गर्लगुंजी जिल्हा पंचायत निवडणुकीत भाजपात उमेदवारीसाठी चुरस! महिलांसाठी आरक्षण; सदानंद होसुरकर पत्नीसाठी उमेदवारी मागणार!
खानापूर : प्रतिनिधी
खानापूर तालुका पंचायत व जिल्हा पंचायत निवडणुकांची घोषणा होताच तालुक्यात राजकीय हालचालींना वेग येऊ लागला आहे. विविध जिल्हा पंचायत विभागांतील आरक्षण जाहीर झाल्यानंतर इच्छुक उमेदवारांनी आपापल्या राजकीय रणनीती आखण्यास सुरुवात केली आहे. त्यातच गर्लगुंजी जिल्हा पंचायत विभाग सर्वसाधारण महिला प्रवर्गासाठी राखीव झाल्याने या विभागातील निवडणुकीला विशेष महत्त्व प्राप्त झाले आहे. भारतीय जनता पार्टीतर्फे उमेदवारी मिळविण्यासाठी अनेक इच्छुकांनी हालचाली सुरू केल्या असून, पक्षाची उमेदवारी नेमकी कोणाला मिळणार, याकडे राजकीय वर्तुळाचे लक्ष लागले आहे.
सदानंद होसुरकर पत्नी सुमीत्रा होसुरकर यांच्यासाठी उमेदवारी मागणार?
गर्लगुंजी जिल्हा पंचायत विभागातून निवडणूक लढविण्यास इच्छुक असलेले झाडअंकले गावचे रहिवासी आणि भाजपाचे ज्येष्ठ नेते व कार्यकर्ते सदानंद होसुरकर यांना आरक्षणामुळे आपली निवडणूक रणनीती बदलावी लागली आहे. हा मतदारसंघ महिलांसाठी राखीव झाल्याने आता ते आपल्या पत्नी सुमीत्रा सदानंद होसुरकर यांना भाजपाकडून उमेदवारी मिळावी, यासाठी पक्षश्रेष्ठींकडे मागणी करणार असल्याचे समजते. होसुरकर यांनीही याबाबत आपली इच्छा व्यक्त केल्याची माहिती आहे.
सदानंद होसुरकर हे अनेक वर्षांपासून भारतीय जनता पार्टीमध्ये सक्रिय असून, पक्षाच्या विविध लहान-मोठ्या निवडणुकांमध्ये त्यांनी सहभाग घेतला आहे. पक्षसंघटन मजबूत करण्यासाठी तसेच स्थानिक पातळीवर भाजपाचे कार्य वाढविण्यासाठी त्यांनी योगदान दिले आहे. त्यांनी ईदलोहंड ग्रामपंचायतीचे उपाध्यक्ष म्हणून पाच वर्षे काम पाहिले आहे. तसेच भाजपाच्या तालुका रयत मोर्चाचे जनरल सेक्रेटरी म्हणूनही त्यांनी जबाबदारी सांभाळली असून, सध्या ते गर्लगुंजी विभागाचे उपाध्यक्ष म्हणून कार्यरत आहेत.
राजकीय कार्यासोबतच सामाजिक क्षेत्रातही त्यांचा सहभाग राहिला आहे. विविध सामाजिक उपक्रमांमध्ये ते सक्रिय असतात. दानशूर व्यक्ती म्हणूनही त्यांची तालुक्यात ओळख असून, गर्लगुंजी विभागातील विविध गावांमध्ये त्यांचा संपर्क असल्याचे सांगितले जाते. त्यामुळे त्यांच्या पत्नीला उमेदवारी मिळाल्यास या विभागातील राजकीय समीकरणांवर त्याचा परिणाम होऊ शकतो, अशी चर्चा राजकीय वर्तुळात सुरू आहे.
बैलगाडा शर्यत आणि कुस्ती क्षेत्रातूनही जनसंपर्क…
सदानंद होसुरकर यांनी नुकतीच ‘जय जवान जय किसान बैलगाडा शर्यत कमिटी’ स्थापन केली असून, ते या कमिटीचे अध्यक्ष आहेत. या माध्यमातून मोठ्या प्रमाणावर बैलगाडा शर्यतीचे आयोजन करण्याचा त्यांचा मानस आहे. याशिवाय ते कुस्तीगीर संघटनेशीही संबंधित असून, या क्षेत्रातून त्यांचा विविध गावांतील नागरिक, खेळाडू आणि क्रीडाप्रेमींशी संपर्क वाढला आहे.
