खानापूर–लोंढा महामार्गावर भीषण अपघात! कार दोन पलट्या खाऊन उलटली; गुंजीच्या 39 वर्षीय विनोद गुरव यांचा दुर्दैवी मृत्यू!
खानापूर : प्रतिनिधी
खानापूर–लोंढा महामार्गावर वाटरे आणि जोमतळे गावांच्या दरम्यान असलेल्या एका क्रॉसजवळ गुरुवार, दि. 22 ऑक्टोबर 2026 रोजी रात्री साडेनऊ ते दहाच्या सुमारास भीषण कार अपघात घडला. या अपघातात गुंजी (ता. खानापूर) येथील विनोद संभाजी गुरव (वय 39 वर्षे) यांचा दुर्दैवी मृत्यू झाला. धोकादायक वळणावर कारवरील नियंत्रण सुटल्याने कार दोन पलट्या खाऊन उलटली. या दुर्घटनेत विनोद यांना गंभीर दुखापत झाल्याने त्यांचा जागीच मृत्यू झाल्याची माहिती समोर आली आहे. ऐन श्री माऊलीदेवीच्या यात्रोत्सवाच्या काळात गावातील एका तरुणाचा अशा प्रकारे मृत्यू झाल्याने गुंजीसह परिसरात शोककळा पसरली आहे.
यात्रोत्सवासाठी गावी आले होते विनोद…
विनोद गुरव हे मूळचे गुंजी गावचे रहिवासी असून नोकरीनिमित्त गोवा येथे राहत होते. गेल्या चार दिवसांपासून गुंजी येथे श्री माऊलीदेवीचा यात्रोत्सव सुरू असल्याने ते यात्रेनिमित्त आपल्या गावी आले होते. मात्र, कामानिमित्त गुरुवारी सकाळी ते गोव्याकडे रवाना झाले. दिवसभर नोकरीचे काम पूर्ण केल्यानंतर सायंकाळी ते पुन्हा आपल्या गावी गुंजी येथे परतण्यासाठी निघाले होते.
दरम्यान, रात्री नऊच्या सुमारास त्यांच्या घरच्यांनी त्यांच्याशी फोनवर संपर्क साधला असता, आपण रामनगर येथे असल्याचे त्यांनी सांगितले. त्यानंतर विनोद घरी परतण्याची कुटुंबीय वाट पाहत होते. मात्र, रात्री अकरा वाजेपर्यंत ते घरी न पोहोचल्याने कुटुंबीयांनी पुन्हा त्यांच्या मोबाईलवर संपर्क साधण्याचा प्रयत्न केला.
फोन दुसऱ्याने उचलला अन् अपघाताची बातमी समजली!…
विनोद घरी न परतल्याने चिंतेत असलेल्या कुटुंबीयांनी त्यांना फोन केला. मात्र, यावेळी फोन दुसऱ्या व्यक्तीने उचलला आणि विनोद यांचा अपघात झाल्याची माहिती दिली. ही बातमी समजताच कुटुंबीयांवर दुःखाचा डोंगर कोसळला.
वाटरे आणि जोमतळे गावांच्या दरम्यान असलेल्या धोकादायक वळणावर कारवरील नियंत्रण सुटल्याने कार दोन पलट्या खाऊन उलटल्याचे सांगण्यात येते. या भीषण अपघातात विनोद गंभीर जखमी झाले आणि त्यांचा घटनास्थळीच मृत्यू झाला.
खानापूर येथे उत्तरीय तपासणी….
अपघातानंतर विनोद यांना खानापूर येथील प्राथमिक आरोग्य केंद्रात आणण्यात आले. शुक्रवारी, दि. 23 ऑक्टोबर रोजी उत्तरीय तपासणीची प्रक्रिया पूर्ण झाल्यानंतर त्यांचा मृतदेह नातेवाईकांच्या ताब्यात देण्यात येणार असून, त्यानंतर गुंजी येथे अंत्यसंस्कार करण्यात येणार असल्याची माहिती आहे.
दोन चिमुकल्या मुलींनी गमावले वडिलांचे छत्र….
विनोद गुरव यांच्या पश्चात पत्नी, चार वर्षांची एक मुलगी, दोन वर्षांची दुसरी मुलगी, आई-वडील, मोठा विवाहित भाऊ आणि दोन विवाहित बहिणी असा परिवार आहे. अवघ्या चार आणि दोन वर्षांच्या दोन चिमुकल्या मुलींच्या डोक्यावरील वडिलांचे छत्र हरपल्याने सर्वत्र हळहळ व्यक्त होत आहे. कुटुंबाचा आधार असलेल्या विनोद यांच्या अचानक जाण्याने त्यांच्या नातेवाईकांवर दुःखाचा मोठा आघात झाला आहे.
गुंजी परिसरात हळहळ; पोलिसांकडून पुढील तपास….
