इरफान तालिकोटींचा निंबाळकर यांच्यावर पलटवार; “मला निलंबनाची कोणतीही नोटीस नाही, बदनामीचे षडयंत्र सुरू”
खानापूर (प्रतिनिधी) : काँग्रेसच्या खानापूर येथील बैठकीत बुधवारी झालेल्या गदारोळानंतर सामाजिक कार्यकर्ते व युवा काँग्रेसचे माजी तालुकाध्यक्ष तथा अंजुमन इस्लामचे अध्यक्ष इरफान तालिकोटी यांनी गुरुवारी (30 जुलै) सार्वजनिक बांधकाम विभागाच्या विश्रामधाम येथे पत्रकार परिषद घेऊन माजी आमदार अंजलीताई निंबाळकर यांच्या वक्तव्यांचा समाचार घेत आपली भूमिका स्पष्ट केली.
तालिकोटी म्हणाले की, काँग्रेसच्या बैठकीनंतर अंजलीताई निंबाळकर यांनी केलेली विधाने ही खानापूर तालुक्यातील जनतेची दिशाभूल करणारी आहेत. पक्षातून निलंबित केल्याचा दावा केला जात असला तरी मला पक्षाकडून आजपर्यंत कोणतीही अधिकृत नोटीस किंवा आदेश मिळालेला नाही. 2023 च्या विधानसभा निवडणुकीत बंडखोरी केल्यामुळे सहा वर्षांसाठी निलंबित करण्यात आल्याचे सांगितले जात आहे. मात्र 2013 मध्ये अंजलीताई निंबाळकर यांनीही काँग्रेसचे नेते रफिक खानापुरी यांच्या विरोधात बंडखोरी केली होती. त्यानंतर त्यांना विविध पक्षपदे आणि आमदारकीची उमेदवारी मिळाली. मग काँग्रेसमध्ये दोन वेगवेगळे न्याय आहेत का, असा सवाल त्यांनी उपस्थित केला.
बुधवारी झालेल्या बैठकीला दिल्लीहून आलेले निरीक्षक मनोज चव्हाण यांची केवळ भेट घेण्यासाठी आपण गेलो होतो. बैठकीत हस्तक्षेप करण्याचा किंवा सहभागी होण्याचा कोणताही हेतू नव्हता. निरीक्षक सभागृहात आल्यानंतर अंजली निंबाळकर यांनी इरफान तालिकोटी हे बैठकीला उपस्थित राहिल्यास आपण सर्वजण बाहेर पडू, असा दबाव टाकल्याचा आरोप त्यांनी केला. त्यामुळे बैठकीत कोणताही वाद निर्माण होऊ नये म्हणून आपण स्वतःहून सभागृहाबाहेर पडलो, असे तालिकोटी यांनी सांगितले.
आपण बैठकीत कोणताही गोंधळ घातलेला नाही. त्या ठिकाणी पत्रकार, पोलीस आणि अनेक कार्यकर्ते उपस्थित होते. त्यामुळे सत्य सर्वांसमोर आहे. तुमच्या म्हणण्यानुसार निलंबित असलो तरी निरीक्षकांना भेटणे हा काही गुन्हा नाही, असेही त्यांनी स्पष्ट केले.
गेल्या काही वर्षांपासून आपली सातत्याने बदनामी करण्याचे षडयंत्र रचले जात असून, आपण सर्वसामान्य नागरिकांची कामे करत असल्यामुळे काहींना ते सहन होत नसल्याचा आरोपही त्यांनी केला. दहा वर्षांपूर्वी आपण निवड झालेले युवा काँग्रेस अध्यक्ष असतानाही स्वतःच्या मर्जीने दुसऱ्या व्यक्तीला अध्यक्ष घोषित करण्याचा प्रयत्न करण्यात आला होता. मात्र राज्य नेतृत्वाने तो प्रयत्न फेटाळला होता, असे त्यांनी सांगितले.
