गणेश विसर्जनादरम्यान मच्छे येथे तरुणाचा बुडून मृत्यू; 30 मिनिटांत बचाव पथकाने मृतदेह शोधला-सोशल वर्कर टीम बेळगावची तत्पर कारवाई; SDRF, ग्रामीण पोलीस व अग्निशमन दलाचे सहकार्य.
बेळगाव : प्रतिनिधी
गणेश विसर्जनादरम्यान मच्छे येथे आज सायंकाळी एक दुर्दैवी घटना घडली. गणेशमूर्ती विसर्जन करताना तलावात अचानक पाय घसरल्याने नेहरूनगर मच्छे येथील विश्वनाथ नाईक (वय 18) या तरुणाचा पाण्यात बुडून मृत्यू झाला.
घटनेची माहिती मिळताच सोशल वर्कर रेस्क्यू टीम बेळगाव तातडीने घटनास्थळी रवाना झाली. अवघ्या 15 मिनिटांत पथक घटनास्थळी दाखल झाले. बचाव पथकातील अवधूत तुडवेकर, पद्मप्रसाद होळी, शुभम होळी, मायकेल पिंटो, जगदीश गस्ती आणि राजू टक्केकर यांनी तातडीने शोधमोहीम सुरू केली.
सुमारे 30 मिनिटांच्या अथक प्रयत्नांनंतर तरुणाचा मृतदेह पाण्यातून बाहेर काढण्यात बचाव पथकाला यश आले. त्यानंतर मृतदेह पुढील कायदेशीर प्रक्रियेसाठी पोलिसांच्या ताब्यात देण्यात आला.
ही बचाव मोहीम राज्य आपत्ती प्रतिसाद दल (SDRF), बेळगाव ग्रामीण पोलीस आणि बेळगाव अग्निशमन दलाच्या संयुक्त समन्वयाने पार पडली. घटनेनंतर सोशल वर्कर टीमसह सर्व आपत्कालीन यंत्रणांनी दाखवलेल्या तत्परतेचे आणि समन्वयाचे स्थानिक नागरिकांकडून कौतुक करण्यात आले.
ಗಣೇಶ ವಿಸರ್ಜನೆ ವೇಳೆ ಮಚ್ಚೆಯಲ್ಲಿ ಯುವಕ ನೀರಿನಲ್ಲಿ ಮುಳುಗಿ ಸಾವು; 30 ನಿಮಿಷಗಳಲ್ಲಿ ರಕ್ಷಣಾ ತಂಡದಿಂದ ಮೃತದೇಹ ಪತ್ತೆ ಸೋಶಿಯಲ್ ವರ್ಕರ್ ಟೀಮ್ ಬೆಳಗಾವಿಯ ತ್ವರಿತ ಕಾರ್ಯಾಚರಣೆ; SDRF, ಗ್ರಾಮೀಣ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಹಕಾರ.
ಬೆಳಗಾವಿ : ಪ್ರತಿನಿಧಿ
ಗಣೇಶ ವಿಸರ್ಜನೆ ವೇಳೆ ಮಚ್ಚೆಯಲ್ಲಿ ಇಂದು ಸಂಜೆ ದುರ್ಘಟನೆಯೊಂದು ಸಂಭವಿಸಿದೆ. ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ನೆಹರುನಗರ ಮಚ್ಚೆ ನಿವಾಸಿ ವಿಶ್ವನಾಥ ನಾಯಕ್ (ವಯಸ್ಸು 18) ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಸೋಶಿಯಲ್ ವರ್ಕರ್ ರೆಸ್ಕ್ಯೂ ಟೀಮ್ ಬೆಳಗಾವಿ ತಕ್ಷಣ ಸ್ಥಳಕ್ಕೆ ಧಾವಿಸಿತು. ಕೇವಲ 15 ನಿಮಿಷಗಳಲ್ಲಿ ರಕ್ಷಣಾ ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಿತು. ರಕ್ಷಣಾ ತಂಡದ ಅವಧೂತ ತುಡವೇಕರ, ಪದ್ಮಪ್ರಸಾದ ಹೊಳಿ, ಶುಭಂ ಹೊಳಿ, ಮೈಕೆಲ್ ಪಿಂಟೋ, ಜಗದೀಶ ಗಸ್ತಿ ಹಾಗೂ ರಾಜು ಟಕ್ಕೇಕರ ಅವರು ತಕ್ಷಣವೇ ನೀರಿನಲ್ಲಿ ಶೋಧ ಕಾರ್ಯ ಆರಂಭಿಸಿದರು.
ಸುಮಾರು 30 ನಿಮಿಷಗಳ ಸತತ ಪ್ರಯತ್ನದ ಬಳಿಕ ಯುವಕನ ಮೃತದೇಹವನ್ನು ನೀರಿನಿಂದ ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಯಿತು. ಬಳಿಕ ಮೃತದೇಹವನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯು ರಾಜ್ಯ ವಿಪತ್ತು ಪ್ರತಿಕ್ರಿಯಾ ದಳ (SDRF), ಬೆಳಗಾವಿ ಗ್ರಾಮೀಣ ಪೊಲೀಸ್ ಹಾಗೂ ಬೆಳಗಾವಿ ಅಗ್ನಿಶಾಮಕ ದಳದ ಜಂಟಿ ಸಮನ್ವಯದಲ್ಲಿ ನಡೆಯಿತು.
ಘಟನೆಯ ನಂತರ ಸೋಶಿಯಲ್ ವರ್ಕರ್ ಟೀಮ್ ಸೇರಿದಂತೆ ಎಲ್ಲಾ ತುರ್ತು ಸೇವಾ ಘಟಕಗಳು ತೋರಿದ ತ್ವರಿತ ಸ್ಪಂದನೆ ಹಾಗೂ ಪರಸ್ಪರ ಸಮನ್ವಯಕ್ಕೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


