गुंजी परिसरात अस्वलांचा वाढता वावर; शेतकरी वर्गात भीतीचे वातावरण.
गुंजी : प्रतिनिधी
गुंजी परिसरात गेल्या काही दिवसांपासून अस्वलांचा वावर मोठ्या प्रमाणात वाढला असून शेतांमध्ये त्यांच्या सततच्या वावरामुळे शेतकरी वर्गात भीतीचे वातावरण निर्माण झाले आहे. सध्या खरीप हंगामातील पेरणीची कामे सुरू असल्याने शेतकऱ्यांना दिवसरात्र शेतात जावे लागत आहे. मात्र, रात्रीच्या वेळी अस्वलांचा वाढलेला संचार पाहता शेतकऱ्यांना जीव मुठीत घेऊन काम करावे लागत असल्याचे चित्र आहे.
सध्या फणसाचा हंगाम सुरू असून शेतातील फणसाच्या झाडांवर अस्वलांकडून मोठ्या प्रमाणात हल्ले होत आहेत. अस्वल झाडांवरील फणस खाली पाडून त्यांचे नुकसान करत असल्याने शेतकऱ्यांना आर्थिक फटका बसत आहे. अनेक ठिकाणी दररोज रात्री फणसाची नासधूस होत असल्याची तक्रार शेतकऱ्यांनी केली आहे.
याशिवाय चिकूच्या बागांनाही अस्वलांचा फटका बसत आहे. काही शेतकऱ्यांच्या चिकूच्या झाडांवर चढून अस्वलांनी फळांसह झाडांचीही मोठ्या प्रमाणात नासधूस केली आहे. त्यामुळे बागायतदार शेतकरी चिंतेत असून वन्यप्राण्यांपासून पिकांचे संरक्षण करण्याचे मोठे आव्हान त्यांच्यासमोर उभे ठाकले आहे.
तालुक्यात यापूर्वीही अस्वलांच्या हल्ल्यांत अनेक शेतकरी जखमी झाले असून काहींना जीव गमवावा लागल्याच्या घटना घडल्या आहेत. त्यामुळे या भागातील शेतकऱ्यांमध्ये अस्वलांच्या हल्ल्याची भीती अधिकच वाढली आहे.
गुंजी परिसरातील वाढता अस्वलांचा वावर लक्षात घेऊन वन विभागाने तातडीने उपाययोजना कराव्यात, अस्वलांचा बंदोबस्त करावा तसेच शेतकऱ्यांच्या सुरक्षिततेसाठी आवश्यक पावले उचलावीत, अशी जोरदार मागणी स्थानिक शेतकरी वर्गातून होत आहे.
ಗುಂಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿದ ಕರಡಿಗಳ ಚಲನವಲನ ; ರೈತರಲ್ಲಿ ಭಯದ ವಾತಾವರಣ
ಗುಂಜಿ : ಪ್ರತಿನಿಧಿಗುಂಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕರಡಿಗಳ ಚಲನವಲನ ಗಣನೀಯವಾಗಿ ಹೆಚ್ಚಾಗಿದ್ದು, ಹೊಲಗಳಲ್ಲಿ ಅವುಗಳ ನಿರಂತರ ಓಡಾಟದಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಖರೀಫ್ ಹಂಗಾಮಿನ ಬಿತ್ತನೆ ಕಾರ್ಯಗಳು ನಡೆಯುತ್ತಿರುವುದರಿಂದ ರೈತರು ಹಗಲು-ರಾತ್ರಿ ಹೊಲಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆದರೆ ರಾತ್ರಿ ವೇಳೆಯಲ್ಲಿ ಕರಡಿಗಳ ಹೆಚ್ಚಿದ ಸಂಚಾರದಿಂದ ರೈತರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಗುಂಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕರಡಿಗಳ ಚಲನವಲನ ಗಣನೀಯವಾಗಿ ಹೆಚ್ಚಾಗಿದ್ದು, ಹೊಲಗಳಲ್ಲಿ ಅವುಗಳ ನಿರಂತರ ಓಡಾಟದಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಖರೀಫ್ ಹಂಗಾಮಿನ ಬಿತ್ತನೆ ಕಾರ್ಯಗಳು ನಡೆಯುತ್ತಿರುವುದರಿಂದ ರೈತರು ಹಗಲು-ರಾತ್ರಿ ಹೊಲಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆದರೆ ರಾತ್ರಿ ವೇಳೆಯಲ್ಲಿ ಕರಡಿಗಳ ಹೆಚ್ಚಿದ ಸಂಚಾರದಿಂದ ರೈತರು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಪ್ರಸ್ತುತ ಹಲಸಿನ ಹಣ್ಣಿನ ಹಂಗಾಮು ಆರಂಭವಾಗಿದ್ದು, ಹೊಲಗಳಲ್ಲಿರುವ ಹಲಸಿನ ಮರಗಳ ಮೇಲೆ ಕರಡಿಗಳಿಂದ ವ್ಯಾಪಕ ಹಾನಿ ಉಂಟಾಗುತ್ತಿದೆ. ಕರಡಿಗಳು ಮರಗಳ ಮೇಲಿರುವ ಹಲಸಿನ ಹಣ್ಣುಗಳನ್ನು ಕೆಳಗೆ ಕೆಡವಿ ನಾಶಪಡಿಸುತ್ತಿರುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಅನೇಕ ಕಡೆಗಳಲ್ಲಿ ಪ್ರತಿದಿನ ರಾತ್ರಿ ಹಲಸಿನ ಹಣ್ಣುಗಳ ನಾಶವಾಗುತ್ತಿರುವ ಬಗ್ಗೆ ರೈತರು ದೂರಿದ್ದಾರೆ.
ಇದಲ್ಲದೆ, ಸಪೋಟಾ ತೋಟಗಳಿಗೂ ಕರಡಿಗಳ ಕಾಟ ಹೆಚ್ಚಾಗಿದೆ. ಕೆಲವು ರೈತರ ಸಪೋಟಾ ಮರಗಳ ಮೇಲೆ ಹತ್ತಿ ಕರಡಿಗಳು ಹಣ್ಣುಗಳ ಜೊತೆಗೆ ಮರಗಳಿಗೂ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟುಮಾಡಿವೆ. ಇದರಿಂದ ತೋಟಗಾರಿಕಾ ರೈತರು ಆತಂಕಕ್ಕೊಳಗಾಗಿದ್ದು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ ಈ ಹಿಂದೆಯೂ ಕರಡಿಗಳ ದಾಳಿಯಲ್ಲಿ ಅನೇಕ ರೈತರು ಗಾಯಗೊಂಡಿದ್ದು, ಕೆಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಇದರಿಂದ ಈ ಭಾಗದ ರೈತರಲ್ಲಿ ಕರಡಿಗಳ ದಾಳಿಯ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಗುಂಜಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಕರಡಿಗಳ ಚಲನವಲವನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಕರಡಿಗಳ ಹಾವಳಿಯನ್ನು ನಿಯಂತ್ರಿಸಬೇಕು ಹಾಗೂ ರೈತರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.


