छ. शिवरायांना गांभीर्याने अभ्यासावे लागेल : प्राचार्य अरविंद पाटील–मराठी सांस्कृतिक प्रतिष्ठानकडून 396 वी शिवजयंती उत्साहात साजरी.
खानापूर : छत्रपती शिवाजी महाराजांनी केवळ युद्धनीतीला महत्त्व दिले नाही, तर समाजपरिवर्तनाचा व्यापक विचार समाजासमोर मांडला. आजच्या विदारक परिस्थितीच्या पार्श्वभूमीवर समाजाला केवळ शिवरायांच्या शौर्यगाथांची नव्हे, तर त्यांच्या विचारांची नितांत गरज आहे. त्यामुळे छत्रपती शिवाजी महाराजांचा गांभीर्याने अभ्यास होणे आवश्यक आहे, असे प्रतिपादन म.मं. ताराराणी पदवीपूर्व महाविद्यालयाचे प्राचार्य अरविंद पाटील यांनी केले.
येथील मराठी सांस्कृतिक प्रतिष्ठानच्या वतीने 396 वी शिवजयंती उत्साहात साजरी करण्यात आली. यावेळी ते प्रमुख वक्ते म्हणून बोलत होते. कार्यक्रमाच्या अध्यक्षस्थानी प्रतिष्ठानचे अध्यक्ष नारायण कापोलकर होते.
प्राचार्य पाटील पुढे म्हणाले की, शिवरायांनी आपल्या मावळ्यांना शेतकऱ्यांच्या गवताच्या पात्यालाही हात लावू नका, असा कडक आदेश दिला होता. त्यांनी तळागाळातील सर्वसामान्य जनतेचा विचार करून राज्यकारभार केला. आज समाजात वाढत चाललेली अस्थिरता आणि मूल्यांची घसरण पाहता शिवरायांच्या कार्याचा व विचारांचा अभ्यास करणे काळाची गरज आहे. शिवरायांना घडविण्यात राष्ट्रमाता जिजाऊंचे मोलाचे योगदान होते. मात्र, आजच्या धावपळीच्या जीवनात आईला आपल्या मुलांना पुरेसा वेळ देता येत नाही. अनेक माता मोबाईल आणि दूरदर्शनच्या जंजाळात अडकल्या आहेत, ही खंत त्यांनी व्यक्त केली.
ते पुढे म्हणाले की, शिवरायांनी केवळ लढाया करून शौर्य गाजविले नाही, तर समाजाला नवा दृष्टिकोन दिला. त्यांच्या कार्याची दखल परदेशी लेखक आणि विचारवंतांनीही घेतली असून, त्यांच्या सारखा राजा जगात दुसरा झाला नसल्याचा अभिमानास्पद उल्लेख केला आहे. मात्र, आपल्या देशात आणि समाजात शिवरायांचे विचार कितपत रुजले आहेत, याचा आत्मपरीक्षण करण्याची आवश्यकता आहे. आगामी काळात शिवरायांचा विचार केवळ जपणे नव्हे, तर तो समाजात रुजविण्यासाठी सक्रियपणे कार्य करणे गरजेचे आहे.
यावेळी म.ए. समितीचे सरचिटणीस आबासाहेब दळवी यांनीही आपले विचार मांडले. अध्यक्षीय समारोप करताना नारायण कापोलकर यांनी आजची सामाजिक परिस्थिती अत्यंत बिकट असल्याचे सांगून समविचारी लोकांनी एकत्र येऊन समाजासाठी कार्य करण्याची गरज व्यक्त केली.
कार्यक्रमास म.ए. समितीचे सरचिटणीस आबासाहेब दळवी, गर्लगुंजी कृषी पतसंस्थेचे माजी चेअरमन राजू सिध्दाणी, भाजप नेते भरमाणी पाटील, गर्लगुंजी ग्रामपंचायतीचे माजी सदस्य प्रसाद पाटील, भाजप नेते मोहन पाटील, सदानंद मासेकर, राजू जांबोटकर, अरविंद शेलार, प्रा. जाधव, विनायक मुतगेकर, पत्रकार पिराजी कुऱ्हाडे, नारायण भटवाडकर, नागेश कोलेकर, प्रतिष्ठानचे खजिनदार ईश्वर बोबाटे, सदस्य मऱ्याप्पा पाटील, विठ्ठल पाटील, बाबाजी पाटील, ऋतिक कुंभार आदींसह शिवप्रेमी नागरिक मोठ्या संख्येने उपस्थित होते.
