एकोप्याचे दर्शन घडवत कारलगा श्री लक्ष्मी यात्रोत्सव समितीची बिनविरोध निवड; 24 फेब्रुवारीला श्री महालक्ष्मी देवीची यात्रा.
खानापूर (प्रतिनिधी) : कारलगा, शिवोली आणि कारलगामजरे हट्टी या तिन्ही गावांचे ग्रामदैवत असलेल्या श्री महालक्ष्मी देवीचा भव्य यात्रोत्सव तब्बल 19 वर्षांनंतर बुधवार, दि. 24 फेब्रुवारी 2027 रोजी मोठ्या भक्तिभावाने आणि उत्साहात साजरा करण्यात येणार आहे. यात्रोत्सवाची तारीख निश्चित झाल्याने तिन्ही गावांतील भाविकांमध्ये आनंदाचे वातावरण असून तयारीला वेग आला आहे.

यात्रोत्सवाच्या नियोजनासाठी शुक्रवार, दि. 10 जुलै रोजी कारलगा येथील चव्हाटा मंदिरात तिन्ही गावांतील पाच वतनदार, पंचमंडळी तसेच ग्रामस्थांची संयुक्त सभा पार पडली. या बैठकीत यात्रोत्सवाच्या नियोजनासंदर्भातील विविध विषयांवर सविस्तर चर्चा करण्यात आली. तसेच यात्रा सुरळीत, शिस्तबद्ध आणि भक्तिमय वातावरणात पार पाडण्यासाठी आवश्यक नियोजनाचा आराखडा तयार करण्यात आला.
यानंतर यात्रोत्सव समितीची बिनविरोध निवड करण्यात आली. समितीच्या अध्यक्षपदी श्री मनोहर नागाप्पा पाटील यांची निवड करण्यात आली असून उपाध्यक्षपदी श्री पुंडलिक रवळू घाडी व श्री हणमंत नागेश पाटील यांची निवड झाली. सचिवपदी श्री राहुल लक्ष्मण अळवणी, उपसचिवपदी श्री तुकाराम बाजीराव पाटील व श्री किरण व्हन्नाप्पा पाटील, तर खजिनदारपदी प्रा. श्री संतोष राजाराम जाधव यांची निवड करण्यात आली.
यात्रोत्सव यशस्वी करण्यासाठी विविध उपसमित्यांची स्थापना करण्यात येत असून पिण्याचे पाणी, वाहतूक, स्वच्छता, वीज, सुरक्षा, भाविकांसाठी आवश्यक सुविधा तसेच इतर मूलभूत व्यवस्थांचे नियोजन करण्यात येत आहे.
यात्रोत्सवाच्या अनुषंगाने गुरुवार, दि. 16 जुलै रोजी खानापूरचे आमदार मा. विठ्ठलराव हलगेकर यांची समितीच्या पदाधिकाऱ्यांनी सदिच्छा भेट घेतली. यावेळी यात्रेसाठी आवश्यक मूलभूत सुविधा, विकासकामे आणि शासनस्तरावरील सहकार्याबाबत सविस्तर चर्चा करण्यात आली. यात्रोत्सव भव्य आणि यशस्वी करण्यासाठी सर्व ग्रामस्थांनी एकत्रितपणे सहकार्य करण्याचे आवाहन यावेळी करण्यात आले.
ಕಾರಲಗಾ ಶ್ರೀ ಮಹಾಲಕ್ಷ್ಮೀ ಜಾತ್ರಾ ಸಮಿತಿಯ ಏಕಮತದಿಂದ ಆಯ್ಕೆ; ಫೆಬ್ರವರಿ 24ರಂದು ಶ್ರೀ ಮಹಾಲಕ್ಷ್ಮೀ ದೇವಿಯ ಭವ್ಯ ಜಾತ್ರೋತ್ಸವ.
ಖಾನಾಪುರ (ಪ್ರತಿನಿಧಿ): ಕಾರಲಗಾ, ಶಿವೋಲಿ ಹಾಗೂ ಕಾರಲಗಾ ಮಾಜರೆ ಹಟ್ಟಿ ಈ ಮೂರು ಗ್ರಾಮಗಳ ಗ್ರಾಮದೇವತೆಯಾಗಿರುವ ಶ್ರೀ ಮಹಾಲಕ್ಷ್ಮೀ ದೇವಿಯ ಭವ್ಯ ಜಾತ್ರೋತ್ಸವವು 19 ವರ್ಷಗಳ ನಂತರ ಬುಧವಾರ, ಫೆಬ್ರವರಿ 24, 2027 ರಂದು ಅಪಾರ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ನಡೆಯಲಿದೆ. ಜಾತ್ರೋತ್ಸವದ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ಭಕ್ತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಸಿದ್ಧತಾ ಕಾರ್ಯಗಳು ವೇಗ ಪಡೆದಿವೆ.
