कारलगा हट्टी व कारलगा येथे 29 ऑक्टोबरपासून स्वयंभू श्री ब्रह्मदेव मंदिराचा भव्य धार्मिक सोहळा!31 ऑक्टोबर रोजी मंदिराचे उद्घाटन; होमहवन, काळम्मादेवी प्राणप्रतिष्ठापना.
खानापूर : प्रतिनिधी
खानापूर तालुक्यातील कारलगा हट्टी व कारलगा येथील जागृत ग्रामदैवत स्वयंभू श्री ब्रह्मदेव मंदिराच्या जीर्णोद्धारानंतर मंदिर उद्घाटन समारंभ, होमहवन, काळम्मादेवी प्राणप्रतिष्ठापना व कळसारोहण सोहळ्याचे आयोजन गुरुवार, दि. २९ ऑक्टोबर ते शनिवार, दि. ३१ ऑक्टोबर २०२६ या कालावधीत करण्यात आले आहे. या तीन दिवसीय धार्मिक सोहळ्यानिमित्त विविध धार्मिक विधी, मिरवणूक, कीर्तन, महाप्रसाद आणि भजन-भारुड कार्यक्रम होणार असून परिसरातील भाविकांनी मोठ्या संख्येने उपस्थित राहून या सोहळ्याचा लाभ घ्यावा, असे आवाहन श्री ब्रह्मदेव जीर्णोद्धार कमिटी व ग्रामस्थांच्या वतीने करण्यात आले आहे.
गुरुवारी कळस मिरवणूक….
गुरुवार, दि. २९ ऑक्टोबर रोजी सकाळी ९ वाजता कारलगा हट्टी व कारलगा या दोन्ही गावांतून कळस मिरवणुकीचे आयोजन करण्यात आले आहे. या मिरवणुकीत ग्रामस्थ व भाविक सहभागी होणार आहेत. मंदिराच्या धार्मिक सोहळ्याची सुरुवात या मिरवणुकीने होणार आहे.
शुक्रवारी होमहवन, कळसारोहण व काळम्मादेवी प्राणप्रतिष्ठापना…
शुक्रवार, दि. ३० ऑक्टोबर रोजी सकाळी ९ वाजता होमहवन, वास्तुशांती व अन्य धार्मिक विधी होणार आहेत. सकाळी ११ वाजता कळसारोहण समारंभ पार पडणार असून काळम्मादेवी प्राणप्रतिष्ठापनेचा विधीही आयोजित करण्यात आला आहे.
या कार्यक्रमाला हंडीभडंगनाथ कुंभार्डा येथील मठाधीश पूज्य श्री पिरयोगी मोहननाथ महाराज यांचे दिव्य सान्निध्य लाभणार आहे. तसेच बडकोळ मठाचे पूज्य श्री नागेंद्रस्वामी यांच्या उपस्थितीत काळम्मादेवी स्थापना विधी होणार आहे. दुपारी भाविकांसाठी महाप्रसादाचे आयोजन करण्यात आले आहे.
शुक्रवारी रात्री ७ ते ९ या वेळेत हंडीभडंगनाथ योगी सागरनाथ कारभारी महाराज, बार्डा यांचा कीर्तन कार्यक्रम होणार आहे.
शनिवारी मंदिराचे उद्घाटन व महाप्रसाद….
शनिवार, दि. ३१ ऑक्टोबर रोजी सकाळी ११ वाजता मान्यवरांच्या हस्ते स्वयंभू श्री ब्रह्मदेव मंदिराचा उद्घाटन समारंभ होणार आहे. या कार्यक्रमाचे अध्यक्षस्थान कारलगा हट्टी येथील श्री परशराम मऱ्याप्पा पाटील भूषविणार आहेत.
खानापूरचे आमदार श्री विठ्ठल सोमण्णा हलगेकर यांच्या हस्ते मंदिराचे उद्घाटन करण्यात येणार आहे. तसेच रुद्रस्वामी मठ, अवरोळी येथील पूज्य श्री चन्नबसवदेवरु यांची उपस्थिती लाभणार आहे.
या सोहळ्याला पुणे येथील उद्योजक श्री कृष्णा यल्लाप्पा बेळगांवकर (गोदी इंडस्ट्रीज), महालक्ष्मी शुगर्सचे व्यवस्थापकीय संचालक श्री सदानंद मारुती पाटील, श्री पंडित प. ओगले, भाजपचे राज्य कार्यकारिणी सदस्य श्री प्रमोद कोचेरी, भाजपचे जिल्हा उपाध्यक्ष श्री संजय कुबल, भाजपचे खानापूर तालुका कार्यदर्शी श्री मल्लाप्पा मारीहाळ आणि शिवसेनेचे नंदगड येथील श्री खेमाजी मऱ्याप्पा पाटील यांच्यासह विविध क्षेत्रांतील मान्यवर उपस्थित राहणार आहेत.
