TP व ZP पदांसाठी प्रामाणिक, स्वच्छ चारित्र्याच्या उमेदवारांचीच निवड करा : रमेश धबाले.
खानापूर : प्रतिनिधी
खानापूर तालुका पंचायत (TP) आणि जिल्हा पंचायत (ZP) निवडणुकीची घोषणा होऊन आरक्षण जाहीर झाले आहे. आरक्षणाची प्रक्रिया लवकरच अंतिम होणार असल्याने तालुक्यात निवडणुकीचे बिगूल वाजले आहे. या पार्श्वभूमीवर आगामी निवडणुकीत उमेदवारांची निवड करताना जनतेने कोणत्या गुणांना प्राधान्य द्यावे, याबाबत मत व्यक्त करताना चापगाव ग्रामपंचायतीचे माजी अध्यक्ष तथा महाराष्ट्र एकीकरण समितीच्या नंदगड विभागाचे उपाध्यक्ष रमेश धबाले यांनी शिक्षण, प्रामाणिकपणा, सामाजिक बांधिलकी, निःस्वार्थी वृत्ती, विकासाची दूरदृष्टी आणि जनतेप्रती उत्तरदायित्व असलेल्या उमेदवारांनाच निवडून द्यावे, असे आवाहन केले.
खानापूर तालुक्याच्या सर्वांगीण विकासामध्ये तालुका पंचायत आणि जिल्हा पंचायत सदस्यांची भूमिका अत्यंत महत्त्वाची असते. त्यामुळे या पदांसाठी उमेदवार निवडताना केवळ आर्थिक ताकद, राजकीय प्रभाव, प्रसिद्धी किंवा निवडणुकीतील आश्वासनांना भुलून चालणार नाही. संबंधित उमेदवाराने यापूर्वी समाजासाठी केलेले कार्य, भ्रष्टाचाराविरोधातील भूमिका, सर्वसमावेशक विचारसरणी आणि भविष्यातील विकासाचे नियोजन यांचा गांभीर्याने विचार करणे आवश्यक आहे, असे धबाले यांनी स्पष्ट केले.
जनतेच्या प्रश्नांची जाण असणारा उमेदवार हवा
खानापूर तालुक्यातील ग्रामीण भागात रस्ते, पिण्याचे पाणी, शेतीसाठी सिंचन, शिक्षण, आरोग्य, रोजगार आणि अन्य मूलभूत सुविधांबाबत अनेक प्रश्न आहेत. या समस्यांची प्रत्यक्ष जाणीव असणारा आणि त्यावर उपाययोजना करण्यासाठी प्रशासनाकडे सातत्याने पाठपुरावा करणारा लोकप्रतिनिधी निवडून येणे गरजेचे आहे.
निवडणुकीच्या काळात जनतेशी संपर्क साधून विविध आश्वासने देणारे अनेक उमेदवार दिसतात. मात्र, निवडणूक झाल्यानंतरही जनतेच्या संपर्कात राहून त्यांच्या समस्या सोडविण्यासाठी प्रामाणिक प्रयत्न करणारा प्रतिनिधी अधिक महत्त्वाचा ठरतो. प्रत्येक गावाच्या गरजा समजून घेणे, विकासकामांचे योग्य नियोजन करणे आणि मंजूर कामे वेळेत तसेच दर्जेदार पद्धतीने पूर्ण होतील याकडे लक्ष देणे ही लोकप्रतिनिधींची जबाबदारी आहे.
सार्वजनिक निधीच्या वापरात पारदर्शकता हवी
तालुका पंचायत आणि जिल्हा पंचायत सदस्यांना उपलब्ध असलेल्या अधिकारांचा आणि निधीचा वापर सार्वजनिक हितासाठीच झाला पाहिजे. विकासकामांमध्ये पारदर्शकता राखणे, निकृष्ट कामांविरोधात आवाज उठविणे आणि सरकारी योजनांचा लाभ पात्र नागरिकांपर्यंत पोहोचविण्यासाठी प्रयत्न करणे, ही लोकप्रतिनिधींची महत्त्वाची कर्तव्ये आहेत.
