युवा समितीच्या वतीने खानापूर तालुक्यातील विविध मराठी शाळांमध्ये शैक्षणिक साहित्याचे वितरण.
खानापूर (प्रतिनिधी) : महाराष्ट्र एकीकरण युवा समिती आणि राज्य मराठी विकास संस्था, मुंबई यांच्या संयुक्त विद्यमाने खानापूर तालुक्यातील निट्टूर, यडोगा, तोपीनकट्टी, बिदरभावी, सन्नहोसूर, भंडरगाळी, निडगल आणि बरगांव येथील मराठी प्राथमिक शाळांमध्ये विद्यार्थ्यांना शैक्षणिक साहित्याचे वितरण करण्यात आले.

सीमाभागातील मातृभाषेतून शिक्षण घेणाऱ्या विद्यार्थ्यांना प्रोत्साहन देण्यासाठी महाराष्ट्र एकीकरण युवा समितीकडून गेल्या नऊ वर्षांपासून हा उपक्रम सातत्याने राबविला जात आहे. मराठी शाळांमध्ये प्रवेश घेणाऱ्या विद्यार्थ्यांना प्रोत्साहन मिळावे, तसेच मराठी शाळांतील विद्यार्थ्यांची संख्या वाढावी, या उद्देशाने विद्यार्थ्यांना अंकलिपी पुस्तिका, वह्या, पेन, पेन्सिल किट आणि इतर आवश्यक शैक्षणिक साहित्याचे वितरण करण्यात आले.
यडोगा येथील कार्यक्रमात महाराष्ट्र एकीकरण समितीचे ज्येष्ठ कार्यकर्ते रामचंद्र खांबळे यांनी मराठी शाळांचे महत्त्व अधोरेखित करताना, “मराठी शाळा टिकल्या तरच मराठी भाषा आणि संस्कृतीचे जतन होईल. त्यामुळे मराठी शाळा वाचविण्यासाठी सर्वांनी एकत्रितपणे प्रयत्न केले पाहिजेत,” असे आवाहन केले. त्यांच्या हस्ते विद्यार्थ्यांना शैक्षणिक साहित्याचे वाटप करण्यात आले. यावेळी शिक्षक पुंडलिक पाटील व इतर शिक्षक उपस्थित होते.
निट्टूर येथे शाळा सुधारणा समितीचे अध्यक्ष संतोष चोपडे यांनी युवा समितीच्या उपक्रमाचे कौतुक करत मातृभाषेतून शिक्षणाचे महत्त्व स्पष्ट केले. यावेळी परशराम पाटील, बाळाप्पा नाईक, अमित नार्वेकर, महेंद्र नार्वेकर, शिक्षकवर्ग तसेच ग्रामस्थांच्या उपस्थितीत विद्यार्थ्यांना साहित्याचे वितरण करण्यात आले.
युवा समितीचे सहकारी शुभम कांबळे यांनी सर्व शाळांमध्ये उपक्रमाची माहिती देताना, मराठी भाषा, संस्कृती आणि अस्मितेचे जतन करण्यासाठी प्रत्येकाने मराठी शाळा टिकविण्यासाठी कटिबद्ध राहण्याची गरज असल्याचे सांगितले.
तोपीनकट्टी, बिदरभावी, सन्नहोसूर, भंडरगाळी, निडगल आणि बरगांव येथील मराठी प्राथमिक शाळांमध्येही विद्यार्थ्यांना शैक्षणिक साहित्याचे वितरण करण्यात आले. हा उपक्रम यशस्वी करण्यासाठी युवा समितीचे श्री. पाटील, मुकेश गुरव, शुभम कांबळे, साईनाथ मळीक, प्रसन्न पाटील, कृष्णा खांबळे, श्रेयस हल्ल्याळकर आणि चेतन हंगिरगेकर यांनी विशेष परिश्रम घेतले. यावेळी संबंधित शाळांचे मुख्याध्यापक, शिक्षकवर्ग आणि मराठीप्रेमी नागरिक मोठ्या संख्येने उपस्थित होते.
ಯುವ ಸಮಿತಿ ವತಿಯಿಂದ ಖಾನಾಪುರ ತಾಲ್ಲೂಕಿನ ವಿವಿಧ ಮರಾಠಿ ಶಾಲೆಗಳಲ್ಲಿ ಶೈಕ್ಷಣಿಕ ಸಾಮಗ್ರಿಗಳ ವಿತರಣೆ.