राजकीय संघटन, ग्रामपंचायत स्तरावरील अनुभव, सामाजिक कार्य आणि क्रीडा क्षेत्रातील सहभाग या बाबी त्यांच्या पत्नीच्या संभाव्य उमेदवारीसाठी महत्त्वाच्या ठरू शकतात. मात्र, भाजपाच्या वरिष्ठ नेत्यांकडून त्यांच्या मागणीला कितपत प्रतिसाद मिळतो आणि पक्षाची अधिकृत उमेदवारी कोणाला दिली जाते, हे आगामी काळात स्पष्ट होईल.
भाजपातील महिला इच्छुकांची मोठी यादी…
गर्लगुंजी जिल्हा पंचायत विभागातून भाजपाकडून उमेदवारी मिळविण्यासाठी अनेकांनी इच्छा व्यक्त केल्याची चर्चा आहे. त्यामध्ये भाजपाच्या महिला मोर्चाच्या खानापूर तालुकाध्यक्ष सुनीता पाटील यांचे नाव सुद्धा आघाडीवर असुन चर्चेत आहे.
याशिवाय बजरंग दलाचे माजी अध्यक्ष नंदकुमार निट्टूरकर यांनी आपल्या पत्नी अनुराधा निट्टूरकर यांच्यासाठी उमेदवारी मिळविण्याची इच्छा व्यक्त केल्याचे समजते. भाजपाचे प्रतोद आणि खानापूर कृषी पत्तीन सोसायटीचे संचालक शंकर बाळाराम पाटील हे आपल्या पत्नी सोनाली पाटील यांच्यासाठी प्रयत्नशील असल्याची चर्चा आहे.
तसेच तालुका पंचायतीचे माजी उपाध्यक्ष आणि कर्नाटक वन निगमचे माजी संचालक सुरेश देसाई यांनी आपल्या पत्नी तथा निटूर ग्रामपंचायतीच्या माजी अध्यक्षा वर्षा देसाई यांच्यासाठी उमेदवारी मिळविण्याची इच्छा व्यक्त केल्याचे सांगितले जाते. भाजपाचे नेते मरणाची पाटील हे सुद्धा आपल्या पत्नीसाठी उमेदवारी मिळविण्यासाठी इच्छुक असल्याचे समजते.
या सर्व इच्छुकांच्या पार्श्वभूमीवर गर्लगुंजी विभागातील भाजपाची उमेदवारी निश्चित करताना पक्षाच्या कोअर कमिटीसमोर मोठे आव्हान असणार आहे. स्थानिक जनसंपर्क, पक्षासाठी केलेले कार्य, संघटनात्मक अनुभव, सामाजिक योगदान आणि निवडून येण्याची क्षमता या निकषांवर पक्ष कोणाला प्राधान्य देतो, हे पाहणे औत्सुक्याचे ठरणार आहे.
आरक्षणामुळे राजकीय समीकरणांना नवे वळण…
गर्लगुंजी जिल्हा पंचायत विभाग महिलांसाठी राखीव झाल्याने यापूर्वी निवडणूक लढविण्याची तयारी करणाऱ्या पुरुष इच्छुकांना आता आपल्या कुटुंबातील महिला सदस्यांच्या उमेदवारीचा विचार करावा लागत आहे. त्यामुळे या विभागातील निवडणुकीचे चित्र बदलले आहे. एकीकडे पक्षातील महिला पदाधिकाऱ्यांना संधी मिळण्याची शक्यता आहे, तर दुसरीकडे अनुभवी पुरुष नेते आपल्या पत्नींसाठी उमेदवारी मिळविण्याच्या प्रयत्नात आहेत.
यामुळे भाजपाच्या अंतर्गत राजकारणात उमेदवारीवरून चुरस वाढण्याची चिन्हे दिसत आहेत. मात्र, इच्छुकांची संख्या कितीही असली तरी अंतिम निर्णय पक्षाच्या अधिकृत नेतृत्वाकडूनच घेतला जाणार आहे.
