कान्सुली-अल्लोळी येथे ऊस पिकाला आग; नुकसानग्रस्त शेतकऱ्यांच्या मदतीसाठी माजी आमदार अरविंद पाटील सरसावले! घटनास्थळी भेट देऊन शेतकऱ्यांना दिला धीर.
खानापूर : प्रतिनिधी
खानापूर तालुक्यातील कान्सुली व अल्लोळी परिसरात शॉर्टसर्किटमुळे लागलेल्या आगीत शेतकऱ्यांच्या सुमारे 25 एकर क्षेत्रातील ऊस पिकाचे मोठ्या प्रमाणात नुकसान झाल्याची घटना समोर आली आहे. या आगीमुळे शेतकऱ्यांचे लाखो रुपयांचे नुकसान झाले असून, हातातोंडाशी आलेले पीक जळून खाक झाल्याने शेतकरी आर्थिक संकटात सापडले आहेत.

या घटनेची माहिती मिळताच खानापूर विधानसभा मतदारसंघाचे माजी आमदार तथा बेळगाव जिल्हा मध्यवर्ती सहकारी बँकेचे संचालक अरविंद चंद्रकांत पाटील यांनी तातडीने घटनास्थळी भेट देऊन नुकसानग्रस्त शेतकऱ्यांची भेट घेतली. यावेळी त्यांनी जळालेल्या ऊस पिकाची पाहणी करून शेतकऱ्यांकडून नुकसानीची माहिती जाणून घेतली.
ऊस हे खानापूर तालुक्यातील अनेक शेतकऱ्यांच्या उपजीविकेचे महत्त्वाचे साधन आहे. ऊस पिकासाठी शेतकरी मोठ्या प्रमाणात आर्थिक गुंतवणूक करतात. मशागत, खते, औषधे, पाणी आणि मजुरी यांवर खर्च केल्यानंतर पीक हातात येण्याच्या टप्प्यावर आगीमुळे नुकसान झाल्याने शेतकऱ्यांसमोर मोठे आर्थिक आव्हान उभे राहिले आहे. अशा परिस्थितीत संबंधित शेतकऱ्यांना तातडीने आर्थिक मदत मिळणे आवश्यक असल्याची भावना परिसरातून व्यक्त होत आहे.
यावेळी अरविंद पाटील यांनी नुकसानग्रस्त शेतकऱ्यांना धीर देताना, “शेतकऱ्यांनी घाबरून जाऊ नये. संकटाच्या या काळात धीर धरावा. शासनदरबारी पाठपुरावा करून नुकसानग्रस्त शेतकऱ्यांना नुकसानभरपाई मिळवून देण्यासाठी प्रयत्न करण्यात येतील,” असे आश्वासन दिले.
नैसर्गिक किंवा आकस्मिक संकटामुळे शेतकऱ्यांचे नुकसान झाल्यास त्यांना शासनाकडून योग्य मदत मिळणे गरजेचे आहे. त्यामुळे संबंधित अधिकाऱ्यांनी नुकसानीची पाहणी करून पंचनामा करावा आणि नुकसानग्रस्त शेतकऱ्यांना नियमानुसार भरपाई मिळवून देण्यासाठी आवश्यक कार्यवाही करावी, अशी अपेक्षा शेतकरी वर्गातून व्यक्त होत आहे.
या पाहणीवेळी कान्सुली, अल्लोळी तसेच परिसरातील अनेक शेतकरी बांधव उपस्थित होते. आगीमुळे झालेल्या नुकसानीच्या पार्श्वभूमीवर शेतकऱ्यांना दिलासा देण्यासाठी शासनाने तातडीने पावले उचलावीत, अशी मागणीही यावेळी पुढे आली.
ऊस पिकाच्या आगीच्या घटनांमुळे खानापूर तालुक्यातील शेतकऱ्यांमध्ये चिंतेचे वातावरण निर्माण झाले असून, नुकसानग्रस्त शेतकऱ्यांना भरपाई कधी मिळणार, याकडे आता सर्वांचे लक्ष लागले आहे.
