माणिकवाडी क्रॉसजवळ दुचाकी-ट्रकची भीषण धडक; एकाचा जागीच मृत्यू, महिला गंभीर जखमी.
खानापूर : खानापूर–लोंढा मार्गावरील माणिकवाडी क्रॉसजवळ मंगळवारी 8 सप्टेंबर रोजी रात्री दुचाकी आणि ट्रकची समोरासमोर धडक होऊन झालेल्या भीषण अपघातात युवराज शत्रुघ्न माळिक (वय 30, रा. जटगे, ता. खानापूर) यांचा जागीच मृत्यू झाला. या अपघातात त्यांची पत्नी मोहिनी युवराज माळिक (वय 25, रा. जटगे) या गंभीर जखमी झाल्या असून त्यांच्यावर रुग्णालयात उपचार सुरू आहेत.
मिळालेल्या माहितीनुसार, युवराज माळिक व त्यांच्या पत्नी मोहिनी माळिक हे खानापूरहून आपल्या जटगे गावाकडे दुचाकीवरून जात होते. यावेळी माणिकवाडी क्रॉसजवळ त्यांच्या दुचाकीची समोरून येणाऱ्या ट्रकशी जोरदार धडक झाली. धडक इतकी भीषण होती की, युवराज माळिक यांचा जागीच मृत्यू झाला, तर मोहिनी माळिक या गंभीर जखमी झाल्या आहेत.
अपघाताची माहिती मिळताच खानापूर पोलीस ठाण्याचे पीआय एल. एच. गोवंडी व पोलीस कर्मचाऱ्यांनी घटनास्थळी तातडीने धाव घेतली. गंभीर जखमी मोहिनी माळिक यांना तात्काळ उपचारासाठी रुग्णालयात दाखल करण्यात आले.
दरम्यान, अपघातात मृत्यू झालेल्या युवराज माळिक यांचा मृतदेह उत्तरीय तपासणीसाठी खानापूर प्राथमिक आरोग्य केंद्रात ठेवण्यात आला आहे. या घटनेची नोंद खानापूर पोलीस ठाण्यात करण्यात आली असून, अपघाताचा पुढील तपास पोलीस करीत आहेत.
या दुर्दैवी घटनेमुळे जटगे गावावर शोककळा पसरली असून, कुटुंबीयांवर दुःखाचा डोंगर कोसळला आहे.
ಮಾಣಿಕವಾಡಿ ಕ್ರಾಸ್ ಬಳಿ ಬೈಕ್–ಟ್ರಕ್ ನಡುವೆ ಭೀಕರ ಅಪಘಾತ; ಒಬ್ಬರು ಸ್ಥಳದಲ್ಲೇ ಸಾವು, ಮಹಿಳೆ ಗಂಭೀರ ಗಾಯ.
ಖಾನಾಪುರ : ಖಾನಾಪುರ–ಲೋಂಡಾ ಮಾರ್ಗದ ಮಾಣಿಕವಾಡಿ ಕ್ರಾಸ್ ಬಳಿ ಮಂಗಳವಾರ, ಸೆಪ್ಟೆಂಬರ್ 8ರಂದು ರಾತ್ರಿ ವೇಳೆ ಬೈಕ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಯುವರಾಜ ಶತ್ರುಘ್ನ ಮಳಿಕ (ವಯಸ್ಸು 30, ಸಾ. ಜಟಗೆ , ತಾ. ಖಾನಾಪುರ) ಅವರು ಸ್ಥಳದಲ್ಲೇ ಮೃತಪಟ್ಟು ಹಿಬ್ಬಂದಿ ಸವಾರಿ ಅವರ ಪತ್ನಿ ಮೋಹಿನಿ ಯುವರಾಜ ಮಳಿಕ (ವಯಸ್ಸು 25, ಸಾ.ಜಟಗೆ ) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಯುವರಾಜ ಮಳಿಕ ಹಾಗೂ ಅವರ ಪತ್ನಿ ಮೋಹಿನಿ ಮಳಿಕ ಅವರು ಖಾನಾಪುರದಿಂದ ತಮ್ಮ ಜಟಗೆ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾಣಿಕವಾಡಿ ಕ್ರಾಸ್ ಬಳಿ ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಅವರ ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸ ಎಷ್ಟರಮಟ್ಟಿಗೆ ಇತ್ತೆಂದರೆ, ಯುವರಾಜ ಮಾಳಿಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೋಹಿನಿ ಮಳಿಕ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್. ಎಚ್. ಗೋವಂಡಿ ಹಾಗೂ ಪೊಲೀಸ್ ಸಿಬ್ಬಂದಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ. ಗಂಭೀರವಾಗಿ ಗಾಯಗೊಂಡಿದ್ದ ಮೋಹಿನಿ ಮಳಿಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದೇ ವೇಳೆ ಅಪಘಾತದಲ್ಲಿ ಮೃತಪಟ್ಟ ಯುವರಾಜ ಮಳಿಕ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.
ಈ ಘಟನೆಯ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ದುರ್ಘಟನೆಯಿಂದ ಜಟಗೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತ ಯುವರಾಜ ಮಾಳಿಕ ಅವರ ಕುಟುಂಬದ ಮೇಲೆ ದುಃಖದ ಛಾಯೆ ಆವರಿಸಿದೆ.