कार्यक्रमाचे सूत्रसंचालन सहसचिव प्रल्हाद मादार यांनी केले, तर आभार प्रदर्शन ग्रंथपाल चेतन लक्केबैलकर यांनी केले.
ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು : ಪ್ರಾಚಾರ್ಯ ಅರವಿಂದ ಪಾಟೀಲ ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ೩೯೬ನೇ ಶಿವಜಯಂತಿ ಉತ್ಸಾಹದಿಂದ ಆಚರಣೆ
ಖಾನಾಪುರ : ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಯುದ್ಧನೀತಿಗೆ ಮಾತ್ರ ಮಹತ್ವ ನೀಡಿದೆ, ಸಮಾಜ ಪರಿವರ್ತನೆಯ ಮಹತ್ವದ ಚಿಂತನೆಗಳನ್ನು ಸಮಾಜದ ಮುಂದೆ ಇಟ್ಟರು. ಇಂದಿನ ದುಸ್ಥಿತಿಯನ್ನು ಗಮನಿಸಿದರೆ ಸಮಾಜಕ್ಕೆ ಶಿವರಾಯರ ಶೌರ್ಯಗಾಥೆಗಳಷ್ಟೇ ಅಲ್ಲದೆ, ಅವರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಗಂಭೀರವಾಗಿ ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದು ಮರಾಠಾ.ಮಂಡಳ. ತಾರಾರಾಣಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಅರವಿಂದ ಪಾಟೀಲ ಹೇಳಿದರು.
ಇಲ್ಲಿನ ಮರಾಠಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ೩೯೬ನೇ ಶಿವಜಯಂತಿಯನ್ನು ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಕಾಪೋಲ್ಕರ್ ವಹಿಸಿದ್ದರು.
ಪ್ರಾಚಾರ್ಯ ಪಾಟೀಲ ಮುಂದುವರಿದು ಮಾತನಾಡುತ್ತಾ, ಶಿವರಾಯರು ತಮ್ಮ ಸೈನಿಕರಿಗೆ ರೈತರ ಹುಲ್ಲಿನ ಕಡ್ಡಿಗೂ ಕೈ ಹಾಕಬಾರದು ಎಂದು ಕಠಿಣ ಆದೇಶ ನೀಡಿದ್ದರು. ಅವರು ತಳಮಟ್ಟದ ಸಾಮಾನ್ಯ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕಾರ್ಯ ನಡೆಸಿದರು. ಇಂದಿನ ಅಸ್ಥಿರ ಹಾಗೂ ಮೌಲ್ಯಹೀನ ಪರಿಸ್ಥಿತಿಯನ್ನು ನೋಡಿದರೆ ಶಿವರಾಯರ ಕಾರ್ಯ ಮತ್ತು ಚಿಂತನೆಗಳ ಅಧ್ಯಯನ ಕಾಲದ ಅವಶ್ಯಕತೆಯಾಗಿದೆ. ಶಿವರಾಯರನ್ನು ರೂಪಿಸುವಲ್ಲಿ ರಾಷ್ಟ್ರಮಾತೆ ಜಿಜಾವು ಅವರ ಮಹತ್ತರ ಕೊಡುಗೆ ಇತ್ತು. ಆದರೆ ಇಂದಿನ ತಾಯಂದಿರಿಗೆ ತಮ್ಮ ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಅನೇಕ ತಾಯಂದಿರು ಮೊಬೈಲ್ ಮತ್ತು ಟಿ.ವಿ.ಗಳ ಜಂಜಾಟದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ವಿಷಾದವನ್ನು ಅವರು ವ್ಯಕ್ತಪಡಿಸಿದರು.