निवडणुका वेळेत होणार की आरक्षणाचा मुद्दा न्यायालयात जाणार?…
निवडणुकांची घोषणा आणि आरक्षण जाहीर झाल्यानंतरही काही ठिकाणी राजकीय व प्रशासकीय स्तरावर अपेक्षित हालचाली दिसत नसल्याची चर्चा आहे. काही विभागांतील आरक्षणावर आक्षेप घेतले जात असल्याचेही बोलले जात आहे. त्यामुळे आरक्षणाच्या प्रक्रियेला न्यायालयात आव्हान दिले गेल्यास निवडणूक कार्यक्रमावर परिणाम होण्याची शक्यता काही राजकीय निरीक्षकांकडून व्यक्त केली जात आहे.
मात्र, निवडणुका पुढे ढकलल्या जातील किंवा न्यायालयीन प्रक्रियेमुळे त्यांना विलंब होईल, याबाबत अद्याप कोणताही ठोस निष्कर्ष काढता येणार नाही. यासंदर्भातील अधिकृत निर्णय आणि निवडणूक आयोगाच्या पुढील सूचनांकडे लक्ष ठेवावे लागणार आहे.
एकंदरीत, गर्लगुंजी जिल्हा पंचायत विभागातील महिला आरक्षणामुळे भाजपातील उमेदवारीची स्पर्धा अधिक रंगतदार बनली आहे. सुनीता पाटील यांच्यासह अनुराधा निट्टूरकर, सोनाली पाटील, वर्षा देसाई आणि सदानंद होसुरकर यांच्या पत्नीच्या संभाव्य उमेदवारीची चर्चा सुरू असल्याने या विभागात भाजपाचा उमेदवार कोण असेल, याबाबत उत्सुकता वाढली आहे. पक्षाची कोअर कमिटी कोणाच्या नावावर शिक्कामोर्तब करते आणि आरक्षणासंदर्भातील पुढील घडामोडी काय असतात, यावर गर्लगुंजी विभागातील निवडणुकीचे राजकीय चित्र अवलंबून राहणार आहे.
या विभागातून उमेदवारी मिळविण्यासाठी काँग्रेस पक्षाकडून अनिता दंडगल या इच्छुक असल्याचे समजते. तसेच महाराष्ट्र एकीकरण समितीकडे उमेदवारी मिळविण्यासाठी अनेक जण इच्छुक असल्याचे समजते परंतु निश्चित माहिती मिळू शकली नाही.
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ಗಾಗಿ ಪೈಪೋಟಿ! ಮಹಿಳೆಯರಿಗೆ ಮೀಸಲಾತಿ; ಸದಾನಂದ ಹೊಸೂರಕ ಅವರು ತಮ್ಮ ಪತ್ನಿ ಸುಮಿತ್ರ ಅವರಿಗೆ ಟಿಕೆಟ್ ಕೇಳಲಿದ್ದಾರೆ!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಘೋಷಣೆಯಾಗುತ್ತಿದ್ದಂತೆಯೇ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ವಿವಿಧ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾದ ಬಳಿಕ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ತಮ್ಮದೇ ಆದ ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸಲು ಆರಂಭಿಸಿದ್ದಾರೆ. ಅದರಲ್ಲೂ ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಸಾಮಾನ್ಯ ಮಹಿಳಾ ಪ್ರವರ್ಗಕ್ಕೆ ಮೀಸಲಾಗಿರುವುದರಿಂದ ಈ ಕ್ಷೇತ್ರದ ಚುನಾವಣೆಗೆ ವಿಶೇಷ ಮಹತ್ವ ಬಂದಿದೆ. ಭಾರತೀಯ ಜನತಾ ಪಕ್ಷದ ವತಿಯಿಂದ ಟಿಕೆಟ್ ಪಡೆಯಲು ಹಲವು ಆಕಾಂಕ್ಷಿಗಳು ಪ್ರಯತ್ನ ಆರಂಭಿಸಿದ್ದು, ಪಕ್ಷದ ಟಿಕೆಟ್ ಯಾರಿಗೆ ದೊರೆಯಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ಸದಾನಂದ ಹೊಸೂರಕರ ಅವರು ತಮ್ಮ ಪತ್ನಿ ಸುಮಿತ್ರ ಅವರಿಗೆ ಟಿಕೆಟ್ ಕೇಳಲಿದ್ದಾರೆಯೇ?
