काटगाळी गावात बालविवाह रोखला; अधिकाऱ्यांची तात्काळ कारवाई. माहिती मिळताच सीडीपीओ व पोलिसांनी घटनास्थळी धाव घेऊन विवाह थांबवला.
खानापूर : प्रतिनिधी
खानापूर तालुक्यातील काटगाळी गावात अल्पवयीन मुलीचा विवाह लावण्याची तयारी सुरू असताना महिला व बालविकास विभागाच्या अधिकाऱ्यांनी तात्काळ हस्तक्षेप करून बालविवाह रोखला.
स्पंदना स्वयं-सहाय्यता समूहाकडून मिळालेल्या माहितीनुसार, गावातील एका अल्पवयीन मुलीचा विवाह करण्याची तयारी सुरू असल्याचे समजताच महिला व बालविकास विभागाचे अधिकारी विक्रम यांनी पोलिस कर्मचाऱ्यांसह घटनास्थळी भेट दिली. शुक्रवारी विवाहासाठी तयारी सुरू असताना अधिकाऱ्यांनी हस्तक्षेप करून विवाह थांबवला.
पालकांना कायद्याची माहिती देऊन समुपदेशन.
यावेळी अधिकाऱ्यांनी मुलीच्या पालकांना बालविवाहाचे दुष्परिणाम तसेच बालविवाह प्रतिबंधक कायद्याची माहिती दिली. समुपदेशनानंतर पालकांच्या सहमतीने विवाह स्थगित करण्यात आला.
बालविवाहामुळे भवितव्य धोक्यात
याबाबत बोलताना सीडीपीओ विक्रम यांनी सांगितले की, “बालविवाहामुळे मुलांचे आरोग्य, शिक्षण आणि उज्ज्वल भविष्य धोक्यात येते. त्यामुळे पालकांना कायद्याची जाणीव करून देत हा विवाह थांबविण्यात आला.”
बालविवाह रोखणे ही सर्वांची जबाबदारी
बालविवाहाची कुठेही माहिती मिळाल्यास नागरिकांनी तत्काळ संबंधित यंत्रणांना कळवावे, असे आवाहन बालसहाय्य व महिला-बालविकास विभागाच्या अधिकाऱ्यांनी केले आहे.
ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು; ತಕ್ಷಣದ ಕ್ರಮ. ಮಾಹಿತಿ ದೊರಕುತ್ತಿದ್ದಂತೆಯೇ ಸಿಡಿಪಿಒ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿವಾಹ ಸ್ಥಗಿತಗೊಳಿಸಿರು.
ಖಾನಾಪುರ : ಪ್ರತಿನಿಧಿಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಸ್ಪಂದನಾ ಸ್ವಸಹಾಯ ಸಂಘದಿಂದ ಬಂದ ಮಾಹಿತಿಯ ಪ್ರಕಾರ, ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ದೊರಕಿದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಿಕ್ರಂ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಶುಕ್ರವಾರ ವಿವಾಹದ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ವಿವಾಹವನ್ನು ನಿಲ್ಲಿಸಿದರು.
ಪೋಷಕರಿಗೆ ಕಾನೂನಿನ ಮಾಹಿತಿ ನೀಡಿ ಸಮಾಲೋಚನೆ.
ಈ ವೇಳೆ ಅಧಿಕಾರಿಗಳು ಬಾಲಕಿಯ ಪೋಷಕರಿಗೆ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಮಾಹಿತಿ ನೀಡಿದರು. ಸಮಾಲೋಚನೆಯ ನಂತರ ಪೋಷಕರ ಒಪ್ಪಿಗೆಯೊಂದಿಗೆ ವಿವಾಹವನ್ನು ಮುಂದೂಡಲಾಯಿತು.
ಬಾಲ್ಯ ವಿವಾಹದಿಂದ ಭವಿಷ್ಯಕ್ಕೆ ಧಕ್ಕೆ.
ಈ ಕುರಿತು ಮಾತನಾಡಿದ ಸಿಡಿಪಿಒ ವಿಕ್ರಂ ಅವರು, “ಬಾಲ್ಯ ವಿವಾಹದಿಂದ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಪೋಷಕರಿಗೆ ಕಾನೂನಿನ ಅರಿವು ಮೂಡಿಸಿ ಈ ವಿವಾಹವನ್ನು ತಡೆಯಲಾಗಿದೆ” ಎಂದು ತಿಳಿಸಿದರು.
ಬಾಲ್ಯ ವಿವಾಹ ತಡೆ ಎಲ್ಲರ ಜವಾಬ್ದಾರಿ.
ಎಲ್ಲಿಯಾದರೂ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ದೊರೆತರೆ, ನಾಗರಿಕರು ತಕ್ಷಣ ಸಂಬಂಧಿತ ಇಲಾಖೆಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮಕ್ಕಳ ಸಹಾಯವಾಣಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