मराठीचा अभिमान असल्याचे सांगणाऱ्यांनी काँग्रेसचे ब्लॉक अध्यक्ष तथा वकील संघटनेचे अध्यक्ष ईश्वर घाडी यांनाही बैठकीत योग्य सन्मान दिला नाही, त्यांना बसण्यासाठी साधी खुर्ची देखील देण्यात आली नाही. हा मराठी माणसाचा अपमान आहे. असा आरोप करत त्यांनी निंबाळकर यांच्यावर टीका केली. तसेच हिंदुत्ववादी युवा नेते पंडित ओगले यांच्याबाबती पोलिसावर दबाव टाकून त्यांना बदनाम करण्याचा प्रयत्न झाल्याचा आरोप करत, आम्ही त्यांच्या पाठीशी ठामपणे उभे आहोत, असे त्यांनी स्पष्ट केले. तसेच ओगले हे सार्वजनिक गणेशोत्सव महामंडळाचे अध्यक्ष आहेत त्यामुळे ते शांतता कमिटीच्या बैठकीला उपस्थित राहणारच आणि आम्ही त्यांच्या पाठीशी आहोत.
तालिकोटी यांनी पुढे आरोप केला की, काही पोलीस अधिकाऱ्यांवर दबाव टाकून आपल्या विरोधात भारतीय दंड संहितेच्या कलम 307 अंतर्गत खोटा गुन्हा दाखल करण्यात आला होता. तसेच ‘रौडी शीटर’ म्हणून नोंद करण्याचाही प्रयत्न झाला. मात्र या दोन्ही प्रकरणांमध्ये उच्च न्यायालयाकडून दिलासा मिळाल्याचे त्यांनी सांगितले. संबंधित पोलीस अधिकारी आणि त्यांच्यावर दबाव आणणाऱ्यांची उच्चस्तरीय चौकशी करण्याची मागणी करणार असून, पाच कोटी रुपयांचा अब्रूनुकसानीचा दावा दाखल करणार असल्याचे त्यांनी जाहीर केले.
खानापूरमध्ये गेल्या आठ वर्षांपासून राजकीय दबावामुळे नेते, पत्रकार आणि सामाजिक कार्यकर्त्यांवर खोटे गुन्हे दाखल केले जात असल्याचा गंभीर आरोपही त्यांनी केला. तसेच तालुक्यातील काही विभागांमध्ये मोठ्या प्रमाणावर भ्रष्टाचार होत असून, अधिकारी बदलीसाठी लाखो रुपये खर्च केल्याच्या चर्चांचीही चौकशी व्हावी, अशी मागणी त्यांनी केली.
नंदगड येथील संगोळी रायण्णा स्मारकाच्या उद्घाटन कार्यक्रमात आपल्याला व्यासपीठावर जाण्यापासून रोखण्यात आले होते. त्यावेळी पोलीस अधिकाऱ्यांना कोण निर्देश देत होते, याचा व्हिडिओ आपल्या ताब्यात असल्याचा दावा त्यांनी केला. तसेच तो कार्यक्रम सरकारी होता. त्या कार्यक्रमात मी व्यासपीठावर उपस्थित राहिलो तर माझ्यामुळे कोणाचे नुकसान होणार होते असा प्रति प्रश्न देखील त्यांनी केला.
पुढे बोलताना ते म्हणाले “मी कोणालाही घाबरणार नाही. खानापूरच्या सर्वसामान्य जनतेची सेवा करत राहणार आहे. वरिष्ठ नेतृत्वाने माझे काम सुरू ठेवण्यास सांगितले असून 2028 च्या विधानसभा निवडणुकीसाठी उमेदवारी देण्याचे आश्वासन मला मिळाले आहे आणि पुढील विधानसभेचे तिकीट मलाच मिळेल, असा मला पूर्ण विश्वास आहे,” असा दावा इरफान तालिकोटी यांनी पत्रकार परिषदेत केला.
