पारिशवाड क्रॉस येथे विद्युत तारांच्या ठिणगीने ऊस पिकाला आग; 20 टन ऊस जळून खाक!
खानापूर : प्रतिनिधी
खानापूर तालुक्यात कान्सुली, गणेबैल आणि रामगुरवाडी येथील शेतकऱ्यांचा ऊस जळून नुकसान झाल्याच्या घटना ताज्या असतानाच, आज (मंगळवार, दि. 27 ऑक्टोबर) सकाळी खानापूर शहराजवळील पारिशवाड क्रॉस येथील शेतवडीत पुन्हा ऊस पिकाला आग लागली. या आगीत ज्योतिबा धाकलु घाडी या शेतकऱ्याचा अंदाजे 20 टन ऊस जळून खाक झाला असून, त्यांचे हजारो रुपयांचे आर्थिक नुकसान झाले आहे.
विद्युत तारांमधून ठिणग्या पडल्याने आग लागल्याचा अंदाज….
सदर शेतवडीवरील उसाच्या पिकावरून गेलेल्या विद्युत तारांमधून ठिणग्या खाली पडल्याने ऊस पिकाला आग लागल्याचे समजते. आगीमुळे शेतकऱ्याचे मोठे नुकसान झाले असून, वारंवार घडणाऱ्या अशा घटनांमुळे शेतकऱ्यांमध्ये चिंतेचे वातावरण निर्माण झाले आहे.
प्रमोद कोचेरी यांची घटनास्थळी धाव; अग्निशामक दलाकडून आग आटोक्यात….
घटनेची माहिती मिळताच भाजपाचे राज्य कार्यकारिणी सदस्य प्रमोद कोचेरी आणि भाजपाचे खानापूर तालुका जनरल सेक्रेटरी गुंडू तोपिनकट्टी यांनी तातडीने घटनास्थळी धाव घेतली. प्रमोद कोचेरी यांनी हेस्कॉमच्या अधिकाऱ्यांशी संपर्क साधून विद्युत पुरवठा बंद करण्यास सांगितले. तसेच अग्निशामक दलाला घटनेची माहिती देऊन तातडीने मदत पोहोचविण्याची विनंती केली.
त्यानंतर अग्निशामक दलाचे वाहन घटनास्थळी दाखल झाले. अग्निशामक दलाच्या जवानांनी प्रयत्न करून आग आटोक्यात आणली. त्यामुळे आगीचा अधिक फैलाव रोखण्यास मदत झाली.
नुकसानभरपाई मिळवून देण्यासाठी प्रयत्न करण्याची ग्वाही….
यावेळी प्रमोद कोचेरी यांनी नुकसानग्रस्त शेतकरी ज्योतिबा धाकलु घाडी यांना नुकसानभरपाई मिळवून देण्यासाठी प्रयत्न करण्याची ग्वाही दिली. शेतकऱ्यांना अशा प्रकारच्या नैसर्गिक किंवा विद्युत बिघाडामुळे होणाऱ्या नुकसानीतून दिलासा मिळावा, यासाठी संबंधित विभागांनी तातडीने कार्यवाही करणे आवश्यक असल्याचे यानिमित्ताने अधोरेखित झाले आहे.
दरम्यान, आगीची माहिती मिळताच भाजपाचे जिल्हा उपाध्यक्ष संजय कुबल, लैला शुगरचे अधिकारी बाळासाहेब शेलार यांच्यासह अनेकांनी घटनास्थळी धाव घेऊन परिस्थितीची पाहणी केली.
