुल शेख (वय 52) याला घटना घडल्यानंतर अवघ्या दोन तासांत पोलिसांनी ताब्यात घेतल्याची माहिती आहे.
मिळालेल्या माहितीनुसार, हेब्बाळ येथील मोहन केसरेकर हे गवंडी कामाच्या निमित्ताने सांगली जिल्ह्यातील कुपवाड एमआयडीसी परिसरात वास्तव्यास होते. त्यांनी विघ्नहर्ता शांती कॉलनी येथे नवीन घर बांधले असून तेथे पत्नी मनीषा, 11 वर्षांची मुलगी आणि 7 वर्षांचा मुलगा यांच्यासह राहत होते. मोहन हे परिसरात गवंडी काम करून कुटुंबाचा उदरनिर्वाह करत होते.
कचरा टाकण्याच्या कारणावरून मोहन केसरेकर आणि शेजारी राहणारे फरीद अब्दुल शेख यांच्यात यापूर्वीही किरकोळ वाद होत असल्याचे सांगण्यात येते. शनिवारी, 15 ऑगस्ट 2026 रोजी सकाळी साडेसहा वाजण्याच्या सुमारास पुन्हा कचरा टाकण्याच्या कारणावरून दोघांमध्ये वाद झाला.
या वादानंतर फरीद अब्दुल शेख याने हातोडी आणि चाकू आणून मोहन केसरेकर यांच्या डोक्यावर हातोडीने प्रहार केल्याचे सांगण्यात येते. या हल्ल्यात मोहन गंभीर जखमी होऊन जागीच कोसळले. त्यानंतर आरोपीने मनीषा केसरेकर यांच्या पोटावर चाकूने वार केल्याची माहिती आहे. या हल्ल्यात त्या गंभीर जखमी झाल्या. त्यांना उपचारासाठी रुग्णालयात दाखल करण्यात आले; मात्र उपचारादरम्यान त्यांचा मृत्यू झाला.
घटनेनंतर आरोपी घटनास्थळावरून पसार झाला. दरम्यान, सांगलीचे पोलीस अधीक्षक तुषार दोषी यांच्या मार्गदर्शनाखाली पोलिसांनी तपासाची सूत्रे वेगाने हलवली. गुप्त माहितीच्या आधारे पोलिसांनी शोध घेत आरोपीला एका पडक्या घरातून ताब्यात घेतल्याची माहिती आहे. पोलिसांकडून या प्रकरणाचा पुढील तपास सुरू आहे.
दरम्यान, या घटनेच्या पार्श्वभूमीवर मिरज येथे रविवारी विविध हिंदू संघटनांच्या वतीने मोर्चा काढण्यात येणार असल्याची माहिती मिळाली आहे. त्यामुळे या परिसरात पोलिसांकडून खबरदारी घेतली जात आहे.
मनीषा केसरेकर यांचा मृतदेह त्यांच्या मूळ गावी हेब्बाळ, ता. खानापूर येथे रविवारी 16 ऑगस्ट 2026 रोजी आणण्यात येणार असल्याची माहिती मिळाली आहे. त्यांच्यावर हेब्बाळ येथे अंत्यसंस्कार करण्यात येणार असून अंत्यविधीची निश्चित वेळ अद्याप समोर आलेली नाही.
या घटनेमुळे हेब्बाळसह खानापूर तालुक्यात हळहळ व्यक्त होत असून, दोन लहान मुलांच्या डोक्यावरून आईचे छत्र हरपल्याने परिसरात शोककळा पसरली आहे. दरम्यान, गंभीर जखमी असलेल्या मोहन केसरेकर यांच्यावर अतिदक्षता विभागात उपचार सुरू असून त्यांच्या प्रकृतीकडे नातेवाईक आणि ग्रामस्थांचे लक्ष लागले आहे.
ಖಾನಾಪುರ ತಾಲೂಕಿನ ಹೆಬ್ಬಾಳ ಊರಿನ ದಂಪತಿಗಳ ಮೇಲೆ ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಮಾರಣಾಂತಿಕ ಹಲ್ಲೆ; ಪತ್ನಿ ಸಾವು, ಪತಿಗೆ ಗಂಭೀರ ಗಾಯ.
