खानापूर तालुक्याची शैक्षणिक भरारी; 100% निकाल देणाऱ्या 23 शाळांचा व राज्यात दुसरा क्रमांक आलेल्या दिव्या देसाईचा सत्कार.
खानापूर : दहावीची परीक्षा ही शिक्षण क्षेत्रातील अत्यंत महत्त्वाचा टप्पा मानली जाते. यंदाच्या एसएसएलसी परीक्षेत खानापूर तालुक्याने जिल्ह्यात द्वितीय क्रमांक मिळवत उल्लेखनीय यश संपादन केले आहे. तालुक्यातील विद्यार्थिनी दिव्या प्रदीप देसाई हिने ६२५ पैकी ६२४ गुण मिळवून कर्नाटक राज्यात द्वितीय क्रमांक पटकाविला आहे. या यशामुळे शिक्षण क्षेत्रात खानापूर तालुक्याचे नाव उज्ज्वल झाले आहे.
या यशाबद्दल आमदार विठ्ठलराव हलगेकर यांनी विद्यार्थ्यांचे, शिक्षकांचे, पालकांचे तसेच शिक्षण खात्यातील अधिकाऱ्यांचे अभिनंदन केले. विद्यार्थ्यांच्या गुणवत्तापूर्ण यशामागे सर्वांचे कष्ट, प्रयत्न आणि सहकार्य महत्त्वाचे ठरल्याचे गौरवोद्गार त्यांनी काढले.
क्षेत्र शिक्षणाधिकारी व क्षेत्र समन्वय अधिकारी, खानापूर यांच्या संयुक्त विद्यमाने शैक्षणिक वर्ष २०२५-२६ मधील एसएसएलसी वार्षिक परीक्षेत १०० टक्के निकाल मिळविणाऱ्या शाळांच्या मुख्याध्यापकांचा व गुणवंत विद्यार्थ्यांचा भव्य सत्कार समारंभ सोमवार, दि. ४ मे २०२६ रोजी स्वामी विवेकानंद इंग्लिश मीडियम हायस्कूल, खानापूर येथे पार पडला. कार्यक्रमाच्या अध्यक्षस्थानी क्षेत्र शिक्षणाधिकारी पी. रामाप्पा होते.
व्यासपीठावर स्वामी विवेकानंद इंग्लिश मीडियम शिक्षण संस्थेचे चेअरमन अॅड. चेतन मणेरीकर, डाएट कॉलेजचे प्राचार्य अशोक कुमार सिंदगी, बीआरसी एम. जी. हत्ती, एडीएम विनायक जकाती, तालुका नोडल अधिकारी संतोष नाईक, महांतेश कित्तूर, शिक्षक संघटना अध्यक्ष व मुख्याध्यापक सुनिल चिगुळकर, श्री पत्री, एस. एन. कम्मार आदी मान्यवर उपस्थित होते.
यावेळी बिडी येथील होली क्रॉस हायस्कूलची विद्यार्थिनी दिव्या देसाई हिचा राज्यात द्वितीय व तालुक्यात प्रथम क्रमांक मिळविल्याबद्दल विशेष सत्कार करण्यात आला. तसेच अनुष्का देसाई (हलशीवाडी) हिने ६२१ गुण मिळवून तालुक्यात द्वितीय क्रमांक पटकाविल्याबद्दल तिचाही गौरव करण्यात आला. तालुक्यातील टॉप टेन विद्यार्थ्यांसह १०० टक्के निकाल लागलेल्या २३ हायस्कूलच्या मुख्याध्यापकांचा मानचिन्ह, प्रशस्तीपत्र, शाल व पुष्पहार देऊन सत्कार करण्यात आला.
कार्यक्रमात उपस्थित मान्यवरांनी विद्यार्थ्यांना मार्गदर्शनपर भाषणे केली. कार्यक्रमाचे आभार एसीओ संतोष नाईक यांनी मानले.
ಖಾನಾಪುರ ತಾಲ್ಲೂಕಿನ ಶೈಕ್ಷಣಿಕ ಪ್ರಗತಿ; 100% ಫಲಿತಾಂಶ ನೀಡಿದ 23 ಶಾಲೆ ಸಹಿತ, ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ದಿವ್ಯಾ ದೇಸಾಯಿಗೆ ಸತ್ಕಾರ.
