अमृत भारत योजनेअंतर्गत पुनर्विकसित अळ्णावर रेल्वे स्थानकाचे लोकार्पण; देशाच्या सर्वांगीण विकासात भारतीय रेल्वेचे योगदान मोलाचे – राज्यपाल थावरचंद गेहलोत.
अळ्णावर (प्रतिनिधी) : अमृत भारत स्थानक योजनेअंतर्गत सुमारे 17.20 कोटी रुपयांच्या खर्चातून पुनर्विकसित करण्यात आलेल्या अळ्णावर रेल्वे स्थानकाचे लोकार्पण आज शुक्रवारी 17 जुलै रोजी राज्यपाल थावरचंद गेहलोत यांच्या हस्ते करण्यात आले. यावेळी पंतप्रधान नरेंद्र मोदी यांनी व्हिडिओ कॉन्फरन्सद्वारे देशातील 75 पुनर्विकसित रेल्वे स्थानकांचे एकाच वेळी आभासी लोकार्पण केले.
यावेळी बोलताना राज्यपाल थावरचंद गेहलोत म्हणाले की, भारतीय रेल्वेने देशाच्या आर्थिक प्रगतीला मोठे बळ दिले असून भारताच्या सर्वांगीण विकासात रेल्वेचे योगदान अतुलनीय आहे. अमृत भारत स्थानक योजनेअंतर्गत देशभरातील 75 रेल्वे स्थानकांचा विकास करण्यात आला असून कर्नाटकातील बंटवाळ, बदामी, कोप्पळ आणि अळ्णावर ही स्थानके आज राष्ट्राला समर्पित करण्यात आली आहेत.
ते पुढे म्हणाले की, नव्याने विकसित करण्यात आलेल्या रेल्वे स्थानकांमध्ये अत्याधुनिक सुविधा उपलब्ध करून देण्यात आल्या आहेत. भारताने हायड्रोजन रेल्वेच्या दिशेनेही महत्त्वपूर्ण पाऊल टाकले असून हायड्रोजन रेल्वे असलेल्या देशांच्या यादीत भारताचा समावेश झाला आहे. रेल्वेचे विद्युतीकरण, आधुनिक सुविधा आणि प्रवाशाभिमुख सेवा यामुळे भारतीय रेल्वे अधिक सक्षम बनत आहे. सक्षम, समृद्ध आणि आत्मनिर्भर भारत घडविण्यासाठी प्रत्येकाने योगदान द्यावे, असे आवाहन त्यांनी केले.
केंद्रीय ग्राहक व्यवहार, अन्न व सार्वजनिक वितरण तसेच नवीन आणि नवीकरणीय ऊर्जा मंत्री प्रल्हाद जोशी यांनी विविध स्पर्धांतील विजेत्यांना पारितोषिके प्रदान केली. ते म्हणाले की, अळ्णावरसह राज्यातील चार रेल्वे स्थानकांचे विमानतळांच्या धर्तीवर आधुनिकीकरण करण्यात आले आहे. स्थानकांवर लिफ्ट, पादचारी उड्डाणपूल, दिव्यांगांसाठी अनुकूल सुविधा आणि इतर आधुनिक सोयी उपलब्ध करून देण्यात आल्या आहेत.
जोशी यांनी सांगितले की, देशभरात रेल्वे पायाभूत सुविधांचा मोठ्या प्रमाणावर विस्तार सुरू असून अनेक उड्डाणपूल, भुयारी मार्ग आणि रेल्वे प्रकल्प पूर्णत्वास जात आहेत. रेल्वेचे संपूर्ण विद्युतीकरण, वंदे भारत रेल्वेचा वाढता विस्तार आणि हरित हायड्रोजन उत्पादनाला दिलेले प्राधान्य यामुळे भारत रेल्वे क्षेत्रात जागतिक स्तरावर वेगाने प्रगती करत आहे.
कार्यक्रमात चित्रकला, निबंध आणि वक्तृत्व स्पर्धांतील विजेत्यांचा सत्कार करून त्यांना पारितोषिकांचे वितरण करण्यात आले.
यावेळी कर्नाटक विधान परिषदेचे सभापती बसवराज होरट्टी, आमदार प्रदीप शेट्टर, जिल्हाधिकारी स्नेहल आर., दक्षिण पश्चिम रेल्वेचे महाव्यवस्थापक बी. अनंत, टी. व्ही. भूषण तसेच रेल्वे विभागाचे वरिष्ठ अधिकारी आणि मान्यवर मोठ्या संख्येने उपस्थित होते.