विद्युत तारांची देखभाल आणि शेतकऱ्यांच्या नुकसानीचा प्रश्न ऐरणीवर…
खानापूर तालुक्यात अलीकडच्या काळात विविध ठिकाणी ऊस पिकांना आग लागण्याच्या घटना घडत आहेत. विद्युत तारांमधून ठिणग्या पडून शेतकऱ्यांच्या महिन्यांच्या मेहनतीचे नुकसान होत असल्याने हेस्कॉम प्रशासनाने विद्युत वाहिन्यांची तपासणी व आवश्यक देखभाल तातडीने करावी, अशी अपेक्षा शेतकरी व्यक्त करत आहेत. नुकसानग्रस्त शेतकऱ्यांच्या नुकसानीचे पंचनामे करून त्यांना नियमानुसार भरपाई मिळवून देण्याची मागणीही महत्त्वाची ठरत आहे.
ಪಾರಿಶವಾಡ ಕ್ರಾಸ್ ಬಳಿ ವಿದ್ಯುತ್ ತಂತಿಗಳಿಂದ ಕಿಡಿ ಬಿದ್ದು ಕಬ್ಬಿನ ಬೆಳೆಗೆ ಬೆಂಕಿ; 20 ಟನ್ ಕಬ್ಬು ಸುಟ್ಟು ಭಸ್ಮ!.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಕಾನ್ಸೂಲಿ, ಗಣೇಬೈಲ್ ಮತ್ತು ರಾಮಗುರುವಾಡಿ ಗ್ರಾಮಗಳ ರೈತರ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿ ನಷ್ಟ ಸಂಭವಿಸಿದ ಘಟನೆಗಳು ಮಾಸುವ ಮುನ್ನವೇ, ಇಂದು (ಮಂಗಳವಾರ, ಅ. 27) ಬೆಳಿಗ್ಗೆ ಖಾನಾಪುರ ಪಟ್ಟಣದ ಸಮೀಪದ ಪಾರಿಶವಾಡ ಕ್ರಾಸ್ ಬಳಿ ಕೃಷಿ ಜಮೀನಿನಲ್ಲಿ ಮತ್ತೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ. ಈ ಘಟನೆಯಲ್ಲಿ ಜ್ಯೋತಿಬಾ ಧಾಕಲು ಘಾಡಿ ಎಂಬ ರೈತರ ಅಂದಾಜು 20 ಟನ್ ಕಬ್ಬು ಸುಟ್ಟು ಭಸ್ಮವಾಗಿದ್ದು, ಅವರಿಗೆ ಸಾವಿರಾರು ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ.
ವಿದ್ಯುತ್ ತಂತಿಗಳಿಂದ ಕಿಡಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ….
ಸಂಬಂಧಪಟ್ಟ ಕೃಷಿ ಜಮೀನಿನಲ್ಲಿರುವ ಕಬ್ಬಿನ ಬೆಳೆಯ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳಿಂದ ಕಿಡಿಗಳು ಕೆಳಗೆ ಬಿದ್ದ ಪರಿಣಾಮ ಕಬ್ಬಿನ ಬೆಳೆಗೆ ಬೆಂಕಿ ತಗುಲಿರಬಹುದು ಎಂದು ತಿಳಿದುಬಂದಿದೆ. ಬೆಂಕಿಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದ್ದು, ತಾಲ್ಲೂಕಿನ ವಿವಿಧೆಡೆ ಪದೇಪದೇ ಇಂತಹ ಘಟನೆಗಳು ಸಂಭವಿಸುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಪ್ರಮೋದ್ ಕೋಚೇರಿ ಸ್ಥಳಕ್ಕೆ ಭೇಟಿ; ಅಗ್ನಿಶಾಮಕ ದಳದಿಂದ ಬೆಂಕಿ ನಿಯಂತ್ರಣ….
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಕೋಚೇರಿ ಮತ್ತು ಬಿಜೆಪಿಯ ಖಾನಾಪುರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಪ್ರಮೋದ್ ಕೋಚೇರಿ ಅವರು ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಸೂಚಿಸಿದರು. ಅಲ್ಲದೆ, ಅಗ್ನಿಶಾಮಕ ದಳಕ್ಕೂ ಘಟನೆಯ ಕುರಿತು ಮಾಹಿತಿ ನೀಡಿ ತುರ್ತಾಗಿ ಸ್ಥಳಕ್ಕೆ ಆಗಮಿಸಿ ನೆರವು ನೀಡುವಂತೆ ಮನವಿ ಮಾಡಿದರು.
