खानापूर-हेमाडगा-अनमोड मार्गावर भीषण अपघात; कार पलटी होऊन एकाचा पाय निकामी, दोघेजण जखमी.
खानापूर : खानापूर-हेमाडगा-अनमोड मार्गावर आज दुपारी भीषण अपघात घडला. हेमाडगा फॉरेस्ट नाक्यापासून सुमारे दोन किलोमीटर अंतरावर, पाली गावच्या क्रॉसजवळ भरधाव वेगाने जात असलेली कार अचानक नियंत्रण सुटून पलटी झाली. या अपघातात कारचा अक्षरशः चक्काचूर झाला असून एकाचा पाय निकामी झाल्याची माहिती प्रत्यक्षदर्शींनी दिली आहे. तसेच अन्य दोघेजण जखमी झाल्याचे समजते.

मिळालेल्या माहितीनुसार, संबंधित कार खानापूरहून अनमोडच्या दिशेने जात होती. वेग जास्त असल्याने चालकाचे वाहनावरील नियंत्रण सुटले आणि गाडी रस्त्याच्या कडेला जाऊन तीन वेळा पलटी झाली. अपघाताची तीव्रता इतकी होती की गाडीचे मोठ्या प्रमाणात नुकसान झाले आहे. वाहनाची झालेली दुरवस्था पाहता अपघात किती भीषण होता, याची कल्पना येते.

अपघातानंतर स्थानिक नागरिकांनी तात्काळ मदतकार्य सुरू केले. “आपलं खानापूर”चे संपादक दिनकर मरगाळे यांनी घटनेची माहिती पोलिसांना दिली. त्यानंतर पोलिसांनी त्वरित रुग्णवाहिका घटनास्थळी पाठवून जखमींना उपचारासाठी हलविण्याची व्यवस्था केली आहे.
ಖಾನಾಪುರ-ಹೆಮಾಡಗಾ-ಅನಮೋಡ್ ಮಾರ್ಗದಲ್ಲಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಒಬ್ಬನ ಕಾಲು ನಿಷ್ಕ್ರಿಯ, ಇಬ್ಬರಿಗೆ ಗಂಭೀರ ಗಾಯಾ.
ಖಾನಾಪುರ : ಖಾನಾಪುರ-ಹೆಮಾಡಗಾ-ಅನಮೋಡ್ ಮಾರ್ಗದಲ್ಲಿ ಇಂದು ಸಂಜೆ ಸುಮಾರು 5.30 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿ. ಹೆಮಾಡಗಾ ಫಾರೆಸ್ಟ್ ನಾಕಾದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಪಾಲಿ ಗ್ರಾಮದ ಕ್ರಾಸ್ ಸಮೀಪ ವೇಗವಾಗಿ ಸಾಗುತ್ತಿದ್ದ ಕಾರು ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಒಬ್ಬನ ಕಾಲು ನಿಷ್ಕ್ರಿಯಗೊಂಡಿರುವುದಾಗಿ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ ಇನ್ನಿಬ್ಬರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಸಂಬಂಧಿತ ಕಾರು ಖಾನಾಪುರದಿಂದ ಅನಮೋಡ್ ದಿಕ್ಕಿನತ್ತ ಪ್ರಯಾಣಿಸುತ್ತಿತ್ತು. ವಾಹನದ ವೇಗ ಹೆಚ್ಚು ಇದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ, ಕಾರು ರಸ್ತೆ ಬದಿಗೆ ಹೋಗಿ ಮೂರು ಬಾರಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನಕ್ಕೆ ಭಾರೀ ಹಾನಿಯಾಗಿದೆ. ಕಾರಿನ ಸ್ಥಿತಿ ನೋಡಿದರೆ ಅಪಘಾತ ಎಷ್ಟು ಭೀಕರವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಾಗರಿಕರು ತುರ್ತಾಗಿ ರಕ್ಷಣಾ ಕಾರ್ಯ ಆರಂಭಿಸಿದರು. “ಆಪಲ ಖಾನಾಪುರ”ದ ಸಂಪಾದಕ ದಿನಕರ ಮರಗಾಳೆ ಅವರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ. ಬಳಿಕ ಪೊಲೀಸರು ತಕ್ಷಣವೇ ಆಂಬ್ಯುಲೆನ್ಸ್ ಅನ್ನು ಘಟನೆ ಸ್ಥಳಕ್ಕೆ ಕಳುಹಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ಮಾಡಿದ್ದಾರೆ.