ಜಾತ್ರೋತ್ಸವದ ಪೂರ್ವಸಿದ್ಧತೆ ಹಾಗೂ ಯೋಜನೆಗಾಗಿ ಶುಕ್ರವಾರ, ಜುಲೈ 10 ರಂದು ಕಾರಲಗಾ ಗ್ರಾಮದ ಚವ್ಹಾಟಾ ದೇವಸ್ಥಾನದಲ್ಲಿ ಮೂರು ಗ್ರಾಮಗಳ ಐದು ವತನದಾರರು, ಪಂಚಮಂಡಳಿ ಹಾಗೂ ಗ್ರಾಮಸ್ಥರ ಸಂಯುಕ್ತ ಸಭೆ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಆಯೋಜನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು. ಜೊತೆಗೆ ಜಾತ್ರೆಯನ್ನು ಶಿಸ್ತುಬದ್ಧವಾಗಿ, ಸುಗಮವಾಗಿ ಹಾಗೂ ಭಕ್ತಿಮಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಸಲು ಅಗತ್ಯವಾದ ಯೋಜನಾ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು.
ನಂತರ ಜಾತ್ರೋತ್ಸವ ಸಮಿತಿಯನ್ನು ಏಕಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಶ್ರೀ ಮನೋಹರ ನಾಗಪ್ಪ ಪಾಟೀಲ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶ್ರೀ ಪುಂಡಲಿಕ ರವಳು ಘಾಡಿ ಹಾಗೂ ಶ್ರೀ ಹನುಮಂತ ನಾಗೇಶ ಪಾಟೀಲ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶ್ರೀ ರಾಹುಲ್ ಲಕ್ಷ್ಮಣ ಅಳವಣಿ, ಉಪ ಕಾರ್ಯದರ್ಶಿಗಳಾಗಿ ಶ್ರೀ ತುಕಾರಾಮ ಬಾಜೀರಾವ್ ಪಾಟೀಲ ಹಾಗೂ ಶ್ರೀ ಕಿರಣ್ ವ್ಹನ್ನಪ್ಪ ಪಾಟೀಲ, ಹಾಗೂ ಖಜಾಂಚಿಯಾಗಿ ಪ್ರಾ. ಶ್ರೀ ಸಂತೋಷ್ ರಾಜಾರಾಮ ಜಾಧವ್ ಆಯ್ಕೆಯಾಗಿದ್ದಾರೆ.
ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ವಿವಿಧ ಉಪಸಮಿತಿಗಳನ್ನು ರಚಿಸಲಾಗುತ್ತಿದ್ದು, ಕುಡಿಯುವ ನೀರು, ಸಂಚಾರ ವ್ಯವಸ್ಥೆ, ಸ್ವಚ್ಛತೆ, ವಿದ್ಯುತ್, ಭದ್ರತೆ, ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಗಳ ಕುರಿತು ಸಮಗ್ರ ಯೋಜನೆ ರೂಪಿಸಲಾಗುತ್ತಿದೆ.
ಜಾತ್ರೋತ್ಸವದ ಅಂಗವಾಗಿ ಗುರುವಾರ, ಜುಲೈ 16 ರಂದು ಖಾನಾಪುರ ಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ ಅವರನ್ನು ಸಮಿತಿಯ ಪದಾಧಿಕಾರಿಗಳು ಸೌಹಾರ್ದಯುತವಾಗಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಜಾತ್ರೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ದೊರೆಯಬೇಕಾದ ಸಹಕಾರದ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಜಾತ್ರೋತ್ಸವವನ್ನು ಭವ್ಯವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಮೂರು ಗ್ರಾಮಗಳ ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಸಹಕರಿಸಬೇಕೆಂದು ಈ ವೇಳೆ ಮನವಿ ಮಾಡಲಾಯಿತು.