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಝಾಡಅಂಕಲೆ ಗ್ರಾಮದ ನಿವಾಸಿ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತ ಸದಾನಂದ ಹೊಸೂರಕರ ಅವರು ಮೀಸಲಾತಿಯಿಂದಾಗಿ ತಮ್ಮ ಚುನಾವಣಾ ಕಾರ್ಯತಂತ್ರವನ್ನು ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದ್ದು. ಈ ಕ್ಷೇತ್ರ ಮಹಿಳೆಯರಿಗೆ ಮೀಸಲಾಗಿರುವುದರಿಂದ ಇದೀಗ ತಮ್ಮ ಪತ್ನಿ ಸುಮಿತ್ರ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂದು ಪಕ್ಷದ ಹಿರಿಯ ನಾಯಕರಲ್ಲಿ ಮನವಿ ಸಲ್ಲಿಸಲು ಅವರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೊಸೂರಕರ ಅವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸದಾನಂದ ಹೊಸೂರಕರ ಅವರು ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಪಕ್ಷದ ವಿವಿಧ ಸಣ್ಣಪುಟ್ಟ ಚುನಾವಣೆಗಳಲ್ಲಿ ಭಾಗವಹಿಸಿರುವ ಅವರು, ಪಕ್ಷದ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿಯ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಕೊಡುಗೆ ನೀಡಿದ್ದಾರೆ.
ಅವರು ಈದಲಹೂಂಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಹುದ್ದೆಯಲ್ಲಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಬಿಜೆಪಿಯ ತಾಲೂಕು ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಗರ್ಲಗುಂಜಿ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅವರು, ದಾನಶೀಲ ವ್ಯಕ್ತಿಯಾಗಿಯೂ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದಾರೆ. ಗರ್ಲಗುಂಜಿ ವಿಭಾಗದ ವಿವಿಧ ಗ್ರಾಮಗಳಲ್ಲಿ ಅವರು ಜನಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಪತ್ನಿಗೆ ಪಕ್ಷದ ಟಿಕೆಟ್ ದೊರೆತರೆ ಈ ಕ್ಷೇತ್ರದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಎತ್ತಿನಗಾಡಿ ಸ್ಪರ್ಧೆ ಮತ್ತು ಕುಸ್ತಿ ಕ್ಷೇತ್ರದ ಮೂಲಕವೂ ಜನಸಂಪರ್ಕ
ಸದಾನಂದ ಹೊಸೂರಕರ ಅವರು ಇತ್ತೀಚೆಗೆ ‘ಜೈ ಜವಾನ್ ಜೈ ಕಿಸಾನ್, ಎತ್ತಿನಗಾಡಿ ಸ್ಪರ್ಧಾ ಸಮಿತಿ’ಯನ್ನು ಸ್ಥಾಪಿಸಿದ್ದು, ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಎತ್ತಿನಗಾಡಿ ಸ್ಪರ್ಧೆಗಳನ್ನು ಆಯೋಜಿಸುವ ಉದ್ದೇಶ ಹೊಂದಿದ್ದಾರೆ.
ಇದಲ್ಲದೆ, ಅವರು ಕುಸ್ತಿಪಟುಗಳ ಸಂಘಟನೆಯೊಂದಿಗೂ ಸಂಬಂಧ ಹೊಂದಿದ್ದಾರೆ. ಈ ಕ್ಷೇತ್ರದ ಮೂಲಕ ವಿವಿಧ ಗ್ರಾಮಗಳ ನಾಗರಿಕರು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳೊಂದಿಗೆ ತಮ್ಮ ಸಂಪರ್ಕವನ್ನು ಹೆಚ್ಚಿಸಿಕೊಂಡಿದ್ದಾರೆ.
