खासदार विश्वेश्वर हेगडे-कागेरी यांची उद्या खानापूरला धावती भेट; खानापूर व पारिषवाड येथे वनमहोत्सव कार्यक्रम.
खानापूर : प्रतिनिधी
कॅनरा लोकसभा मतदारसंघाचे खासदार तथा कर्नाटक विधानसभेचे माजी सभापती आणि माजी शिक्षणमंत्री विश्वेश्वर हेगडे-कागेरी हे रविवारी (दि. 21 जून 2026) खानापूर तालुक्याला धावती भेट देणार असून त्यांच्या हस्ते खानापूर व पारिषवाड येथे वृक्षारोपण करून वनमहोत्सव साजरा करण्यात येणार आहे, अशी माहिती भाजपचे राज्य कार्यकारिणी सदस्य प्रमोद कोचेरी व तालुका भाजपा पदाधिकाऱ्यांनी दिली आहे.
बेळगाव येथे राष्ट्रीय स्वयंसेवक संघाच्या वतीने उभारण्यात आलेल्या ‘जगन्नाथ भवन’ या नव्या इमारतीचे उद्घाटन रविवारी होणार असून या कार्यक्रमाला विविध मान्यवर उपस्थित राहणार आहेत. खासदार विश्वेश्वर हेगडे-कागेरी हे देखील या उद्घाटन सोहळ्यात सहभागी होणार आहेत.
बेळगाव येथील कार्यक्रमानंतर दुपारी सुमारे 4 वाजता खानापूर येथे त्यांचे आगमन होणार असून रेल्वे स्थानकाजवळील मारुती मंदिर परिसरात त्यांच्या हस्ते वृक्षारोपण करण्यात येईल. त्यानंतर सायंकाळी 5 वाजता पारिषवाड येथील लक्ष्मी मंदिराजवळ असलेल्या कन्नड शाळा परिसरात वृक्षारोपण करून वनमहोत्सव साजरा करण्यात येणार आहे.
या दोन्ही कार्यक्रमांना भाजपचे सर्व पदाधिकारी, कार्यकर्ते व नागरिकांनी मोठ्या संख्येने उपस्थित राहावे, असे आवाहन भाजपचे राज्य कार्यकारिणी सदस्य प्रमोद कोचेरी, जिल्हा उपाध्यक्ष संजय कुबल, तालुका अध्यक्ष बसवराज सानीकोप, प्रधान कार्यदर्शी मल्लाप्पा मारीहाळ, प्रधान कार्यदर्शी गुंडू तोपिनकट्टी तसेच इतर पदाधिकाऱ्यांनी केले आहे.
ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ನಾಳೆ ಖಾನಾಪುರಕ್ಕೆ ಭೇಟಿ; ಖಾನಾಪುರ ಹಾಗೂ ಪಾರಿಷವಾಡದಲ್ಲಿ ಆಯೋಜಿಸಿರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ.
ಖಾನಾಪುರ : ಪ್ರತಿನಿಧಿ
ಕ್ಯಾನರಾ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷರು ಮತ್ತು ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಭಾನುವಾರ (ದಿ. 21 ಜೂನ್ 2026) ಖಾನಾಪುರ ತಾಲ್ಲೂಕಿಗೆ ಭೇಟಿ ನೀಡಲಿದ್ದು, ಅವರ ನೇತೃತ್ವದಲ್ಲಿ ಖಾನಾಪುರ ಹಾಗೂ ಪಾರಿಷವಾಡ ಗ್ರಾಮಗಳಲ್ಲಿ ವೃಕ್ಷಾರೋಪಣ ಮಾಡುವ ಮೂಲಕ ವನಮಹೋತ್ಸವ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೊಚೇರಿ ಹಾಗೂ ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಿರ್ಮಿಸಲಾದ ‘ಜಗನ್ನಾಥ ಭವನ’ ಎಂಬ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಭಾನುವಾರ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರೂ ಸಹ ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿಯ ಕಾರ್ಯಕ್ರಮದ ನಂತರ ಮಧ್ಯಾಹ್ನ ಸುಮಾರು 4 ಗಂಟೆಗೆ ಅವರು ಖಾನಾಪುರಕ್ಕೆ ಆಗಮಿಸಲಿದ್ದು, ರೈಲು ನಿಲ್ದಾಣದ ಸಮೀಪದ ಮಾರುತಿ ದೇವಸ್ಥಾನ ಆವರಣದಲ್ಲಿ ಅವರಿಂದ ವೃಕ್ಷಾರೋಪಣ ಕಾರ್ಯಕ್ರಮ ನೆರವೇರಲಿದೆ.
ಅದಾದ ಬಳಿಕ ಸಂಜೆ 5 ಗಂಟೆಗೆ ಪಾರಿಷವಾಡ ಗ್ರಾಮದ ಲಕ್ಷ್ಮೀ ದೇವಸ್ಥಾನದ ಸಮೀಪ ಇರುವ ಕನ್ನಡ ಶಾಲೆಯ ಆವರಣದಲ್ಲಿ ವೃಕ್ಷಾರೋಪಣ ಮಾಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಗುವುದು.
ಈ ಎರಡೂ ಕಾರ್ಯಕ್ರಮಗಳಿಗೆ ಬಿಜೆಪಿ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೊಚೇರಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಕುಬಲ, ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೊಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ ಹಾಗೂ ಇತರ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.