गुंजी येथे श्री माऊलीदेवीचा यात्रोत्सव सुरू असतानाच ही दुर्दैवी घटना घडल्याने गावातील उत्सवी वातावरणावर दुःखाचे सावट पसरले आहे. विनोद यांच्या निधनाची बातमी समजताच गावात आणि परिसरात शोक व्यक्त करण्यात येत आहे.
या अपघाताची नोंद खानापूर पोलीस स्थानकात झाली असून, याबाबत खानापूर पोलीस पुढील तपास करीत आहेत.
ಖಾನಾಪುರ–ಲೋಂಡಾ ಹೆದ್ದಾರಿಯಲ್ಲಿ ಭೀಕರ ಅಪಘಾತ! ಕಾರು ಎರಡು ಸಲ ಪಲ್ಟಿ ಹೊಡೆದು ಪರಿಣಾಮ; ಗುಂಜಿಯ 39 ವರ್ಷದ ವಿನೋದ್ ಗುರವ ದುರ್ಮರಣ!
ಖಾನಾಪುರ : ಪ್ರತಿನಿಧಿ
ಖಾನಾಪುರ–ಲೋಂಡಾ ಹೆದ್ದಾರಿಯಲ್ಲಿ ವಾಟ್ರೆ ಮತ್ತು ಜೋಮತಳೆ ಗ್ರಾಮಗಳ ನಡುವಿನ ಕ್ರಾಸ್ ಬಳಿ ಗುರುವಾರ, ದಿನಾಂಕ 22 ಅಕ್ಟೋಬರ್ 2026 ರಂದು ರಾತ್ರಿ ಸುಮಾರು 9.30ರಿಂದ 10 ಗಂಟೆಯ ಅವಧಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಖಾನಾಪುರ ತಾಲೂಕಿನ ಗುಂಜಿ ಗ್ರಾಮದ ವಿನೋದ್ ಸಂಭಾಜಿ ಗುರವ (ವಯಸ್ಸು 39) ಅವರು ದುರಂತ ಸಾವಿಗೀಡಾಗಿದ್ದಾರೆ. ಅಪಾಯಕಾರಿ ತಿರುವಿನಲ್ಲಿ ಕಾರಿನ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಎರಡು ಸಲ ಪಲ್ಟಿ ಹೊಡೆದು ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ವಿನೋದ್ ಅವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀ ಮೌಲಿದೇವಿಯ ಜಾತ್ರೋತ್ಸವದ ಸಂಭ್ರಮದ ನಡುವೆಯೇ ಗ್ರಾಮದ ಯುವಕನೊಬ್ಬ ಈ ರೀತಿ ಮೃತಪಟ್ಟಿರುವುದರಿಂದ ಗುಂಜಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.
ಜಾತ್ರೋತ್ಸವಕ್ಕಾಗಿ ಸ್ವಗ್ರಾಮಕ್ಕೆ ಬಂದಿದ್ದರು ವಿನೋದ್…
ವಿನೋದ್ ಗುರವ ಅವರು ಮೂಲತಃ ಗುಂಜಿ ಗ್ರಾಮದ ನಿವಾಸಿಯಾಗಿದ್ದು, ಉದ್ಯೋಗದ ನಿಮಿತ್ತ ಗೋವಾದಲ್ಲಿ ವಾಸವಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಗುಂಜಿಯಲ್ಲಿ ಶ್ರೀ ಮೌಲಿದೇವಿಯ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಜಾತ್ರೆಗೆಂದು ತಮ್ಮ ಸ್ವಗ್ರಾಮಕ್ಕೆ ಬಂದಿದ್ದರು. ಆದರೆ, ಕೆಲಸದ ನಿಮಿತ್ತ ಗುರುವಾರ ಬೆಳಿಗ್ಗೆ ಅವರು ಗೋವಾದತ್ತ ಪ್ರಯಾಣ ಬೆಳೆಸಿದ್ದರು. ದಿನವಿಡೀ ಉದ್ಯೋಗದ ಕೆಲಸಗಳನ್ನು ಮುಗಿಸಿದ ಬಳಿಕ ಸಂಜೆ ಮತ್ತೆ ತಮ್ಮ ಊರಾದ ಗುಂಜಿ ಯತ್ತ ಪ್ರಯಾಣ ಬೆಳೆಸಿದ್ದರು.
ಈ ನಡುವೆ, ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಮನೆಯವರು ದೂರವಾಣಿ ಮೂಲಕ ಸಂಪರ್ಕಿಸಿದಾಗ, ತಾವು ರಾಮನಗರದಲ್ಲಿರುವುದಾಗಿ ವಿನೋದ್ ತಿಳಿಸಿದ್ದರು. ಬಳಿಕ ಮನೆಯವರು ವಿನೋದ್ ಮನೆಗೆ ಮರಳುವುದನ್ನೇ ಕಾಯುತ್ತಿದ್ದರು. ಆದರೆ, ರಾತ್ರಿ ಹನ್ನೊಂದು ಗಂಟೆಯಾದರೂ ಅವರು ಮನೆಗೆ ತಲುಪದ ಕಾರಣ ಆತಂಕಗೊಂಡ ಕುಟುಂಬಸ್ಥರು ಮತ್ತೆ ಅವರ ಮೊಬೈಲ್ಗೆ ಕರೆ ಮಾಡಲು ಪ್ರಯತ್ನಿಸಿದರು.