गाभारा उद्घाटन व दीपप्रज्वलन….
मंदिराच्या गाभारा उद्घाटन समारंभासाठी खानापूरचे माजी आमदार व बेळगाव जिल्हा मध्यवर्ती सहकारी बँकेचे संचालक श्री अरविंद चंद्रकांत पाटील यांची उपस्थिती राहणार आहे.
यावेळी गर्लगुंजी पीकेपीएसचे माजी चेअरमन श्री राजू सिद्धाणी, कारलगा येथील श्री मनोहर नागाप्पा पाटील, करंबळ पीकेपीएसचे चेअरमन श्री नितीन राजाराम पाटील, खानापूर येथील श्री नागाण्णा बाळाप्पा होसमनी, कारलगा येथील श्री रामचंद्र देवाप्पा पाटील आणि मेंढेगाळी येथील श्री शिवानंद मारुती पाटील यांच्यासह अन्य मान्यवर उपस्थित राहणार आहेत.
दीपप्रज्वलनासाठी शिनोळी येथील ओमकार ट्रेडर्सचे श्री दत्तात्रय गावडू पाटील, श्री मुरलीधर गणपतराव पाटील, श्री निरंजन सरदेसाई, श्री मुकुंद तु. पाटील, जळगे येथील पीएलडी बँकेचे चेअरमन व महाराष्ट्र एकीकरण समितीचे कार्यकर्ते, तसेच समितीचे पदाधिकारी व अन्य मान्यवर सहभागी होणार आहेत. पीकेपीएस खानापूरचे संचालक श्री संभाजी सहदेव पाटील यांचीही उपस्थिती राहणार आहे.
रात्री भजन-भारुड कार्यक्रम…
शनिवार, दि. ३१ ऑक्टोबर रोजी दुपारी १ वाजता महाप्रसादाचे आयोजन करण्यात आले आहे. रात्री ठीक १० वाजता कारलगा येथील श्री संत एकनाथ भजनी भारुड मंडळाचा भजनी भारुड कार्यक्रम होणार आहे.
ग्रामस्थांकडून भाविकांना निमंत्रण…
या धार्मिक सोहळ्याच्या यशस्वी आयोजनासाठी श्री ब्रह्मदेव जीर्णोद्धार कमिटी, कारलगा हट्टी पंच कमिटी, कारलगा हट्टी व कारलगा ग्रामस्थ, श्री साईबाबा सार्वजनिक गणेशोत्सव मंडळ, सर्व भजनी मंडळे, श्री शिवप्रतिष्ठान हिंदुस्थान दुर्गामाता दौड, बजरंग दल, शिवशंभो युवक मंडळ, शिवशक्ती युवक मंडळ आणि आदर्श युवक मंडळ आदी संस्था व मंडळे परिश्रम घेत आहेत.
स्वयंभू श्री ब्रह्मदेव मंदिराच्या या पवित्र सोहळ्यामुळे कारलगा हट्टी व कारलगा परिसरात धार्मिक आणि भक्तिमय वातावरण निर्माण होणार असून सर्व भाविकांनी सहकुटुंब उपस्थित राहून धार्मिक कार्यक्रमांचा लाभ घ्यावा, असे आवाहन समस्त ग्रामस्थांच्या वतीने करण्यात आले आहे.
