कन्नडसक्तीविरोधी जनजागृती मोहिमेसाठी महाराष्ट्र एकीकरण समितीच्या वतीने सोमवारी पत्रक वाटप.
खानापूर : प्रतिनिधी
बेळगाव येथे 22 जून रोजी आयोजित करण्यात आलेल्या कन्नडसक्तीविरोधी आंदोलनाच्या पार्श्वभूमीवर खानापूर तालुका महाराष्ट्र एकीकरण समितीच्या वतीने जनजागृती मोहीम हाती घेण्यात आली आहे. या मोहिमेअंतर्गत सोमवार, दि. 15 जून रोजी सकाळी 10.30 वाजता खानापूर येथील शिवस्मारक परिसरात जनजागृतीपर पत्रकांचे वाटप करण्यात येणार असल्याची माहिती समितीने दिली आहे.
यावेळी माडीगुंजी येथील शाळेत प्रस्तावित कर्नाटक पब्लिक स्कूलच्या कानडीकरणाच्या मुद्द्यावर क्षेत्र शिक्षणाधिकाऱ्यांना निवेदन सादर करण्याचाही निर्णय घेण्यात आला आहे. या कार्यक्रमास समितीचे सर्व पदाधिकारी, कार्यकारिणी सदस्य आणि कार्यकर्त्यांनी उपस्थित राहून उपक्रम यशस्वी करावा, असे आवाहन करण्यात आले आहे.
सीमाप्रश्नी सर्वोच्च न्यायालयाच्या न्यायाधीशांना सादर करण्यात येणाऱ्या एक लाख सह्यांच्या पुस्तिका संबंधित कार्यकर्त्यांनी सोबत आणाव्यात, असेही समितीने स्पष्ट केले आहे.
दरम्यान, जनजागृती मोहिमेअंतर्गत मंगळवार, दि. 16 जून रोजी जांबोटी येथे तसेच 17 जून रोजी नंदगड येथे पत्रकांचे वाटप करण्यात येणार आहे. या सर्व उपक्रमांमध्ये समितीच्या पदाधिकाऱ्यांनी व कार्यकर्त्यांनी सक्रिय सहभाग नोंदवून मोहीम यशस्वी करावी, असे आवाहन समितीचे अध्यक्ष गोपाळ देसाई, माजी आमदार दिगंबर पाटील, कार्याध्यक्ष मुरलीधर पाटील व निरंजन सरदेसाई, तसेच सरचिटणीस आबासाहेब दळवी यांनी केले आहे.
ಕನ್ನಡ ಹೇರಿಕೆ ವಿರೋಧಿ ಜನಜಾಗೃತಿ ಅಭಿಯಾನಕ್ಕಾಗಿ ಸೋಮವಾರ ಕರ ಪತ್ರಿಕೆಗಳ ವಿತರಣೆ.
ಖಾನಾಪುರ : ಪ್ರತಿನಿಧಿ
ಬೆಳಗಾವಿಯಲ್ಲಿ ಜೂನ್ 22ರಂದು ಆಯೋಜಿಸಲಾದ ಕನ್ನಡ ಹೇರಿಕೆ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನದ ಅಂಗವಾಗಿ ಸೋಮವಾರ, ಜೂನ್ 15ರಂದು ಬೆಳಿಗ್ಗೆ 10.30 ಗಂಟೆಗೆ ಖಾನಾಪುರದ ಶಿವಸ್ಮಾರಕ ಆವರಣದಲ್ಲಿ ಜನಜಾಗೃತಿ ಮೂಡಿಸುವ ಕರಪತ್ರಿಕೆಗಳ ವಿತರಣೆ ನಡೆಯಲಿದೆ ಎಂದು ಸಮಿತಿಯು ತಿಳಿಸಿದೆ.
ಈ ಸಂದರ್ಭದಲ್ಲಿ ಮಾಡಿಗುಂಜಿ ಶಾಲೆಯಲ್ಲಿ ಪ್ರಸ್ತಾವಿತ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಕನ್ನಡೀಕರಣದ ವಿಷಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗುವ ಒಂದು ಲಕ್ಷ ಸಹಿಗಳ ಪುಸ್ತಕಗಳನ್ನು ಸಂಬಂಧಿತ ಕಾರ್ಯಕರ್ತರು ತಮ್ಮೊಂದಿಗೆ ತರಬೇಕೆಂದು ಸಮಿತಿಯು ಸ್ಪಷ್ಟಪಡಿಸಿದೆ.
ಇದೇ ವೇಳೆ, ಜನಜಾಗೃತಿ ಅಭಿಯಾನದ ಅಂಗವಾಗಿ ಮಂಗಳವಾರ, ಜೂನ್ 16ರಂದು ಜಾಂಬೋಟಿ ಹಾಗೂ ಜೂನ್ 17ರಂದು ನಂದಗಡದಲ್ಲಿ ಕರಪತ್ರಿಕೆಗಳ ವಿತರಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಅಧ್ಯಕ್ಷ ಗೋಪಾಳ ದೇಸಾಯಿ, ಮಾಜಿ ಶಾಸಕ ದಿಗಂಬರ್ ಪಾಟೀಲ, ಕಾರ್ಯಾಧ್ಯಕ್ಷರು ಮುರಳೀಧರ ಪಾಟೀಲ ಮತ್ತು ನಿರಂಜನ್ ಸರದೇಶಾಯಿ, ಹಾಗು ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ ಅವರು ಮನವಿ ಮಾಡಿದ್ದಾರೆ.


