खानापूरात ‘नशामुक्त भारत – एक सामूहिक जबाबदारी’ जनजागृती कार्यक्रम उत्साहात संपन्न; ३०० विद्यार्थ्यांनी घेतली व्यसनमुक्तीची शपथ
खानापूर (प्रतिनिधी) : आरोग्य भारती, खानापूर शाखा, रावसाहेब वागळे पीयू कॉलेज, एनसीसी आणि रेड क्रॉस यांच्या संयुक्त विद्यमाने ‘नशामुक्त भारत – एक सामूहिक जबाबदारी’ या विषयावर विद्यार्थ्यांसाठी जनजागृती कार्यक्रम उत्साहात पार पडला. कार्यक्रमाला विद्यार्थ्यांचा उत्स्फूर्त प्रतिसाद लाभला.
कार्यक्रमाच्या अध्यक्षस्थानी लोकमान्य एज्युकेशन सोसायटीचे समन्वयक तथा भाऊराव काकतकर महाविद्यालय, बेळगावचे निवृत्त प्राचार्य डॉ. डी. एन. मिसाळे हे होते. प्रमुख वक्ते म्हणून सुप्रसिद्ध बालरोगतज्ज्ञ डॉ. मिलिंद हलगेकर (बेळगाव) यांनी विद्यार्थ्यांना व्यसनाधीनतेचे शारीरिक, मानसिक, सामाजिक आणि कौटुंबिक दुष्परिणाम अत्यंत प्रभावी उदाहरणांसह समजावून सांगितले. त्यांच्या प्रेरणादायी मार्गदर्शनामुळे विद्यार्थ्यांना व्यसनमुक्त जीवन जगण्याचा दृढ संकल्प करण्याची प्रेरणा मिळाली.
कार्यक्रमाच्या प्रारंभी कोडला सर यांनी प्रस्ताविकेतून कार्यक्रमामागील उद्देश आणि ‘नशामुक्त भारत’ अभियानाचे महत्त्व स्पष्ट केले. त्यानंतर आरोग्य भारती, खानापूर शाखेचे अध्यक्ष तथा खानापूर डॉक्टर्स असोसिएशनचे अध्यक्ष डॉ. डी. नाडगौडा यांनी उपस्थित मान्यवरांचा परिचय करून दिला. श्री. वासुदेव इनामदार यांनी विद्यार्थ्यांना व्यसनमुक्तीची शपथ दिली, तर श्री. लक्ष्मण शेट्टी यांनी कार्यक्रमाचे प्रभावी सूत्रसंचालन केले.
यावेळी व्यासपीठावर प्राचार्या श्रीमती शरयु कदम, डॉ. सुदर्शन सुळकर, डॉ. शंकर पाटील, डॉ. प्रणिता देसाई आणि श्री. राजू नाईक यांची प्रमुख उपस्थिती होती.
या कार्यक्रमास रावसाहेब वागळे पीयू कॉलेजचे सुमारे ३०० विद्यार्थी, प्राध्यापक आणि शिक्षकेतर कर्मचारी मोठ्या संख्येने उपस्थित होते. तसेच आरोग्य भारती, बेळगावचे श्री. संजय कुलकर्णी, श्री. लक्ष्मण शेट्टी, श्री. गोपाळराव देशपांडे (योग शिक्षक) तसेच आरोग्य भारतीचे पदाधिकारी व कार्यकर्ते उपस्थित होते.
या जनजागृती कार्यक्रमाच्या माध्यमातून विद्यार्थ्यांमध्ये व्यसनमुक्त भारताच्या संकल्पनेबाबत प्रभावी जागरूकता निर्माण झाली. व्यसनमुक्त समाज घडविण्यासाठी प्रत्येक नागरिकाने सामूहिक जबाबदारी स्वीकारण्याचा संदेश यावेळी देण्यात आला.