ಕಾರಲಗಾ ಹಟ್ಟಿ ಹಾಗೂ ಕಾರಲಗಾ ಗ್ರಾಮಗಳಲ್ಲಿ ಅಕ್ಟೋಬರ್ 29ರಿಂದ ಸ್ವಯಂಭೂ ಶ್ರೀ ಬ್ರಹ್ಮದೇವರ ದೇವಸ್ಥಾನದಲ್ಲಿ ಭವ್ಯ ಧಾರ್ಮಿಕ ಸಮಾರಂಭ! ಅಕ್ಟೋಬರ್ 31ರಂದು ದೇವಸ್ಥಾನದ ಉದ್ಘಾಟನೆ; ಹೋಮಹವನ, ಕಾಳಮ್ಮದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ಕಾರಲಗಾ ಹಟ್ಟಿ ಹಾಗೂ ಕಾರಲಗಾ ಗ್ರಾಮಗಳ ಜಾಗೃತ ಗ್ರಾಮ ದೇವತೆಯಾದ ಸ್ವಯಂಭೂ ಶ್ರೀ ಬ್ರಹ್ಮದೇವರ ದೇವಸ್ಥಾನದ ಜೀರ್ಣೋದ್ಧಾರದ ನಂತರ ದೇವಸ್ಥಾನದ ಉದ್ಘಾಟನಾ ಸಮಾರಂಭ, ಹೋಮಹವನ, ಕಾಳಮ್ಮದೇವಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ರಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಗುರುವಾರ, ದಿನಾಂಕ 29 ಅಕ್ಟೋಬರ್ನಿಂದ ಶನಿವಾರ, ದಿನಾಂಕ 31 ಅಕ್ಟೋಬರ್ 2026ರ ವರೆಗೆ ಆಯೋಜಿಸಲಾಗಿದೆ.
ಈ ಮೂರು ದಿನಗಳ ಧಾರ್ಮಿಕ ಸಮಾರಂಭದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಮೆರವಣಿಗೆ, ಕೀರ್ತನೆ, ಮಹಾಪ್ರಸಾದ ಹಾಗೂ ಭಜನೆ-ಭಾರುಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪವಿತ್ರ ಧಾರ್ಮಿಕ ಸಮಾರಂಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಶ್ರೀ ಬ್ರಹ್ಮದೇವ ಜೀರ್ಣೋದ್ಧಾರ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಮನವಿ ಮಾಡಲಾಗಿದೆ.
ಗುರುವಾರ ಕಳಸ ಮೆರವಣಿಗೆ…
ಗುರುವಾರ, ದಿನಾಂಕ 29 ಅಕ್ಟೋಬರ್ ರಂದು ಬೆಳಿಗ್ಗೆ 9 ಗಂಟೆಗೆ ಕಾರಲಗಾ ಹಟ್ಟಿ ಹಾಗೂ ಕಾರಲಗಾ ಈ ಎರಡೂ ಗ್ರಾಮಗಳಿಂದ ಕಳಸ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಲಿದ್ದಾರೆ. ಈ ಮೆರವಣಿಗೆಯೊಂದಿಗೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಶುಕ್ರವಾರ ಹೋಮಹವನ, ಕಳಸಾರೋಹಣ ಹಾಗೂ ಕಾಳಮ್ಮದೇವಿ ಪ್ರಾಣಪ್ರತಿಷ್ಠಾಪನೆ…
ಶುಕ್ರವಾರ, ದಿನಾಂಕ 30 ಅಕ್ಟೋಬರ್ ರಂದು ಬೆಳಿಗ್ಗೆ 9 ಗಂಟೆಗೆ ಹೋಮಹವನ, ವಾಸ್ತುಶಾಂತಿ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಕಳಸಾರೋಹಣ ಸಮಾರಂಭ ನಡೆಯಲಿದ್ದು, ಕಾಳಮ್ಮದೇವಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಧಾರ್ಮಿಕ ವಿಧಿಯನ್ನೂ ನೆರವೇರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಹಂಡಿಭಡಂಗನಾಥ ಕುಂಭಾರ್ಡಾ ಮಠದ ಮಠಾಧೀಶರಾದ ಪೂಜ್ಯ ಶ್ರೀ ಪಿರಯೋಗಿ ಮೋಹನನಾಥ ಮಹಾರಾಜರ ದಿವ್ಯ ಸಾನ್ನಿಧ್ಯ ದೊರೆಯಲಿದೆ. ಅಲ್ಲದೆ, ಬಡಕೋಳ ಮಠದ ಪೂಜ್ಯ ಶ್ರೀ ನಾಗೇಂದ್ರಸ್ವಾಮಿಗಳ ಉಪಸ್ಥಿತಿಯಲ್ಲಿ ಕಾಳಮ್ಮದೇವಿಯ ಪ್ರತಿಷ್ಠಾಪನಾ ವಿಧಿವಿಧಾನಗಳು ನಡೆಯಲಿವೆ. ಮಧ್ಯಾಹ್ನ ಭಕ್ತಾದಿಗಳಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ರಾತ್ರಿ 7ರಿಂದ 9 ಗಂಟೆಯವರೆಗೆ ಹಂಡಿಭಡಂಗನಾಥ ಯೋಗಿ ಸಾಗರನಾಥ ಕಾರಭಾರಿ ಮಹಾರಾಜರು, ಬಾರ್ಡಾ ಇವರಿಂದ ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಶನಿವಾರ ದೇವಸ್ಥಾನದ ಉದ್ಘಾಟನೆ ಹಾಗೂ ಮಹಾಪ್ರಸಾದ…
ಶನಿವಾರ, ದಿನಾಂಕ 31 ಅಕ್ಟೋಬರ್ ರಂದು ಬೆಳಿಗ್ಗೆ 11 ಗಂಟೆಗೆ ಗಣ್ಯರ ಹಸ್ತದಿಂದ ಸ್ವಯಂಭೂ ಶ್ರೀ ಬ್ರಹ್ಮದೇವ ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಲಗಾ ಹಟ್ಟಿಯ ಶ್ರೀ ಪರಶರಾಮ ಮರಿಯಪ್ಪ ಪಾಟೀಲರು ವಹಿಸಲಿದ್ದಾರೆ.
