हुलिकेरी तलावात बुडून 18 वर्षीय युवकाचा मृत्यू; कक्केरी जत्रेसाठी आला होता नातेवाइकांकडे!
कक्केरी : प्रतिनिधी
खानापूर तालुक्याच्या जवळ असलेल्या हुलिकेरी गावातील इंदिरम्मा तलावात पोहण्यासाठी गेलेल्या 18 वर्षीय युवकाचा पाण्यात बुडून दुर्दैवी मृत्यू झाल्याची घटना बुधवारी (दि. 21 ऑक्टोबर) रोजी घडली. गणेश केदार्जी पुजारी (वय 18, रा. तडकोड, ता. धारवाड) असे मृत युवकाचे नाव आहे.

कक्केरी येथील श्री बिष्टादेवी यात्रेनिमित्त गणेश आपल्या नातेवाइकांच्या घरी हुलिकेरी येथे आला होता. सणानिमित्त कुटुंबीयांसमवेत तो तलावावर गेला होता. यावेळी गणेश मोठ्या तलावात पोहण्यासाठी उतरला. मात्र, तलावातील पाण्याच्या खोलीचा अंदाज न आल्याने तो पाण्यात बुडाला. प्रत्यक्षदर्शींनी दिलेल्या माहितीनुसार, पाण्याच्या खोलीचा अंदाज न आल्याने घाबरून त्याचा बुडून मृत्यू झाला.
या दुर्दैवी घटनेमुळे परिसरात हळहळ व्यक्त होत असून, गणेशच्या कुटुंबीयांवर दुःखाचा डोंगर कोसळला आहे.
या प्रकरणी अळणावर पोलीस ठाण्यात गुन्ह्याची नोंद करण्यात आली आहे.
ಹುಲಿಕೇರಿ ಕೆರೆಯಲ್ಲಿ ಮುಳುಗಿ 18 ವರ್ಷದ ಯುವಕ ಸಾವು; ಕಕ್ಕೇರಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ!
ಕಕ್ಕೇರಿ : ಪ್ರತಿನಿಧಿ
ಖಾನಾಪುರ ತಾಲೂಕಿನ ಸಮೀಪದ ಹುಲಿಕೇರಿ ಗ್ರಾಮದ ಇಂದಿರಮ್ಮ ಕೆರೆಯಲ್ಲಿ ಈಜಲು ತೆರಳಿದ್ದ 18 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ ಘಟನೆ ಬುಧವಾರ (ಅ. 21) ನಡೆದಿದೆ. ಮೃತ ಯುವಕನನ್ನು ಧಾರವಾಡ ತಾಲೂಕಿನ ತಡಕೋಡ ಗ್ರಾಮದ ನಿವಾಸಿ ಗಣೇಶ ಕೇದಾರ್ಜಿ ಪೂಜಾರಿ (18) ಎಂದು ಗುರುತಿಸಲಾಗಿದೆ.
ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆಯ ನಿಮಿತ್ತ ಗಣೇಶ ತನ್ನ ಸಂಬಂಧಿಕರ ಮನೆಗೆ ಹುಲಿಕೇರಿಗೆ ಬಂದಿದ್ದನು. ಹಬ್ಬದ ಪ್ರಯುಕ್ತ ಕುಟುಂಬದ ಸದಸ್ಯರೊಂದಿಗೆ ಆತ ಕೆರೆಯ ಬಳಿಗೆ ತೆರಳಿದ್ದನು. ಈ ಸಂದರ್ಭದಲ್ಲಿ ಗಣೇಶ ದೊಡ್ಡ ಕೆರೆಯಲ್ಲಿ ಈಜಲು ನೀರಿಗಿಳಿದಿದ್ದನು. ಆದರೆ, ಕೆರೆಯಲ್ಲಿನ ನೀರಿನ ಆಳದ ಅಂದಾಜು ಸಿಗದೆ ಆತ ನೀರಿನಲ್ಲಿ ಮುಳುಗಿದನು.
ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ, ಕೆರೆಯ ನೀರಿನ ಆಳದ ಅರಿವಿಲ್ಲದೆ ಗಣೇಶ ನೀರಿಗಿಳಿದಿದ್ದನು. ಆಳವಾದ ನೀರಿನಲ್ಲಿ ಸಿಲುಕಿಕೊಂಡ ಆತ ಗಾಬರಿಗೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯಿಂದ ಹುಲಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಯುವಕ ಗಣೇಶನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಜಾತ್ರೆಯ ಸಂಭ್ರಮಕ್ಕಾಗಿ ಸಂಬಂಧಿಕರ ಮನೆಗೆ ಬಂದಿದ್ದ ಯುವಕನ ಸಾವು ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