ಖಾನಾಪುರ (ಪ್ರತಿನಿಧಿ) : ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಹಾಗೂ ರಾಜ್ಯ ಮರಾಠಿ ಅಭಿವೃದ್ಧಿ ಸಂಘ, ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲ್ಲೂಕಿನ ನಿಟ್ಟೂರು, ಯಡೋಗಾ, ತೋಪಿನಕಟ್ಟಿ, ಬಿದರಭಾವಿ, ಸನ್ನಹೊಸೂರ, ಭಂಡರಗಾಳಿ, ನಿಡಗಲ್ ಹಾಗೂ ಬರಗಾಂವ್ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಗಡಿಭಾಗದಲ್ಲಿ ಮಾತ್ರು ಭಾಷೆಯಾದ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಕಳೆದ ಒಂಬತ್ತು ವರ್ಷಗಳಿಂದ ಈ ಉಪಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮರಾಠಿ ಶಾಲೆಗಳಲ್ಲಿ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉತ್ತೇಜನ ದೊರಕಬೇಕು ಹಾಗೂ ಮರಾಠಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಉದ್ದೇಶದಿಂದ ಅಂಕಲಪಿ ಪುಸ್ತಕ, ನೋಟ್ಬುಕ್ಗಳು, ಪೆನ್, ಪೆನ್ಸಿಲ್ ಕಿಟ್ ಹಾಗೂ ಇತರೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಯಡೋಗಾ ಗ್ರಾಮದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿರಿಯ ಕಾರ್ಯಕರ್ತರಾದ ರಾಮಚಂದ್ರ ಖಾಂಬಳೆ ಅವರು ಮರಾಠಿ ಶಾಲೆಗಳ ಮಹತ್ವವನ್ನು ವಿವರಿಸುತ್ತಾ, “ಮರಾಠಿ ಶಾಲೆಗಳು ಉಳಿದರೆ ಮಾತ್ರ ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಸಾಧ್ಯ. ಆದ್ದರಿಂದ ಮರಾಠಿ ಶಾಲೆಗಳನ್ನು ಉಳಿಸಲು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು,” ಎಂದು ಕರೆ ನೀಡಿದರು. ಅವರ ಕೈಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಪುಂಡಲಿಕ ಪಾಟೀಲ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.
ನಿಟ್ಟೂರಿನಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂತೋಷ ಚೋಪಡೆ ಅವರು ಯುವ ಸಮಿತಿಯ ಈ ಉಪಕ್ರಮವನ್ನು ಶ್ಲಾಘಿಸಿ, ಮಾತ್ರು ಭಾಷೆಯ ಮೂಲಕ ಶಿಕ್ಷಣ ಪಡೆಯುವ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪರಶುರಾಮ ಪಾಟೀಲ, ಬಾಳಪ್ಪ ನಾಯಕ್, ಅಮಿತ್ ನಾರ್ವೇಕರ್, ಮಹೇಂದ್ರ ನಾರ್ವೇಕರ್, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಯುವ ಸಮಿತಿಯ ಸಹೋದ್ಯೋಗಿ ಶುಭಂ ಕಾಂಬಳೆ ಅವರು ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡುತ್ತಾ, ಮರಾಠಿ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಮರಾಠಿ ಶಾಲೆಗಳನ್ನು ಉಳಿಸುವ ಸಂಕಲ್ಪಕ್ಕೆ ಬದ್ಧರಾಗಬೇಕೆಂದು ಹೇಳಿದರು.
ತೋಪಿನಕಟ್ಟಿ, ಬಿದರಭಾವಿ, ಸನ್ನಹೊಸೂರು, ಭಂಡರಗಾಳಿ, ನಿಡಗಲ್ ಹಾಗೂ ಬರಗಾಂವ್ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯುವ ಸಮಿತಿಯ ಶ್ರೀ. ಪಾಟೀಲ, ಮುಕೇಶ್ ಗುರುವ್, ಶುಭಂ ಕಾಂಬಳೆ, ಸಾಯಿನಾಥ್ ಮಳೀಕ್, ಪ್ರಸನ್ನ ಪಾಟೀಲ, ಕೃಷ್ಣ ಖಾಂಬಳೆ, ಶ್ರೇಯಸ್ ಹಳ್ಳ್ಯಾಳ್ಕರ್ ಹಾಗೂ ಚೇತನ ಹಂಗಿರಗೇಕರ್ ವಿಶೇಷ ಶ್ರಮ ವಹಿಸಿದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಮರಾಠಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