ರಾಜಕೀಯ ಸಂಘಟನೆಯಲ್ಲಿನ ಅನುಭವ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರ್ವಹಿಸಿದ ಜವಾಬ್ದಾರಿ, ಸಾಮಾಜಿಕ ಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಭಾಗವಹಿಸುವಿಕೆ ಮುಂತಾದ ಅಂಶಗಳು ಅವರ ಪತ್ನಿ ಸುಮಿತ್ರ ಅವರಿಗೆ ಸಂಭವನೀಯ ಉಮೇದುವಾರಿಕೆಗೆ ಮಹತ್ವದ ಅಂಶಗಳಾಗಬಹುದು. ಆದರೆ, ಅವರ ಮನವಿಗೆ ಬಿಜೆಪಿಯ ಹಿರಿಯ ನಾಯಕರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಮತ್ತು ಪಕ್ಷದ ಅಧಿಕೃತ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಬಿಜೆಪಿಯಲ್ಲಿ ಮಹಿಳಾ ಆಕಾಂಕ್ಷಿಗಳ ದೊಡ್ಡ ಪಟ್ಟಿ
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆಯಲು ಹಲವರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಪೈಕಿ ಬಿಜೆಪಿಯ ಮಹಿಳಾ ಮೋರ್ಚಾದ ಖಾನಾಪುರ ತಾಲೂಕು ಅಧ್ಯಕ್ಷೆ ಸುನೀತಾ ಪಾಟೀಲ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಇದರ ಜೊತೆಗೆ, ಬಜರಂಗದಳದ ಮಾಜಿ ಅಧ್ಯಕ್ಷ ನಂದಕುಮಾರ ನಿಟ್ಟೂರಕರ ಅವರು ತಮ್ಮ ಪತ್ನಿ ಅನುರಾಧಾ ನಿಟ್ಟೂರಕರ ಅವರಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯ ವಿಪ್ ಹಾಗೂ ಖಾನಾಪುರ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರುವ ಶಂಕರ ಬಾಲರಾಮ ಪಾಟೀಲ ಅವರು ತಮ್ಮ ಪತ್ನಿ ಸೋನಾಲಿ ಪಾಟೀಲ ಅವರಿಗಾಗಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆಯೂ ಕೇಳಿಬರುತ್ತಿದೆ.
ಅದೇ ರೀತಿ, ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಹಾಗೂ ಕರ್ನಾಟಕ ಅರಣ್ಯ ನಿಗಮದ ಮಾಜಿ ನಿರ್ದೇಶಕ ಸುರೇಶ ದೇಸಾಯಿ ಅವರು ತಮ್ಮ ಪತ್ನಿ ಮತ್ತು ನಿಟ್ಟೂರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ವರ್ಷಾ ದೇಸಾಯಿ ಅವರಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಆಕಾಂಕ್ಷಿಗಳ ಹಿನ್ನೆಲೆಯಲ್ಲಿ ಗರ್ಲಗುಂಜಿ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪಕ್ಷದ ಕೋರ್ ಕಮಿಟಿಗೆ ದೊಡ್ಡ ಸವಾಲು ಎದುರಾಗುವ ಸಾಧ್ಯತೆಯಿದೆ. ಸ್ಥಳೀಯ ಜನಸಂಪರ್ಕ, ಪಕ್ಷಕ್ಕಾಗಿ ಸಲ್ಲಿಸಿದ ಸೇವೆ, ಸಂಘಟನಾತ್ಮಕ ಅನುಭವ, ಸಾಮಾಜಿಕ ಕೊಡುಗೆ ಹಾಗೂ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಮುಂತಾದ ಮಾನದಂಡಗಳ ಆಧಾರದ ಮೇಲೆ ಪಕ್ಷ ಯಾರಿಗೆ ಆದ್ಯತೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮೀಸಲಾತಿಯಿಂದ ರಾಜಕೀಯ ಸಮೀಕರಣಗಳಿಗೆ ಹೊಸ ತಿರುವು
ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಹಿಳೆಯರಿಗೆ ಮೀಸಲಾಗಿರುವುದರಿಂದ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದ ಪುರುಷ ಆಕಾಂಕ್ಷಿಗಳು ಇದೀಗ ತಮ್ಮ ಕುಟುಂಬದ ಮಹಿಳಾ ಸದಸ್ಯರ ಉಮೇದುವಾರಿಕೆಯ ಬಗ್ಗೆ ಚಿಂತನೆ ನಡೆಸುವಂತಾಗಿದೆ. ಇದರಿಂದ ಈ ಕ್ಷೇತ್ರದ ಚುನಾವಣಾ ಚಿತ್ರಣವೇ ಬದಲಾಗುತ್ತಿದೆ.
