लैला शुगर कामगारांचे धरणे आंदोलन सात दिवसांसाठी स्थगित; व्यवस्थापनाच्या आश्वासनानंतर युनियनचा निर्णय.
खानापूर (प्रतिनिधी) : श्री भाग्यलक्ष्मी शुगर एम्प्लॉईज युनियन, कुप्पटगिरी यांनी आज मंगळवार दिनांक 7 जुलैपासून खानापूर येथील तहसीलदार कार्यालयासमोर सुरू होणारे बेमुदत धरणे आंदोलन तात्पुरते सात दिवसांसाठी स्थगित करण्याचा निर्णय घेतला आहे. कारखाना व्यवस्थापनाने कामगारांच्या प्रमुख मागण्यांबाबत सकारात्मक आश्वासन दिल्यानंतर हा निर्णय घेण्यात आला आहे. व धरणे आंदोलन स्थगित केल्याचे निवेदन खानापूरच्या तहसीलदारांना सुद्धा देण्यात आले. यावेळी कामगार संघटनेचे पदाधिकारी व कारखान्याचे कामगार मोठ्या संख्येने उपस्थित होते.
युनियनने यापूर्वी हंगामी (सीझनल) कामगारांना ज्येष्ठतेच्या (सिनिऑरिटी) आधारावर पुन्हा कामावर घेण्याची मागणी अनेक वेळा केली होती. मात्र, व्यवस्थापनाने त्याची अंमलबजावणी न करता इतर संघटनांशी संबंधित कामगारांना कामावर घेतल्याचा आरोप युनियनने केला होता. तसेच सातव्या वेतन मंडळानुसार देय असलेल्या थकीत वेतनाबाबतही कोणतेही ठोस आश्वासन मिळाले नसल्याने 7 जुलैपासून धरणे आंदोलन करण्याचा निर्णय घेण्यात आला होता.
दरम्यान, काल 6 जुलै रोजी सायंकाळी कारखान्याचे व्यवस्थापकीय संचालक सदानंद पाटील यांनी युनियनचे अध्यक्ष व पदाधिकाऱ्यांना चर्चेसाठी बोलावले. या बैठकीत हंगामी कामगारांना ज्येष्ठतेच्या निकषानुसार पुन्हा कामावर घेण्यात येईल तसेच सातव्या वेतन मंडळाची थकबाकी अदा करण्यात येईल, अशी ग्वाही देण्यात आली. यासंदर्भात उपकामगार आयुक्तांच्या उपस्थितीत लेखी सामंजस्य करार (सेटलमेंट) करण्यात येणार असल्याचेही व्यवस्थापनाने स्पष्ट केले. शेवटी या आश्वासनांची दखल घेत औद्योगिक शांतता व सौहार्द कायम ठेवण्याच्या हेतूने युनियनने नियोजित धरणे आंदोलन सात दिवसांसाठी पुढे ढकलले आहे.
मात्र, व्यवस्थापनाने दिलेल्या आश्वासनांची अंमलबजावणी न झाल्यास किंवा उपकामगार आयुक्तांच्या उपस्थितीत होणाऱ्या करारानुसार कार्यवाही न झाल्यास, कोणतीही नवीन नोटीस न देता पूर्वी जाहीर केलेले धरणे आंदोलन पुन्हा सुरू करण्यात येईल, असा इशाराही युनियनने दिला आहे.
याबाबतचे निवेदन तहसीलदार, उपकामगार आयुक्त, खानापूर पोलीस निरीक्षक तसेच संबंधित कारखाना व्यवस्थापनाला देण्यात आले आहे.
ಲೈಲಾ ಶುಗರ್ ಕಾರ್ಮಿಕರ ಧರಣಿ ಪ್ರತಿಭಟನೆ ಏಳು ದಿನಗಳ ಕಾಲ ಮುಂದೂಡಿಕೆ; ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿಯ ಭರವಸೆಯ ಬಳಿಕ ಯೂನಿಯನ್ನ ನಿರ್ಧಾರ.
