गर्लगुंजी माऊली देवी यात्रा काळात बसफेऱ्या वाढविण्याची मागणी; विद्यार्थी व कामगारांचा प्रश्न मार्गी लागण्याची अपेक्षा.
खानापूर : गर्लगुंजी येथील श्री माऊली देवी यात्रा काळात तसेच यात्रेनंतरही बेळगाव–गर्लगुंजी आणि खानापूर–गर्लगुंजी या मार्गांवरील बसफेऱ्या वाढवाव्यात व सुरू असलेल्या बससेवा सुरळीत ठेवाव्यात, अशी मागणी स्थानिक नागरिकांच्या वतीने करण्यात आली आहे.
मुलांच्या परीक्षा संपल्यानंतर बेळगाव–गर्लगुंजी व खानापूर–गर्लगुंजी मार्गांवर बससेवेमध्ये अनियमितता निर्माण झाल्याचे निदर्शनास आले होते. यामुळे बेळगाव व खानापूर येथे प्रशिक्षणासाठी जाणारे विद्यार्थी तसेच कामानिमित्त प्रवास करणाऱ्या नागरिकांना मोठा त्रास सहन करावा लागत होता. याबाबत सामाजिक कार्यकर्ते व ग्राम पंचायतीचे माजी सदस्य प्रसाद पाटील यांनी डेपो मॅनेजर व डीटीओ, बेळगाव यांना पूर्वीच कल्पना दिली होती. त्यानंतर काही प्रमाणात बससेवा पूर्ववत सुरू करण्यात आली होती.
मात्र, तालुका व जिल्ह्यातील विविध यात्रा आणि इतर कारणांमुळे काही बसफेऱ्या अधूनमधून रद्द केल्या जात असल्याने पुन्हा प्रवाशांची गैरसोय होत आहे. या पार्श्वभूमीवर डीटीओ व बस डेपो व्यवस्थापक संतोष यांची भेट घेऊन निवेदन सादर करण्यात आले.
निवेदनात माऊली देवी यात्रा काळात या भागात अतिरिक्त बसफेऱ्या सुरू कराव्यात तसेच पूर्वीप्रमाणे नियमित बससेवा कायम ठेवावी, अशी मागणी करण्यात आली आहे. त्यामुळे ट्युशन व कॉलेजला जाणाऱ्या विद्यार्थ्यांना अडचण निर्माण होणार नाही तसेच बेळगाव व खानापूर येथे कामानिमित्त जाणारा कामगार वर्ग वेळेत पोहोचू शकेल, असा विश्वास व्यक्त करण्यात आला.
या वेळी माजी ग्रामपंचायत सदस्य प्रसाद पाटील, रामचंद्र लोहार, परशराम बेळगावकर, सतीश बुरुड आणि विजय लोहार उपस्थित होते.
दरम्यान, डेपो मॅनेजर संतोष यांनी या निवेदनाची दखल घेत बेळगाव बस डेपो क्रमांक 3 शी संपर्क साधला असून डीटीओ यांनीही यास मान्यता दिल्याची माहिती मिळाली आहे. त्यामुळे यात्राकाळात बससेवा अधिक सुरळीत होण्याची अपेक्षा व्यक्त केली जात आहे.
ಗರ್ಲಗುಂಜಿ ಮೌಲಿ ದೇವಿ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಬೇಡಿಕೆ; ವಿದ್ಯಾರ್ಥಿಗಳ ಹಾಗೂ ಕಾರ್ಮಿಕರ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ.
ಖಾನಾಪುರ : ಗರ್ಲಗುಂಜಿ ಗ್ರಾಮದಲ್ಲಿ ನಡೆಯುವ ಶ್ರೀ ಮೌಲಿ ದೇವಿ ಜಾತ್ರೆ ಸಂದರ್ಭದಲ್ಲಿ ಹಾಗು ಜಾತ್ರೆಯ ನಂತರವೂ ಬೆಳಗಾವಿ–ಗರ್ಲಗುಂಜಿ ಮತ್ತು ಖಾನಾಪುರ–ಗರ್ಲಗುಂಜಿ ಮಾರ್ಗಗಳಲ್ಲಿನ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸ ಬೇಕು ಹಾಗೂ ಪ್ರಸ್ತುತ ಇರುವ ಬಸ್ ಸೇವೆಯನ್ನು ನಿಯಮಿತವಾಗಿ ಮತ್ತು ಸುಗಮವಾಗಿ ನಡೆಸಬೇಕು ಎಂದು ಸ್ಥಳೀಯ ನಾಗರಿಕರ ಪರವಾಗಿ ಬೇಡಿಕೆ ಸಲ್ಲಿಸಲಾಗಿದೆ.
