वादळी पावसामुळे श्री सिद्ध हंडीभडंगनाथ मठाचे मोठे नुकसान; मठाधीशांची, तात्काळ शासकीय मदतीची मागणी.
खानापूर : खानापूर तालुक्यातील कक्केरी, भुरूणकी व नागरगाळी परिसरात नुकत्याच झालेल्या वारा-वादळासह मुसळधार पावसामुळे मोठे नुकसान झाले आहे. या पावसात अनेक घरांचे व शाळांचे पत्रे तसेच छप्पर उडून गेले असून नागरगाळी येथील पवित्र व प्रसिद्ध श्री सिद्ध हंडीभडंगनाथ मठ, कुंभार्डा (नागरगाळी) यालाही मोठा फटका बसला आहे.
वादळामुळे मठावरील पत्रे उडून गेले असून अनेक पत्रे वाकले व मोडले आहेत. त्यामुळे मठाची इमारत सध्या धोकादायक अवस्थेत आहे. पुन्हा पाऊस झाल्यास मठात पाणी साचून भिंती पडण्याची शक्यता निर्माण झाली असल्याची माहिती मठाचे मठाधीश पीर मोहननाथजी गोपीनाथ यांनी दिली.

“आपलं खानापूर” न्यूज पोर्टलशी बोलताना त्यांनी सांगितले की, छप्पर उडाल्यामुळे मठात राहण्याचा प्रश्न निर्माण झाला आहे. तसेच स्वयंपाक गृहावरील पत्रेही उडाल्याने पावसाळ्यात भोजन तयार करणेही कठीण होणार आहे. भाविकांच्या नवसाला पावणारा आणि दूरवर ख्याती असलेला हा पवित्र मठ सध्या अडचणीत सापडला असून तातडीने दुरुस्ती करणे आवश्यक आहे.
या पार्श्वभूमीवर खानापूरचे आमदार विठ्ठल हलगेकर तसेच तहसीलदारांनी तात्काळ शासकीय आर्थिक मदत द्यावी, अशी मागणी मठाधीशांनी केली आहे. नागरगाळी ग्रामपंचायतीचे माजी सदस्य सुनील प्रभू यांनीही आमदार विठ्ठल हलगेकर यांना घटनेची माहिती देऊन नुकसानग्रस्त मठाचे छायाचित्रे पाठविली आहेत. आमदारांनी मदत करण्याचे आश्वासन दिल्याचे त्यांनी सांगितले.
हंडीभडंगनाथ मठाची ख्याती दूरवर पसरलेली असून अनेक भाविक श्रद्धेने येथे येत असतात. त्यामुळे या ऐतिहासिक व पवित्र स्थळाच्या दुरुस्तीसाठी आमदारांनी व तहसीलदारांनी वेळ न दवडता तात्काळ शासकीय नुकसान भरपाई मदत मिळवून द्यावीत, अशी मागणी परिसरातील नागरिकांकडूनही करण्यात येत आहे.
ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಶ್ರೀ ಸಿದ್ಧ ಹಂಡಿಭಡಂಗನಾಥ ಮಠಕ್ಕೆ ಭಾರೀ ಹಾನಿ; ತಕ್ಷಣ ಸರ್ಕಾರಿ ನೆರವಿಗೆ ಮಠಾಧೀಶರ ಮನವಿ.
ಖಾನಾಪುರ : ಖಾನಾಪುರ ತಾಲ್ಲೂಕಿನ ಕಕ್ಕೇರಿ, ಭುರೂಣಕಿ ಹಾಗೂ ನಾಗರಗಾಳಿ ಪ್ರದೇಶಗಳಲ್ಲಿ ಇತ್ತೀಚೆಗೆ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಭಾರೀ ಹಾನಿ ಸಂಭವಿಸಿದೆ. ಈ ಮಳೆಯಲ್ಲಿ ಅನೇಕ ಮನೆಗಳ ಹಾಗೂ ಶಾಲೆಗಳ ಮೇಲ್ಚಾವಣಿ ಮತ್ತು ಟಿನ್ಶೀಟ್ಗಳು ಹಾರಿ ಹೋಗಿವೆ. ನಾಗರಗಾಳಿ ಗ್ರಾಮದಲ್ಲಿರುವ ಪವಿತ್ರ ಹಾಗೂ ಪ್ರಸಿದ್ಧ ಶ್ರೀ ಸಿದ್ಧ ಹಂಡಿಭಡಂಗನಾಥ ಮಠ, ಕುಂಭಾರ್ಡಾ (ನಾಗರಗಾಳಿ) ಕೂಡ ಭಾರೀ ಹಾನಿಗೊಳಗಾಗಿದೆ.