ಇರ್ಫಾನ್ ತಾಲಿಕೋಟಿಯವರಿಂದ ಮಾಜಿ ಶಾಸಕಿ ನಿಂಬಾಳ್ಕರ ಅವರ ವಿರುದ್ಧ ತಿರುಗೇಟು; “ನನ್ನ ಅಮಾನತಿಗೆ ಯಾವುದೇ ನೋಟಿಸ್ ನೀಡಿಲ್ಲ , ನನ್ನ ವಿರುದ್ಧ ಅವಮಾನ ಮಾಡುವ ಸಂಚು ನಡೆಯುತ್ತಿದೆ”
ಖಾನಾಪುರ (ಪ್ರತಿನಿಧಿ): ಕಾಂಗ್ರೆಸ್ನ ಖಾನಾಪುರ ಸಭೆಯಲ್ಲಿ ಬುಧವಾರ ನಡೆದ ಗದ್ದಲದ ಬಳಿಕ, ಸಾಮಾಜಿಕ ಕಾರ್ಯಕರ್ತರು, ಯುವ ಕಾಂಗ್ರೆಸ್ನ ಮಾಜಿ ತಾಲ್ಲೂಕು ಅಧ್ಯಕ್ಷರು ಹಾಗೂ ಅಂಜುಮನ್ ಇಸ್ಲಾಂ ಅಧ್ಯಕ್ಷರಾದ ಇರ್ಫಾನ್ ತಾಲಿಕೋಟಿ ಅವರು ಗುರುವಾರ (ಜುಲೈ 30) ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾಜಿ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತ ತಮ್ಮ ನಿಲುವು ಸ್ಪಷ್ಟಪಡಿಸಿದರು.
ತಾಲಿಕೋಟಿ ಅವರು ಮಾತನಾಡಿ, ಕಾಂಗ್ರೆಸ್ ಸಭೆಯ ಬಳಿಕ ಅಂಜಲಿತಾಯಿ ನಿಂಬಾಳ್ಕರ್ ಅವರು ನೀಡಿದ ಹೇಳಿಕೆಗಳು ಖಾನಾಪುರ ತಾಲ್ಲೂಕಿನ ಜನರನ್ನು ದಿಕ್ಕು ತಪ್ಪಿಸುವಂತಿವೆ ಎಂದು ಆರೋಪಿಸಿ, ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಆದರೆ, ನನಗೆ ಇದುವರೆಗೆ ಪಕ್ಷದಿಂದ ಯಾವುದೇ ಅಧಿಕೃತ ನೋಟಿಸ್ ಅಥವಾ ಆದೇಶ ಬಂದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಮಾಡಿದ ಕಾರಣಕ್ಕೆ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಆರೂಪಿಸಿದ್ದಾರೆ. ಆದರೆ 2013ರಲ್ಲಿ ಅಂಜಲಿತಾಯಿ ನಿಂಬಾಳ್ಕರ್ ಅವರೂ ಕಾಂಗ್ರೆಸ್ ನಾಯಕ ರಫೀಕ್ ಖಾನಾಪುರಿ ಅವರ ವಿರುದ್ಧ ಬಂಡಾಯ ಮಾಡಿದ್ದರು. ನಂತರ ಅವರಿಗೆ ಪಕ್ಷದಲ್ಲಿ ವಿವಿಧ ಹುದ್ದೆಗಳು ಹಾಗೂ ಶಾಸಕರ ಟಿಕೆಟ್ ನೀಡಲಾಗಿಲವೆ ? ಹೀಗಿದ್ದರೆ ಕಾಂಗ್ರೆಸ್ನಲ್ಲಿ ಎರಡು ರೀತಿಯ ನ್ಯಾಯವಿದೆಯೇ ಎಂದು ಅವರು ಪ್ರಶ್ನಿಸಿದರು.