ಖಾನಾಪುರ : ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲ ನಿವಾಸಿಗಳಾಗಿರುವ ದಂಪತಿಗಳ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡ ಎಂಐಡಿಸಿ ಪರಿಸರದ ವಿಘ್ನಹರ್ತಾ ಶಾಂತಿ ಕಾಲನಿಯಲ್ಲಿ ಸುತ್ತಿಗೆ ಹಾಗೂ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆದಿದೆ. ಈ ದಾಳಿಯಲ್ಲಿ ಪತ್ನಿ ಮನಿಷಾ ಮೋಹನ್ ಕೇಸರೇಕರ್ (ವಯಸ್ಸು 37) ಮೃತಪಟ್ಟಿದ್ದು, ಅವರ ಪತಿ ಮೋಹನ್ ನಾಗಪ್ಪ ಕೇಸರೇಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಮೇಲೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಶಂಕಿತ ಆರೋಪಿ ಫರೀದ್ ಅಬ್ದುಲ್ ಶೇಖ್ (ವಯಸ್ಸು 52)ನನ್ನು ಘಟನೆ ನಡೆದ ಕೇವಲ ಎರಡು ಗಂಟೆಗಳಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಹೆಬ್ಬಾಳ ಗ್ರಾಮದ ಮೋಹನ್ ಕೇಸರೇಕರ್ ಅವರು ಗೌಂಡಿ ಕೆಲಸದ ನಿಮಿತ್ತ ಸಾಂಗ್ಲಿ ಜಿಲ್ಲೆಯ ಕುಪವಾಡ ಎಂಐಡಿಸಿ ಪ್ರದೇಶದಲ್ಲಿ ವಾಸವಾಗಿದ್ದರು. ಅವರು ವಿಘ್ನಹರ್ತಾ ಶಾಂತಿ ಕಾಲನಿಯಲ್ಲಿ ನೂತನ ಮನೆ ನಿರ್ಮಿಸಿಕೊಂಡಿದ್ದು, ಅಲ್ಲಿ ಪತ್ನಿ ಮನಿಷಾ, 11 ವರ್ಷದ ಮಗಳು ಹಾಗೂ 7 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದರು. ಮೋಹನ್ ಅವರು ಸುತ್ತಮುತ್ತಲಿನ ಪ್ರದೇಶದಲ್ಲಿ ಗೌಂಡಿ ಕೆಲಸ ಮಾಡಿಕೊಂಡು ಕುಟುಂಬದ ಜೀವನ ನಿರ್ವಹಿಸುತ್ತಿದ್ದರು.
ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮೋಹನ್ ಕೇಸರೇಕರ್ ಹಾಗೂ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಫರೀದ್ ಅಬ್ದುಲ್ ಶೇಖ್ ಅವರ ನಡುವೆ ಈ ಹಿಂದೆಯೂ ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಶನಿವಾರ, 15 ಆಗಸ್ಟ್ 2026ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಮತ್ತೆ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಫರೀದ್ ಅಬ್ದುಲ್ ಶೇಖ್ ಸುತ್ತಿಗೆ ಹಾಗೂ ಚಾಕುವನ್ನು ತಂದು ಮೋಹನ್ ಕೇಸರೇಕರ್ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ದಾಳಿಯಿಂದ ಮೋಹನ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ನಂತರ ಆರೋಪಿಯು ಮನಿಷಾ ಕೇಸರೇಕರ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಈ ಹಿನ್ನೆಲೆ ಸಾಂಗ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ತುಷಾರ್ ದೋಷಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ. ದೊರೆತ ಗುಪ್ತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯ ನಡೆಸಿ, ಆರೋಪಿಯನ್ನು ಒಂದು ಪಾಳುಬಿದ್ದ ಮನೆಯಿಂದ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ, ಘಟನೆಯ ಹಿನ್ನೆಲೆಯಲ್ಲಿ ಮಿರಜ್ನಲ್ಲಿ ಭಾನುವಾರ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೃತ ಮನಿಷಾ ಕೇಸರೇಕರ್ ಅವರ ಮೃತದೇಹವನ್ನು ಅವರ ಮೂಲ ಗ್ರಾಮವಾದ ಹೆಬ್ಬಾಳ, ತಾ. ಖಾನಾಪುರಕ್ಕೆ ಭಾನುವಾರ 16 ಆಗಸ್ಟ್ 2026ರಂದು ತರಲಾಗುವುದು ಎಂದು ತಿಳಿದುಬಂದಿದೆ. ಹೆಬ್ಬಾಳದಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಆದರೆ ಅಂತ್ಯಕ್ರಿಯೆಯ ನಿಖರ ಸಮಯ ಇನ್ನೂ ತಿಳಿದುಬಂದಿಲ್ಲ.
ಈ ಘಟನೆಯಿಂದ ಹೆಬ್ಬಾಳ ಸೇರಿದಂತೆ ಖಾನಾಪುರ ತಾಲೂಕಿನಾದ್ಯಂತ ತೀವ್ರ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ. ಇಬ್ಬರು ಚಿಕ್ಕ ಮಕ್ಕಳ ತಲೆಯ ಮೇಲಿದ್ದ ತಾಯಿಯ ನೆರಳು ಕಳೆದುಹೋಗಿರುವುದರಿಂದ ಗ್ರಾಮಸ್ಥರು ಹಾಗೂ ಸಂಬಂಧಿಕರಲ್ಲಿ ಶೋಕ ಮಡುಗಟ್ಟಿದೆ.
ಇನ್ನೊಂದೆಡೆ, ಗಂಭೀರವಾಗಿ ಗಾಯಗೊಂಡಿರುವ ಮೋಹನ್ ಕೇಸರೇಕರ್ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಆತಂಕದಿಂದ ಮಾಹಿತಿ ನಿರೀಕ್ಷಿಸುತ್ತಿದ್ದಾರೆ.



