सर्व धर्मसमभाव जपणारे युवा नेतृत्व : इरफान तालिकोटी यांचा वाढदिवस आज उत्साहात साजरा होत आहे.
खानापूर : खानापूर तालुक्यातील सामाजिक कार्यकर्ते, युवकांचे मार्गदर्शक, अंजुमन-ए-इस्लामचे तालुका अध्यक्ष तथा युवा काँग्रेसचे माजी अध्यक्ष श्री. इरफान तालिकोटी यांचा वाढदिवस आज उत्साहपूर्ण वातावरणात साजरा होत आहे. त्यांच्या वाढदिवसानिमित्त मित्रपरिवार, समर्थक, सामाजिक कार्यकर्ते तसेच विविध क्षेत्रातील मान्यवरांकडून त्यांच्यावर शुभेच्छांचा वर्षाव होत आहे.

इरफान तालिकोटी यांचा जन्म मुस्लिम समाजात झाला असला तरीही सर्व जाती-धर्मातील नागरिकांशी त्यांचे जिव्हाळ्याचे संबंध असून, विशेषतः हिंदू समाजातील युवकांमध्ये त्यांचा मोठा मित्रपरिवार आहे. सर्व धर्मसमभाव, सामाजिक ऐक्य, बंधुभाव आणि परस्पर सन्मान या मूल्यांना त्यांनी आपल्या सामाजिक कार्याच्या माध्यमातून नेहमीच प्राधान्य दिले आहे.
त्यांचे सासरे अब्दुलकरीम तेलगी यांनी जाती-धर्माचा भेद न मानता विविध समाजातील नागरिकांना तसेच मंदिर, मशीद आणि इतर धार्मिक स्थळांना मदतीचा हात देत सामाजिक सलोखा निर्माण करण्यासाठी योगदान दिले. त्याच विचारांचा वारसा पुढे नेत इरफान तालिकोटी हेही समाजातील सर्व घटकांना सोबत घेऊन सामाजिक कार्यात सक्रिय आहेत.
केवळ एका समाजापुरते मर्यादित न राहता तालुक्यातील विविध जाती-धर्मातील युवकांना एकत्र आणण्याचे काम त्यांनी केले आहे.
युवकांना क्रीडा क्षेत्रात संधी मिळावी, त्यांच्यातील गुणवत्ता विकसित व्हावी आणि विविध समाजांतील युवकांमध्ये मैत्रीचे संबंध दृढ व्हावेत, यासाठी त्यांच्या पुढाकारातून सर्व धर्मातील युवक व सामाजिक कार्यकर्त्यांच्या सहकार्याने भव्य क्रिकेट ट्रॉफी स्पर्धांचे आयोजन केले जाते. या माध्यमातून क्रीडाभावनेसोबतच सामाजिक एकता आणि बंधुभावाचा संदेश दिला जात आहे.
तालुक्याच्या विकासाच्या प्रश्नांबाबतही तालिकोटी यांनी सातत्याने पाठपुरावा केला आहे. राज्यातील विविध आमदार, खासदार आणि मंत्र्यांशी असलेल्या त्यांच्या संपर्काचा उपयोग खानापूर तालुक्यातील विकासकामांसाठी करण्याचा त्यांनी प्रयत्न केला आहे. मंदिर-मशीद, रस्ते, पाणीपुरवठा, शिक्षण, क्रीडा तसेच युवकांच्या विकासाशी संबंधित विविध उपक्रमांना त्यांनी वेळोवेळी सहकार्य केले आहे.
सामाजिक कार्यासोबतच गरजू नागरिकांना मदत करणे, युवकांना योग्य मार्गदर्शन करणे आणि विविध समाजघटकांमध्ये संवाद व सलोखा निर्माण करण्यासाठी पुढाकार घेणे, ही त्यांच्या कार्याची वैशिष्ट्ये मानली जातात. त्यामुळे खानापूर तालुक्यात त्यांची ओळख “सर्व धर्मसमभाव जपणारा युवा नेता” अशी निर्माण झाली आहे.
वाढदिवसानिमित्त त्यांच्या समर्थक व मित्रपरिवाराच्या वतीने विविध सामाजिक आणि युवकाभिमुख कार्यक्रमांचे आयोजन करण्यात आले आहे. या निमित्ताने सामाजिक क्षेत्रातील त्यांच्या योगदानाचे कौतुक करताना अनेकांनी त्यांना पुढील वाटचालीसाठी शुभेच्छा दिल्या.