ಖಾನಾಪುರದ ಶಾಸಕರಾದ ಶ್ರೀ ವಿಠ್ಠಲ ಸೋಮಣ್ಣ ಹಲಗೇಕರ ಅವರ ಹಸ್ತದಿಂದ ದೇವಸ್ಥಾನದ ಉದ್ಘಾಟನೆ ನೆರವೇರಲಿದೆ. ಅಲ್ಲದೆ, ಅವರೋಳಿಯ ರುದ್ರಸ್ವಾಮಿ ಮಠದ ಪೂಜ್ಯ ಶ್ರೀ ಚನ್ನಬಸವ ದೇವರು ಅವರ ದಿವ್ಯ ಉಪಸ್ಥಿತಿ ಇರಲಿದೆ.
ಈ ಧಾರ್ಮಿಕ ಸಮಾರಂಭದಲ್ಲಿ ಪುಣೆಯ ಉದ್ಯಮಿಗಳಾದ ಶ್ರೀ ಕೃಷ್ಣ ಯಲ್ಲಪ್ಪ ಬೆಳಗಾಂವಕರ (ಗೋದಿ ಇಂಡಸ್ಟ್ರೀಸ್), ಮಹಾಲಕ್ಷ್ಮೀ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸದಾನಂದ ಮಾರುತಿ ಪಾಟೀಲ, ಶ್ರೀ ಪಂಡಿತ ಪ. ಓಗಲೆ, ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಪ್ರಮೋದ ಕೋಚೇರಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂಜಯ ಕುಬಲ, ಬಿಜೆಪಿಯ ಖಾನಾಪುರ ತಾಲೂಕು ಕಾರ್ಯದರ್ಶಿಗಳಾದ ಶ್ರೀ ಮಲ್ಲಪ್ಪ ಮಾರಿಹಾಳ ಹಾಗೂ ಶಿವಸೇನೆಯ ನಂದಗಡದ ಶ್ರೀ ಖೇಮಾಜಿ ಮರಿಯಪ್ಪ ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಗರ್ಭಗುಡಿ ಉದ್ಘಾಟನೆ ಹಾಗೂ ದೀಪಪ್ರಜ್ವಲನೆ…
ದೇವಸ್ಥಾನದ ಗರ್ಭಗುಡಿ ಉದ್ಘಾಟನಾ ಸಮಾರಂಭಕ್ಕೆ ಖಾನಾಪುರದ ಮಾಜಿ ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಅರವಿಂದ ಚಂದ್ರಕಾಂತ ಪಾಟೀಲರು ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಗರ್ಲಗುಂಜಿ ಪಿಕೆಪಿಎಸ್ನ ಮಾಜಿ ಅಧ್ಯಕ್ಷರಾದ ಶ್ರೀ ರಾಜು ಸಿದ್ಧಾಣಿ, ಕಾರಲಗಾ ಗ್ರಾಮದ ಶ್ರೀ ಮನೋಹರ ನಾಗಪ್ಪ ಪಾಟೀಲ, ಕರಂಬಳ ಪಿಕೆಪಿಎಸ್ನ ಅಧ್ಯಕ್ಷರಾದ ಶ್ರೀ ನಿತೀನ ರಾಜಾರಾಮ ಪಾಟೀಲ, ಖಾನಾಪುರವರಾದ ಶ್ರೀ ನಾಗಣ್ಣ ಬಾಳಪ್ಪ ಹೊಸಮನಿ, ಕಾರಲಗಾದ ಶ್ರೀ ರಾಮಚಂದ್ರ ದೇವಪ್ಪ ಪಾಟೀಲ ಹಾಗೂ ಮೆಂಡೇಗಾಳಿಯ ಶ್ರೀ ಶಿವಾನಂದ ಮಾರುತಿ ಪಾಟೀಲ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.
