गोल्याळीत माकडांच्या कळपाचा ऊस पिकामध्ये धुमाकूळ; तब्बल 10 टन उसाचे नुकसान.
जांबोटी : खानापूर तालुक्यातील जांबोटी भागातील गोल्याळी येथे माकडांच्या कळपाने एका शेतकऱ्याच्या ऊस पिकाचे मोठ्या प्रमाणात नुकसान केले आहे. माकडांच्या उपद्रवामुळे जवळपास 10 टन ऊस पिकाचे नुकसान झाल्याने शेतकरी भुजंग नागाप्पा गुरव यांना लाखो रुपयांचा आर्थिक फटका बसला आहे.
गोल्याळी येथील शेतकरी भुजंग नागाप्पा गुरव यांच्या सर्वे क्रमांक 75 मधील ऊस पिकात माकडांच्या कळपाने धुमाकूळ घालत मोठ्या प्रमाणात ऊस फस्त केला तसेच पिकाची नासधूस केली. त्यामुळे शेतकऱ्याचे मोठे नुकसान झाले असून, आधीच विविध संकटांचा सामना करणाऱ्या शेतकऱ्यांसमोर आता वन्यप्राण्यांचा उपद्रवही गंभीर समस्या बनली आहे.
या घटनेची वन खाते व महसूल विभागाच्या अधिकाऱ्यांनी तातडीने प्रत्यक्ष पाहणी करावी, नुकसानग्रस्त ऊस पिकाचा पंचनामा करावा आणि शासनाच्या नियमानुसार संबंधित शेतकऱ्याला लवकरात लवकर नुकसानभरपाई मिळवून द्यावी, अशी मागणी परिसरातील शेतकऱ्यांतून होत आहे.
माकडांच्या वाढत्या उपद्रवामुळे भविष्यातही पिकांचे मोठे नुकसान होण्याची शक्यता असल्याने वन विभागाने यावर कायमस्वरूपी उपाययोजना करावी, अशी मागणीही शेतकऱ्यांनी केली आहे.
ಗೋಳ್ಯಾಳಿ ಊರಿನಲ್ಲಿ ಕೋತಿಗಳ ಹಿಂಡಿನ ಹಾವಳಿ ಹೆಚ್ಚಳ; ಸರಿಸೂಮಾರು 10 ಟನ್ ಕಬ್ಬು ಬೆಳೆ ಹಾನಿ..
ಜಾಂಬೋಟಿ : ಖಾನಾಪುರ ತಾಲೂಕಿನ ಜಾಂಬೋಟಿ ಭಾಗದ ಗೋಳ್ಯಾಳಿ ಗ್ರಾಮದಲ್ಲಿ ಕೋತಿಗಳ ಹಿಂಡು ರೈತರ ಕಬ್ಬು ಬೆಳೆಯಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ. ಕೋತಿಗಳ ಹಾವಳಿಯಿಂದ ಸರಿಸುಮಾರು 10 ಟನ್ ಕಬ್ಬು ಬೆಳೆ ಹಾನಿಯಾಗಿದ್ದು, ರೈತ ಭುಜಂಗ ನಾಗಪ್ಪ ಗುರುವ್ ಅವರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟವಾಗಿದೆ.
ಗೋಳ್ಯಾಳಿ ಗ್ರಾಮದ ರೈತ ಭುಜಂಗ ನಾಗಪ್ಪ ಗುರುವ್ ಅವರ ಸರ್ವೆ ನಂಬರ್ 75ರಲ್ಲಿರುವ ಕಬ್ಬು ಬೆಳೆಯಲ್ಲಿ ಕೋತಿಗಳ ಹಿಂಡು ದಾಂಧಲೆ ನಡೆಸಿದ್ದು, ಅಪಾರ ಪ್ರಮಾಣದ ಕಬ್ಬನ್ನು ತಿಂದು ನಾಶಪಡಿಸಿದೆ. ಅಲ್ಲದೆ ಬೆಳೆಯನ್ನು ತುಳಿದು ಹಾಗೂ ಮುರಿದು ಹಾನಿಗೊಳಿಸಿದೆ. ಇದರಿಂದ ರೈತನಿಗೆ ಭಾರಿ ನಷ್ಟ ಉಂಟಾಗಿದೆ. ಈಗಾಗಲೇ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿರುವ ರೈತರಿಗೆ ಇದೀಗ ವನ್ಯಜೀವಿಗಳ ಹಾವಳಿಯೂ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಘಟನೆಯ ಕುರಿತು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಹಾನಿಗೊಳಗಾದ ಕಬ್ಬು ಬೆಳೆಯ ಪಂಚನಾಮೆ ಮಾಡಬೇಕು ಹಾಗೂ ಸರ್ಕಾರದ ನಿಯಮಾನುಸಾರ ಸಂಬಂಧಿಸಿದ ರೈತನಿಗೆ ಶೀಘ್ರವಾಗಿ ಪರಿಹಾರಧನ ಒದಗಿಸಬೇಕು, ಎಂದು ಸುತ್ತಮುತ್ತಲಿನ ರೈತರು ಆಗ್ರಹಿಸಿದ್ದಾರೆ.
ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಬೆಳೆಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರೈತರು ಒತ್ತಾಯಿಸಿದ್ದಾರೆ.

