मराठी माध्यमाच्या शिक्षक पदांचा भरती अधिसूचनेत समावेश करा; महाराष्ट्र एकीकरण युवा समितीचे निवेदन.
बेळगाव : कर्नाटक सरकारच्या शिक्षण विभागामार्फत सुरू असलेल्या शिक्षक भरती प्रक्रियेत मराठी माध्यमासाठी स्वतंत्र शिक्षक पदांचा समावेश करून 12 ऑगस्ट 2026 रोजी प्रसिद्ध करण्यात आलेल्या भरती अधिसूचनेत तातडीने दुरुस्ती करावी, अशी मागणी महाराष्ट्र एकीकरण युवा समितीच्या वतीने जिल्हा शिक्षणाधिकाऱ्यांकडे निवेदनाद्वारे करण्यात आली.

कर्नाटक राज्यभरात सुमारे 15 हजार शिक्षकांची भरती प्रक्रिया राबविण्यात येत असून, बेळगाव माध्यमिक विभागासाठी यापूर्वी 831 शिक्षक पदांची भरती जाहीर करण्यात आली आहे. 12 ऑगस्ट रोजी प्रसिद्ध अधिसूचनेत GPT पदवीधर प्राथमिक शिक्षक इयत्ता 6वी ते 8वी (कन्नड) 65, इंग्रजी 4, गणित व विज्ञान शिक्षक (कन्नड) 74, जीवशास्त्र शिक्षक (कन्नड) 33, समाजशास्त्र शिक्षक (कन्नड) 53 आणि CST संगणक विज्ञान शिक्षक इयत्ता 1ली ते 8वी 11 अशी एकूण 240 पदे जाहीर करण्यात आली आहेत.
मात्र, या अधिसूचनेत मराठी माध्यमासाठी स्वतंत्र शिक्षक पदांचा स्पष्ट समावेश नसल्याने मराठी भाषिक समाजात नाराजी व्यक्त होत आहे. बेळगाव विभाग हा बहुभाषिक प्रदेश असून बेळगाव ग्रामीण भागासह खानापूर आणि निपाणी तालुक्यात मोठ्या प्रमाणात मराठी भाषिक लोकसंख्या आहे. या भागातील अनेक शासकीय शाळांमध्ये विद्यार्थी मराठी माध्यमातून शिक्षण घेत आहेत.
मराठी माध्यमाच्या शाळांमध्ये शिक्षक, पालक आणि मराठीप्रेमी नागरिकांच्या सातत्यपूर्ण प्रयत्नांमुळे शैक्षणिक दर्जा चांगला असून अनेक शाळांची पटसंख्याही समाधानकारक आहे. मात्र, आवश्यक शिक्षकांची भरती न झाल्यास भविष्यात शिक्षकांची कमतरता निर्माण होऊन त्याचा परिणाम विद्यार्थ्यांच्या शैक्षणिक गुणवत्तेवर, पटसंख्येवर आणि पालकांच्या शाळेवरील विश्वासावर होऊ शकतो. परिणामी, चांगल्या स्थितीत असलेल्या मराठी माध्यमाच्या शासकीय शाळा भविष्यात बंद पडण्याच्या मार्गावर जाण्याची भीती समितीने व्यक्त केली.
ही बाब केवळ मराठी उमेदवारांच्या रोजगाराशी संबंधित नसून हजारो मराठी भाषिक विद्यार्थ्यांच्या शैक्षणिक भवितव्याशी निगडित असल्याचे निवेदनात नमूद करण्यात आले आहे. मराठी माध्यमातून D.Ed., B.Ed. तसेच आवश्यक शैक्षणिक पात्रता प्राप्त केलेले अनेक पात्र उमेदवार शिक्षक भरतीच्या प्रतीक्षेत आहेत. त्यामुळे मराठी माध्यमाच्या शाळांची गरज आणि पात्र उमेदवारांची उपलब्धता यांचा विचार करून शिक्षक पदे मंजूर करणे आवश्यक असल्याचे समितीने म्हटले आहे.
समितीने बेळगाव विभागासाठी जाहीर झालेल्या 831 शिक्षक पदांच्या भरती प्रक्रियेचा पुनर्विचार करून आवश्यक दुरुस्ती करावी, 12 ऑगस्टच्या अधिसूचनेत मराठी माध्यमासाठी स्वतंत्र पदांचा समावेश करावा, तसेच मराठीसह इतर अल्पसंख्याक माध्यमांच्या शाळांसाठी विद्यार्थीसंख्या व शैक्षणिक गरजेनुसार स्वतंत्र शिक्षक पदे मंजूर करावीत, अशी मागणी केली.
