चोर्ला घाटात मध्यरात्री अपघात; कार 20 फूट खोल दरीत कोसळून जळाली.
कणकुंबी : चोर्ला घाट परिसरात सोमवारी मध्यरात्री भीषण अपघात घडला. गोव्याहून बेळगावकडे येणारी एमएच-10-सीएन 8477 क्रमांकाची कार धोकादायक वळणावरून सुमारे २० फूट खोल खड्ड्यात कोसळून पेट घेतल्याने पूर्णतः जळून खाक झाली. ही घटना मंगळवारी सकाळी प्रवाशांच्या निदर्शनास आली.
कणकुंबी-चोर्ला मार्गावर असलेल्या तीव्र चढाव व वळणावर वाहनावरील नियंत्रण सुटल्याने हा अपघात घडल्याची प्राथमिक माहिती आहे. रात्रीच्या वेळी चालकाला डुलकी लागली असावी, अशी शक्यता व्यक्त केली जात आहे. नियंत्रण सुटताच कार थेट रस्त्यालगतच्या खोल नाल्यात जाऊन पडली आणि त्यानंतर तिला आग लागली.
मंगळवारी सकाळी काही प्रवाशांनी जळालेली कार पाहून घटनेची माहिती दिली. मात्र, गाडीत नेमके कोण होते, वाहन कुठून निघाले होते आणि अपघातावेळी किती जण प्रवास करत होते, याबाबत अद्याप स्पष्टता नाही. घटनास्थळी कोणतीही व्यक्ती आढळली नसल्याने अपघातानंतर चालक तेथून निघून गेला असावा, असा अंदाज वर्तवण्यात येत आहे.
या घटनेमुळे परिसरात चिंतेचे वातावरण निर्माण झाले असून अधिक तपास सुरू आहे.
ಚೋರ್ಲಾ ಘಾಟ್ನಲ್ಲಿ ಮಧ್ಯರಾತ್ರಿ ಅಪಘಾತ; ಕಾರು 20 ಅಡಿ ಆಳದ ಕಂದಕಕ್ಕೆ ಬಿದ್ದು ಸುಟ್ಟು ಭಸ್ಮ.
ಕಣಕುಂಬಿ : ಚೋರ್ಲಾ ಘಾಟ್
ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿದ್ದು. ಗೋವಾದಿಂದ ಬೆಳಗಾವಿಯ ಕಡೆ ಬರುತ್ತಿದ್ದ ಎಂಎಚ್-10-ಸಿಎನ್ 8477 ಸಂಖ್ಯೆಯ ಕಾರು ಅಪಾಯಕಾರಿ ತಿರುವಿನಲ್ಲಿ ಸುಮಾರು 20 ಅಡಿ ಆಳದ ಕಂದಕಕ್ಕೆ ಬಿದ್ದು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ಘಟನೆ ಮಂಗಳವಾರ ಬೆಳಿಗ್ಗೆ ಪ್ರಯಾಣಿಕರ ಗಮನಕ್ಕೆ ಬಂದಿದೆ.
ಕಣಕುಂಬಿ–ಚೋರ್ಲಾ ಮಾರ್ಗದ ತೀವ್ರ ಏರಿಳಿತ ಹಾಗೂ ತಿರುವಿನಲ್ಲಿ ವಾಹನದ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ರಾತ್ರಿ ಸಮಯದಲ್ಲಿ ಚಾಲಕನಿಗೆ ನಿದ್ರೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಆಳವಾದ ಕಾಲುವೆಗೆ ಬಿದ್ದು ನಂತರ ಬೆಂಕಿ ಹೊತ್ತಿಕೊಂಡಿದೆ.
ಮಂಗಳವಾರ ಬೆಳಿಗ್ಗೆ ಕೆಲವರು ಸುಟ್ಟುಹೋಗಿರುವ ಕಾರನ್ನು ಗಮನಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕಾರಿನಲ್ಲಿ ಯಾರು ಇದ್ದರು, ವಾಹನ ಎಲ್ಲಿಿನಿಂದ ಹೊರಟಿತ್ತು ಹಾಗೂ ಅಪಘಾತದ ವೇಳೆ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಸ್ಥಳದಲ್ಲಿ ಯಾರೂ ಪತ್ತೆಯಾಗದಿರುವುದರಿಂದ ಅಪಘಾತದ ಬಳಿಕ ಚಾಲಕ ಸ್ಥಳದಿಂದ ಕಲ್ಕಿತ್ತಿರಬಹುದೆಂದು ಅಂದಾಜಿಸಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


