अमृत महोत्सवी वर्षानिमित्त ‘घरोघरी एक लक्ष श्री गणपती स्तोत्र पठण’ अभियानास उत्साहात प्रारंभ.
खानापूर (प्रतिनिधी) : खानापूर शहरातील सार्वजनिक गणेशोत्सवाची समृद्ध परंपरा जपणारे पहिले सार्वजनिक गणेशोत्सव मंडळ ‘बाल मंडळ’, देसाई गल्ली, खानापूर यंदा आपल्या स्थापनेचे अमृत महोत्सवी (75 वे) वर्ष विविध धार्मिक, सामाजिक आणि सांस्कृतिक उपक्रमांनी साजरे करत आहे. या उपक्रमांपैकी महत्त्वाच्या ‘घरोघरी एक लक्ष श्री गणपती स्तोत्र पठण’ अभियानाचा शुभारंभ रविवार (दि. 2 ऑगस्ट) रोजी विठ्ठल देव मंदिर, खानापूर येथे उत्साहात झाला.

या अभियानाचे उद्घाटन उद्योजक विकास वर्दे व त्यांच्या पत्नी यांच्या हस्ते झाले. यावेळी शार्दुल जोशी यांनी पौरोहित्य केले. महिला, युवक व नागरिकांनी मोठ्या संख्येने उपस्थित राहून अभियानात उत्स्फूर्त सहभाग नोंदविला.
मंडळाचे ज्येष्ठ सल्लागार प्रकाश देशपांडे यांनी सांगितले की, 1952 साली स्थापन झालेल्या बाल मंडळाच्या गणेशोत्सवाचे यंदा 75 वे वर्ष आहे. अमृत महोत्सवी वर्षानिमित्त संकष्ट चतुर्थीच्या शुभमुहूर्तावर या अभियानाची सुरुवात करण्यात आली आहे. सहभागी नागरिकांना गणपती स्तोत्र व अथर्वशीर्ष असलेली पुस्तिका देण्यात आली असून, त्यामध्ये दररोजच्या पठणाची नोंद करायची आहे. ही पुस्तिका 19 सप्टेंबर रोजी मंडळाकडे जमा करण्यात येणार असून, 20 सप्टेंबर रोजी गणहोम व महाप्रसाद आयोजित करण्यात आला आहे. त्याच दिवशी ‘एक लक्ष श्री गणपती स्तोत्र पठण’ अभियानाची सांगता होणार आहे.
अमृत महोत्सवी वर्षानिमित्त गणेशोत्सव काळात विविध धार्मिक, सांस्कृतिक व सामाजिक उपक्रमांचे आयोजन करण्यात आले आहे. तसेच देश व आंतरराष्ट्रीय स्तरावर कीर्ती मिळविलेल्या खानापूर तालुका व शहरातील मान्यवरांचा विशेष सत्कार करण्यात येणार असल्याची माहितीही प्रकाश देशपांडे यांनी दिली. यामध्ये मुलता खानापूर शहरातील रहीवाशी व सध्या राहणार मुंबई येथील निवासी व पद्मश्री पुरस्काराने सन्मानित करण्यात आलेले, मल्लखांब क्षेत्रातील आंतरराष्ट्रीय कीर्तीचे प्रशिक्षक उदयकुमार देशपांडे यांचाही गौरव करण्यात येणार आहे. यावेळी तालुक्यातील बेकवाड, पाली व बाळगूंद येथील कीर्ती मिळविलेल्या व्यक्तींचा सुद्धा सत्कार करण्यात येणार आहे.
या अमृत महोत्सवी उत्सवात महिला, युवक आणि नागरिकांनी मोठ्या संख्येने सहभागी होऊन उत्सव यशस्वी करण्यासाठी सहकार्य करावे, असे आवाहन प्रकाश देशपांडे यांनी केले. यावेळी मंडळाचे पदाधिकारी सदानंद कपिलेश्वरी, माजी नगरसेवक विनोद पाटील, माजी नगरसेवक विश्वास हुबळीकर, राजेश देसाई, एडवोकेट सिद्धार्थ कपिलेश्वरी, भूषण देसाई, प्रशांत खासनीस, सर्वज्ञ कपिलेश्वरी, अमर जोरापुरी, सुनील पानेरी, मंजुनाथ रेवणकर, विनायक पाटील, सचिन कुंभार, रघुनाथ गुरव तसेच अनेक कार्यकर्ते व गणेशभक्त उपस्थित होते.
