
जवानांनी फोडली दहीहंडी. मराठा लाईट इन्फंट्री रेजिमेंटल सेंटरमध्ये श्रीकृष्ण जन्माष्टमी सोहळा साजरा.
बेळगाव ; नेहमी कडक शिस्तीत कवायत करत असलेले, नेमबाजीचा सराव करणारे सैनिक आज दहीहंडी खेळताना पाहायला मिळाले. मराठा लाईट इन्फंट्री रेजिमेंटल सेंटर येथे श्रीकृष्ण जन्माष्टमीचा सण आणि दहीहंडी अपूर्व उत्साहात भक्तीभावाने साजरा करण्यात आला.
मिलिटरी महादेव मंदिर येथे मध्यरात्री देवकीनंदन भगवान श्री कृष्णाच्या जन्म सोहळ्याने या उत्सवाची सुरुवात झाली. त्या नंतर शेवटी रेजिमेंटल सेंटर येथे उत्साही वातावरणात दहीहंडी फोडून कार्यक्रमाची सांगता करण्यात आली.
उंचावर लटकवलेले दह्याने भरलेले मडके फोडण्याच्या दहीहंडी स्पर्धेत मराठा सेंटर मधील जवानांचे चार संघ सहभागी झाले होते. बावीस फूट उंचावर दहीहंडी बांधण्यात आली होती .चार थर रचून, उंचावरील दहीहंडी फोडण्यासाठी जवानांनी चालविलेल्या प्रयत्नांमुळे यावेळी जोशपूर्ण वातावरण पाहायला मिळाले. पहिल्या फेरीत कोणताही संघ दहीहंडी फोडू शकला नाही. दुसऱ्या फेरीत मात्र रेकॉर्डस संघाने दहीहंडी फोडून जल्लोष केला.
विजेत्या रेकॉर्डस संघाला मराठा लाईट इन्फंट्री रेजिमेंटल सेंटरचे कमांडंट ब्रिगेडियर जॉयदीप मुखर्जी यांच्या हस्ते बक्षीस देण्यात आले.
ಮರಾಠಾ ಲೈಟ್ ಇನ್ ಫೆಂಟ್ರಿ ರೆಜಿಮೆಂಟರಿ ಸೆಂಟರ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಸೈನಿಕರು ದಹಿ ಹಂಡಿ ಒಡೆದರು.
ಬೆಳಗಾವಿ; ಸದಾ ಕಟ್ಟುನಿಟ್ಟಿನ ಶಿಸ್ತು ಮತ್ತು ಶೂಟಿಂಗ್ ಅಭ್ಯಾಸ ಮಾಡುವ ಸೈನಿಕರು ಇಂದು ದಹಿಹಂಡಿ ಆಡಿ ಸಂತೋಷ ಪಟ್ಟಿದ್ದು ಕಂಡುಬಂದಿತು. ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ದಹಿ ಹಂಡಿ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.
ಮಿಲಿಟರಿ ಮಹಾದೇವ ಮಂದಿರದಲ್ಲಿ ಮಧ್ಯರಾತ್ರಿ ದೇವಕಿನಂದನ ಭಗವಾನ್ ಶ್ರೀಕೃಷ್ಣನ ಜನ್ಮ ಸಮಾರಂಭದೊಂದಿಗೆ ಉತ್ಸವವು ಪ್ರಾರಂಭವಾಯಿತು. ಬಳಿಕ ರೆಜಿಮೆಂಟಲ್ ಕೇಂದ್ರದಲ್ಲಿ ದಹಿ ಹಂಡಿ ಒಡೆಯುವ ಮೂಲಕ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಮರಾಠಾ ಕೇಂದ್ರದ ಜವಾನರ ನಾಲ್ಕು ತಂಡಗಳು ಎತ್ತರವಾಗಿ ಕಟ್ಟಿದ್ಧ ಮೊಸರು ತುಂಬಿದ ಮಡಕೆ ಒಡೆಯುವ ದಹಿ ಹಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ದಹಿಹಂಡಿಯನ್ನು ಇಪ್ಪತ್ತೆರಡು ಅಡಿ ಎತ್ತರದಲ್ಲಿ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ದಹಿ ಹಂಡಿಯನ್ನು ನಾಲ್ಕು ಸ್ತರಗಳಲ್ಲಿ ಒಡೆಯಲು ಜವಾನರು ನಡೆಸಿದ ಪ್ರಯತ್ನದಿಂದ ಉತ್ಸಾಹದ ವಾತಾವರಣ ಕಂಡು ಬಂದಿತು. ಮೊದಲ ಸುತ್ತಿನಲ್ಲಿ ಯಾವುದೇ ತಂಡವು ದಹಿ ಹಂಡಿ (ಮೊಸರು) ಭೇದಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ರೆಕಾರ್ಡ್ಸ್ ತಂಡ ದಹಿ ಹಂಡಿ (ಮೊಸರು) ಒಡೆದು ಸಂಭ್ರಮಿಸಿತು.
ವಿಜೇತ ರೆಕಾರ್ಡ್ಸ್ ತಂಡವನ್ನು ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ ಪುರಸ್ಕರಿಸಿದರು.