ಖಾನಾಪುರದಲ್ಲಿ ‘ಮಾದಕವಸ್ತು ಮುಕ್ತ ಭಾರತ – ಒಂದು ಸಾಮೂಹಿಕ ಜವಾಬ್ದಾರಿ’ ಜಾಗೃತಿ ಕಾರ್ಯಕ್ರಮ ಯಶಸ್ವಿ; 300 ವಿದ್ಯಾರ್ಥಿಗಳಿಂದ ವ್ಯಸನಮುಕ್ತಿಯ ಪ್ರತಿಜ್ಞೆ
ಖಾನಾಪುರ (ಪ್ರತಿನಿಧಿ): ಆರೋಗ್ಯ ಭಾರತೀ, ಖಾನಾಪುರ ಶಾಖೆ, ರಾವಸಾಹೇಬ ವಾಗಳೆ ಪಿಯು ಕಾಲೇಜು, ಎನ್ಸಿಸಿ ಹಾಗೂ ರೆಡ್ ಕ್ರಾಸ್ ಇವರ ಸಂಯುಕ್ತ ಆಶ್ರಯದಲ್ಲಿ ‘ಮಾದಕವಸ್ತು ಮುಕ್ತ ಭಾರತ – ಒಂದು ಸಾಮೂಹಿಕ ಜವಾಬ್ದಾರಿ’ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮವು ಅತ್ಯಂತ ಉತ್ಸಾಹದಿಂದ ನಡೆಯಿತು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಮಾನ್ಯ ಎಜುಕೇಶನ್ ಸೊಸೈಟಿಯ ಸಂಯೋಜಕರೂ ಹಾಗೂ ಬೆಳಗಾವಿಯ ಭಾವುರಾವ್ ಕಾಕತ್ಕರ್ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ. ಡಿ. ಎನ್. ಮಿಸಾಳೆ ವಹಿಸಿದ್ದರು. ಮುಖ್ಯ ಅತಿಥಿ ಹಾಗೂ ಉಪನ್ಯಾಸಕರಾಗಿ ಖ್ಯಾತ ಮಕ್ಕಳ ತಜ್ಞ ವೈದ್ಯರಾದ ಡಾ. ಮಿಲಿಂದ್ ಹಲಗೇಕರ್ (ಬೆಳಗಾವಿ) ಅವರು ವ್ಯಸನದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಕುಟುಂಬದ ಮೇಲಿನ ದುಷ್ಪರಿಣಾಮಗಳನ್ನು ಪರಿಣಾಮಕಾರಿ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು. ಅವರ ಪ್ರೇರಣಾದಾಯಕ ಉಪನ್ಯಾಸವು ವಿದ್ಯಾರ್ಥಿಗಳಲ್ಲಿ ವ್ಯಸನಮುಕ್ತ ಜೀವನ ನಡೆಸುವ ದೃಢ ಸಂಕಲ್ಪವನ್ನು ಮೂಡಿಸಿತು.
ಕಾರ್ಯಕ್ರಮದ ಆರಂಭದಲ್ಲಿ ಕೊಡ್ಲಾ ಸರ್ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶ ಹಾಗೂ ‘ಮಾದಕವಸ್ತು ಮುಕ್ತ ಭಾರತ’ ಅಭಿಯಾನದ ಮಹತ್ವವನ್ನು ವಿವರಿಸಿದರು. ನಂತರ ಆರೋಗ್ಯ ಭಾರತೀ ಖಾನಾಪುರ ಶಾಖೆಯ ಅಧ್ಯಕ್ಷರು ಹಾಗೂ ಖಾನಾಪುರ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಡಿ. ನಾಡಗೌಡ ಅವರು ವೇದಿಕೆಯ ಮೇಲಿದ್ದ ಗಣ್ಯರನ್ನು ಪರಿಚಯಿಸಿದರು. ಶ್ರೀ ವಾಸುದೇವ ಇನಾಮದಾರ್ ಅವರು ವಿದ್ಯಾರ್ಥಿಗಳಿಗೆ ವ್ಯಸನಮುಕ್ತಿಯ ಪ್ರತಿಜ್ಞೆ ಬೋಧಿಸಿದರು. ಶ್ರೀ ಲಕ್ಷ್ಮಣ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಾಂಶುಪಾಲೆ ಶ್ರೀಮತಿ ಶರಯು ಕಡಮ್, ಡಾ. ಸುದರ್ಶನ ಸುಳ್ಕರ್, ಡಾ. ಶಂಕರ ಪಾಟೀಲ, ಡಾ. ಪ್ರಣಿತಾ ದೇಸಾಯಿ ಹಾಗೂ ಶ್ರೀ ರಾಜು ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾವಸಾಹೇಬ ವಾಗಳೆ ಪಿಯು ಕಾಲೇಜಿನ ಸುಮಾರು 300 ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಜೊತೆಗೆ ಆರೋಗ್ಯ ಭಾರತೀ ಬೆಳಗಾವಿಯ ಶ್ರೀ ಸಂಜಯ ಕುಲಕರ್ಣಿ, ಶ್ರೀ ಲಕ್ಷ್ಮಣ ಶೆಟ್ಟಿ, ಶ್ರೀ ಗೋಪಾಲರಾವ್ ದೇಶಪಾಂಡೆ (ಯೋಗ ಶಿಕ್ಷಕರು) ಸೇರಿದಂತೆ ಆರೋಗ್ಯ ಭಾರತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಜಾಗೃತಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ‘ಮಾದಕವಸ್ತು ಮುಕ್ತ ಭಾರತ’ ಪರಿಕಲ್ಪನೆ ಕುರಿತು ಪರಿಣಾಮಕಾರಿ ಅರಿವು ಮೂಡಿಸಲಾಯಿತು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ಸಾಮೂಹಿಕ ಜವಾಬ್ದಾರಿಯನ್ನು ಸ್ವೀಕರಿಸಬೇಕೆಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.