ಒಂದೆಡೆ ಪಕ್ಷದಲ್ಲಿ ಸಕ್ರಿಯವಾಗಿರುವ ಮಹಿಳಾ ಪದಾಧಿಕಾರಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯುವ ಸಾಧ್ಯತೆಯಿದ್ದರೆ, ಮತ್ತೊಂದೆಡೆ ಅನುಭವಿ ಪುರುಷ ನಾಯಕರು ತಮ್ಮ ಪತ್ನಿಯರಿಗೆ ಪಕ್ಷದ ಟಿಕೆಟ್ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ.
ಈ ಬೆಳವಣಿಗೆಗಳಿಂದ ಬಿಜೆಪಿಯ ಆಂತರಿಕ ರಾಜಕೀಯದಲ್ಲಿ ಟಿಕೆಟ್ಗಾಗಿ ಪೈಪೋಟಿ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಕಾಂಕ್ಷಿಗಳ ಸಂಖ್ಯೆ ಎಷ್ಟೇ ಹೆಚ್ಚಿದ್ದರೂ ಅಂತಿಮ ನಿರ್ಧಾರವನ್ನು ಪಕ್ಷದ ಅಧಿಕೃತ ನಾಯಕತ್ವವೇ ಕೈಗೊಳ್ಳಲಿದೆ.
ಚುನಾವಣೆ ನಿಗದಿತ ಸಮಯದಲ್ಲಿ ನಡೆಯಲಿದೆಯೇ ಅಥವಾ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಲಿದೆಯೇ?
ಚುನಾವಣೆಗಳ ಘೋಷಣೆ ಹಾಗೂ ಮೀಸಲಾತಿ ಪ್ರಕಟಣೆಯ ನಂತರವೂ ಕೆಲವು ಕಡೆಗಳಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ನಿರೀಕ್ಷಿತ ಚಟುವಟಿಕೆಗಳು ಕಂಡುಬರುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ. ಕೆಲವು ಕ್ಷೇತ್ರಗಳ ಮೀಸಲಾತಿಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ ಎಂದೂ ಹೇಳಲಾಗುತ್ತಿದೆ.
ಹೀಗಾಗಿ ಮೀಸಲಾತಿ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಚುನಾವಣಾ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಆದರೆ, ಚುನಾವಣೆಗಳು ಮುಂದೂಡಲ್ಪಡುತ್ತವೆ ಅಥವಾ ನ್ಯಾಯಾಂಗ ಪ್ರಕ್ರಿಯೆಯಿಂದ ವಿಳಂಬವಾಗುತ್ತವೆ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಕುರಿತು ಅಧಿಕೃತ ನಿರ್ಧಾರ ಹಾಗೂ ಚುನಾವಣಾ ಆಯೋಗದ ಮುಂದಿನ ಸೂಚನೆಗಳಿಗಾಗಿ ಕಾಯಬೇಕಾಗಿದೆ.
ಒಟ್ಟಾರೆಯಾಗಿ, ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಹಿಳಾ ಮೀಸಲಾತಿಯಿಂದಾಗಿ ಬಿಜೆಪಿಯಲ್ಲಿ ಟಿಕೆಟ್ಗಾಗಿ ಸ್ಪರ್ಧೆ ಮತ್ತಷ್ಟು ರಂಗೇರಿದೆ. ಸುನೀತಾ ಪಾಟೀಲ, ಅನುರಾಧಾ ನಿಟ್ಟೂರಕರ, ಸೋನಾಲಿ ಪಾಟೀಲ, ವರ್ಷಾ ದೇಸಾಯಿ ಹಾಗೂ ಸದಾನಂದ ಹೊಸೂರಕರ ಅವರ ಪತ್ನಿಯ ಸಂಭವನೀಯ ಉಮೇದುವಾರಿಕೆಯ ಕುರಿತು ಚರ್ಚೆಗಳು ನಡೆಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ.
ಪಕ್ಷದ ಕೋರ್ ಕಮಿಟಿ ಯಾರ ಹೆಸರಿಗೆ ಮುದ್ರೆ ಒತ್ತಲಿದೆ ಮತ್ತು ಮೀಸಲಾತಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆಗಳು ನಡೆಯಲಿವೆ ಎಂಬುದರ ಮೇಲೆ ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣಾ ರಾಜಕೀಯದ ಮುಂದಿನ ಚಿತ್ರಣ ಅವಲಂಬಿತವಾಗಿದೆ.



