डोंगरगावात हत्तींची दहशत; माजी आमदार अरविंद पाटील यांनी घेतला पुढाकार.
खानापूर : प्रतिनिधी
खानापूर तालुक्यातील भिमगड अभयारण्याच्या दुर्गम वनक्षेत्रात सध्या तीन हत्तींचा कळप वावरत असल्याने डोंगरगाव परिसरातील नागरिकांमध्ये चिंतेचे वातावरण निर्माण झाले आहे. दोन प्रौढ हत्ती आणि एका पिल्लासह हा कळप गेल्या काही दिवसांपासून परिसरात फिरत असून शेतकरी व ग्रामस्थांमध्ये भीतीचे वातावरण निर्माण झाले आहे.
हत्तींच्या वाढत्या हालचालींची माहिती मिळताच खानापूरचे माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील यांनी तात्काळ वन विभागाच्या अधिकाऱ्यांशी संपर्क साधला. त्यांनी वाइल्ड लाईफ विभागाचे आरएफओ नदाफ तसेच लोंढा विभागाचे आरएफओ वाय. पी. तेज यांना डोंगरगाव येथे बोलावून घेतले व त्यांच्यासोबत परिस्थितीची प्रत्यक्ष पाहणी केली.
यावेळी अरविंद पाटील यांनी अधिकाऱ्यांना ग्रामस्थांच्या अडचणी व भीतीची कल्पना दिली. हत्तींच्या कळपामुळे शेती, बागायती व मानवी वस्त्यांना संभाव्य धोका निर्माण होऊ शकतो, त्यामुळे तातडीने प्रतिबंधात्मक उपाययोजना राबविण्याची मागणी त्यांनी केली. तसेच वन विभागाने विशेष पथकाच्या मदतीने हत्तींचा कळप सुरक्षितपणे जंगलाच्या आतील भागात परत पाठवावा, अशी मागणीही त्यांनी केली.
यावेळी वन्यप्राण्यांच्या वावरामुळे पिके, शेती किंवा मालमत्तेचे नुकसान झाल्यास त्याचे त्वरित पंचनामे करून शेतकऱ्यांना नुकसानभरपाई देण्यात यावी, असेही त्यांनी अधिकाऱ्यांना स्पष्टपणे सांगितले. ग्रामस्थांच्या सुरक्षिततेला प्राधान्य देत वन विभागाने सतत गस्त ठेवावी आणि नागरिकांना आवश्यक सूचना द्याव्यात, अशी अपेक्षाही व्यक्त करण्यात आली.
दरम्यान, वन विभागाने परिस्थितीवर लक्ष ठेवून हत्तींच्या हालचालींचे निरीक्षण सुरू केले असून नागरिकांनी घाबरून न जाता सावधगिरी बाळगावी, तसेच हत्ती दिसल्यास तत्काळ वन विभागाला माहिती द्यावी, असे आवाहन करण्यात आले आहे.
ಡೊಂಗರಗಾಂವ ಊರಿನಲ್ಲಿ ಕಾಡಾನೆಗಳ ಉಪಟಳದಿಂದ ಭೀತಿ; ಮಾಜಿ ಶಾಸಕ ಅರವಿಂದ ಪಾಟೀಲರಿಂದ ಸಮಸ್ಯೆ ಬಗೆಹರಿಸಲು ಮುಂದಾಳತ್ವ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದ ದುರ್ಗಮ ಅರಣ್ಯ ಪ್ರದೇಶದಲ್ಲಿ ಸದ್ಯ ಮೂರು ಕಾಡಾನೆಗಳ ಹಿಂಡು ಸಂಚರಿಸುತ್ತಿರುವುದರಿಂದ ಡೊಂಗರಗಾಂವ್ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎರಡು ಪ್ರೌಢ ಆನೆಗಳ ಜೋತೆ ಒಂದು ಮರಿಯೊಂದಿಗೆ ಈ ಹಿಂಡು ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದು, ರೈತರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.
ಆನೆಗಳ ಹೆಚ್ಚುತ್ತಿರುವ ಉಪಟಾಳ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಖಾನಾಪುರ ತಾಲೂಕಿನ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅರವಿಂದ ಪಾಟೀಲ ಅವರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಲ್ಲಿ ವನ್ಯಜೀವಿ ವಿಭಾಗದ ಆರ್ಎಫ್ಒ ನದಾಫ್ ಹಾಗೂ ಲೋಂಡಾ ವಿಭಾಗದ ಆರ್ಎಫ್ಒ ವೈ.ಪಿ. ತೇಜ್ ಅವರನ್ನು ಡೊಂಗರಗಾಂವಿಗೆ ಕರೆಸಿ, ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅರವಿಂದ ಪಾಟೀಲ ಅವರು ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆತಂಕಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಆನೆಗಳ ಹಿಂಡಿನಿಂದ ಕೃಷಿ ಜಮೀನುಗಳು, ತೋಟಗಾರಿಕೆ ಪ್ರದೇಶಗಳು ಹಾಗೂ ಮಾನವ ವಸತಿಗಳಿಗೆ ಸಂಭವನೀಯ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅದೇ ರೀತಿ, ಅರಣ್ಯ ಇಲಾಖೆ ವಿಶೇಷ ತಂಡದ ಸಹಾಯದಿಂದ ಆನೆಗಳ ಹಿಂಡನ್ನು ಸುರಕ್ಷಿತವಾಗಿ ಕಾಡಿನ ಒಳಭಾಗಕ್ಕೆ ಮರಳಿ ಕಳುಹಿಸಬೇಕು ಎಂದು ಅವರು ಆಗ್ರಹಿಸಿದರು. ವನ್ಯಜೀವಿಗಳ ಸಂಚಾರದಿಂದ ಬೆಳೆಗಳು, ಕೃಷಿ ಭೂಮಿ ಅಥವಾ ಆಸ್ತಿಪಾಸ್ತಿಗಳಿಗೆ ಹಾನಿಯಾದಲ್ಲಿ ಕೂಡಲೇ ಪಂಚನಾಮೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದರು.
ಗ್ರಾಮಸ್ಥರ ಸುರಕ್ಷತೆಗೆ ಆದ್ಯತೆ ನೀಡಿ ಅರಣ್ಯ ಇಲಾಖೆ ನಿರಂತರ ಗಸ್ತು ವ್ಯವಸ್ಥೆ ನಡೆಸಬೇಕು ಹಾಗೂ ಸಾರ್ವಜನಿಕರಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಲಾಯಿತು.
ಈ ನಡುವೆ ಅರಣ್ಯ ಇಲಾಖೆ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಆನೆಗಳ ಚಲನವಲನಗಳ ಮೇಲ್ವಿಚಾರಣೆಯನ್ನು ಮುಂದುವರಿಸಿದೆ. ಸಾರ್ವಜನಿಕರು ಆತಂಕಪಡದೆ ಎಚ್ಚರಿಕೆಯಿಂದಿರಬೇಕು ಹಾಗೂ ಆನೆಗಳು ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಅಧಿಕಾರಿಗಳು ಮನವಿ ಮಾಡಿದ್ದಾರೆ.