ಖಾನಾಪುರ : 10 ನೇಯ ತರಗತಿ ಪರೀಕ್ಷೆ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಹಂತವೆಂದು ಪರಿಗಣಿಸಲಾಗುತ್ತದೆ. ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಖಾನಾಪುರ ತಾಲ್ಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ತಾಲ್ಲೂಕಿನ ವಿದ್ಯಾರ್ಥಿನಿ ದಿವ್ಯಾ ಪ್ರದೀಪ್ ದೇಸಾಯಿ ಅವರು 625ರಲ್ಲಿ 624 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ಸಾಧನೆಯಿಂದ ಖಾನಾಪುರ ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಹೆಸರು ರಾಜ್ಯಮಟ್ಟದಲ್ಲಿ ಮೆರೆದಿದೆ.
ಈ ಸಾಧನೆಗಾಗಿ ಶಾಸಕ ವಿಠ್ಠಲರಾವ್ ಹಲಗೇಕರ ಅವರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಗುಣಮಟ್ಟದ ಯಶಸ್ಸಿನ ಹಿಂದೆ ಎಲ್ಲರ ಪರಿಶ್ರಮ, ಪ್ರಯತ್ನ ಮತ್ತು ಸಹಕಾರ ಪ್ರಮುಖ ಕಾರಣವೆಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ, ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶೈಕ್ಷಣಿಕ ವರ್ಷ 2025-26ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಭವ್ಯ ಸತ್ಕಾರ ಸಮಾರಂಭವು ಸೋಮವಾರ, ಮೇ 4, 2026 ರಂದು ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಖಾನಾಪುರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಪ್ಪ ಅವರು ವಹಿಸಿದ್ದರು.
ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಡ್ವೊಕೇಟ್ ಚೇತನ ಮನೇರಿಕರ್, ಡೈಯೆಟ್ ಕಾಲೇಜಿನ ಪ್ರಾಚಾರ್ಯ ಅಶೋಕ್ ಕುಮಾರ್ ಸಿಂದಗಿ, ಬಿಆರ್ಸಿ ಎಂ. ಜಿ. ಹತ್ತಿ, ಎಡಿಎಮ್ ವಿನಾಯಕ ಜಕಾತಿ, ತಾಲ್ಲೂಕು ನೋಡಲ್ ಅಧಿಕಾರಿ ಸಂತೋಷ ನಾಯಕ್, ಮಹಾಂತೇಶ್ ಕಿತ್ತೂರು, ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಮುಖ್ಯೋಪಾಧ್ಯಾಯ ಸುನಿಲ್ ಚಿಗುಳ್ಕರ್, ಶ್ರೀ ಪತ್ರಿ, ಎಸ್. ಎನ್. ಕಮ್ಮಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೀಡಿ ಗ್ರಾಮದ ಹೋಲಿ ಕ್ರಾಸ್ ಹೈಸ್ಕೂಲ್ ವಿದ್ಯಾರ್ಥಿನಿ ದಿವ್ಯಾ ದೇಸಾಯಿ ಅವರಿಗೆ ರಾಜ್ಯದಲ್ಲಿ ದ್ವಿತೀಯ ಹಾಗೂ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ವಿಶೇಷ ಸತ್ಕಾರ ಮಾಡಲಾಯಿತು. ಹಾಗೆಯೇ ಹಲಶಿವಾಡಿಯ ಅನುಷ್ಕಾ ದೇಸಾಯಿ ಅವರು 621 ಅಂಕಗಳನ್ನು ಪಡೆದು ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ತಾಲ್ಲೂಕಿನ ಟಾಪ್ ಟೆನ್ ವಿದ್ಯಾರ್ಥಿಗಳೊಂದಿಗೆ 100% ಫಲಿತಾಂಶ ಪಡೆದ 23 ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾನಚಿಹ್ನೆ, ಪ್ರಶಸ್ತಿಪತ್ರ, ಶಾಲು ಹಾಗೂ ಹಾರ ಹಾಕಿ ಸತ್ಕಾರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಕೃತಜ್ಞತೆಯನ್ನು ಎಸಿಒ ಸಂತೋಷ ನಾಯಕ್ ಅವರು ಸಲ್ಲಿಸಿದರು.