ಖಾನಾಪುರ (ಪ್ರತಿನಿಧಿ) : ಶ್ರೀ ಭಾಗ್ಯಲಕ್ಷ್ಮೀ ಶುಗರ್ ಎಂಪ್ಲಾಯೀಸ್ ಯೂನಿಯನ್, ಕುಪ್ಪಟಗಿರಿ ವತಿಯಿಂದ ಇಂದು ಮಂಗಳವಾರ, ಜುಲೈ 7ರಿಂದ ಖಾನಾಪುರ ತಹಶೀಲ್ದಾರ್ ಕಚೇರಿ ಎದುರು ಆರಂಭಗೊಳ್ಳಬೇಕಿದ್ದ ಅನಿರ್ದಿಷ್ಟಾವಧಿಯ ಧರಣಿ ಪ್ರತಿಭಟನೆಯನ್ನು ಕಾರ್ಮಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಏಳು ದಿನಗಳ ಕಾಲ ಮುಂದೂಡಲು ನಿರ್ಧರಿಸಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕರ ಪ್ರಮುಖ ಬೇಡಿಕೆಗಳ ಕುರಿತು ಸಕಾರಾತ್ಮಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಧರಣಿ ಪ್ರತಿಭಟನೆಯನ್ನು ಮುಂದೂಡಿರುವ ಕುರಿತು ಖಾನಾಪುರ ತಹಶೀಲ್ದಾರ್ ಅವರಿಗೆ ಸಹ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಖಾನೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಯೂನಿಯನ್ ಇದಕ್ಕೂ ಮೊದಲು ಹಂಗಾಮಿ (ಸೀಸನಲ್) ಕಾರ್ಮಿಕರನ್ನು ಅವರ ಹಿರಿತನದ (ಸೀನಿಯಾರಿಟಿ) ಆಧಾರದ ಮೇಲೆ ಮರುನೇಮಕ ಮಾಡಬೇಕು ಎಂದು ಅನೇಕ ಬಾರಿ ಒತ್ತಾಯಿಸಿತ್ತು. ಆದರೆ ಆಡಳಿತ ಮಂಡಳಿಯು ಅದನ್ನು ಜಾರಿಗೊಳಿಸದೆ, ಇತರೆ ಸಂಘಟನೆಗಳಿಗೆ ಸೇರಿದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿದೆ ಎಂದು ಯೂನಿಯನ್ ಆರೋಪಿಸಿತ್ತು. ಅಲ್ಲದೆ, ಏಳನೇ ವೇತನ ಮಂಡಳಿಯ ಪ್ರಕಾರ ಕಾರ್ಮಿಕರಿಗೆ ನೀಡಬೇಕಾದ ಬಾಕಿ ವೇತನದ ಕುರಿತು ಸಹ ಯಾವುದೇ ಸ್ಪಷ್ಟ ಭರವಸೆ ದೊರೆಯದ ಕಾರಣ ಜುಲೈ 7ರಿಂದ ಧರಣಿ ಪ್ರತಿಭಟನೆ ನಡೆಸಲು ಯೂನಿಯನ್ ತೀರ್ಮಾನಿಸಿತ್ತು.
ಈ ನಡುವೆ, ಜುಲೈ 6ರಂದು ಸಂಜೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಸದಾನಂದ ಪಾಟೀಲ ಅವರು ಯೂನಿಯನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಚರ್ಚೆಗೆ ಆಹ್ವಾನಿಸಿದ್ದರು. ಈ ಸಭೆಯಲ್ಲಿ ಹಂಗಾಮಿ ಕಾರ್ಮಿಕರನ್ನು ಹಿರಿತನದ ಮಾನದಂಡದ ಪ್ರಕಾರ ಮರುನೇಮಕ ಮಾಡಲಾಗುವುದು ಹಾಗೂ ಏಳನೇ ವೇತನದ ಹಿಂಬಾಕಿ ಹಣವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಲಾಯಿತು. ಈ ಕುರಿತು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಲಿಖಿತ ಸಮಜಾಯಿಷಿ ಒಪ್ಪಂದ (ಸೆಟಲ್ಮೆಂಟ್) ಮಾಡಿಕೊಳ್ಳಲಾಗುವುದು ಎಂದು ಆಡಳಿತ ಮಂಡಳಿಯು ಸ್ಪಷ್ಟಪಡಿಸಿತು.
ಕೊನೆಗೆ, ಆಡಳಿತ ಮಂಡಳಿಯ ಈ ಭರವಸೆಗಳನ್ನು ಪರಿಗಣಿಸಿ ಕೈಗಾರಿಕಾ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಹಾಗೆಯೇ ಕಾರ್ಮಿಕರ ಹಿತದೃಷ್ಟಿಯಿಂದ ಯೂನಿಯನ್ ನಿಗದಿಯಾಗಿದ್ದ ಧರಣಿ ಪ್ರತಿಭಟನೆಯನ್ನು ಏಳು ದಿನಗಳ ಕಾಲ ಮುಂದೂಡಲು ನಿರ್ಧರಿಸಿದೆ.
ಆದರೆ, ಆಡಳಿತ ಮಂಡಳಿಯು ನೀಡಿರುವ ಭರವಸೆಗಳನ್ನು ಅನುಷ್ಠಾನಗೊಳಿಸದಿದ್ದರೆ ಅಥವಾ ನಾಳೆ ದಿ 8/7/2026 ರಂದು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆಯಲಿರುವ ಒಪ್ಪಂದದಂತೆ ಕ್ರಮ ಕೈಗೊಳ್ಳದಿದ್ದರೆ, ಯಾವುದೇ ಹೊಸ ನೋಟಿಸ್ ನೀಡದೆ ಈ ಹಿಂದೆ ಘೋಷಿಸಲಾಗಿದ್ದ ಧರಣಿ ಪ್ರತಿಭಟನೆಯನ್ನು ಪುನಃ ಆರಂಭಿಸಲಾಗುವುದು ಎಂದು ಯೂನಿಯನ್ ಹೇಳಿಕೆ ನೀಡಿದೆ.
ಈ ಕುರಿತು ತಹಶೀಲ್ದಾರ್, ಉಪ ಕಾರ್ಮಿಕ ಆಯುಕ್ತರು, ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಸಂಬಂಧಿತ ಕಾರ್ಖಾನೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.

