तोलगी येथे सात वर्षांनंतर लक्ष्मी यात्रेला जल्लोषात प्रारंभ; हजारो भाविकांची उपस्थिती.
खानापूर : खानापूर तालुक्यातील तोलगी येथे तब्बल सात वर्षांनंतर भरविण्यात आलेली लक्ष्मी यात्रा सध्या उत्साहपूर्ण वातावरणात सुरू आहे. दिनांक 21 एप्रिलपासून यात्रेला प्रारंभ झाला असून 23 एप्रिलपासून लक्ष्मी देवीची मूर्ती तोलगी गावामध्ये पारंपरिक पद्धतीने खेळविण्यात येत आहे. 29 एप्रिलपर्यंत देवीची मूर्ती गावात खेळविण्यात येणार असून 30 एप्रिल रोजी यात्रेची सांगता होणार आहे. भारतीय जनता पार्टीचे ज्येष्ठ नेते व राज्य कार्यकारिणी सदस्य प्रमोद सूर्यकांत कोचेरी यांनी रविवारी यात्रा स्थळाला भेट देऊन लक्ष्मी देवीचे दर्शन घेतले. यावेळी त्यांनी ग्रामस्थ व भाविकांना यात्रेच्या शुभेच्छा दिल्या.
या यात्रेत दररोज हजारो भाविक मोठ्या श्रद्धेने सहभागी होत असून गावात भक्तिमय वातावरण निर्माण झाले आहे. विविध धार्मिक कार्यक्रम, पूजा-अर्चा आणि पारंपरिक विधींनी यात्रेला रंगत आली आहे.
तोलगी गावातील लक्ष्मी यात्रा पारंपरिकरित्या दर पाच वर्षांनी भरविण्यात येते. मात्र यावर्षी सात वर्षांनंतर यात्रा आयोजित करण्यात आली आहे. या यात्रेचे विशेष वैशिष्ट्य म्हणजे मंदिरामध्ये एक लक्ष्मी देवीची मूर्ती कायमस्वरूपी विराजमान आहे, तर गावामध्ये खेळविण्यात येणारी दुसरी लक्ष्मी देवीची मूर्ती त्रिमुखी (तीन तोंडांची) आहे. ही त्रिमुखी मूर्ती 29 एप्रिलपर्यंत गावात खेळविण्यात येणार आहे.
भाविकांनी यात्रा स्थळाला भेट देऊन देवीचे दर्शन व यात्रोत्सवाचा आनंद घेण्याचे आवाहन तोलगी ग्रामस्थांनी केले आहे.
ತೊಲಗಿ ಗ್ರಾಮದಲ್ಲಿ ಏಳು ವರ್ಷಗಳ ನಂತರ ಲಕ್ಷ್ಮೀ ಜಾತ್ರೆ ಉತ್ಸಾಹ ಹಾಗೂ ಜಲ್ಲೋಷದಿಂದ ಆರಂಭ; ಸಾವಿರಾರು ಭಕ್ತರ ಉಪಸ್ಥಿತಿ
ಖಾನಾಪೂರ : ಖಾನಾಪೂರ ತಾಲ್ಲೂಕಿನ ತೊಲಗಿ ಗ್ರಾಮದಲ್ಲಿ ಏಳು ವರ್ಷಗಳ ಬಳಿಕ ಆಯೋಜಿಸಲಾದ ಲಕ್ಷ್ಮೀ ಜಾತ್ರೆ ಸದ್ಯ ಅತ್ಯಂತ ಉತ್ಸಾಹದ ವಾತಾವರಣದಲ್ಲಿ ನಡೆಯುತ್ತಿದೆ. ಏಪ್ರಿಲ್ 21ರಿಂದ ಜಾತ್ರೆಗೆ ಚಾಲನೆ ದೊರೆತಿದ್ದು, ಏಪ್ರಿಲ್ 23ರಿಂದ ಲಕ್ಷ್ಮೀ ದೇವಿಯ ಮೂರ್ತಿಯನ್ನು ತೊಲಗಿ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ಊರಾಟ ಮಾಡಲಾಗುತ್ತಿದೆ. ಏಪ್ರಿಲ್ 29ರವರೆಗೆ ದೇವಿಯ ಮೂರ್ತಿಯನ್ನು ಗ್ರಾಮದಲ್ಲಿ ಹೊನ್ನಾಟ ನಡೆಯಲಿದ್ದು, ಏಪ್ರಿಲ್ 30ರಂದು ಜಾತ್ರೆಯ ಸಮಾರೋಪ ನಡೆಯಲಿದೆ.
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಸೂರ್ಯಕಾಂತ್ ಕೋಚೇರಿ ಅವರು ಭಾನುವಾರ ಜಾತ್ರಾ ಸ್ಥಳಕ್ಕೆ ಭೇಟಿ ನೀಡಿ ಲಕ್ಷ್ಮೀ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಗ್ರಾಮಸ್ಥರು ಹಾಗೂ ಭಕ್ತರಿಗೆ ಜಾತ್ರೆಯ ಶುಭಾಶಯಗಳನ್ನು ತಿಳಿಸಿದರು.
ಈ ಜಾತ್ರೆಯಲ್ಲಿ ಪ್ರತಿದಿನ ಸಾವಿರಾರು ಭಕ್ತರು ಭಕ್ತಿಭಾವದಿಂದ ಭಾಗವಹಿಸುತ್ತಿದ್ದು, ಗ್ರಾಮದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಅರ್ಚನೆಗಳು ಹಾಗೂ ಸಂಪ್ರದಾಯಬದ್ಧ ವಿಧಿವಿಧಾನಗಳಿಂದ ಜಾತ್ರೆಗೆ ವಿಶೇಷ ಮೆರುಗು ಬಂದಿದೆ.
ತೊಲಗಿ ಗ್ರಾಮದ ಲಕ್ಷ್ಮೀ ಜಾತ್ರೆ ಸಂಪ್ರದಾಯದಂತೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ಈ ಬಾರಿ ಏಳು ವರ್ಷಗಳ ಬಳಿಕ ಜಾತ್ರೆ ಆಯೋಜಿಸಲಾಗಿದೆ. ಈ ಜಾತ್ರೆಯ ವಿಶೇಷತೆ ಎಂದರೆ, ದೇವಾಲಯದಲ್ಲಿ ಒಂದು ಲಕ್ಷ್ಮೀ ದೇವಿಯ ಮೂರ್ತಿ ಶಾಶ್ವತವಾಗಿ ಪ್ರತಿಷ್ಠಾಪಿತವಾಗಿದ್ದು, ಗ್ರಾಮದಲ್ಲಿ ಊರಾಟ ಮಾಡಲಾಗುವ ಮತ್ತೊಂದು ಲಕ್ಷ್ಮೀ ದೇವಿಯ ಮೂರ್ತಿ ತ್ರಿಮುಖಿ (ಮೂರು ಮುಖಗಳ) ಆಗಿದೆ. ಈ ತ್ರಿಮುಖಿ ಮೂರ್ತಿಯನ್ನು ಏಪ್ರಿಲ್ 29ರವರೆಗೆ ಗ್ರಾಮದಲ್ಲಿ ಹೊನ್ನಾಟ ಮಾಡಲಾಗುತ್ತದೆ.
ಭಕ್ತರು ಜಾತ್ರಾ ಸ್ಥಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಜಾತ್ರೋತ್ಸವದ ಆನಂದವನ್ನು ಅನುಭವಿಸುವಂತೆ ತೊಲಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

