टरबूज (कलिंगड) खाल्ल्यानंतर प्रकृती बिघडली? पायधुनीत पती-पत्नी व दोन मुलींचा दुर्दैवी अंत.
मुंबई : मुंबईतील पायधुनी परिसरात एकाच कुटुंबातील चार जणांचा संशयास्पद मृत्यू झाल्याची धक्कादायक घटना उघडकीस आली आहे. अन्नातून विषबाधा झाल्याची प्राथमिक शक्यता व्यक्त करण्यात येत असून, पोलिसांकडून सखोल तपास सुरू आहे.
मिळालेल्या माहितीनुसार, अब्दुल्ला डोकाडिया (वय 40), पत्नी नसरीन (35) आणि त्यांच्या दोन मुली आयशा (16) व जैनब (13) यांनी रात्री एकत्र जेवण केले होते. जेवणानंतर त्यांनी टरबूज (कलिंगड) खाल्ले. त्यानंतर काही वेळातच चौघांची प्रकृती अचानक बिघडली. उलट्या व जुलाबाचा त्रास सुरू झाल्याने त्यांना तातडीने रुग्णालयात दाखल करण्यात आले; मात्र उपचारादरम्यान त्यांचा मृत्यू झाला.
या घटनेनंतर परिसरात हळहळ व्यक्त होत आहे. प्राथमिक तपासात अन्नातून विषबाधा झाल्याची शक्यता वर्तवण्यात येत आहे. जेवणात चिकन बिर्याणी व टरबूजाचा समावेश होता. नातेवाईकांपैकी काहींनी फक्त बिर्याणी खाल्ली होती, त्यांची प्रकृती ठणठणीत असल्याचे सांगितले जात आहे. त्यामुळे टरबूज किंवा अन्य अन्नपदार्थामुळे प्रतिक्रिया झाली असावी, असा कयास लावला जात आहे.
फळ टिकवण्यासाठी वापरली जाणारी रसायने, अन्न साठवणुकीतील त्रुटी किंवा इतर कोणतेही कारण असू शकते, या सर्व बाबींची चौकशी केली जात आहे. संबंधित अन्नाचे नमुने तपासणीसाठी पाठवण्यात आले असून, अहवालानंतर मृत्यूचे नेमके कारण स्पष्ट होणार आहे.
दरम्यान, नागरिकांनी अन्नपदार्थ स्वच्छ धुऊन व योग्यरीत्या साठवूनच सेवन करावे, तसेच अन्न खराब झाल्याची शंका असल्यास ते टाळावे, असे आवाहन प्रशासनाकडून करण्यात आले आहे.
या दुर्दैवी घटनेमुळे परिसरात शोककळा पसरली असून, पुढील तपास सुरू आहे.ಕಲ್ಲಂಗಡಿ ಹಣ್ಣು ತಿಂದ ನಂತರ ಆರೋಗ್ಯ ಹದಗೆಟ್ಟಿತೇ? ಪಾಯಧುನಿಯಲ್ಲಿ ಪತಿ–ಪತ್ನಿ ಹಾಗೂ ಇಬ್ಬರು ಮಕ್ಕಳ ದಾರುಣ ಅಂತ್ಯ
ಕಲ್ಲಂಗಡಿ ಹಣ್ಣು ತಿಂದ ನಂತರ ಆರೋಗ್ಯ ಹದಗೆಟ್ಟಿತೇ? ಪಾಯಧುನಿಯಲ್ಲಿ ಪತಿ–ಪತ್ನಿ ಹಾಗೂ ಇಬ್ಬರು ಮಕ್ಕಳ ದಾರುಣ ಅಂತ್ಯ
ಮುಂಬೈ (ಪ್ರತಿನಿಧಿ) : ಮುಂಬೈನ ಪಾಯಧುನಿ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಸಂಶಯಾಸ್ಪದವಾಗಿ ಮೃತಪಟ್ಟಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಆಹಾರದಿಂದ ವಿಷಬಾಧೆ ಉಂಟಾಗಿರಬಹುದೆಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸವಿಸ್ತಾರ ತನಿಖೆ ಆರಂಭಿಸಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಅಬ್ದುಲ್ಲಾ ಡೋಕಾಡಿಯಾ (ವಯಸ್ಸು 40), ಪತ್ನಿ ನಸ್ರೀನ್ (35) ಮತ್ತು ಅವರ ಇಬ್ಬರು ಪುತ್ರಿಯರಾದ ಆಯಿಷಾ (16) ಹಾಗೂ ಜೈನಬ್ (13) ಅವರು ರಾತ್ರಿ ಒಟ್ಟಿಗೆ ಊಟ ಮಾಡಿದ್ದರು. ಊಟದ ನಂತರ ಅವರು ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಕೆಲವೇ ಸಮಯದಲ್ಲಿ ನಾಲ್ವರೂ ಏಕಾಏಕಿ ಅಸ್ವಸ್ಥಗೊಂಡರು. ವಾಂತಿ ಮತ್ತು ಅತಿಸಾರ ಆರಂಭವಾದ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ.
ಈ ಘಟನೆ ಬಳಿಕ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆಹಾರದಿಂದ ವಿಷಬಾಧೆ ಉಂಟಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಊಟದಲ್ಲಿ ಚಿಕನ್ ಬಿರಿಯಾನಿ ಹಾಗೂ ಕಲ್ಲಂಗಡಿ ಸೇರಿತ್ತು. ಬಂಧುಗಳಲ್ಲಿ ಕೆಲವರು ಕೇವಲ ಬಿರಿಯಾನಿ ಮಾತ್ರ ಸೇವಿಸಿದ್ದು, ಅವರ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಕಲ್ಲಂಗಡಿ ಅಥವಾ ಇತರ ಆಹಾರ ಪದಾರ್ಥದಿಂದ ಪ್ರತಿಕ್ರಿಯೆ ಉಂಟಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಹಣ್ಣುಗಳನ್ನು ತಾಜಾಗಿರಿಸಲು ಬಳಸುವ ರಾಸಾಯನಿಕಗಳು, ಆಹಾರ ಸಂಗ್ರಹಣೆಯ ದೋಷಗಳು ಅಥವಾ ಇತರೆ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಿತ ಆಹಾರದ ನಮೂನೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಮೃತ್ಯದ ನಿಖರ ಕಾರಣ ತಿಳಿದುಬರುವ ನಿರೀಕ್ಷೆ ಇದೆ.
ಇದರ ನಡುವೆ, ನಾಗರಿಕರು ಆಹಾರ ಪದಾರ್ಥಗಳನ್ನು ಸ್ವಚ್ಛವಾಗಿ ತೊಳೆಯುವ ಹಾಗು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಸೇವಿಸಬೇಕು. ಆಹಾರ ಹಾಳಾಗಿದೆ ಎಂಬ ಅನುಮಾನ ಇದ್ದಲ್ಲಿ ಅದನ್ನು ತಿನ್ನುವುದನ್ನು ತಪ್ಪಿಸಬೇಕು ಎಂದು ಆಡಳಿತವು ಮನವಿ ಮಾಡಿದೆ.
ಈ ದುರ್ಘಟನೆಯಿಂದ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