तसेच मराठी माध्यमातून D.Ed., B.Ed. व आवश्यक पात्रता प्राप्त उमेदवारांना समान संधी द्यावी, बेळगाव ग्रामीण भागासह खानापूर व निपाणी तालुक्यातील मराठी माध्यमाच्या शासकीय शाळांना आवश्यकतेनुसार पुरेसे शिक्षक उपलब्ध करून द्यावेत आणि सर्व माध्यमांच्या शाळांमधील विद्यार्थीसंख्या, विषयांची गरज व स्थानिक भाषिक परिस्थिती लक्षात घेऊन माध्यमनिहाय शिक्षक पदांची संख्या स्पष्टपणे जाहीर करावी, अशी मागणी करण्यात आली.
मराठी माध्यमाच्या शाळांना शिक्षक उपलब्ध करून न देता सातत्याने दुर्लक्ष केल्यास या शाळांच्या भवितव्याबाबत गंभीर प्रश्न निर्माण होतील. शिक्षकांची कमतरता निर्माण करून शाळांची गुणवत्ता व पटसंख्या कमी होऊ देणे आणि त्यानंतर शाळा बंद पडण्याची परिस्थिती निर्माण होणे कोणत्याही परिस्थितीत मान्य केले जाणार नाही. शासनाने तातडीने सकारात्मक निर्णय न घेतल्यास मराठी माध्यमाच्या शाळा वाचविण्यासाठी, विद्यार्थ्यांच्या शैक्षणिक हक्कांसाठी आणि पात्र मराठी उमेदवारांना न्याय मिळवून देण्यासाठी लोकशाही मार्गाने तीव्र आंदोलन छेडण्याचा इशाराही समितीने दिला.
यावेळी अध्यक्ष शुभम शेळके, कार्याध्यक्ष धनंजय पाटील, सरचिटणीस मनोहर हुंदरे, खजिनदार व नगरसेवक शिवाजी मंडोळकर, अशोक घगवे, सागर कणबरकर, गजानन शहापूरकर, सागर बिळगोजी, सुरज जाधव, निलेश काकतकर, परिणय कदम, नारायण सांगावकर, सतीश देसुरकर, अरुण शिंदे तसेच खानापूरहून रमेश धबाले, सोमनिंग धबाले, निपाणीहून सागर जाधव, सागर माने, दत्तात्रय धामगावकर, आमृत खेमनाळकर, के. बी. खामकर, आनंद धामणेकर आदी उपस्थित होते.
ಮರಾಠಿ ಮಾಧ್ಯಮದ ಶಿಕ್ಷಕ ಹುದ್ದೆಗಳನ್ನು ನೇಮಕಾತಿ ಅಧಿಸೂಚನೆಯಲ್ಲಿ ಸೇರಿಸಿ; ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ.
ಬೆಳಗಾವಿ : ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕ ಹುದ್ದೆಗಳನ್ನು ಸೇರಿಸಿ, ಆಗಸ್ಟ್ 12, 2026ರಂದು ಪ್ರಕಟಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ತಕ್ಷಣ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯಾದ್ಯಂತ ಸುಮಾರು 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಬೆಳಗಾವಿ ಮಾಧ್ಯಮಿಕ ವಿಭಾಗಕ್ಕೆ ಈ ಹಿಂದೆ 831 ಶಿಕ್ಷಕ ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ. ಆಗಸ್ಟ್ 12, 2026ರಂದು ಪ್ರಕಟವಾದ ಅಧಿಸೂಚನೆಯಲ್ಲಿ ಕೆಳಗಿನಂತೆ ಒಟ್ಟು 240 ಶಿಕ್ಷಕ ಹುದ್ದೆಗಳನ್ನು ಪ್ರಕಟಿಸಲಾಗಿದೆ.