ಫೋನ್ ಸ್ವೀಕರಿಸಿದ ಮತ್ತೊಬ್ಬ ವ್ಯಕ್ತಿ; ಅಪಘಾತದ ಸುದ್ದಿ ತಿಳಿದು ಕುಟುಂಬಕ್ಕೆ ಆಘಾತ!
ವಿನೋದ್ ಮನೆಗೆ ಮರಳದ ಕಾರಣ ಚಿಂತಿತರಾಗಿದ್ದ ಕುಟುಂಬಸ್ಥರು ಅವರಿಗೆ ಕರೆ ಮಾಡಿದರು. ಆದರೆ, ಈ ಬಾರಿ ಕರೆಯನ್ನು ಬೇರೊಬ್ಬ ವ್ಯಕ್ತಿ ಸ್ವೀಕರಿಸಿ, ವಿನೋದ್ ಅವರಿಗೆ ಅಪಘಾತವಾಗಿರುವುದಾಗಿ ಮಾಹಿತಿ ನೀಡಿದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಮೇಲೆ ದುಃಖದ ಬೆಟ್ಟವೇ ಕುಸಿದಂತಾಯಿತು.
ವಾಟ್ರೆ ಮತ್ತು ಜೋಮತಳೆ ಗ್ರಾಮಗಳ ನಡುವಿನ ಅಪಾಯಕಾರಿ ತಿರುವಿನಲ್ಲಿ ಕಾರಿನ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಎರಡು ಪಲ್ಟಿ ಹೊಡೆದು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಈ ಭೀಕರ ಅಪಘಾತದಲ್ಲಿ ವಿನೋದ್ ಗಂಭೀರವಾಗಿ ಗಾಯಗೊಂಡು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಖಾನಾಪುರದಲ್ಲಿ ಮರಣೋತ್ತರ ಪರೀಕ್ಷೆ…
ಅಪಘಾತದ ಬಳಿಕ ವಿನೋದ್ ಅವರ ಮೃತದೇಹವನ್ನು ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು. ಶುಕ್ರವಾರ, ದಿನಾಂಕ 23 ಅಕ್ಟೋಬರ್ 2026ರಂದು ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ನಂತರ ಗುಂಜಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಇಬ್ಬರು ಪುಟ್ಟ ಹೆಣ್ಣುಮಕ್ಕಳು ತಂದೆಯ ಆಶ್ರಯ ಕಳೆದುಕೊಂಡರು…
ವಿನೋದ್ ಗುರವ ಅವರ ಕುಟುಂಬದಲ್ಲಿ ಪತ್ನಿ, ನಾಲ್ಕು ವರ್ಷದ ಮಗಳು, ಎರಡು ವರ್ಷದ ಮತ್ತೊಬ್ಬ ಮಗಳು, ತಂದೆ-ತಾಯಿ, ಹಿರಿಯ ವಿವಾಹಿತ ಸಹೋದರ ಹಾಗೂ ಇಬ್ಬರು ವಿವಾಹಿತ ಸಹೋದರಿಯರಿದ್ದಾರೆ.
ಕೇವಲ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಪುಟ್ಟ ಹೆಣ್ಣುಮಕ್ಕಳು ತಂದೆಯ ಪ್ರೀತಿಯ ಆಶ್ರಯವನ್ನು ಕಳೆದುಕೊಂಡಿರುವುದು ಎಲ್ಲರ ಮನಕಲಕುವಂತಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ವಿನೋದ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಬಂಧು-ಬಳಗದವರಲ್ಲಿ ತೀವ್ರ ದುಃಖ ಮಡುಗಟ್ಟಿದೆ.
ಗುಂಜಿ ಪರಿಸರದಲ್ಲಿ ಶೋಕದ ಛಾಯೆ; ಪೊಲೀಸರಿಂದ ಮುಂದಿನ ತನಿಖೆ…
ಗುಂಜಿಯಲ್ಲಿ ಶ್ರೀ ಮೌಲಿದೇವಿಯ ಜಾತ್ರೋತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿರುವುದರಿಂದ ಗ್ರಾಮದ ಸಂಭ್ರಮದ ವಾತಾವರಣದ ಮೇಲೆ ದುಃಖದ ಕಾರ್ಮೋಡ ಆವರಿಸಿದೆ. ವಿನೋದ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.
ಈ ಅಪಘಾತದ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾತಿ ನಡೆದಿದ್ದು, ಖಾನಾಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