ಮುಂದೆ ಅವರು ಮಾತನಾಡಿ , ಶಿವರಾಯರು ಕೇವಲ ಯುದ್ಧಗಳಲ್ಲಿ ಶೌರ್ಯ ತೋರಿಸಲಿಲ್ಲ, ಸಮಾಜಕ್ಕೆ ವಿಭಿನ್ನ ಚಿಂತನೆ ನೀಡಿದರು. ಅವರ ಕಾರ್ಯವನ್ನು ವಿದೇಶಿ ಲೇಖಕರು ಮತ್ತು ಚಿಂತಕರು ಸಹ ಮೆಚ್ಚಿಕೊಂಡಿದ್ದು, ಅವರಂತಹ ರಾಜನು ವಿಶ್ವದ ಇತಿಹಾಸದಲ್ಲಿ ಮತ್ತೊಬ್ಬನಿಲ್ಲವೆಂದು ಗೌರವದಿಂದ ಉಲ್ಲೇಖಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮತ್ತು ಸಮಾಜದಲ್ಲಿ ಶಿವರಾಯರ ಚಿಂತನೆಗಳು ಎಷ್ಟು ಬೇರೂರಿವೆ ಎಂಬುದನ್ನು ನಾವು ಆತ್ಮಪರಿಶೀಲನೆ ಮಾಡಬೇಕು. ಮುಂದಿನ ದಿನಗಳಲ್ಲಿ ಶಿವರಾಯರ ಚಿಂತನೆಗಳನ್ನು ಕೇವಲ ಉಳಿಸುವುದಲ್ಲ, ಸಮಾಜದಲ್ಲಿ ಅಳವಡಿಸಲು ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಈ ಸಂದರ್ಭದಲ್ಲಿ ಮ.ಎ. ಸಮಿತಿಯ ಸರಚಿಟ್ಣೀಸ್ ಆಬಾಸಾಹೇಬ ದಳವಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ನಾರಾಯಣ ಕಾಪೋಲ್ಕರ್ ಇಂದಿನ ಸಾಮಾಜಿಕ ಪರಿಸ್ಥಿತಿ ಅತ್ಯಂತ ಸಂಕಷ್ಟಕರವಾಗಿದೆ ಎಂದು ತಿಳಿಸಿ, ಸಮವಿಚಾರ ಹೊಂದಿರುವವರು ಒಗ್ಗೂಡಿ ಸಮಾಜಕ್ಕಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮ.ಎ. ಸಮಿತಿಯ ಸರಚಿಟ್ಣೀಸ್ ಆಬಾಸಾಹೇಬ ದಳವಿ, ಗರ್ಲಗುಂಜಿ ಕೃಷಿ ಪತ್ತಿನ ಸಂಸ್ಥೆಯ ಮಾಜಿ ಚೇರ್ಮನ್ ರಾಜು ಸಿದ್ಧಾಣಿ, ಬಿಜೆಪಿ ನಾಯಕ ಭರಮಾಣಿ ಪಾಟೀಲ, ಗರ್ಲಗುಂಜಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಸಾದ್ ಪಾಟೀಲ, ಬಿಜೆಪಿ ನಾಯಕ ಮೋಹನ್ ಪಾಟೀಲ, ಸದಾನಂದ ಮಾಸೇಕರ್, ರಾಜು ಜಾಂಬೋಟ್ಕರ್, ಅರವಿಂದ ಶೆಲಾರ್, ಪ್ರಾ. ಜಾಧವ್, ವಿನಾಯಕ ಮುತಗೇಕರ್, ಪತ್ರಕರ್ತ ಪಿರಾಜಿ ಕುರಾಡೆ, ನಾರಾಯಣ ಭಟವಾಡ್ಕರ್, ನಾಗೇಶ್ ಕೋಲೆಕರ್, ಪ್ರತಿಷ್ಠಾನದ ಖಜಾಂಚಿ ಈಶ್ವರ ಬೋಬಾಟೆ, ಸದಸ್ಯ ಮರ್ಯಪ್ಪ ಪಾಟೀಲ, ವಿಠ್ಠಲ ಪಾಟೀಲ, ಬಾಬಾಜಿ ಪಾಟೀಲ, ಋತಿಕ್ ಕುಂಭಾರ ಸೇರಿದಂತೆ ಅನೇಕ ಶಿವಪ್ರೇಮಿ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹ ಕಾರ್ಯದರ್ಶಿ ಪ್ರಲ್ಹಾದ ಮಾದಾರ್ ನಿರ್ವಹಿಸಿದರು. ಕೃತಜ್ಞತಾ ನುಡಿಗಳನ್ನು ಗ್ರಂಥಪಾಲಕ ಚೇತನ ಲಕ್ಕೇಬೈಲ್ಕರ್ ಸಲ್ಲಿಸಿದರು.


