वादग्रस्त वक्तव्य केल्याप्रकरणी, रामगिरी महाराजांवर गुन्हा नोंद करण्यासाठी मुस्लिम समाजाचा मोर्चा.
खानापूर ; मुस्लिम समाजाचे धर्मगुरू महंमद पैगंबर यांच्या विषयी वादग्रस्त वक्तव्य केल्याप्रकरणी, नाशिक येथील रामगिरी महाराज यांच्यावर गुन्हा नोंदवून, कठोरातील कठोर शिक्षा करा, या मागणीसाठी खानापूर तालुका ऑल मुस्लिम जमात कमिटी, यांच्या नेतृत्वाखाली मोठा मोर्चा काढण्यात आला. व खानापूरचे तहसीलदार प्रकाश गायकवाड व पीआय मंजुनाथ नाईक यांना निवेदन सादर करण्यात आले.
खानापूर तालुका ऑल मुस्लिम जमात कमिटीच्या वतीने, तहसीलदार कार्यालयावर धडक मोर्चा काढण्यात आला. मोर्चाची सुरुवात खानापूर शहरातील परिश्वाड क्रॉस पासून करण्यात आली. त्यानंतर शहरातील रविवार पेठ, स्टेशन रोड, मार्गे तहसीलदार कार्यालयावर मोर्चा काढण्यात आला. व तहसीलदार प्रकाश गायकवाड व पीआय मंजुनाथ नाईक यांना निवेदन देण्यात आले. यावेळी इरफान आर तालिकोटी अंजुमन ई इस्लामिक अध्यक्ष खानापूर, यांनी मोर्चाला मार्गदर्शन केले.
निवेदनात म्हटले आहे की. महाराष्ट्रातील नाशिकचे रामगिरी महाराज, यांनी मुस्लिम बांधवांचे धर्मगुरू महंमद पैगंबर यांच्या विषयी वादग्रस्त वक्तव्य करून, संपूर्ण देशातील मुस्लिम बांधवांच्या भावना दुखावल्या आहेत. असे वादग्रस्त वक्तव्य करून समाजात तेढ निर्माण करणाऱ्या रामगिरी महाराजांवर गुन्हा नोंद करून, कठोरातील कठोर कारवाई करावीत, या मागणीचे निवेदन सादर केले. यावेळी सामाजिक कार्यकर्ते व खानापूर तालुका अंजुमन ई इस्लामिक अध्यक्ष इरफान आर तालीकोटी, सर्व मुस्लीम धर्मगुरू, तसेच खानापूर तालुका ऑल मुस्लिम जमात कमिटीचे सर्व पदाधिकारी व मुस्लिम समाज मोठ्या संख्येने उपस्थित होता.
ವಿವಾದಾತ್ಮಕ ಹೇಳಿಕೆ ನೀಡಿದ ರಾಮಗಿರಿ ಮಹಾರಾಜರ ವಿರುದ್ಧ ಪ್ರಕರಣ ದಾಖಲಿಸಲು ಮುಸ್ಲಿಂ ಸಮುದಾಯದ ಮೆರವಣಿ ಮೂಲಕ ಮನವಿ.
ಖಾನಾಪುರ; ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಪ್ರವಾದಿ ಮುಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಾಸಿಕ್ನ ರಾಮಗಿರಿ ಮಹಾರಾಜ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಖಾನಾಪುರ ತಾಲೂಕಾ ಸಮಸ್ತ ಮುಸ್ಲಿಂ ಜಮಾತ್ ಸಮಿತಿ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಮೂಲಕ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ಖಾನಾಪುರ ಪಿಐ ಮಂಜುನಾಥ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.
ಖಾನಾಪುರ ತಾಲೂಕಾ ಸಮಸ್ತ ಮುಸ್ಲಿಂ ಜಮಾತ್ ಸಮಿತಿ ವತಿಯಿಂದ ತಹಸೀಲ್ದಾರ್ ಕಚೇರಿ ಬಳಿ ಧರಣಿ ಮೆರವಣಿಗೆ ನಡೆಸಲಾಯಿತು. ಖಾನಾಪುರ ನಗರದ ಪಾರಿಶ್ವಾಡ ಕ್ರಾಸ್ನಿಂದ ಮೆರವಣಿಗೆ ಆರಂಭವಾಗಿ ನಗರದ ಸ್ಟೇಷನ್ ರಸ್ತೆ, ರವಿವಾರ ಪೇಠ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಮೆರವಣಿಗೆ ನಡೆಸಲಾಯಿತು. ಹಾಗೂ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ಪಿಐ ಮಂಜುನಾಥ ನಾಯ್ಕ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಖಾನಾಪುರ ತಾಲೂಕಾ ಸಮಸ್ತ ಮುಸ್ಲಿಂ ಜಮಾತ್ ಸಮಿತಿ ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಮೆರವಣಿಗೆಗೆ ಮಾರ್ಗದರ್ಶನ ನೀಡಿದರು.
ಮನವಿಯಲ್ಲಿ ಮಹಾರಾಷ್ಟ್ರದ ನಾಸಿಕ್ನ ರಾಮಗಿರಿ ಮಹಾರಾಜರು ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಮುಸ್ಲಿಂ ಬಾಂಧವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇಂತಹ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಒಡಕು ಮೂಡಿಸಿರುವ ರಾಮಗಿರಿ ಮಹಾರಾಜರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಬಾಂಧವರು ಹಾಗೂ ಖಾನಾಪುರ ತಾಲೂಕಾ ಸಮಸ್ತ ಮುಸ್ಲಿಂ ಜಮಾತ್ ಸಮಿತಿ ಅಧ್ಯಕ್ಷ ಇರ್ಫಾನ್ ತಾಳಿಕೋಟಿ, ಎಲ್ಲಾ ಮುಸ್ಲಿಂ ಧರ್ಮಗುರುಗಳು, ಖಾನಾಪುರ ತಾಲೂಕಾ ಸಮಸ್ತ ಮುಸ್ಲಿಂ ಜಮಾತ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.