ಬುಧವಾರ ನಡೆದ ಸಭೆಗೆ ದೆಹಲಿಯಿಂದ ಆಗಮಿಸಿದ್ದ ವೀಕ್ಷಕರಾದ ಮನೋಜ್ ಚವ್ಹಾಣ್ ಅವರನ್ನು ಕೇವಲ ಭೇಟಿಯಾಗಲು ಮಾತ್ರ ನಾನು ಹೋಗಿದ್ದೆ. ಸಭೆಯಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಸಭೆಯಲ್ಲಿ ಭಾಗವಹಿಸುವ ಯಾವುದೇ ಉದ್ದೇಶ ಇರಲಿಲ್ಲ. ವೀಕ್ಷಕರು ಸಭಾಂಗಣಕ್ಕೆ ಬಂದ ನಂತರ, ಇರ್ಫಾನ್ ತಾಲಿಕೋಟಿ ಸಭೆಯಲ್ಲಿ ಇದ್ದರೆ ನಾವು ಎಲ್ಲರೂ ಸಭೆಯಿಂದ ಹೊರಗೆ ಹೋಗುತ್ತೇವೆ ಎಂದು ಅಂಜಲಿ ನಿಂಬಾಳ್ಕರ್ ಒತ್ತಡ ಹೇರಿದರು ಎಂದು ಅವರು ಆರೋಪಿಸಿದರು. ಸಭೆಯಲ್ಲಿ ಯಾವುದೇ ವಿವಾದ ಉಂಟಾಗಬಾರದೆಂಬ ಕಾರಣಕ್ಕೆ ನಾನು ಸ್ವಯಂಪ್ರೇರಿತವಾಗಿ ಸಭಾಂಗಣದಿಂದ ಹೊರಬಂದಿರುವುದಾಗಿ ತಿಳಿಸಿದರು.
ನಾನು ಸಭೆಯಲ್ಲಿ ಯಾವುದೇ ಗದ್ದಲ ಮಾಡಿಲ್ಲ ಹಾಗೂ ಮಾಡುವ ಉದ್ದೇಶ ಕೂಡ ಇರಲಿಲ್ಲ. ಅಲ್ಲಿ ಪತ್ರಕರ್ತರು, ಪೊಲೀಸರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಆದ್ದರಿಂದ ಸತ್ಯ ಎಲ್ಲರ ನೋಡಿದ್ದಾರೆ. ಅದಾಗಿಯೂ ನಿಮ್ಮ ಪ್ರಕಾರ ನಾನು ಅಮಾನತುಗೊಂಡಿದ್ದರೂ, ವೀಕ್ಷಕರನ್ನು ಭೇಟಿ ಮಾಡುವುದು ಯಾವುದೇ ಅಪರಾಧವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಕೆಲವು ವರ್ಷಗಳಿಂದ ನನ್ನ ವಿರುದ್ಧ ನಿರಂತರವಾಗಿ ಅಪಕೀರ್ತಿ ಮಾಡುವ ಸಂಚು ನಡೆಯುತ್ತಿದೆ. ನಾನು ಸಾಮಾನ್ಯ ಜನರ ಕೆಲಸಗಳನ್ನು ಮಾಡುತ್ತಿರುವುದರಿಂದ ಕೆಲವರಿಗೆ ಅದು ಸಹಿಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಹತ್ತು ವರ್ಷಗಳ ಹಿಂದೆ ನಾನು ಆಯ್ಕೆಯಾದ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗಲೂ, ತಮ್ಮ ಇಚ್ಛೆಯಂತೆ ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ಘೋಷಿಸಲು ಪ್ರಯತ್ನಿಸಲಾಗಿತ್ತು. ಆದರೆ ರಾಜ್ಯ ನಾಯಕತ್ವ ಆ ಪ್ರಯತ್ನವನ್ನು ತಳ್ಳಿಹಾಕಿತ್ತು ಎಂದು ಅವರು ಹೇಳಿದರು.
ಮಾಜಿ ಶಾಸಕಿ ಅವರು ಮರಾಠಿ ಭಾಷೆ ಮತ್ತು ಭಾಷಿಕರ ಬಗ್ಗೆ ಹೆಮ್ಮೆ ಇದೆ ಎಂದು ಹೇಳುವವರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಅವರಿಗೂ ಸಭೆಯಲ್ಲಿ ಸೂಕ್ತ ಗೌರವ ನೀಡಲಾಗಿಲ್ಲ ಅವರಿಗೆ ಕುಳಿತುಕೊಳ್ಳಲು ಒಂದು ಸಾಮಾನ್ಯ ಹಾಸನದ ( ಕುರ್ಚಿ) ವ್ಯವಸ್ಥೆ ಮಾಡಲಾಗಿಲ್ಲ. ಇದು ಮರಾಠಿ ಸಮುದಾಯದ ಅವಮಾನ ಎಂದು ಆರೋಪಿಸಿ ಅವರು ನಿಂಬಾಳ್ಕರ್ ಅವರ ವಿರುದ್ಧ ಟೀಕಿಸಿದರು.
