
आवरोळीच्या शेतकऱ्याची, दोरीने गळपास घेऊन आत्महत्या.
खानापूर : खानापूर तालुक्यातील आवरोळी येथील कर्जबाजारी शेतकऱ्याची, शेतातील झाडाला दोरी बांधून, गळपास घेऊन आत्महत्या केल्याची घटना, रविवार 5 मे रोजी, सकाळी उघडकीस आली आहे.
याबाबत मिळालेली माहिती अशी की, सुरेश मल्लापा कोळी (वय 58) यांने, रविवार दिनांक 5 में रोजी, सकाळी झाडाला दोरी बांधून गळफास घेऊन आत्महत्या केली असल्याची घटना उघडकीस आली आहे. सदर घटनेची माहिती नंदगड पोलिसांना देण्यात आली. यानंतर नंदगड पोलिसांनी घटनास्थळी भेट देऊन, घटनेचा पंचनामा केला. व मृतदेहावर खानापूर येथील सरकारी दवाखान्यात शवचिकस्ता करुन मृतदेह नातेवाईकच्या ताब्यात देण्यात आला.
सुरेश मल्लापा कोळी, याने शेतीसाठी कर्ज घेतले होते. शेतामध्ये मिरचीचे पीक लावण्यात आले होते. मात्र यावर्षी पावसाचे प्रमाण कमी झाल्याने, आणि उन्हाळा जास्त असल्यामुळे, मिरचीच्या पिकांमध्ये नुकसान झाले. त्यामुळे व कर्ज जास्त झाल्याने ते गेले काही दिवस वेगळ्या मनस्थितीत होते. त्यामुळे त्यांने गळफास घेतल्याचे समजते. त्यांच्या पश्चात पत्नी, एक मुलगा व विवाहित मुलगी असा परिवार आहे.
ಅವರೋಳ್ಳಿಯ ರೈತರೊಬ್ಬರು ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ಖಾನಾಪುರ: ಸಾಲಬಾಧೆ ತಾಳಲಾರದೆ ಖಾನಾಪುರ ತಾಲೂಕಿನ ಅವರೋಳ್ಳಿಯ ರೈತರೊಬ್ಬರು ಜಮೀನಿನಲ್ಲಿ ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮೇ 5ರ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಈ ಸಂಬಂಧ ಸಿಕ್ಕಿರುವ ಮಾಹಿತಿ ಏನೆಂದರೆ ಸುರೇಶ ಮಲ್ಲಪ ಕೋಳಿ (ವಯಸ್ಸು 58) ಅವರು ಮೇ 5ರ ಭಾನುವಾರ ಬೆಳಗ್ಗೆ ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ನಂದಗಢ ಪೊಲೀಸರಿಗೆ ಮಾಹಿತಿ ನೀಡಲಾಗಿ. ನಂದಗಢ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಪಂಚನಾಮೆ ನಡೆಸಿದರು. ಹಾಗೂ ಮೃತದೇಹವನ್ನು ಖಾನಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಸುರೇಶ ಮಲ್ಲಪ ಕೋಳಿ, ಕೃಷಿಗಾಗಿ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಹಾಕಲಾಗಿತ್ತು. ಆದರೆ ಈ ವರ್ಷ ಕಡಿಮೆ ಮಳೆ, ಬೇಸಿಗೆಯ ಬಿಸಿಯಿಂದಾಗಿ ಮೆಣಸಿನಕಾಯಿ ಬೆಳೆ ನಷ್ಟವಾಗಿ ಮತ್ತು ಹೆಚ್ಚಿನ ಸಾಲದ ಕಾರಣ, ಅವರು ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿದರು ಹಾಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಪತ್ನಿ, ಓರ್ವ ಪುತ್ರ ಹಾಗೂ ವಿವಾಹಿತ ಪುತ್ರಿಯನ್ನು ಅಗಲಿದ್ದಾರೆ.