गावागावांत पक्षीय अथवा वैयक्तिक मतभेदांच्या आधारे भेदभाव न करता विकासाच्या गरजेनुसार कामांना प्राधान्य दिले पाहिजे. खानापूर तालुक्यातील मराठी भाषिकांच्या शैक्षणिक व भाषिक प्रश्नांसह सर्व समाजघटकांच्या मूलभूत समस्यांबाबतही संवेदनशील आणि न्याय्य भूमिका घेणारा उमेदवार असणे आवश्यक आहे.
आर्थिक प्रलोभनांना बळी न पडता विचारपूर्वक मतदान करा
जनतेने उमेदवाराचे सामाजिक कार्य, प्रामाणिकपणा, कामाचा अनुभव, निःस्वार्थी वृत्ती, प्रशासकीय कामकाजाची जाण, लोकांच्या प्रश्नांबाबतची संवेदनशीलता आणि विकासाचे नियोजन या निकषांवर मूल्यमापन करावे. केवळ वैयक्तिक संबंध, आर्थिक प्रलोभने किंवा भावनिक आवाहनांच्या आधारे मतदानाचा निर्णय घेणे टाळावे.
आपण निवडून दिलेला प्रतिनिधी आपल्या समस्या सोडविण्यासाठी तत्पर असावा; निवडणूक संपल्यानंतर जनतेकडे पाठ फिरवणारा नसावा. त्याचे चारित्र्य स्वच्छ असावे, भ्रष्टाचाराला पाठीशी घालणारा नसावा आणि जनतेच्या पैशाचा विनियोग योग्य पद्धतीने होतो की नाही, याबाबत जागरूक असावा.
लोकप्रतिनिधी हे जनतेचे सेवक आहेत, सत्तेचे मालक नाहीत. त्यामुळे आगामी TP व ZP निवडणुकीत उमेदवारांची निवड करताना शिक्षण, प्रामाणिकपणा, सर्वसमावेशक विचारसरणी, जनसेवेची वृत्ती आणि विकासाप्रती असलेली बांधिलकी यांना सर्वोच्च महत्त्व दिले पाहिजे.
जनतेने जबाबदारीने लोकप्रतिनिधी निवडावा
खानापूर तालुक्याचे भविष्य घडविण्याची संधी जनतेच्या हातात आहे. त्यामुळे मतदारांनी जागरूक राहून, उमेदवारांच्या प्रत्यक्ष कार्याचा विचार करून आणि कोणत्याही प्रलोभनाला बळी न पडता योग्य प्रतिनिधी निवडावा, असे आवाहन रमेश धबाले यांनी केले आहे.
ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ (ಟಿ.ಪಿ. ಮತ್ತು ಝಡ್.ಪಿ) ಸ್ಥಾನಗಳಿಗೆ ಪ್ರಾಮಾಣಿಕ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿ – ಸಾಮಾಜಿಕ ಕಾರ್ಯಕರ್ತ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು.
ಖಾನಾಪುರ : ಪ್ರತಿನಿಧಿ
ತಾಲೂಕು ಪಂಚಾಯಿತ (TP) ಮತ್ತು ಜಿಲ್ಲಾ ಪಂಚಾಯಿತ (ZP) ಚುನಾವಣೆ ಘೋಷಣೆಯಾಗಿದ್ದು, ಮೀಸಲಾತಿಯೂ ಪ್ರಕಟಗೊಂಡಿದೆ. ಇದು ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದ್ದು, ಒಟ್ಟಾರೆ ಚುನಾವಣೆಯ ಕಣ ರಂಗೇರಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹೇಗಿರಬೇಕು ಎಂಬ ಕುರಿತು ಜನಾಭಿಪ್ರಾಯ ಸಂಗ್ರಹಿಸಿದಾಗ, ಅಭ್ಯರ್ಥಿಗಳ ಆಯ್ಕೆಯಲ್ಲಿ ಶಿಕ್ಷಣ, ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, ನಿಸ್ವಾರ್ಥ ಸೇವೆ, ಅಭಿವೃದ್ಧಿಯ ದೂರದೃಷ್ಟಿ ಹಾಗೂ ಜನರ ಮುಂದೆ ಉತ್ತರದಾಯಿತ್ವದ ಮನೋಭಾವಕ್ಕೆ ಆದ್ಯತೆ ನೀಡಬೇಕು ಎಂದು ಚಾಪಗಾಂವ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಂದಗಡ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಧಬಾಲೆ ಅಭಿಪ್ರಾಯಪಟ್ಟಿದ್ದಾರೆ.
ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಈ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕೇವಲ ಆರ್ಥಿಕ ಶಕ್ತಿ, ರಾಜಕೀಯ ಪ್ರಭಾವ, ಪ್ರಚಾರ ಅಥವಾ ಚುನಾವಣಾ ಭರವಸೆಗಳನ್ನು ಪರಿಗಣಿಸದೆ, ಅಭ್ಯರ್ಥಿಗಳು ಈ ಹಿಂದೆ ಸಮಾಜಕ್ಕಾಗಿ ಮಾಡಿದ ಕಾರ್ಯಗಳು, ಭ್ರಷ್ಟಾಚಾರದ ವಿರುದ್ಧದ ನಿಲುವು, ಎಲ್ಲರನ್ನು ಒಳಗೊಳ್ಳುವ ಮನೋಭಾವ ಹಾಗೂ ಭವಿಷ್ಯದ ಅಭಿವೃದ್ಧಿಯ ಕುರಿತು ಅವರಿಗಿರುವ ಸ್ಪಷ್ಟ ದೃಷ್ಟಿಕೋನವನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಜನರ ಸಮಸ್ಯೆಗಳನ್ನು ಅರಿತಿರುವ ಅಭ್ಯರ್ಥಿಗಳು ಬೇಕು
ಖಾನಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಕೃಷಿ ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳ ಅರಿವಿರುವ ಮತ್ತು ಅವುಗಳಿಗೆ ಪರಿಹಾರ ಕಲ್ಪಿಸಲು ಆಡಳಿತದ ಮೇಲೆ ನಿರಂತರವಾಗಿ ಒತ್ತಡ ತಂದು, ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಜನರನ್ನು ಸಂಪರ್ಕಿಸಿ ವಿವಿಧ ಭರವಸೆಗಳನ್ನು ನೀಡುವ ಅಭ್ಯರ್ಥಿಗಳು ಹಲವರು ಕಾಣಸಿಗುತ್ತಾರೆ. ಆದರೆ ಚುನಾವಣೆ ಮುಗಿದ ನಂತರವೂ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಪ್ರತಿನಿಧಿಯೇ ನಿಜವಾದ ಅರ್ಥದಲ್ಲಿ ಜನಪರ ನಾಯಕನಾಗುತ್ತಾನೆ.
ಪ್ರತಿ ಗ್ರಾಮದ ಅಗತ್ಯಗಳನ್ನು ಅರಿತುಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಯೋಜಿಸುವುದು ಹಾಗೂ ಮಂಜೂರಾದ ಕಾಮಗಾರಿಗಳು ನಿಗದಿತ ಸಮಯದಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಪ್ರಮುಖ ಕರ್ತವ್ಯವಾಗಿದೆ.
ಸಾರ್ವಜನಿಕ ನಿಧಿಯ ಬಳಕೆಯಲ್ಲಿ ಪಾರದರ್ಶಕತೆ ಅಗತ್ಯ
ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಲಭ್ಯವಿರುವ ಅಧಿಕಾರ ಹಾಗೂ ಅನುದಾನವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಬೇಕು. ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಪಾಡುವುದು, ಕಳಪೆ ಕಾಮಗಾರಿಗಳ ವಿರುದ್ಧ ಧ್ವನಿ ಎತ್ತುವುದು ಮತ್ತು ಸರ್ಕಾರಿ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಯತ್ನಿಸುವುದು ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿಯಾಗಿದೆ.
ಅದೇ ರೀತಿ, ಗ್ರಾಮಗಳಲ್ಲಿ ಪಕ್ಷೀಯ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ತಾರತಮ್ಯ ಮಾಡದೆ, ಅಭಿವೃದ್ಧಿಯ ಅಗತ್ಯಕ್ಕೆ ಅನುಗುಣವಾಗಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಖಾನಾಪುರ ತಾಲೂಕಿನ ಮರಾಠಿ ಭಾಷಿಕರ ಶೈಕ್ಷಣಿಕ ಮತ್ತು ಭಾಷಿಕ ಸಮಸ್ಯೆಗಳ ಜೊತೆಗೆ ಎಲ್ಲ ಸಮಾಜದ ಜನರ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಸಂವೇದನಾಶೀಲ ನಿಲುವು ಹೊಂದಿರಬೇಕು ಎಂದು ರಮೇಶ್ ಧಬಾಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನರು ಜಾಗೃತಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು
ಅಭ್ಯರ್ಥಿಯ ಸಾಮಾಜಿಕ ಸೇವೆ, ಪ್ರಾಮಾಣಿಕತೆ, ಕಾರ್ಯಾನುಭವ, ನಿಸ್ವಾರ್ಥ ಸೇವಾ ಮನೋಭಾವ, ಆಡಳಿತಾತ್ಮಕ ಕಾರ್ಯವೈಖರಿಯ ಅರಿವು, ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹಾಗೂ ಅಭಿವೃದ್ಧಿಯ ಯೋಜನೆಗಳನ್ನು ಪರಿಶೀಲಿಸಿ ಜನರು ತಮ್ಮ ಬೆಂಬಲ ವ್ಯಕ್ತಪಡಿಸಬೇಕು.
ಕೇವಲ ವೈಯಕ್ತಿಕ ಸಂಬಂಧಗಳು, ಹಣದ ಆಮಿಷಗಳು ಅಥವಾ ಭಾವನಾತ್ಮಕ ಮನವಿಗಳಿಗೆ ಮರುಳಾಗದೆ, ಅಭ್ಯರ್ಥಿಯ ನೈಜ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ. ನಾವು ಆಯ್ಕೆ ಮಾಡುವ ಅಭ್ಯರ್ಥಿ ನಮ್ಮ ಸಮಸ್ಯೆಗಳನ್ನು ಪರಿಹರಿಸುವವನಾಗಿರಬೇಕು; ಚುನಾವಣೆ ಮುಗಿದ ಬಳಿಕ ಜನರಿಂದ ದೂರವಾಗುವವನಾಗಿರಬಾರದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಭ್ಯರ್ಥಿಯು ಸ್ವಚ್ಛ ವ್ಯಕ್ತಿತ್ವ ಹೊಂದಿರಬೇಕು ಹಾಗೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವವನಾಗಿರಬಾರದು ಎಂದು ಅವರು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಜನರ ಸೇವಕರಾಗಿದ್ದಾರೆ. ಆದ್ದರಿಂದ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶಿಕ್ಷಣ, ಪ್ರಾಮಾಣಿಕತೆ, ಸಮಾನತೆಯ ಮನೋಭಾವ, ಜನಸೇವೆಯ ಬದ್ಧತೆ ಹಾಗೂ ಅಭಿವೃದ್ಧಿಯ ಕುರಿತ ಕಾಳಜಿಗೆ ಅತ್ಯುನ್ನತ ಆದ್ಯತೆ ನೀಡಬೇಕು. ಖಾನಾಪುರ ತಾಲೂಕಿನ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಜನರು ಯೋಚಿಸಿ, ಜವಾಬ್ದಾರಿಯಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ರಮೇಶ್ ಧಬಾಲೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