ದೀಪಪ್ರಜ್ವಲನಾ ಕಾರ್ಯಕ್ರಮಕ್ಕೆ ಶಿನೋಳಿಯ ಓಂಕಾರ ಟ್ರೇಡರ್ಸ್ನ ಶ್ರೀ ದತ್ತಾತ್ರಯ ಗಾವಡು ಪಾಟೀಲ, ಶ್ರೀ ಮುರಳೀಧರ ಗಣಪತರಾವ್ ಪಾಟೀಲ, ಶ್ರೀ ನಿರಂಜನ ಸರದೇಶಾಯಿ, ಶ್ರೀ ಮುಕುಂದ ತು. ಪಾಟೀಲ, ಜಳಗೆಯ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷರು ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು, ಸಮಿತಿಯ ಪದಾಧಿಕಾರಿಗಳು ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಖಾನಾಪುರ ಪಿಕೆಪಿಎಸ್ನ ನಿರ್ದೇಶಕರಾದ ಶ್ರೀ ಸಂಭಾಜಿ ಸಹದೇವ ಪಾಟೀಲರು ಸಹ ಉಪಸ್ಥಿತರಿರಲಿದ್ದಾರೆ.
ರಾತ್ರಿ ಭಜನೆ-ಭಾರುಡ ಕಾರ್ಯಕ್ರಮ…
ಶನಿವಾರ, ದಿನಾಂಕ 31 ಅಕ್ಟೋಬರ್ ರಂದು ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಸರಿಯಾಗಿ 10 ಗಂಟೆಗೆ ಕಾರಲಗಾದ ಶ್ರೀ ಸಂತ ಏಕನಾಥ ಭಜನೆ-ಭಾರುಡ ಮಂಡಳಿಯವರಿಂದ ಭಜನೆ-ಭಾರುಡ ಕಾರ್ಯಕ್ರಮ ನಡೆಯಲಿದೆ.
ಗ್ರಾಮಸ್ಥರಿಂದ ಭಕ್ತಾದಿಗಳಿಗೆ ಆಹ್ವಾನ…
ಈ ಧಾರ್ಮಿಕ ಸಮಾರಂಭವನ್ನು ಯಶಸ್ವಿಗೊಳಿಸಲು ಶ್ರೀ ಸ್ಥಬ್ರಹ್ಮದೇವ ಜೀರ್ಣೋದ್ಧಾರ ಸಮಿತಿ, ಕಾರಲಗಾ ಹಟ್ಟಿ ಪಂಚ ಸಮಿತಿ, ಕಾರಲಗಾ ಹಟ್ಟಿ ಹಾಗೂ ಕಾರಲಗಾ ಗ್ರಾಮಸ್ಥರು, ಶ್ರೀ ಸಾಯಿಬಾಬಾ ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಎಲ್ಲ ಭಜನಾ ಮಂಡಳಿಗಳು, ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ದುರ್ಗಾಮಾತಾ ದೌಡ್, ಬಜರಂಗದಳ, ಶಿವಶಂಭೋ ಯುವಕ ಮಂಡಳಿ, ಶಿವಶಕ್ತಿ ಯುವಕ ಮಂಡಳಿ ಹಾಗೂ ಆದರ್ಶ ಯುವಕ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಮಂಡಳಿಗಳು ಶ್ರಮಿಸುತ್ತಿವೆ.
ಸ್ವಯಂಭೂ ಶ್ರೀ ಬ್ರಹ್ಮದೇವ ದೇವಸ್ಥಾನದ ಈ ಪವಿತ್ರ ಧಾರ್ಮಿಕ ಸಮಾರಂಭದಿಂದ ಕಾರಲಗಾ ಹಟ್ಟಿ ಹಾಗೂ ಕಾರಲಗಾ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತಿ ಮತ್ತು ಧಾರ್ಮಿಕ ವಾತಾವರಣ ನಿರ್ಮಾಣವಾಗಲಿದೆ. ಆದ್ದರಿಂದ ಎಲ್ಲ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಸ್ತ ಗ್ರಾಮಸ್ಥರ ಪರವಾಗಿ ವಿನಂತಿಸಲಾಗಿದೆ.

