खानापूर हेस्कॉम कार्यालयात उद्या शनिवारी विशेष केवायसी सुविधा; 31 ऑगस्ट अंतिम मुदत.
खानापूर : हेस्कॉम खात्याच्या वतीने गृहज्योती योजनेअंतर्गत लाभार्थ्यांची केवायसी प्रक्रिया सुरू आहे. ज्या नागरिकांनी अद्याप आधारकार्ड व इतर आवश्यक कागदपत्रे सादर करून केवायसी केलेली नाही, त्यांनी शनिवार, 22 ऑगस्ट रोजी खानापूर येथील हेस्कॉम कार्यालयात उपस्थित राहून केवायसी करून घ्यावी, असे आवाहन करण्यात आले आहे.
गृहज्योती योजनेअंतर्गत केवायसी करण्याची अंतिम तारीख 31 ऑगस्ट 2026 आहे. त्यामुळे उर्वरित नागरिकांनी अंतिम मुदतीपूर्वी आपली केवायसी प्रक्रिया पूर्ण करून घ्यावी, असे हेस्कॉम खात्याचे सहायक कार्यकारी अभियंता प्रवीण बरगाले यांनी कळविले आहे.
दरम्यान, उद्या महिन्याचा चौथा शनिवार असल्याने हेस्कॉम कार्यालयाला नियमित सुट्टी असते. मात्र नागरिकांच्या सोयीसाठी केवायसी प्रक्रिया पूर्ण करण्यासाठी उद्याची सुट्टी रद्द करण्यात आली असून कार्यालय सुरू राहणार आहे.
त्यामुळे ज्या नागरिकांची केवायसी अद्याप बाकी आहे, त्यांनी या विशेष सुविधेचा लाभ घेऊन शनिवारीच केवायसी पूर्ण करून घ्यावी, असे आवाहन हेस्कॉम विभागाच्या वतीने करण्यात आले आहे.
ಖಾನಾಪುರ ಪಟ್ಟಣದ ಹೆಸ್ಕಾಂ (HESCOM) ಕಚೇರಿಯಲ್ಲಿ ನಾಳೆ, ಶನಿವಾರ ವಿಶೇಷ ಕೆವೈಸಿ (KYC) ಮಾಡಿ ಕೊಳ್ಳುವ ಸೌಲಭ್ಯ;ಕೆವೈಸಿ ಮಾಡಲು ಆಗಸ್ಟ್ 31 ಅಂತಿಮ ಗಡುವು.
ಖಾನಾಪುರ : ಹೆಸ್ಕಾಂ ಇಲಾಖೆಯ ವತಿಯಿಂದ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ. ಇದುವರೆಗೆ ಆಧಾರ್ ಕಾರ್ಡ್ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕೆವೈಸಿ ಮಾಡಿಸಿಕೊಳ್ಳದಿರುವ ನಾಗರಿಕರು ಶನಿವಾರ, ಆಗಸ್ಟ್ 22ರಂದು ಖಾನಾಪುರದಲ್ಲಿರುವ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಡಿ ಕೆವೈಸಿ ಮಾಡಿಸಿಕೊಳ್ಳಲು ಆಗಸ್ಟ್ 31, 2026 ಅಂತಿಮ ದಿನಾಂಕವಾಗಿದೆ. ಆದ್ದರಿಂದ ಬಾಕಿ ಉಳಿದಿರುವ ನಾಗರಿಕರು ಅಂತಿಮ ಗಡುವಿನೊಳಗೆ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಬರ್ಗಾಲೆ ತಿಳಿಸಿದ್ದಾರೆ.
ಈ ಮಧ್ಯೆ, ನಾಳೆ ತಿಂಗಳ ನಾಲ್ಕನೇ ಶನಿವಾರವಾಗಿರುವುದರಿಂದ ಹೆಸ್ಕಾಂ ಕಚೇರಿಗೆ ನಿಯಮಿತ ರಜೆ ಇರುತ್ತದೆ. ಆದರೆ ನಾಗರಿಕರ ಅನುಕೂಲಕ್ಕಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಾಳಿನ ರಜೆಯನ್ನು ರದ್ದುಗೊಳಿಸಲಾಗಿದ್ದು, ಕಚೇರಿ ಕಾರ್ಯನಿರ್ವಹಿಸಲಿದೆ.
ಆದ್ದರಿಂದ ಕೆವೈಸಿ ಇನ್ನೂ ಬಾಕಿ ಇರುವ ನಾಗರಿಕರು ಈ ವಿಶೇಷ ಸೌಲಭ್ಯದ ಸದುಪಯೋಗ ಪಡೆದುಕೊಂಡು ಶನಿವಾರವೇ ತಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಹೆಸ್ಕಾಂ ಇಲಾಖೆಯ ವತಿಯಿಂದ ಮನವಿ ಮಾಡಲಾಗಿದೆ.