- GPT ಪದವೀಧರ ಪ್ರಾಥಮಿಕ ಶಿಕ್ಷಕರು, 6ರಿಂದ 8ನೇ ತರಗತಿ (ಕನ್ನಡ) – 65
- GPT ಪದವೀಧರ ಪ್ರಾಥಮಿಕ ಶಿಕ್ಷಕರು, 6ರಿಂದ 8ನೇ ತರಗತಿ (ಇಂಗ್ಲಿಷ್) – 4
- GPT ಗಣಿತ ಮತ್ತು ವಿಜ್ಞಾನ ಶಿಕ್ಷಕರು (ಕನ್ನಡ) – 74
- GPT ಜೀವಶಾಸ್ತ್ರ ಶಿಕ್ಷಕರು (ಕನ್ನಡ) – 33
- GPT ಸಮಾಜಶಾಸ್ತ್ರ ಶಿಕ್ಷಕರು (ಕನ್ನಡ) – 53
- CST ಕಂಪ್ಯೂಟರ್ ಸೈನ್ಸ್ ಶಿಕ್ಷಕರು, 1ರಿಂದ 8ನೇ ತರಗತಿ – 11
ಒಟ್ಟು – 240 ಶಿಕ್ಷಕ ಹುದ್ದೆಗಳು
ಮೇಲಿನ ಅಧಿಸೂಚನೆಯನ್ನು ಗಮನಿಸಿದಾಗ, ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ ಹುದ್ದೆಗಳನ್ನು ಒದಗಿಸಲಾಗಿದ್ದರೂ, ಮರಾಠಿ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕ ಹುದ್ದೆಗಳ ಯಾವುದೇ ಸ್ಪಷ್ಟ ಉಲ್ಲೇಖ ಮಾಡಲಾಗಿಲ್ಲ. ಅಲ್ಲದೆ, ಮರಾಠಿ ಸೇರಿದಂತೆ ಇತರ ಅಲ್ಪಸಂಖ್ಯಾತ ಮಾಧ್ಯಮಗಳ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕ ಹುದ್ದೆಗಳ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡದಿರುವುದರಿಂದ ಸಂಬಂಧಿಸಿದ ಭಾಷಿಕ ಸಮುದಾಯದಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.
ಬೆಳಗಾವಿ ವಿಭಾಗವು ಬಹುಭಾಷಿಕ ಪ್ರದೇಶವಾಗಿದ್ದು, ಬೆಳಗಾವಿ ಗ್ರಾಮೀಣ ಭಾಗದ ಜೊತೆಗೆ ಖಾನಾಪುರ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕ ಜನಸಂಖ್ಯೆ ಇದೆ. ಈ ಪ್ರದೇಶದ ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಭಾಷಿಕ ಅಗತ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಾಲೆಗಳ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಶಿಕ್ಷಕರ ನೇಮಕಾತಿಯಲ್ಲಿ ಮರಾಠಿ ಮಾಧ್ಯಮಕ್ಕೂ ಸಾಕಷ್ಟು ಹುದ್ದೆಗಳನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ.
ಬೆಳಗಾವಿಯ ಗ್ರಾಮೀಣ ಪ್ರದೇಶ ಹಾಗೂ ಖಾನಾಪುರ ಮತ್ತು ನಿಪ್ಪಾಣಿ ತಾಲೂಕುಗಳ ಮರಾಠಿ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಪಾಲಕರು ಮತ್ತು ಮರಾಠಿ ಭಾಷಾಭಿಮಾನಿ ನಾಗರಿಕರ ನಿರಂತರ ಪ್ರಯತ್ನದಿಂದ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದ್ದು, ಅನೇಕ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯೂ ತೃಪ್ತಿಕರವಾಗಿದೆ.
ಈ ಶಾಲೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮಹತ್ವದ ಕಾರ್ಯವನ್ನು ಮಾಡುತ್ತಿವೆ. ಆದರೆ ಮರಾಠಿ ಮಾಧ್ಯಮಕ್ಕೆ ಅಗತ್ಯವಿರುವ ಶಿಕ್ಷಕರ ನೇಮಕಾತಿಯನ್ನು ನಿರಂತರವಾಗಿ ಕಡೆಗಣಿಸಿ, ಶಿಕ್ಷಕರ ಹುದ್ದೆಗಳನ್ನು ಒದಗಿಸದಿದ್ದರೆ ಭವಿಷ್ಯದಲ್ಲಿ ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗುವ ಸಾಧ್ಯತೆಯಿದೆ.
ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಾಲೆಯ ಮೇಲಿನ ಪಾಲಕರ ನಂಬಿಕೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಣಾಮವಾಗಿ, ಇಂದು ಶಿಕ್ಷಕರು, ಪಾಲಕರು ಮತ್ತು ಮರಾಠಿ ಭಾಷಾಭಿಮಾನಿಗಳ ಪ್ರಯತ್ನದಿಂದ ಉತ್ತಮ ಸ್ಥಿತಿಯಲ್ಲಿರುವ ಮರಾಠಿ ಮಾಧ್ಯಮದ ಸರ್ಕಾರಿ ಶಾಲೆಗಳು ಭವಿಷ್ಯದಲ್ಲಿ ಮುಚ್ಚುವ ಹಂತಕ್ಕೆ ತಲುಪುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.