ನಂತರ ಅಗ್ನಿಶಾಮಕ ದಳದ ವಾಹನ ಘಟನಾ ಸ್ಥಳಕ್ಕೆ ಆಗಮಿಸಿ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಇದರಿಂದ ಬೆಂಕಿ ಮತ್ತಷ್ಟು ಪ್ರದೇಶಕ್ಕೆ ಹರಡುವುದನ್ನು ತಡೆಯಲು ಸಾಧ್ಯವಾಯಿತು.
ನಷ್ಟ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಪ್ರಮೋದ್ ಕೋಚೇರಿ ಭರವಸೆ….
ಈ ಸಂದರ್ಭದಲ್ಲಿ ಪ್ರಮೋದ್ ಕೋಚೇರಿ ಅವರು ಬೆಂಕಿಯಿಂದ ನಷ್ಟಕ್ಕೊಳಗಾದ ರೈತ ಜ್ಯೋತಿಬಾ ಧಾಕಲು ಘಾಡಿ ಅವರಿಗೆ ಸೂಕ್ತ ನಷ್ಟ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಇಂತಹ ನೈಸರ್ಗಿಕ ವಿಪತ್ತುಗಳು ಅಥವಾ ವಿದ್ಯುತ್ ದೋಷಗಳಿಂದ ರೈತರಿಗೆ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.
ಇದೇ ವೇಳೆ, ಬೆಂಕಿ ಅವಘಡದ ಮಾಹಿತಿ ತಿಳಿದ ಕೂಡಲೇ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಕುಬಲ್, ಲೈಲಾ ಶುಗರ್ಸ್ನ ಅಧಿಕಾರಿ ಬಾಲಾಸಾಹೇಬ ಶೇಲಾರ್ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ವಿದ್ಯುತ್ ತಂತಿಗಳ ನಿರ್ವಹಣೆ ಮತ್ತು ರೈತರ ಬೆಳೆ ನಷ್ಟದ ಸಮಸ್ಯೆ ಮತ್ತೆ ಮುನ್ನೆಲೆಗೆ….
ಖಾನಾಪುರ ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧೆಡೆ ಕಬ್ಬಿನ ಬೆಳೆಗಳಿಗೆ ಬೆಂಕಿ ತಗುಲುತ್ತಿರುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ವಿದ್ಯುತ್ ತಂತಿಗಳಿಂದ ಕಿಡಿಗಳು ಬಿದ್ದು ರೈತರು ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆದ ಕಬ್ಬಿನ ಬೆಳೆ ನಾಶವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಹೆಸ್ಕಾಂ ಆಡಳಿತವು ವಿದ್ಯುತ್ ಮಾರ್ಗಗಳ ಸಮಗ್ರ ಪರಿಶೀಲನೆ ನಡೆಸಿ, ಅಗತ್ಯವಿರುವ ಕಡೆಗಳಲ್ಲಿ ವಿದ್ಯುತ್ ತಂತಿಗಳ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.
ಅದೇ ರೀತಿ, ಬೆಂಕಿಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಪಂಚನಾಮೆ ಮಾಡಬೇಕು. ನಿಯಮಾನುಸಾರ ಅರ್ಹ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂಬ ಬೇಡಿಕೆಯೂ ಮಹತ್ವ ಪಡೆದುಕೊಂಡಿದೆ.
ಪದೇಪದೇ ಸಂಭವಿಸುತ್ತಿರುವ ಇಂತಹ ಅಗ್ನಿ ಅವಘಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ರೈತರ ಬೆಳೆಗಳನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ರೈತರ ಪ್ರಮುಖ ಒತ್ತಾಯವಾಗಿದೆ.