ಗಾಳಿ ಮಳೆಯಿಂದ ಮಠದ ಮೇಲ್ಚಾವಣಿಯ ಟಿನ್ಶೀಟ್ಗಳು ಹಾರಿ ಹೋಗಿ, ಹಲವಾರು ಶೀಟ್ಗಳು ಮಡಚಿ ಮುರಿದಿವೆ. ಇದರಿಂದ ಮಠದ ಕಟ್ಟಡ ಸದ್ಯ ಅಪಾಯಕರ ಸ್ಥಿತಿಯಲ್ಲಿದೆ. ಮತ್ತೆ ಮಳೆ ಬಂದರೆ ಮಠದೊಳಗೆ ನೀರು ನುಗ್ಗಿ ಗೋಡೆಗಳು ಕುಸಿಯುವ ಸಾಧ್ಯತೆ ಇದೆ ಎಂದು ಮಠದ ಮಠಾಧೀಶ ಪೀರ್ ಮೋಹನನಾಥಜಿ ಗೋಪೀನಾಥ ತಿಳಿಸಿದ್ದಾರೆ.
“ಆಪಲ ಖಾನಾಪುರ” ಸುದ್ದಿ ಪೋರ್ಟಲ್ಗೆ ಮಾತನಾಡಿದ ಅವರು, ಮೇಲ್ಚಾವಣಿ ಹಾರಿ ಹೋಗಿರುವುದರಿಂದ ಮಠದಲ್ಲಿ ವಾಸಿಸುವುದೇ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಅಡುಗೆಮನೆಯ ಮೇಲ್ಛಾವಣಿಯೂ ಹಾನಿಗೊಳಗಾಗಿರುವುದರಿಂದ ಮಳೆಗಾಲದಲ್ಲಿ ಅನ್ನಸಂತರ್ಪಣೆ ನಡೆಸುವುದು ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಬಹುದೂರಿನಿಂದ ಭಕ್ತರು ಭೇಟಿ ನೀಡುವ ಈ ಪವಿತ್ರ ಹಾಗೂ ಐತಿಹಾಸಿಕ ಮಠ ಸದ್ಯ ಸಂಕಷ್ಟದಲ್ಲಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ಖಾನಾಪುರದ ಶಾಸಕರಾದ ವಿಠ್ಠಲ ಹಲಗೇಕರ ಹಾಗೂ ಖಾನಾಪುರ ತಹಶೀಲ್ದಾರರು ತಕ್ಷಣ ಸರ್ಕಾರಿ ನೆರವು ನೀಡಬೇಕೆಂದು ಮಠಾಧೀಶರು ಮನವಿ ಮಾಡಿದ್ದಾರೆ. ನಾಗರಗಾಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಪ್ರಭು ಅವರು ಕೂಡ ಶಾಸಕರಿಗೆ ಘಟನೆಯ ಮಾಹಿತಿ ನೀಡಿ, ಹಾನಿಗೊಳಗಾದ ಮಠದ ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ. ಶಾಸಕರು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಹಂಡಿಭಡಂಗನಾಥ ಮಠದ ಖ್ಯಾತಿ ದೂರದೂರೆಗೆ ವ್ಯಾಪಿಸಿರುವುದರಿಂದ ಅನೇಕ ಭಕ್ತರು ಇಲ್ಲಿ ಭಕ್ತಿಭಾವದಿಂದ ಆಗಮಿಸುತ್ತಾರೆ. ಆದ್ದರಿಂದ ಈ ಪವಿತ್ರ ಸ್ಥಳದ ದುರಸ್ತಿಗೆ ಶಾಸಕರು ಮತ್ತು ತಹಶೀಲ್ದಾರರು ವಿಳಂಬ ಮಾಡದೇ ತಕ್ಷಣ ಸ್ಪಂದಿಸಿ ಸರ್ಕಾರಿ ನೆರವು ಒದಗಿಸಬೇಕು ಎಂಬ ಬೇಡಿಕೆ ಸ್ಥಳೀಯ ನಾಗರಿಕರಿಂದ ಕೇಳಿಬಂದಿದೆ.