ಈ ವಿಷಯ ಕೇವಲ ಮರಾಠಿ ಅಭ್ಯರ್ಥಿಗಳ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ್ದಲ್ಲ. ಇದು ಸಾವಿರಾರು ಮರಾಠಿ ಭಾಷಿಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ.
ಮರಾಠಿ ಮಾಧ್ಯಮದಲ್ಲಿ D.Ed., B.Ed. ಹಾಗೂ ಅಗತ್ಯ ಶೈಕ್ಷಣಿಕ ಅರ್ಹತೆ ಪಡೆದಿರುವ ಅನೇಕ ಅರ್ಹ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಮರಾಠಿ ಮಾಧ್ಯಮಕ್ಕೆ ಹುದ್ದೆಗಳನ್ನೇ ಒದಗಿಸದಿದ್ದರೆ, ಅರ್ಹ ಮರಾಠಿ ಅಭ್ಯರ್ಥಿಗಳ ಉದ್ಯೋಗಾವಕಾಶಗಳ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಒಂದು ಕಡೆ ಮರಾಠಿ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಕರ ಅಗತ್ಯವಿದ್ದು, ಮತ್ತೊಂದೆಡೆ ಮರಾಠಿ ಮಾಧ್ಯಮದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಲಭ್ಯವಿರುವಾಗ, ಈ ಎರಡೂ ಅಂಶಗಳನ್ನು ಸಮನ್ವಯಗೊಳಿಸಿ ಮರಾಠಿ ಮಾಧ್ಯಮಕ್ಕೆ ಶಿಕ್ಷಕ ಹುದ್ದೆಗಳನ್ನು ಒದಗಿಸದಿರುವುದು ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳ ಜೊತೆಗೆ ಅರ್ಹ ಮರಾಠಿ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಬೇಕಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಮಿತಿಯ ಪ್ರಮುಖ ಬೇಡಿಕೆಗಳು
- ಬೆಳಗಾವಿ ವಿಭಾಗಕ್ಕೆ ಪ್ರಕಟಿಸಲಾಗಿರುವ 831 ಶಿಕ್ಷಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು.
- ಆಗಸ್ಟ್ 12, 2026ರಂದು ಪ್ರಕಟಿಸಲಾದ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಮರಾಠಿ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕ ಹುದ್ದೆಗಳನ್ನು ಸೇರಿಸಬೇಕು.
- ಮರಾಠಿ ಸೇರಿದಂತೆ ಇತರ ಅಲ್ಪಸಂಖ್ಯಾತ ಮಾಧ್ಯಮದ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶೈಕ್ಷಣಿಕ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡಬೇಕು.
- ಮರಾಠಿ ಮಾಧ್ಯಮದಲ್ಲಿ D.Ed., B.Ed. ಹಾಗೂ ಅಗತ್ಯ ಶೈಕ್ಷಣಿಕ ಅರ್ಹತೆ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಸಮಾನ ಮತ್ತು ನ್ಯಾಯಯುತ ಅವಕಾಶ ಒದಗಿಸಬೇಕು.
- ಬೆಳಗಾವಿಯ ಗ್ರಾಮೀಣ ಭಾಗದ ಜೊತೆಗೆ ಖಾನಾಪುರ ಮತ್ತು ನಿಪ್ಪಾಣಿ ತಾಲೂಕುಗಳ ಮರಾಠಿ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ಶಿಕ್ಷಕರನ್ನು ನೇಮಿಸಬೇಕು.
- ಎಲ್ಲ ಮಾಧ್ಯಮಗಳ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ವಿಷಯಗಳ ಅಗತ್ಯತೆ ಮತ್ತು ಸ್ಥಳೀಯ ಭಾಷಿಕ ಪರಿಸ್ಥಿತಿಯನ್ನು ಪರಿಗಣಿಸಿ ಮಾಧ್ಯಮನಿಹಾಯ ಶಿಕ್ಷಕ ಹುದ್ದೆಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರಕಟಿಸಬೇಕು.
- ಯಾವುದೇ ಭಾಷಿಕ ಮಾಧ್ಯಮದ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ನಷ್ಟ ಉಂಟಾಗದಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು.
- ಮರಾಠಿ ಮಾಧ್ಯಮದ ಶಾಲೆಗಳ ಅಸ್ತಿತ್ವವನ್ನು ಉಳಿಸಿಕೊಂಡು ಅವುಗಳ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸಬೇಕು.
ಮೇಲಿನ ಎಲ್ಲ ವಿಷಯಗಳನ್ನು ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ವತಿಯಿಂದ ಆಗ್ರಹಿಸಲಾಗಿದೆ.