ಕಾನ್ಸುಲಿ–ಅಲ್ಲೊಳ್ಳಿ ಗ್ರಾಮಗಳಲ್ಲಿ ಕಬ್ಬಿನ ಬೆಳೆಗೆ ಬೆಂಕಿ ತಗುಲಿದೆ ಪ್ರಕರಣ; ತಕ್ಷಣವೇ ನಷ್ಟಕ್ಕೊಳಗಾದ ರೈತರ ನೆರವಿಗೆ ಧಾವಿಸಿದ ಮಾಜಿ ಶಾಸಕ ಅರವಿಂದ ಪಾಟೀಲ! ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ ಅರವಿಂದ ಪಾಟೀಲ; ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಕಾನ್ಸುಲಿ ಮತ್ತು ಅಲ್ಲೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ರೈತರ ಸುಮಾರು 25 ಎಕರೆ ಪ್ರದೇಶದಲ್ಲಿನ ಬೆಳೆದ ಕಬ್ಬಿನ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಅಗ್ನಿ ಅವಘಡದಿಂದ ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಖಾನಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಚಂದ್ರಕಾಂತ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಷ್ಟಕ್ಕೊಳಗಾದ ರೈತರನ್ನು ಭೇಟಿ ಯಾದ ಸಂದರ್ಭದಲ್ಲಿ ಬೆಂಕಿಗೆ ಆಹುತಿಯಾದ ಕಬ್ಬಿನ ಬೆಳೆಯನ್ನು ಪರಿಶೀಲಿಸಿದ ಅವರು, ರೈತರಿಂದ ಬೆಳೆ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು.
ಕಬ್ಬು ಖಾನಾಪುರ ತಾಲ್ಲೂಕಿನ ಅನೇಕ ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿದೆ. ಕಬ್ಬಿನ ಬೆಳೆಯ ಕೃಷಿಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಭೂಮಿಯ ಉಳುಮೆ, ಗೊಬ್ಬರ, ಔಷಧೋಪಚಾರ, ನೀರಾವರಿ ಮತ್ತು ಕೂಲಿ ಕಾರ್ಮಿಕರ ವೆಚ್ಚವನ್ನು ಭರಿಸಿದ ಬಳಿಕ ಬೆಳೆ ಕೈಗೆ ಬರುವ ಹಂತದಲ್ಲಿದ್ದಾಗ ಬೆಂಕಿಯಿಂದ ನಾಶವಾಗಿರುವುದು ರೈತರ ಮುಂದೆ ದೊಡ್ಡ ಆರ್ಥಿಕ ಸವಾಲನ್ನು ತಂದೊಡ್ಡಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಷ್ಟಕ್ಕೊಳಗಾದ ರೈತರಿಗೆ ತಕ್ಷಣವೇ ಆರ್ಥಿಕ ನೆರವು ದೊರೆಯಬೇಕೆಂಬ ಅಭಿಪ್ರಾಯ ಸ್ಥಳೀಯ ವಲಯದಲ್ಲಿ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಅರವಿಂದ ಪಾಟೀಲ ಅವರು ನಷ್ಟಕ್ಕೊಳಗಾದ ರೈತರಿಗೆ ಧೈರ್ಯ ತುಂಬುತ್ತಾ, “ರೈತರು ಆತಂಕಪಡಬಾರದು. ಸಂಕಷ್ಟದ ಈ ಸಂದರ್ಭದಲ್ಲಿ ಧೈರ್ಯದಿಂದ ಇರಬೇಕು. ಸರ್ಕಾರದ ಮಟ್ಟದಲ್ಲಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಲು ಅಗತ್ಯ ಪ್ರಯತ್ನಗಳನ್ನು ಮಾಡಲಾಗುವುದು,” ಎಂದು ಭರವಸೆ ನೀಡಿದರು.
ನೈಸರ್ಗಿಕ ಅಥವಾ ಆಕಸ್ಮಿಕ ವಿಪತ್ತುಗಳಿಂದ ರೈತರಿಗೆ ನಷ್ಟ ಉಂಟಾದಾಗ ಸರ್ಕಾರದಿಂದ ಸೂಕ್ತ ನೆರವು ದೊರೆಯುವುದು ಅತ್ಯಗತ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಪರಿಶೀಲನೆ ನಡೆಸಿ, ಪಂಚನಾಮೆ ಮಾಡಬೇಕು. ಅಲ್ಲದೆ, ನಷ್ಟಕ್ಕೊಳಗಾದ ರೈತರಿಗೆ ನಿಯಮಾನುಸಾರ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ನಿರೀಕ್ಷೆಯನ್ನು ರೈತ ಸಮುದಾಯ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಕಾನ್ಸುಲಿ, ಅಲ್ಲೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ರೈತರು ಉಪಸ್ಥಿತರಿದ್ದರು. ಬೆಂಕಿ ಅವಘಡದಿಂದ ಉಂಟಾಗಿರುವ ಅಪಾರ ನಷ್ಟದ ಹಿನ್ನೆಲೆಯಲ್ಲಿ ರೈತರಿಗೆ ನೆಮ್ಮದಿ ಕಲ್ಪಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂದಿತು.
ಖಾನಾಪುರ ತಾಲ್ಲೂಕಿನಲ್ಲಿ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳಿಂದ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಯಾವಾಗ ದೊರೆಯಲಿದೆ ಎಂಬುದರತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.