ಅಮೃತ ಮಹೋತ್ಸವ ವರ್ಷದ ಅಂಗವಾಗಿ ‘ಮನೆ ಮನೆಗೆ ಒಂದು ಲಕ್ಷ ಶ್ರೀ ಗಣಪತಿ ಸ್ತೋತ್ರ ಪಠಣ’ ಅಭಿಯಾನಕ್ಕೆ ಉತ್ಸಾಹಭರಿತ ಚಾಲನೆ.
ಖಾನಾಪುರ (ಪ್ರತಿನಿಧಿ) : ಖಾನಾಪುರ ನಗರದ ಸಾರ್ವಜನಿಕ ಗಣೇಶೋತ್ಸವದ ಸಮೃದ್ಧ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಮೊದಲ ಸಾರ್ವಜನಿಕ ಗಣೇಶೋತ್ಸವ ಮಂಡಳಿ ‘ಬಾಲ ಮಂಡಳ’, ದೇಸಾಯಿ ಗಲ್ಲಿ, ಖಾನಾಪುರ ತನ್ನ ಸ್ಥಾಪನೆಯ ಅಮೃತ ಮಹೋತ್ಸವ (75ನೇ ವರ್ಷ)ವನ್ನು ಈ ವರ್ಷ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಈ ಕಾರ್ಯಕ್ರಮಗಳಲ್ಲಿನ ಪ್ರಮುಖ ‘ಮನೆ ಮನೆಗೆ ಒಂದು ಲಕ್ಷ ಶ್ರೀ ಗಣಪತಿ ಸ್ತೋತ್ರ ಪಠಣ’ ಅಭಿಯಾನಕ್ಕೆ ಭಾನುವಾರ (ದಿ. 2 ಆಗಸ್ಟ್) ರಂದು ವಿಠ್ಠಲ ದೇವ ದೇವಸ್ಥಾನ, ಖಾನಾಪುರದಲ್ಲಿ ಅತ್ಯಂತ ಉತ್ಸಾಹದಿಂದ ಚಾಲನೆ ನೀಡಲಾಯಿತು.
ಈ ಅಭಿಯಾನವನ್ನು ಉದ್ಯಮಿ ವಿಕಾಸ್ ವರ್ಡೆ ಹಾಗೂ ಅವರ ಪತ್ನಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾರ್ದುಲ ಜೋಶಿ ಅವರು ಪೌರೋಹಿತ್ಯ ನೆರವೇರಿಸಿದರು. ಮಹಿಳೆಯರು, ಯುವಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನಕ್ಕೆ ಉತ್ಸಾಹಭರಿತ ಬೆಂಬಲ ನೀಡಿದರು.