इरफान तालिकोटी यांना वाढदिवसानिमित्त मनःपूर्वक शुभेच्छा! त्यांना उत्तम आरोग्य, दीर्घायुष्य, सुख-समृद्धी, यश आणि समाजसेवेची नवी ऊर्जा लाभो. सर्व समाजघटकांना सोबत घेऊन सामाजिक ऐक्य व बंधुभावाची ही वाटचाल अधिक व्यापक व्हावी, हीच सदिच्छा.
ಸರ್ವ ಧರ್ಮದ ಜನರನ್ನು ಸಮಭಾವದಿಂದ ಕಾಣುವ ಯುವ ನಾಯಕ ಎಂದೇ ಖ್ಯಾತಿ ಪಡೆದಿರುವ: ಇರ್ಫಾನ್ ತಾಲಿಕೋಟಿ ಅವರ ಹುಟ್ಟುಹಬ್ಬ ಇಂದು ಸಂಭ್ರಮದಿಂದ ಆಚರಣೆ.
ಖಾನಾಪುರ : ಖಾನಾಪುರ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ, ಯುವಕರ ಮಾರ್ಗದರ್ಶಕ, ಅಂಜುಮನ್-ಎ-ಇಸ್ಲಾಂನ ತಾಲ್ಲೂಕು ಅಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಶ್ರೀ ಇರ್ಫಾನ್ ತಾಲಿಕೋಟಿ ಅವರ ಹುಟ್ಟುಹಬ್ಬವನ್ನು ಇಂದು ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಗುತ್ತಿದೆ. ಅವರ ಹುಟ್ಟುಹಬ್ಬದ ಅಂಗವಾಗಿ ಸ್ನೇಹಿತರು, ಬೆಂಬಲಿಗರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇರ್ಫಾನ್ ತಾಲಿಕೋಟಿ ಅವರು ಮುಸ್ಲಿಂ ಸಮಾಜದಲ್ಲಿ ಜನಿಸಿದ್ದರೂ ಎಲ್ಲಾ ಜಾತಿ-ಧರ್ಮಗಳ ನಾಗರಿಕರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ವಿಶೇಷವಾಗಿ ಹಿಂದೂ ಸಮಾಜದ ಯುವಕರಲ್ಲಿ ಅವರಿಗೆ ದೊಡ್ಡ ಸ್ನೇಹ ಬಳಗವಿದೆ. ಸರ್ವ ಧರ್ಮ ಸಮಭಾವ, ಸಾಮಾಜಿಕ ಐಕ್ಯತೆ, ಸಹೋದರತ್ವ ಹಾಗೂ ಪರಸ್ಪರ ಗೌರವ ಎಂಬ ಮೌಲ್ಯಗಳಿಗೆ ಅವರು ತಮ್ಮ ಸಾಮಾಜಿಕ ಕಾರ್ಯದ ಮೂಲಕ ಸದಾ ಆದ್ಯತೆ ನೀಡಿದ್ದಾರೆ.
ಅವರ ಮಾವನವರಾದ ಅಬ್ದುಲಕರೀಂ ತೆಲಗಿ ಅವರು ಜಾತಿ-ಧರ್ಮದ ಭೇದಭಾವವಿಲ್ಲದೆ ವಿವಿಧ ಸಮಾಜಗಳ ನಾಗರಿಕರಿಗೆ ಹಾಗೂ ದೇವಸ್ಥಾನ, ಮಸೀದಿ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಿಗೆ ಸಹಾಯಹಸ್ತ ಚಾಚಿ ಸಾಮಾಜಿಕ ಸೌಹಾರ್ದತೆ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅದೇ ವಿಚಾರಧಾರೆ ಹಾಗೂ ಪರಂಪರೆಯನ್ನು ಮುಂದುವರಿಸಿಕೊಂಡು ಇರ್ಫಾನ್ ತಾಲಿಕೋಟಿ ಅವರು ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಲ್ಲಿ ಕೊಂಡೊಯ್ದು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ, ತಾಲ್ಲೂಕಿನ ವಿವಿಧ ಜಾತಿ-ಧರ್ಮಗಳ ಯುವಕರನ್ನು ಒಂದೇ ವೇದಿಕೆಗೆ ತರುವ ಕಾರ್ಯವನ್ನು ಅವರು ಮಾಡಿದ್ದಾರೆ ಅದೇ ರೀತಿ ಮುಂದೆಯೂ ಒರೆಯಲಿ ಎಂದು ಆಶಿಸುತ್ತೇವೆ. ಯುವಕರಿಗೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶಗಳು ದೊರೆಯಬೇಕು, ಅವರಲ್ಲಿರುವ ಪ್ರತಿಭೆ ಬೆಳಕಿಗೆ ಬರಬೇಕು ಹಾಗೂ ವಿವಿಧ ಸಮಾಜಗಳ ಯುವಕರ ನಡುವೆ ಸ್ನೇಹ ಮತ್ತು ಬಾಂಧವ್ಯ ಇನ್ನಷ್ಟು ಗಟ್ಟಿಯಾಗಬೇಕು ಎಂಬ ಉದ್ದೇಶದಿಂದ ಅವರ ಮುಂದಾಳತ್ವದಲ್ಲಿ ಸರ್ವ ಧರ್ಮಗಳ ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಪ್ರತಿವರ್ಷ ಭವ್ಯ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ.