ಮಕ್ಕಳ ಪರೀಕ್ಷೆಗಳು ಮುಗಿದ ನಂತರ ಬೆಳಗಾವಿ–ಗರ್ಲಗುಂಜಿ ಮತ್ತು ಖಾನಾಪುರ–ಗರ್ಲಗುಂಜಿ ಮಾರ್ಗಗಳಲ್ಲಿ ಬಸ್ ಸೇವೆಯಲ್ಲಿ ಅನಿಯಮಿತತೆ ಉಂಟಾಗಿದೆ ಎಂಬುದು ಗಮನಕ್ಕೆ ಬಂದಿದೆ. ಇದರ ಪರಿಣಾಮವಾಗಿ ಬೆಳಗಾವಿ ಮತ್ತು ಖಾನಾಪುರಕ್ಕೆ ತರಬೇತಿ ಪಡೆಯಲು ಹೋಗುವ ವಿದ್ಯಾರ್ಥಿಗಳು ಹಾಗೂ ಉದ್ಯೋಗದ ನಿಮಿತ್ತ ಪ್ರಯಾಣ ಮಾಡುವ ನಾಗರಿಕರು ದೊಡ್ಡ ಮಟ್ಟದ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಪ್ರಸಾದ್ ಪಾಟೀಲ ಅವರು ಪೂರ್ವದಲ್ಲಿಯೇ ಡೆಪೋ ಮ್ಯಾನೇಜರ್ ಮತ್ತು ಡಿಟಿಒ, ಬೆಳಗಾವಿ ಅವರಿಗೆ ಮಾಹಿತಿ ನೀಡಿದ್ದರು. ನಂತರ ಕೆಲವು ಮಟ್ಟಿಗೆ ಬಸ್ ಸೇವೆಯನ್ನು ಮರು ಸ್ಥಾಪಿಸಲಾಗಿತ್ತು.
ಆದಾಗ್ಯೂ, ತಾಲೂಕು ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಜಾತ್ರೆಗಳು ಹಾಗೂ ಇತರ ಕಾರಣಗಳಿಂದಾಗಿ ಕೆಲವು ಬಸ್ ಓಡಾಟವನ್ನು ಮಧ್ಯೆಯೇ ರದ್ದುಪಡಿಸಲಾಗುತ್ತಿರುವುದರಿಂದ ಪ್ರಯಾಣಿಕರಿಗೆ ಮತ್ತೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಟಿಒ ಹಾಗೂ ಬಸ್ ಡೆಪೋ ವ್ಯವಸ್ಥಾಪಕ ಸಂತೋಷ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ.
ಮನವಿಯಲ್ಲಿ ಮೌಲಿ ದೇವಿ ಜಾತ್ರೆ ಸಂದರ್ಭದಲ್ಲಿ ಈ ಭಾಗದಲ್ಲಿ ಹೆಚ್ಚುವರಿ ಬಸ್ ಓಡಾಟವನ್ನು ಆರಂಭಿಸಬೇಕು ಹಾಗೂ ಹಿಂದಿನಂತೆ ನಿಯಮಿತ ಬಸ್ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ. ಇದರಿಂದ ಟ್ಯೂಷನ್ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಹಾಗೂ ಬೆಳಗಾವಿ ಮತ್ತು ಖಾನಾಪುರಕ್ಕೆ ಉದ್ಯೋಗದ ನಿಮಿತ್ತ ಹೋಗುವ ಕಾರ್ಮಿಕ ವರ್ಗ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪಾಟೀಲ, ರಾಮಚಂದ್ರ ಲೋಹಾರ್, ಪರಶುರಾಮ ಬೆಳಗಾವಿಕರ್, ಸತೀಶ ಬುರೂಡ್ ಮತ್ತು ವಿಜಯ ಲೋಹಾರ್ ಉಪಸ್ಥಿತರಿದ್ದರು.
ಇದೇ ವೇಳೆ, ಡೆಪೋ ಮ್ಯಾನೇಜರ್ ಸಂತೋಷ ಅವರು ಮನವಿಗೆ ಸ್ಪಂದಿಸಿ ಬೆಳಗಾವಿ ಬಸ್ ಡೆಪೋ ಸಂಖ್ಯೆ 3 ರೊಂದಿಗೆ ಸಂಪರ್ಕ ಸಾಧಿಸಿದ್ದು, ಡಿಟಿಒ ಕೂಡ ಇದಕ್ಕೆ ಅನುಮೋದನೆ ನೀಡಿರುವ ಮಾಹಿತಿ ಲಭ್ಯವಾಗಿದೆ. ಇದರಿಂದ ಜಾತ್ರೆ ಸಂದರ್ಭದಲ್ಲಿ ಬಸ್ ಸೇವೆ ಇನ್ನಷ್ಟು ಸುಗಮವಾಗುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