ಮಂಡಳಿಯ ಹಿರಿಯ ಸಲಹೆಗಾರ ಪ್ರಕಾಶ ದೇಶಪಾಂಡೆ ಅವರು ಮಾತನಾಡಿ, 1952ರಲ್ಲಿ ಸ್ಥಾಪನೆಯಾದ ಬಾಲ ಮಂಡಳದ ಗಣೇಶೋತ್ಸವವು ಈ ವರ್ಷ 75ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ತಿಳಿಸಿದರು. ಅಮೃತ ಮಹೋತ್ಸವದ ಅಂಗವಾಗಿ ಸಂಕಷ್ಟ ಚತುರ್ಥಿಯ ಶುಭ ಸಂದರ್ಭದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಅಭಿಯಾನದಲ್ಲಿ ಭಾಗವಹಿಸುವ ಭಕ್ತರಿಗೆ ಶ್ರೀ ಗಣಪತಿ ಸ್ತೋತ್ರ ಹಾಗೂ ಅಥರ್ವಶೀರ್ಷ ಹೊಂದಿರುವ ಪುಸ್ತಕವನ್ನು ವಿತರಿಸಲಾಗಿದ್ದು, ಅದರಲ್ಲಿ ಪ್ರತಿದಿನದ ಪಠಣದ ದಾಖಲೆಯನ್ನು ಮಾಡಬೇಕು. ಈ ಪುಸ್ತಕಗಳನ್ನು ಸೆಪ್ಟೆಂಬರ್ 19ರಂದು ಮಂಡಳಿಗೆ ಸಲ್ಲಿಸಬೇಕು. ನಂತರ ಸೆಪ್ಟೆಂಬರ್ 20ರಂದು ಗಣಹೋಮ ಹಾಗೂ ಮಹಾಪ್ರಸಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದೇ ದಿನ ‘ಒಂದು ಲಕ್ಷ ಶ್ರೀ ಗಣಪತಿ ಸ್ತೋತ್ರ ಪಠಣ’ ಅಭಿಯಾನದ ಸಮಾರೋಪ ನಡೆಯಲಿದೆ.
ಅಮೃತ ಮಹೋತ್ಸವ ವರ್ಷದ ಅಂಗವಾಗಿ ಗಣೇಶೋತ್ಸವದ ಅವಧಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿರುವ ಖಾನಾಪುರ ತಾಲ್ಲೂಕು ಮತ್ತು ನಗರದ ಗಣ್ಯರ ವಿಶೇಷ ಸತ್ಕಾರವನ್ನು ಕೂಡ ಇದೇ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಪ್ರಕಾಶ ದೇಶಪಾಂಡೆ ತಿಳಿಸಿದರು.
ಈ ಸಂದರ್ಭದಲ್ಲಿ ಮೂಲತಃ ಖಾನಾಪುರ ನಗರದ ನಿವಾಸಿಯಾಗಿದ್ದು, ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ, ಮಲ್ಲಖಾಂಬ ಕ್ಷೇತ್ರದ ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರ ಉದಯಕುಮಾರ ದೇಶಪಾಂಡೆ ಅವರನ್ನೂ ಗೌರವಿಸಲಾಗುವುದು. ಇದೇ ವೇಳೆ ತಾಲ್ಲೂಕಿನ ಬೇಕವಾಡ, ಪಾಲಿ ಹಾಗೂ ಬಾಳಗೂಂದ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಕೀರ್ತಿ ಪಡೆದ ಸಾಧಕರಿಗೂ ಸನ್ಮಾನ ಮಾಡಲಾಗುವುದು.
ಈ ಅಮೃತ ಮಹೋತ್ಸವದ ಅಂಗವಾಗಿ ಮಹಿಳೆಯರು, ಯುವಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಪ್ರಕಾಶ ದೇಶಪಾಂಡೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳಾದ ಸದಾನಂದ ಕಪಿಲೇಶ್ವರಿ, ಮಾಜಿ ನಗರಸಭಾ ಸದಸ್ಯ ವಿನೋದ ಪಾಟೀಲ, ಮಾಜಿ ನಗರಸಭಾ ಸದಸ್ಯ ವಿಶ್ವಾಸ್ ಹುಬಳೀಕರ, ರಾಜೇಶ್ ದೇಸಾಯಿ, ಅಡ್ವೊಕೇಟ್ ಸಿದ್ಧಾರ್ಥ ಕಪಿಲೇಶ್ವರಿ, ಭೂಷಣ ದೇಸಾಯಿ, ಪ್ರಶಾಂತ್ ಖಾಸನೀಸ್, ಅಮರ್ ಜೋರಾಪುರಿ, ಸುನೀಲ್ ಪಾನೇರಿ, ಮಂಜುನಾಥ ರೇವಣಕರ, ವಿನಾಯಕ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಗಣೇಶ ಭಕ್ತರು ಉಪಸ್ಥಿತರಿದ್ದರು.



