घोटगाळी गावच्या रस्त्याची स्वखर्चाने दुरुस्ती; डॉ. रफीक हलशीकर यांचे ग्रामस्थांकडून कौतुक.
खानापूर : खानापूर तालुक्यातील घोटगाळी, देवराई व जांबेगाळी या गावांना जोडणाऱ्या सुमारे एक किलोमीटर रस्त्याची दुरवस्था झाली होती. रस्त्यावर ठिकठिकाणी मोठमोठे खड्डे पडल्याने नागरिकांना मोठ्या त्रासाला सामोरे जावे लागत होते

ग्रामस्थांची गैरसोय लक्षात घेऊन सामाजिक कार्यकर्ते डॉ. रफीक नजीरसाब हलशीकर यांनी शासन किंवा ग्रामपंचायतीकडे मदतीची अपेक्षा न ठेवता स्वखर्चातून सुमारे 30 ते 40 हजार रुपये खर्च करून रस्त्यावरील खड्डे बुजविण्यास तसेच खडी टाकून रस्ता दुरुस्त करण्यास सुरुवात केली आहे.

विशेषतः गणपती उत्सवाच्या पार्श्वभूमीवर कामानिमित्त परगावी असलेले अनेक युवक व नागरिक आपल्या गावी परततात. या काळात त्यांना खराब रस्त्यामुळे त्रास होऊ नये, याची काळजी घेत डॉ. रफीक नजीरसाब यांनी रस्त्याच्या दुरुस्तीचे काम हाती घेतले आहे. यावेळी श्रीकांत देसाई (घोटगाळी), नारायण रामू वीर (देवराई), अमर कुंभार (घोटगाळी), भगवंत देसाई, नजीरसाब हलसीकर, उपस्थित होते.
स्वखर्चाने आणि सामाजिक बांधिलकीतून केलेल्या या उपक्रमामुळे घोटगाळी, देवराई व जांबेगाळी परिसरातील ग्रामस्थांमधून डॉ. रफीक नजीरसाब हलशीकर यांचे कौतुक होत असून, ग्रामस्थांनी त्यांचे मनापासून आभार व्यक्त केले आहेत.
ಘೋಟಗಾಳಿ ಗ್ರಾಮದ ರಸ್ತೆಯನ್ನು ಸ್ವ ಖರ್ಚಿನಲ್ಲಿ ದುರಸ್ತಿ; ಡಾ. ರಫೀಕ್ ಹಲಶೀಕರ ಅವರ ಕಾರ್ಯಕ್ಕೆ ಗ್ರಾಮಸ್ಥರಿಂದ ಅಪಾರ ಮೆಚ್ಚುಗೆ.
ಖಾನಾಪುರ : ಖಾನಾಪುರ ತಾಲೂಕಿನ ಘೋಟಗಾಳಿ, ದೇವರಾಯಿ ಹಾಗೂ ಜಾಂಬೆಗಾಳಿ ಗ್ರಾಮಗಳನ್ನು ಸಂಪರ್ಕಿಸುವ ಸುಮಾರು ಒಂದು ಕಿಲೋಮೀಟರ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿತ್ತು. ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದರಿಂದ ವಾಹನ ಸವಾರರು ಹಾಗೂ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.
ಗ್ರಾಮಸ್ಥರ ಅನಾನುಕೂಲತೆಯನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಡಾ. ರಫೀಕ್ ನಜೀರಸಾಬ್ ಹಲಶೀಕರ ಅವರು ಸರ್ಕಾರ ಅಥವಾ ಗ್ರಾಮ ಪಂಚಾಯಿತಿಯಿಂದ ಸಹಾಯದ ನಿರೀಕ್ಷೆ ಇಟ್ಟುಕೊಳ್ಳದೆ, ಸ್ವಂತ ಸುಮಾರು 30ರಿಂದ 40 ಸಾವಿರ ರೂಪಾಯಿ ವೆಚ್ಚ ಮಾಡಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ ಜಲ್ಲಿ ಹಾಕಿ ರಸ್ತೆ ದುರಸ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ವಿಶೇಷವಾಗಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಉದ್ಯೋಗ ಹಾಗೂ ಕೆಲಸದ ನಿಮಿತ್ತ ಪರವೂರಿನಲ್ಲಿ ವಾಸಿಸುತ್ತಿರುವ ಅನೇಕ ಯುವಕರು ಹಾಗೂ ನಾಗರಿಕರು ತಮ್ಮ ಊರಿಗೆ ಮರಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಹದಗೆಟ್ಟ ರಸ್ತೆಯಿಂದ ಯಾವುದೇ ತೊಂದರೆ ಆಗಬಾರದು ಎಂಬ ಒಂದೇ ಕಾಳಜಿಯಿಂದ ಡಾ. ರಫೀಕ್ ನಜೀರಸಾಬ್ ಅವರು ರಸ್ತೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ ದೇಸಾಯಿ (ಘೋಟಗಾಳಿ), ನಾರಾಯಣ ರಾಮು ವೀರ (ದೇವರಾಯಿ), ಅಮರ ಕುಂಭಾರ (ಘೋಟಗಾಳಿ) ಅವರು ಉಪಸ್ಥಿತರಿದ್ದರು.
ಸ್ವಂತ ಖರ್ಚಿನಲ್ಲಿ ಹಾಗೂ ಸಾಮಾಜಿಕ ಬದ್ಧತೆಯಿಂದ ಕೈಗೊಂಡಿರುವ ಈ ಕಾರ್ಯದಿಂದ ಘೋಟಗಾಳಿ, ದೇವರಾಯಿ ಹಾಗೂ ಜಾಂಬೆಗಾಳಿ ಪ್ರದೇಶದ ಗ್ರಾಮಸ್ಥರಿಂದ ಡಾ. ರಫೀಕ್ ನಜೀರಸಾಬ್ ಹಲಶೀಕರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮಸ್ಥರು ಅವರ ಸಾಮಾಜಿಕ ಕಾಳಜಿಗೆ ಮನಃಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