ಇದೇ ವೇಳೆ ಹಿಂದೂತ್ವವಾದಿ ಯುವ ನಾಯಕ ಪಂಡಿತ್ ಓಗಲೆ ಅವರ ವಿರುದ್ಧ ಪೊಲೀಸರ ಮೇಲೆ ಒತ್ತಡ ಹೇರಿ ಅವರನ್ನು ಅಪಕೀರ್ತಿಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ. ನಾವು ಅವರ ಬೆಂಬಲಕ್ಕೆ ದೃಢವಾಗಿ ನಿಂತಿದ್ದೇವೆ ಎಂದು ಹೇಳಿದರು. ಜೊತೆಗೆ ಓಗಲೆ ಅವರು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷರಾಗಿರುವುದರಿಂದ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸುವುದು ಸಹಜ. ನಾವು ಅವರನ್ನು ಯಾವತ್ತು ಬೆಂಬಲಿಸುತ್ತಾ ಬಂದಿರುವುದಾಗಿ ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಕೆಲ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 307ರ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು ಎಂದು ಆರೋಪಿಸಿದರು. ಅಲ್ಲದೆ ತಮ್ಮ ಹೆಸರನ್ನು ‘ರೌಡಿ ಶೀಟರ್’ ಪಟ್ಟಿಗೆ ಸೇರಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಈ ಎರಡೂ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯದಿಂದ ತಮಗೆ ನ್ಯಾಯ ದೊರೆತಿದೆ ಎಂದು ಸ್ಪಷ್ಟಪಡಿಸಿದರು. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಮೇಲೆ ಒತ್ತಡ ಹೇರಿದವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸುವುದಾಗಿ ಹಾಗೂ ಐದು ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಘೋಷಿಸಿದರು.
ಕಳೆದ ಎಂಟು ವರ್ಷಗಳಿಂದ ಖಾನಾಪುರದಲ್ಲಿ ರಾಜಕೀಯ ಒತ್ತಡದ ಕಾರಣದಿಂದ ರಾಜಕೀಯ ನಾಯಕರು, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಗಂಭೀರ ಆರೋಪ ಕೂಡ ಮಾಡಿದರು. ಅಲ್ಲದೆ ತಾಲ್ಲೂಕಿನ ಕೆಲವು ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳ ವರ್ಗಾವಣೆಗೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ ಎಂಬ ಚರ್ಚೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮನ್ನು ವೇದಿಕೆಗೆ ಹೋಗದಂತೆ ತಡೆಯಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಯಾರು ನಿರ್ದೇಶನ ನೀಡುತ್ತಿದ್ದರು ಎಂಬುದಕ್ಕೆ ಸಂಬಂಧಿಸಿದ ವಿಡಿಯೊ ತಮ್ಮ ಬಳಿ ಇದೆ ಎಂದು ಅವರು ಹೇಳಿದರು. ಆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿತ್ತು. ಆ ವೇದಿಕೆಯಲ್ಲಿ ನಾನು ಇದ್ದರೆ ಯಾರಿಗೆ ಏನು ತೊಂದರೆಯಾಗುತ್ತಿತ್ತು ಎಂದು ಪ್ರತಿಪ್ರಶ್ನೆ ಮಾಡಿದರು.
ಮುಂದೆ ಮಾತನಾಡಿದ ಅವರು, “ನಾನು ಯಾರಿಗೂ ಹೆದರುವ ಅಗತ್ಯವಿಲ್ಲ. ಖಾನಾಪುರದ ಸಾಮಾನ್ಯ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪಕ್ಷದ ಹಿರಿಯ ನಾಯಕತ್ವ ನನ್ನ ಕೆಲಸವನ್ನು ಮುಂದುವರಿಸಲು ಸೂಚಿಸಿದೆ. 2028ರ ವಿಧಾನಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ನನಗೇ ಸಿಗುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ,” ಎಂದು ಇರ್ಫಾನ್ ತಾಲಿಕೋಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