ಮರಾಠಿ ಮಾಧ್ಯಮದ ಶಾಲೆಗಳಿಗೆ ಅಗತ್ಯ ಶಿಕ್ಷಕರನ್ನು ಒದಗಿಸದೆ ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿದ್ದರೆ, ಮರಾಠಿ ಮಾಧ್ಯಮದ ಶಾಲೆಗಳನ್ನು ಭವಿಷ್ಯದಲ್ಲಿ ಮುಚ್ಚುವ ಪರಿಸ್ಥಿತಿ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವೇ? ಎಂಬ ಗಂಭೀರ ಪ್ರಶ್ನೆ ಮರಾಠಿ ಭಾಷಿಕರ ಮನಸ್ಸಿನಲ್ಲಿ ಮೂಡಲಿದೆ ಎಂದು ಸಮಿತಿ ಎಚ್ಚರಿಸಿದೆ.
ಶಿಕ್ಷಕರ ಕೊರತೆ ಉಂಟುಮಾಡಿ ಮರಾಠಿ ಮಾಧ್ಯಮದ ಶಾಲೆಗಳ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅವಕಾಶ ನೀಡಿ, ನಂತರ ಈ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುವುದು ಯಾವುದೇ ಕಾರಣಕ್ಕೂ ನಮಗೆ ಒಪ್ಪಿಗೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ ಸರ್ಕಾರ ತಕ್ಷಣ ಸಕಾರಾತ್ಮಕ ನಿರ್ಧಾರ ಕೈಗೊಂಡು ಮರಾಠಿ ಮಾಧ್ಯಮಕ್ಕೆ ಅಗತ್ಯ ಶಿಕ್ಷಕ ಹುದ್ದೆಗಳನ್ನು ಒದಗಿಸಬೇಕು ಹಾಗೂ ಪ್ರಸ್ತುತ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು.
ಇಲ್ಲದಿದ್ದರೆ ಮರಾಠಿ ಮಾಧ್ಯಮದ ಶಾಲೆಗಳನ್ನು ಉಳಿಸಲು, ಮರಾಠಿ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳಿಗಾಗಿ ಹಾಗೂ ಅರ್ಹ ಮರಾಠಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಬೀದಿಗಿಳಿದು ತೀವ್ರ ಹೋರಾಟ ನಡೆಸುವುದನ್ನು ಹೊರತುಪಡಿಸಿ ಬೇರೆ ದಾರಿ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಂಟಾಗುವ ಹೋರಾಟದ ಸಂಪೂರ್ಣ ಹೊಣೆಗಾರಿಕೆ ಸಂಬಂಧಪಟ್ಟ ಸರ್ಕಾರ ಹಾಗೂ ಆಡಳಿತದ ಮೇಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿಯನ್ನು ತಕ್ಷಣ ಪರಿಗಣಿಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ, ಮರಾಠಿ ಮಾಧ್ಯಮಕ್ಕೆ ಶಿಕ್ಷಕ ಹುದ್ದೆಗಳನ್ನು ಸೇರಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಶುಭಂ ಶೇಳಕೆ, ಕಾರ್ಯಾಧ್ಯಕ್ಷ ಧನಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿ ಮನೋಹರ ಹುಂದರೆ, ಖಜಾಂಚಿ ಹಾಗೂ ನಗರಸಭಾ ಸದಸ್ಯ ಶಿವಾಜಿ ಮಂಡೋಳಕರ, ಅಶೋಕ ಘಗವೆ, ಸಾಗರ ಕಣಬರಕರ, ಗಜಾನನ ಶಹಾಪೂರಕರ, ಸಾಗರ ಬಿಳಗೋಜಿ, ಸೂರಜ್ ಜಾಧವ್, ನಿಲೇಶ್ ಕಾಕತಕರ, ಪರಿಣಯ್ ಕದಂ, ನಾರಾಯಣ ಸಾಂಗಾವಕರ, ಸತೀಶ್ ದೇಸೂರಕರ, ಅರುಣ್ ಶಿಂಧೆ, ಖಾನಾಪುರದ ರಮೇಶ್ ಧಬಾಲೆ, ಸೋಮನಿಂಗ ಧಬಾಲೆ, ನಿಪ್ಪಾಣಿಯ ಸಾಗರ ಜಾಧವ್, ಸಾಗರ ಮಾನೆ, ದತ್ತಾತ್ರೇಯ ಧಾಮಗಾವಕರ, ಅಮೃತ್ ಖೇಮನಾಳಕರ, ಕೆ. ಬಿ. ಖಾಮಕರ, ಆನಂದ್ ಧಾಮಣೆಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