ಈ ಮೂಲಕ ಕ್ರೀಡಾ ಮನೋಭಾವದ ಜೊತೆಗೆ ಸಾಮಾಜಿಕ ಐಕ್ಯತೆ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ನೀಡಲಾಗುತ್ತಿದೆ.
ತಾಲ್ಲೂಕಿನ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ತಾಲಿಕೋಟಿ ಅವರು ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. ರಾಜ್ಯದ ವಿವಿಧ ಶಾಸಕರು, ಸಂಸದರು ಹಾಗೂ ಸಚಿವರೊಂದಿಗೆ ಹೊಂದಿರುವ ಸಂಪರ್ಕವನ್ನು ಖಾನಾಪುರ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ. ದೇವಸ್ಥಾನ-ಮಸೀದಿ, ರಸ್ತೆ, ಕುಡಿಯುವ ನೀರು, ಶಿಕ್ಷಣ, ಕ್ರೀಡೆ ಹಾಗೂ ಯುವಕರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಉಪಕ್ರಮಗಳಿಗೆ ಅವರು ಕಾಲಕಾಲಕ್ಕೆ ಸಹಕಾರ ನೀಡಿದ್ದಾರೆ.
ಸಾಮಾಜಿಕ ಕಾರ್ಯದ ಜೊತೆಗೆ ಅಗತ್ಯವಿರುವ ನಾಗರಿಕರಿಗೆ ನೆರವು ನೀಡುವುದು, ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಹಾಗೂ ವಿವಿಧ ಸಮಾಜಘಟಕಗಳ ನಡುವೆ ಸಂವಾದ ಮತ್ತು ಸೌಹಾರ್ದತೆಯನ್ನು ನಿರ್ಮಿಸಲು ಮುಂದಾಗುವುದು ಅವರ ಕಾರ್ಯದ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಈ ಕಾರಣದಿಂದಾಗಿ ಖಾನಾಪುರ ತಾಲ್ಲೂಕಿನಲ್ಲಿ ಅವರ ಗುರುತು “ಸರ್ವ ಧರ್ಮ ಸಮಭಾವವನ್ನು ಕಾಪಾಡುವ ಯುವ ನಾಯಕ” ಎಂಬುದಾಗಿ ಮೂಡಿಬಂದಿದೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಸ್ನೇಹ ಬಳಗದ ವತಿಯಿಂದ ವಿವಿಧ ಸಾಮಾಜಿಕ ಮತ್ತು ಯುವಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಲ್ಲಿಸುತ್ತಿರುವ ಕೊಡುಗೆಯನ್ನು ಶ್ಲಾಘಿಸುತ್ತಾ ಅನೇಕರು ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.
ಇರ್ಫಾನ್ ತಾಲಿಕೋಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ-ಸಮೃದ್ಧಿ, ಯಶಸ್ಸು ಹಾಗೂ ಸಮಾಜ ಸೇವೆಗೆ ಮತ್ತಷ್ಟು ಹೊಸ ಚೈತನ್ಯ ದೊರೆಯಲಿ. ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಲ್ಲಿ ಕೊಂಡೊಯ್ದು ಸಾಮಾಜಿಕ ಐಕ್ಯತೆ ಹಾಗೂ ಸಹೋದರತ್ವದ ಈ ಪಯಣ ಇನ್ನಷ್ಟು ವಿಸ್ತಾರವಾಗಲಿ ಎಂಬುದು ನಮ್ಮ ಹಾರೈಕೆ.



