कार्यक्रमानंतर स्वतः मैदान साफ करून आमदार अभय पाटील यांनी दिला स्वच्छतेचा संदेश.
बेळगाव : लोकप्रिय नेते आणि आमदार अभय पाटील यांनी पुन्हा एकदा आपल्या समाजाभिमुख कार्यातून नागरिकांचे लक्ष वेधून घेतले आहे. मंगळवारी शहरातील व्हॅक्सीन डेपो मैदानावर आयोजित करण्यात आलेल्या भव्य ‘होळी मिलन-2026’ कार्यक्रमानंतर त्यांनी स्वच्छतेबाबत आदर्श घालून दिला.
दरवर्षीप्रमाणे यंदाही मोठ्या उत्साहात हा होळी मिलन कार्यक्रम पार पडला. शहरातील हजारो नागरिक, कार्यकर्ते, युवक-युवती आणि विविध सामाजिक क्षेत्रातील मान्यवरांनी या कार्यक्रमात मोठ्या संख्येने सहभाग घेतला होता. रंग, संगीत, नृत्य आणि आनंदाच्या वातावरणात कार्यक्रमाची सांगता झाली.
कार्यक्रम संपल्यानंतर बहुतेक वेळा मैदानावर प्लास्टिक, कागद, पाण्याच्या बाटल्या आणि इतर कचरा मोठ्या प्रमाणात साचलेला दिसतो. मात्र यावेळी आमदार अभय पाटील यांनी वेगळा आदर्श ठेवत कार्यक्रम संपताच आपल्या कार्यकर्त्यांसह स्वतः मैदानात उतरून साफसफाई सुरू केली.
हातात झाडू घेऊन त्यांनी मैदानावर पडलेला कचरा गोळा करत स्वच्छतेचे महत्त्व अधोरेखित केले. आमदारांसोबत त्यांच्या कार्यकर्त्यांनी आणि काही नागरिकांनीही स्वच्छता मोहिमेत सहभाग घेत मैदान काही वेळातच स्वच्छ केले.
यावेळी बोलताना आमदार अभय पाटील म्हणाले की, सार्वजनिक कार्यक्रमांनंतर परिसर स्वच्छ ठेवणे ही प्रत्येक नागरिकाची जबाबदारी आहे. स्वच्छ शहरासाठी केवळ महापालिका नव्हे तर सर्वांनी मिळून प्रयत्न करणे गरजेचे आहे.
आमदारांच्या या कृतीचे शहरात सर्वत्र कौतुक होत असून, सामाजिक माध्यमांवरही त्यांची ही स्वच्छता मोहिम चर्चेचा विषय ठरली आहे. अनेकांनी त्यांच्या या कृतीला “नेतृत्वाचा आदर्श” असे संबोधत प्रशंसा व्यक्त केली आहे.
‘ಹೋಳಿ ಮಿಲನ್-2026’ ಕಾರ್ಯಕ್ರಮದ ನಂತರ ಸ್ವತ ತಮ್ಮ ಮುಂದಾಳತ್ವದಲ್ಲಿ ಶಾಸಕರಾದ ಅಭಯ ಪಾಟೀಲ ಅವರು ಮೈದಾನ ಸ್ವಚ್ಛಗೊಳಿಸಿ ಸ್ವಚ್ಛತೆಯ ಬಗ್ಗೆ ಅರಿವು ನೀಡಿದರು.
ಬೆಳಗಾವಿ : ಜನಪ್ರಿಯ ನಾಯಕ ಹಾಗೂ ಶಾಸಕ ಅಭಯ ಪಾಟೀಲ ಅವರು ಮತ್ತೊಮ್ಮೆ ತಮ್ಮ ಸಮಾಜಮುಖಿ ಕಾರ್ಯದ ಮೂಲಕ ನಾಗರಿಕರ ಗಮನ ಸೆಳೆದಿದ್ದಾರೆ. ಮಂಗಳವಾರ ನಗರದಲ್ಲಿನ ವ್ಯಾಕ್ಸಿನ್ ಡೆಪೋ ಮೈದಾನದಲ್ಲಿ ಆಯೋಜಿಸಲಾದ ಭವ್ಯ ‘ಹೋಳಿ ಮಿಲನ್-2026’ ಕಾರ್ಯಕ್ರಮದ ನಂತರ ಅವರು ಸ್ವಚ್ಛತೆ ಬಗ್ಗೆ ಆದರ್ಶ ಮೂಡಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ದೊಡ್ಡ ಉತ್ಸಾಹದಲ್ಲಿ ಹೋಳಿ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದಲ್ಲಿನ ಸಾವಿರಾರು ನಾಗರಿಕರು, ಕಾರ್ಯಕರ್ತರು, ಯುವಕ-ಯುವತಿಯರು ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಣ್ಣ, ಸಂಗೀತ, ನೃತ್ಯ ಮತ್ತು ಸಂತಸದ ವಾತಾವರಣದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮ ಮುಗಿದ ನಂತರ ಸಾಮಾನ್ಯವಾಗಿ ಮೈದಾನದಲ್ಲಿ ಪ್ಲಾಸ್ಟಿಕ್, ಕಾಗದ, ನೀರಿನ ಬಾಟಲಿಗಳು ಮತ್ತು ಇತರ ಕಸ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಶಾಸಕ ಅಭಯ ಪಾಟೀಲ ಅವರು ವಿಭಿನ್ನ ಆದರ್ಶ ತೋರಿಸಿ, ಕಾರ್ಯಕ್ರಮ ಮುಗಿದ ತಕ್ಷಣ ತಮ್ಮ ಕಾರ್ಯಕರ್ತರೊಂದಿಗೆ ಸ್ವತ ಮೈದಾನಕ್ಕೆ ಇಳಿದು ಸ್ವಚ್ಛತಾ ಕಾರ್ಯ ಆರಂಭಿಸಿದರು. ಕೈಯಲ್ಲಿ ಜಾಡು ಹಿಡಿದು ಮೈದಾನದಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸುತ್ತ ಸ್ವಚ್ಛತೆಯ ಮಹತ್ವವನ್ನು ಒತ್ತಿ ಹೇಳಿದರು. ಶಾಸಕರೊಂದಿಗೆ ಅವರ ಕಾರ್ಯಕರ್ತರು ಹಾಗೂ ಕೆಲವು ನಾಗರಿಕರೂ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಕೆಲವೇ ಸಮಯದಲ್ಲಿ ಮೈದಾನವನ್ನು ಸ್ವಚ್ಛಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, ಸಾರ್ವಜನಿಕ ಕಾರ್ಯಕ್ರಮಗಳ ನಂತರ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸ್ವಚ್ಛ ನಗರಕ್ಕಾಗಿ ಕೇವಲ ಮಹಾನಗರ ಪಾಲಿಕೆ ಮಾತ್ರವಲ್ಲ, ಎಲ್ಲರೂ ಸೇರಿ ಪ್ರಯತ್ನಿಸುವುದು ಅಗತ್ಯವೆಂದು ಅವರು ತಿಳಿಸಿದರು. ಶಾಸಕರ ಈ ಕ್ರಮಕ್ಕೆ ನಗರದಲ್ಲಿ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಈ ಸ್ವಚ್ಛತಾ ಅಭಿಯಾನ ಚರ್ಚೆಯ ವಿಷಯವಾಗಿದೆ. ಅನೇಕರು ಅವರ ಈ ಕಾರ್ಯವನ್ನು “ನಾಯಕತ್ವದ ಆದರ್ಶ” ಎಂದು ಹೊಗಳಿದ್ದಾರೆ.