ಅಮೃತ ಭಾರತ ಯೋಜನೆಯಡಿ ಪುನರ್ಅಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣ ಲೋಕಾರ್ಪಣೆ; ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆಯ ಕೊಡುಗೆ ಅಪಾರ – ರಾಜ್ಯಪಾಲ ಥಾವರಚಂದ್ ಗೆಹ್ಲೋಟ್.
ಅಳ್ನಾವರ (ಪ್ರತಿನಿಧಿ) : ಅಮೃತ ಭಾರತ ಯೋಜನೆಯಡಿ ಸುಮಾರು 17.20 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ಅಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣವನ್ನು ಇಂದು ಶುಕ್ರವಾರ (ಜುಲೈ 17) ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತ ಪುನರ್ಅಭಿವೃದ್ಧಿಗೊಂಡ 75 ರೈಲು ನಿಲ್ದಾಣಗಳನ್ನು ಏಕಕಾಲದಲ್ಲಿ ವರ್ಚುವಲ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು, ಭಾರತೀಯ ರೈಲ್ವೆಯು ದೇಶದ ಆರ್ಥಿಕ ಪ್ರಗತಿಗೆ ಅಪಾರ ಬಲ ನೀಡಿದ್ದು, ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ರೈಲ್ವೆಯ ಕೊಡುಗೆ ಅಮೂಲ್ಯವಾಗಿದೆ ಎಂದು ಹೇಳಿದರು. ಅಮೃತ ಭಾರತ ಯೋಜನೆಯಡಿ ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಕರ್ನಾಟಕದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಹೊಸದಾಗಿ ಅಭಿವೃದ್ಧಿಪಡಿಸಲಾದ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತವು ಹೈಡ್ರೋಜನ್ ರೈಲು ಸೇವೆಯ ದಿಸೆಯಲ್ಲಿಯೂ ಮಹತ್ವದ ಹೆಜ್ಜೆ ಇಟ್ಟಿದ್ದು, ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ. ರೈಲ್ವೆಯ ಸಂಪೂರ್ಣ ವಿದ್ಯುದೀಕರಣ, ಆಧುನಿಕ ಸೌಲಭ್ಯಗಳು ಹಾಗೂ ಪ್ರಯಾಣಿಕ ಸ್ನೇಹಿ ಸೇವೆಗಳ ಮೂಲಕ ಭಾರತೀಯ ರೈಲ್ವೆ ಇನ್ನಷ್ಟು ಬಲಿಷ್ಠವಾಗುತ್ತಿದೆ. ಸಮರ್ಥ, ಸಮೃದ್ಧ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಮಾತನಾಡಿದ ಅವರು, ಅಳ್ನಾವರ ಸೇರಿದಂತೆ ರಾಜ್ಯದ ನಾಲ್ಕು ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಧುನೀಕರಿಸಲಾಗಿದೆ ಎಂದರು. ನಿಲ್ದಾಣಗಳಲ್ಲಿ ಲಿಫ್ಟ್, ಪಾದಚಾರಿ ಮೇಲ್ಸೇತುವೆ, ದಿವ್ಯಾಂಗರಿಗೆ ಅನುಕೂಲಕರ ಸೌಲಭ್ಯಗಳು ಹಾಗೂ ಇತರ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದೇಶದಾದ್ಯಂತ ರೈಲ್ವೆ ಮೂಲಸೌಕರ್ಯಗಳ ವ್ಯಾಪಕ ವಿಸ್ತರಣೆ ನಡೆಯುತ್ತಿದ್ದು, ಅನೇಕ ಮೇಲ್ಸೇತುವೆಗಳು, ಅಂಡರ್ಪಾಸ್ಗಳು ಹಾಗೂ ರೈಲ್ವೆ ಯೋಜನೆಗಳು ಪೂರ್ಣಗೊಂಡಿವೆ ಎಂದು ಜೋಶಿ ಹೇಳಿದರು. ರೈಲ್ವೆಯ ಸಂಪೂರ್ಣ ವಿದ್ಯುದೀಕರಣ, ವಂದೇ ಭಾರತ ರೈಲುಗಳ ವಿಸ್ತರಣೆ ಹಾಗೂ ಹಸಿರು ಹೈಡ್ರೋಜನ್ ಉತ್ಪಾದನೆಗೆ ನೀಡಲಾಗುತ್ತಿರುವ ಆದ್ಯತೆಯಿಂದ ಭಾರತವು ರೈಲ್ವೆ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ಸ್ನೇಹಲ್ ಆರ್., ದಕ್ಷಿಣ ಪಶ್ಚಿಮ ರೈಲ್ವೆಯ ಮಹಾಪ್ರಬಂಧಕ ಬಿ. ಅನಂತ್, ಟಿ. ವಿ. ಭೂಷಣ್ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

