
बैलहोंगल तालुक्यातील इंचल येथे नवविवाहितेची कीटकनाशक औषध पीऊन आत्महत्या.
बेळगाव: बेळगाव जिल्ह्यातील बैलहोंगल तालुक्यातील इंचल गावातील एका नवविवाहित महिलेने कीटकनाशक औषध पीऊंन आत्महत्या करण्याचा प्रयत्न केल्यानंतर तुला उपचारासाठी रुग्णालयात दाखल करण्यात आले होते. परंतु शुक्रवारी तीचा बिम्समध्ये मृत्यू झाला.
लक्ष्मी मंजुनाथ हूगार (वय २२ वर्षं) असे आत्महत्या करणाऱ्या महिलेचे नाव आहे. लक्ष्मीचे लग्न तिच्या मामाचा मुलगा मंजुनाथ याच्याशी 7 डिसेंबर 2024 रोजी झाले होते. परंतु लग्नाच्या पाच महिन्यांतच एका नवविवाहित महिलेने आत्महत्या केली असल्याने मृत्यू बाबत संशय व्यक्त करण्यात येत आहे.
कीटकनाशक गोळ्या खाल्ल्यानंतर लक्ष्मीला तिच्या कुटुंबियांनी प्रथम उपचारासाठी बैलहोंगल येथील सरकारी रुग्णालयात दाखल केले. नंतर, तेथील डॉक्टरांनी तिला पुढील उपचारांसाठी बेळगाव येथील बिम्स रुग्णालयात दाखल करण्याचा सल्ला दिला. त्यामुळे डॉक्टरांच्या सल्ल्यानुसार, लक्ष्मीला ताबडतोब बेळगाव येथील बिम्स रुग्णालयात दाखल करून उपचार करण्यात आले. परंतु उपचाराचा काहीही उपयोग न होता उपचारादरम्यान लक्ष्मीचा बेळगाव येथील बीम्स रुग्णालयात मृत्यू झाला.
लक्ष्मीच्या मृत्यूची बातमी कळताच कुटुंबातील सदस्यांना धक्का बसला. कुटुंबातील सदस्यांनी माध्यमांना सांगितले की लक्ष्मीची तब्येत बरी नसल्याने वारंवार आरोग्य समस्या येत होत्या.
लक्ष्मीच्या पतीने सांगितले की, त्याच्या पत्नीने हे कृत्य तो कामावर असताना आणि घरी कोणी नसताना केले आहे. मृतदेह शवविच्छेदनासाठी शवागारात पाठवण्यात आला आहे. ही घटना बैलहोंगल पोलिस ठाण्याच्या हद्दीत घडली आहे.
ಬೈಲಹೊಂಗಲ ತಾಲೂಕಿನ ಇಂಚಲದಲ್ಲಿ ನವವಿವಾಹಿತ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದಲ್ಲಿ ನವವಿವಾಹಿತೆ ಕಿಟನಾಶಯ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಶುಕ್ರವಾರ ಬಿಮ್ಸ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಲಕ್ಷ್ಮೀ ಮಂಜುನಾಥ ಹೂಗಾರ್ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಡಿಸೆಂಬರ್ 7 ರಂದು ತಮ್ಮ ಮಾವನ ಮಗ ಮಂಜುನಾಥ ಜೊತೆಗೆ ಲಕ್ಷ್ಮೀ ಮದುವೆಯಾಗಿದ್ದಳು. ಮದುವೆಯಾಗಿ ಐದು ತಿಂಗಳ ಒಳಗೆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಕೀಟನಾಶಕ ಮಾತ್ರೆ ನುಂಗಿ ಅಸ್ವಸ್ಥಗೊಂಡಿದ್ದ ಲಕ್ಷ್ಮೀಯನ್ನು ಮೊದಲು ಕುಟುಂಬಸ್ಥರು ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು.
ವೈದ್ಯರ ಸಲಹೆಯಂತೆ ಕೂಡಲೇ ಲಕ್ಷ್ಮೀಯನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಲಕ್ಷ್ಮೀ ಮೃತಪಟ್ಟಿದ್ದಾಳೆ.
ಲಕ್ಷ್ಮೀ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಕ್ಷ್ಮೀಗೆ ಆಗಾಗ ಆರೋಗ್ಯ ಸಮಸ್ಯೆ ಆಗುತ್ತಿತ್ತು ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮೀ ಪತಿ ಮಂಜುನಾಥ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿತ್ತು ನಾನು ಕಷ್ಟಪಟ್ಟು ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಿದ್ದೆ. ನಿನ್ನೆಯಷ್ಟೆ ಆಕೆಯನ್ನು ಆಸ್ಪತ್ರೆಗೆ ತೋರಿಸಿ ಇಂದು ನಾನು
ಕೆಲಸಕ್ಕೆ ಹೋಗಿದ್ದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಹೀಗೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದರು. ಸಧ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳಿಸಿದ್ದು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
